Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಥ್ರೆಡ್ ಸೀರೆಯಲ್ಲಿ ಮಿಂಚಿದ ಸೋನಂ ಕಪೂರ್
ನವದೆಹಲಿಯಲ್ಲಿ ನಡೆದ ನಮ್ಮನ್ನು ಮಿಂಚಿನಂತೆ ಸೆಳೆದ ಬಾಲಿವುಡ್ ಬೆಡಗಿ ಸೋನಂ ಕಪೂರ್ ಸೀರೆಯಲ್ಲಿ ಕಣ್ಣುಕುಕ್ಕುವಂತೆ ಕೋರೈಸುತ್ತಿದ್ದರು. ರೂಬಲ್ ನಾಗಿ ಆರ್ಟ್ ಫೌಂಡೇಶನ್ ಅನ್ನು ಬೆಂಬಲಸುವ ನಿಟ್ಟಿನಲ್ಲಿ ಸೋನಂ ವಸ್ತು ಪ್ರದರ್ಶನಕ್ಕೆ ಆಗಮಿಸಿದ್ದರು. ಹೆಚ್ಚಾಗಿ ಮಕ್ಕಳೇ ಪ್ರಸ್ತುತ ಪಡಿಸಿದ ಈ ಶೋ ಸೋನಂನಿಂದ ಇನ್ನಷ್ಟು ಸೊಗಸಾಯಿತು ಎಂದೇ ಹೇಳಬಹುದು.
ಥ್ರೆಡ್ ಸೀರೆಯಲ್ಲಿ ಮನಮೋಕಿಯಾಗಿದ್ದ ಸೋನಂ ಫ್ಯಾಶನ್‌ನ ಹೊಸ ದಿಕ್ಕನೇ ನಮ್ಮ ಮುಂದೆ ತೆರೆದಿಟ್ಟಿದ್ದಾರೆ ಎಂದೇ ಹೇಳಬಹುದು. ಇನ್ನಷ್ಟು ಕಣ್ಮನ ಕುಕ್ಕುವ ಸೋನಂರ ನೋಟವನ್ನು ನೋಡಲು ಉತ್ಸುಕರಾಗಿದ್ದಲ್ಲಿ ಮುಂದೇ ಓದಿ.

ರಿಮ್ ಜಿಮ್ ದಾಡು
ಕಪ್ಪು ಚೋಲಿ ಮತ್ತು ಗ್ರೇ ಬಣ್ಣದ ವಿನ್ಯಾಸಕ ರಿಮ್ ಜಿಮ್ ದಾಡು ಅವರ ಸೀರೆಯಲ್ಲಿ ಸೋನಂ ರೂಪಸಿಯಾಗಿದ್ದರು. ಇದರ ಸೆರಗನ್ನು ಥ್ರೆಡ್ ನಿಂದ ಅಲಂಕರಿಸಿದ್ದು ಈ ಸೀರೆಗಿರುವ ಭಿನ್ನತೆಯಾಗಿದೆ.

ಸ್ಟ್ರಾಪಿ ಫೂಟ್ ವೇರ್
ಥ್ರೆಡ್ ಸೀರೆಗೆ ಹೊಂದುವ ಸ್ಟ್ರಾಪ್ ಚಪ್ಪಲಿಯನ್ನು ಧರಿಸಿದ್ದ ಸೋನಂ ಸರಳತೆಯನ್ನು ಮೆರೆದಿದ್ದಾರೆ.

ರಿಂಗ್
ಗೋಲ್ಡನ್ ಬೆರಳುಂಗುರದತ್ತ ನೋಟವನ್ನು ಹರಿಸದೇ ಯಾರೂ ಮರಳಲಾರರು ಎಂಬ ನೋಟವನ್ನು ಸೋನಂ ರಿಂಗ್ ಪ್ರದರ್ಶಿಸಿತ್ತು.

ಬನ್ ಹೇರ್ ಸ್ಟೈಲ್
ಎತ್ತರಕ್ಕೆ ಕಟ್ಟಿದ್ದ ಆಕೆಯ ಹೇರ್ ಸ್ಟೈಲ್ ಸೀರೆಗೆ ಶೋಭೆಯನ್ನು ತಂದುಕೊಟ್ಟಿತ್ತು.

ಕಿವಿಯಾಭರಣ
ರೂಬಲ್ ನಾಗಿ ಕಾರ್ಯಕ್ರಮದಲ್ಲಿ ಸೋನಂ ಧರಿಸಿದ್ದ ಕಿವಿಯಾಭರಣ ವಿಶಿಷ್ಟವಾಗಿತ್ತು ಹಾಗೂ ಆಕರ್ಷಕವಾಗಿತ್ತು.

ಬಣ್ಣಗಳ ವೈವಿಧ್ಯತೆ
ಆಕೆಯ ನೇಲ್ ಪಾಲಿಶ್ ಬಣ್ಣ ವಿಶಿಷ್ಟವಾಗಿತ್ತು. ಚಾಕಲೇಟ್ ಬ್ರೌನ್ ಮತ್ತು ಮರೂನ್ ಬಣ್ಣದ ನೇಲ್ ಪಾಲಿಶ್ ಸೀರೆಗೆ ಚೆನ್ನಾಗಿ ಹೊಂದಿದೆ.

ಮೇಕಪ್
ಸೂಕ್ತವಾದ ಮೇಕಪ್ ನಲ್ಲಿ ಸರಳವಾಗಿದ್ದಾರೆ ಸೋನಂ. ವಿನ್ಯಾಸಕ ರಿಮ್ ಜಿಮ್ ದಾಡು ಅವರ ಥ್ರೆಡ್ ಸೀರೆಗೆ ಸುಂದರವಾದ ಮೇಕಪ್ ಅನ್ನು ಸೋನಂ ಮಾಡಿಕೊಂಡಿದ್ದಾರೆ.

ಚಿಕ್ ಬ್ಯಾಗ್
ಪ್ರದಾ ಕ್ಲಚ್ ಅನ್ನು ಕೈಯಲ್ಲಿ ಹಿಡಿದುಕೊಂಡಿರುವ ಸೋನಂ ತಮ್ಮ ಸಂಪೂರ್ಣ ಲುಕ್ ಅನ್ನು ಪೂರ್ಣಗೊಳಿಸಿದ್ದಾರೆ ಎಂದೇ ಹೇಳಬಹುದು.



Click it and Unblock the Notifications
