Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಪೋಲ್ಕಾ ಡಾಟೆಡ್ ಡ್ರೆಸ್‌ನಲ್ಲಿ ಕಣ್ಮನ ಸೆಳೆದ ಸೋನಾಕ್ಷಿ
ಏಪ್ರಿಲ್ 2014 ರಲ್ಲಿ ಸೋನಾಕ್ಷಿ ಭರ್ಜರಿ ಆರಂಭವನ್ನೇ ಪ್ರಾರಂಭಿಸಿದ್ದಾರೆ. ಎರಡು ನಿಯತಕಾಲಿಕೆಗಳ ಮುಖಪುಟವನ್ನು ಅಲಂಕರಿಸಿರುವ ಈ ಬೆಡಗಿ ವರ್ಷದಿಂದ ವರ್ಷಕ್ಕೆ ಬೇಡಿಕೆಯ ನಟಿಯಾಗುತ್ತಿರುವುದಂತೂ ಖಂಡಿತ. ವುಮೆನ್ಸ್ ಹೆಲ್ತ್ ನಿಯತಕಾಲಿಕೆಯ ಕವರ್ ಪುಟಗಳಲ್ಲಿ ಮಿಂಚಿರುವ ಸೋನಾಕ್ಷಿ ತನ್ನ ಸುಂದರ ನಗುವಿನಿಂದ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.
ಎರಡೂ ನಿಯತಕಾಲಿಕೆಗಳಲ್ಲಿ ಮನಮೋಹಕಿಯಾಗಿರುವ ಸೋನಾಕ್ಷಿ ವಿಭಿನ್ನ ಎರಡು ಧಿರಿಸುಗಳನ್ನು ಧರಿಸಿದ್ದು ನೋಡಲು ಅತ್ಯಾಕರ್ಷಕವಾಗಿದೆ. ಸೋನಾಕ್ಷಿಯ ಸಪೂರ ಮೈಕಟ್ಟನ್ನು ಸುಂದರವಾಗಿ ಪ್ರದರ್ಶಿಸಿರುವ ಈ ಧಿರಿಸು ಸೋನಾಕ್ಷಿಯನ್ನು ಇನ್ನಷ್ಟು ಗ್ಲಾಮರಸ್ ಆಗಿ ಮಾಡಿದೆ.
ವುಮೆನ್ಸ್ ಹೆಲ್ತ್‌ನ 2ನೇ ವಾರ್ಷಿಕ ವಿಶೇಷ ಸಂಚಿಕೆಯನ್ನು ಮಂಬೈನಲ್ಲಿ ಹೊರತಂದಾಗ ಸೋನಾಕ್ಷಿಯ ಕೆಲವೊಂದು ಸುಂದರ ಭಂಗಿಗಳನ್ನು ಸೆರೆಹಿಡಿಯಲಾಯಿತು. ಅವುಗಳ ಕೆಲವೊಂದು ಮಿಂಚೋಟ ನಿಮಗಾಗಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ರೆಡ್ ಕಾರ್ಪೆಟ್‌ನಲ್ಲಿ, ಮಂತ್ರಮುಗ್ಧಗೊಳಿಸಿದ ಸೋನಾಕ್ಷಿ

ಸೋನಾಕ್ಷಿ ಸಿನ್ಹಾ ಎಸ್‌ಓಎಸ್‌ನಲ್ಲಿ
ಸೋನಾಕ್ಷಿ ವುಮೆನ್ಸ್ ಹೆಲ್ತ್ ಮ್ಯಾಗಝೀನ್ ಅನ್ನು ಹೊರತಂದಾಗ, ಆಕೆ ಎಸ್‌ಓಎಸ್ ಪೋಲ್ಕಾ ಡಾಟ್ ವುಳ್ಳ ಧಿರಿಸನ್ನು ಧರಿಸಿದ್ದರು. ಇದರಲ್ಲಿ ಆಕೆ ಮೋಡಿ ಮಾಡುವಂತೆ ಕಂಡುಬಂದದ್ದಂತೂ ನಿಜ.

ಆಕೆಯ ಮೇಕಪ್:
ಆಕೆಯ ಮೇಕಪ್ ತುಂಬಾ ಸರಳವಾಗಿದೆ. ಕೆನ್ನೆಗೆ ಸ್ವಲ್ಪ ಬ್ರಶ್ ಮಾಡಿಕೊಂಡಿದ್ದು ಹೊಳೆಯುವ ಕೆನ್ನೆ ಆಕೆಯನ್ನು ಇನ್ನಷ್ಟು ಸುಂದರಗೊಳಿಸಿದೆ.

ಸುಂದರ ತುಟಿಗಳು:
ಸಾಮಾನ್ಯವಾಗಿ, ಚೆರ್ರಿ ಅಥವಾ ನ್ಯೂಡ್ ಲಿಪ್‌ಸ್ಟಿಕ್ ಬಣ್ಣಗಳನ್ನು ಹೆಚ್ಚಾಗಿ ಸೆಲೆಬ್ರಿಟಿಗಳು ಆಯ್ದುಕೊಳ್ಳುತ್ತಾರೆ. ಆದರೆ ಸೋನಾಕ್ಷಿ ಈ ವಿಷಯದಲ್ಲಿ ವಿಭಿನ್ನ ಆಯ್ಕೆಯನ್ನು ಮಾಡಿದ್ದಾರೆ. ಹಾಟ್ ಪಿಂಕ್ ಬಣ್ಣದ ಲಿಪ್‌ಸ್ಟಿಕ್ ಅನ್ನು ಸೋನಾಕ್ಷಿ ಆರಿಸಿದ್ದು ಇದು ಆಕೆಗೆ ಅಷ್ಟು ಚೆನ್ನಾಗಿ ತೋರುತ್ತಿಲ್ಲ.

ಸುಂದರ ಹೇರ್‌ಸ್ಟೈಲ್:
ಸೈಡ್ ಸ್ವೆಪ್ಟ್ ಹೇರ್ ಆಕೆಯ ನೋಟವನ್ನು ಸಂಪೂರ್ಣಗೊಳಿಸಿದೆ. ಲೂಸಾಗಿ ಕರ್ಲ್‌ಗಳನ್ನು ಹೊಂದಿರುವ ಕೂದಲು ಆಕೆಯ ಭುಜಗಳಲ್ಲಿ ಸ್ವಸ್ಥವಾಗಿ ಮಲಗಿದೆ.

ವೈಟ್ ಪಂಪ್ಸ್:
ಪೊಲ್ಕಾ - ಡಾಟ್ ಉಳ್ಳ ಡ್ರೆಸ್‌ಗೆ ಆಕೆಯ ವೈಟ್ ಪಂಪ್ಸ್ ಸುಂದರ ನೋಟವನ್ನು ನೀಡಿದೆ. ಈ ರೀತಿಯ ಧಿರಿಸಿಗೆ ಬಿಳಿ ಪಾದರಕ್ಷೆ ಚೆನ್ನಾಗಿ ಒಪ್ಪುತ್ತದೆ.

ಆಭರಣಗಳು:
ಹೃದಯಾದಾಕಾರದ ಕಿವಿಯಾಭರಣಗಳು ಆಕೆಯ ರೌಂಡ್ ಮುಖಕ್ಕೆ ಹೇಳಿಮಾಡಿಸಿದಂತಿದೆ. ಸ್ವಲ್ಪ ಗೋಲ್ಡನ್ ಬಣ್ಣವನ್ನು ಹೊಂದಿರುವ ಬಿಳಿ ಕಿವಿಯಾಭರಣ ಕ್ರೀಮಿಶ್ ಬಣ್ಣದಲ್ಲಿದೆ.

ಸೊಂಟವನ್ನು ಸೋನಾಕ್ಷಿ ಪ್ರದರ್ಶಿಸಿರುವುದು:
ಬಿಳಿ ಸಪೂರ ಬೆಲ್ಟ್ ಆಕೆಯ ಸುಂದರ ನಡುವನ್ನು ಚೆನ್ನಾಗಿ ಹಿಡಿದುಕೊಂಡಿದೆ. ದೊಡ್ಡದಾದ ಗೋಲ್ಡನ್ ಬಕಲ್ ಅನ್ನು ನಾವು ತುಂಬಾ ಇಷ್ಟಪಟ್ಟಿದ್ದೇವೆ.



Click it and Unblock the Notifications
