Latest Updates
-
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು -
ವಿಶ್ವಕರ್ಮ ಪೂಜೆ ಸಂಭ್ರಮ: ಗಾಳಿಪಟ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಮರೆಯದಿರಿ! -
IMD ಮಳೆ ಅಲರ್ಟ್: ಸಿಡಿಲು-ಮಳೆಯಿಂದ ಪಾರಾಗಲು ಈ ನಿಯಮ ಪಾಲಿಸಿ, ಮನೆಯಲ್ಲೇ ಫಿಟ್ ಆಗಿರಿ
2014 ರ ಪದ್ಮಶ್ರೀ ಪ್ರಶಸ್ತಿ ಪಡೆದ ವಿದ್ಯಾ ಬಾಲನ್
ವಿದ್ಯಾ ಬಾಲನ್ ಹೆಸರೆತ್ತಿದರೆ ನೆನಪಾಗುವುದು ಸೀರೆ ಏಕೆಂದರೆ ಈ ನಟಿ ಹೆಚ್ಚು ಕಂಡುಬರುವುದೇ ಸೀರೆಗಳಲ್ಲಿ. ದಕ್ಷಿಣ ಭಾರತದ ಸುಂದರಿ ವಿದ್ಯಾ ಬಾಲನ್ 2014 ರ ಪದ್ಮಶ್ರೀ ಪ್ರಶಸ್ತಿಯನ್ನು ಕಮಲ್ ಹಾಸನ್‌ನೊಂದಿಗೆ ಸ್ವೀಕರಿಸಿದ್ದರು. ಹಳದಿ ಬಣ್ಣದ ಸೀರೆ, ಚಿನ್ನದ ಆಭರಣ, ಕೆಂಪು ತುಟಿ ಮತ್ತು ಬಾಚಿದ ತುರುಬು ಕೇಶ ವಿನ್ಯಾಸ ಹೀಗೆ ವಿಶಿಷ್ಟವಾಗಿ ವಿದ್ಯಾ ಬಾಲನ್ ಕಂಡುಬಂದರು.
ವಿದ್ಯಾ ಬಾಲನ್ ಪ್ರತಿಭಾವಂತ ನಟಿಯಾಗಿದ್ದು ಹಲವಾರು ಉತ್ತಮ ಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಕಂಡುಬಂದ ವಿದ್ಯಾ ಬಾಲನ್ ಇನ್ನಷ್ಟು ಸುಂದರಿಯಾಗಿದ್ದರು ಹಾಗೂ ಗ್ಲಾಮರಸ್ ಆಗಿ ಕಂಡುಬಂದರು. ವಿದ್ಯಾರ ಇನ್ನಷ್ಟು ಸುಂದರ ನೋಟಗಳನ್ನು ವೀಕ್ಷಿಸಲು ಮುಂದೆ ಓದಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಪಾಯಲ್ ಸಿಂಗಾಲ್ ವಿನ್ಯಾಸದ ಸೀರೆಯಲ್ಲಿ ವಿದ್ಯಾಬಾಲನ್

ಹಳದಿ ಬಣ್ಣದಲ್ಲಿ:
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾ ಬಾಲನ್ ಹಳದಿ ಸೀರೆಯಲ್ಲಿ ಇನ್ನಷ್ಟು ಸುಂದರವಾಗಿ ಕಂಡುಬಂದಿದ್ದಾರೆ. ಸೀರೆಯ ಬೋರ್ಡರ್ ಪಿಂಕ್ ಹಾಗೂ ಬಾಟಲ್ ಹಸಿರು ಬಣ್ಣವನ್ನು ಹೊಂದಿತ್ತು. ಅವರ ಸೀರೆ ಎಲ್ಲರ ಗಮನವನ್ನು ಸೆಳೆದದ್ದಂತೂ ಸುಳ್ಳಲ್ಲ.

ಮೇಕಪ್:
ವಿದ್ಯಾ ಸರಳ ಮೇಕಪ್ ಅನ್ನು ಇಷ್ಟಪಡುವವರು. ಪಿಂಕ್ ಬ್ಲಶ್ ಹಾಗೂ ಕೆಂಪು ಚೆರ್ರಿ ಬಣ್ಣದ ತುಟಿ ರಂಗನ್ನು ಬಳಸಿರುವ ವಿದ್ಯಾ ಇನ್ನಷ್ಟು ಸುಂದರಿಯಾಗಿ ಕಾಣುತ್ತಿದ್ದರು. ಕೆಂಪು ಬಿಂದಿ ಆಕೆ ವಿವಾಹಿತೆ ಎಂಬುದನ್ನು ಸೂಚಿಸುತ್ತಿದೆ.

ಭಾರತೀಯ ಶೈಲಿಯ ಕಿವಿಯಾಭರಣ:
ಚಿನ್ನದ ಕಿವಿಯಾಭರಣಗಳು ಸೀರೆಗೆ ಉತ್ತಮ ಮ್ಯಾಚ್ ಆಗಿದೆ. ಜೈಪುರ್ ಹರಳುಗಳುಳ್ಳ ಕಿವಿಯಾಭರಣ ವಿದ್ಯಾರಿಗೆ ಚೆನ್ನಾಗಿ ಒಪ್ಪುತ್ತಿತ್ತು.

ಗೋಲ್ಡನ್ ನೆಕ್ಲೇಸ್:
ಆಕೆಯ ಕುತ್ತಿಗೆಯನ್ನು ಬಳಸಿರುವ ಚಿನ್ನದ ನೆಕ್ಲೆಸ್ ವಿದ್ಯಾರಿಗೆ ಹೊಸ ಇಮೇಜನ್ನು ತಂದುಕೊಟ್ಟಿದೆ.

ಸರಳ ಹೇರ್‌ಸ್ಟೈಲ್:
ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿರುವ ವಿದ್ಯಾ ಸರಳ ಹೇರ್‌ಸ್ಟೈಲ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ತುರುಬು ಕಟ್ಟಿರುವ ಆಕೆಯ ಕೇಶವಿನ್ಯಾಸ ಕಾಣಲು ಸುಂದರವಾಗಿತ್ತು.

ನೇಲ್ ಪಾಲಿಶ್:
ವಿದ್ಯಾ ಸುಂದರ ನೇಲ್ ಪಾಲಿಶ್ ಅನ್ನು ತಮ್ಮ ಉಗುರುಗಳಿಗೆ ಹಚ್ಚಿದ್ದು ಚಿಕ್ ಆಗಿ ಕಾಣುತ್ತಿದೆ.

ಕಮಲ್ ಹಾಸನ್:
ಕಮಲ್ ಹಾಸನ್ ಕೂಡ ವಿದ್ಯಾರೊಂದಿಗೆ 2014 ರ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಇಬ್ಬರೂ ತಾರೆಯರು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯಿಂದ ಪ್ರಶಸ್ತಿ ಸ್ವೀಕರಿಸಿದರು.



Click it and Unblock the Notifications
