Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ನಿಕಿಲ್ ಥಾಂಪಿ ನಿಲುವಂಗಿಯಲ್ಲಿ ಡ್ಯಾಶಿಂಗ್ ಸೋನಾಕ್ಷಿ ಸಿನ್ಹಾ
ಕಳೆದ ವರ್ಷದಿಂದ ಬಾಲಿವುಡ್‌ನಲ್ಲಿ ಫ್ಯಾಶನ್‌ಗೆ ಇನ್ನೊಂದು ಹೆಸರು ಎಂದೇ ಹೇಳಬಹುದು. ದಪ್ಪಗಿದ್ದ ಸಂದರ್ಭದಲ್ಲಿ ಸೋನಾಕ್ಷಿ ಫ್ಯಾಶನ್ ಪ್ರಿಯರ ಟೀಕೆಗಳಿಗೆ ಒಳಗಾಗಿದ್ದರು. ಆದರೆ ಈಗ ತಮ್ಮ ಹೆಚ್ಚುವರಿ ತೂಕವನ್ನು ಕಳೆದುಕೊಂಡು ಬಳುಕು ಬಳ್ಳಿಯಾಗಿರುವ ಈ ಚೆಲುವಿನ ಕುಡಿ ಬೇರೆ ಬೇರೆ ದೇಹ ವಿನ್ಯಾಸದ ನಿಲುವಂಗಿಯಲ್ಲಿ ಮನಸೂರೆಗೊಳ್ಳುತ್ತಿದ್ದಾರೆ.
ಈ ಬಾರಿ ನಿಕಿಲ್ ಥಾಂಪಿಯ ಕಪ್ಪು ಶೇತ್ ಉಡುಗೆಯಲ್ಲಿ ಸೋನಾಕ್ಷಿ ಕಂಡುಬಂದಿದ್ದಾರೆ. ಈ ಕಪ್ಪು ನಿಲುವಂಗಿ ಸೋನಾಕ್ಷಿಯ ಸಪೂರ ಮೈಕಟ್ಟನ್ನು ಎತ್ತಿ ತೋರಿಸಿದ್ದು ಆಕೆಯನ್ನು ಇನ್ನಷ್ಟು ಸ್ಲಿಮ್ ಆಗಿಸಿದೆ. ಇದು ಮಿಡಿಯಷ್ಟೇ ಉದ್ದವಾಗಿದ್ದು ಓಬಿ ಬೆಲ್ಟ್ ಅನ್ನು ಹೊಂದಿದೆ.

ನಿಕಿಲ್ ಥಾಂಪಿ ನಿಲುವಂಗಿಗಳ ವೈಶಿಷ್ಟ್ಯತೆ ಎಂದರೆ ಈ ಓಬಿ ಬೆಲ್ಟ್ ಆಗಿದೆ. ಇದು ಸೊಂಟದಲ್ಲಿ ಮೂರು ಹೂಗಳನ್ನು ಹೊಂದಿದ್ದು ಓಬಿ ಬೆಲ್ಟ್ ಆಗಿ ಇದು ಕಂಗೊಳಿಸಿದೆ. ಈ ತುಂಡು ಉಡಿಗೆಯ ಕಪ್ಪು ಉಡುಗೆಯು ಆಕೆಯ ಸಪೂರ ಮೈಕಟ್ಟಿಗೆ ಹೊಂದಿಕೊಂಡಂತಿದ್ದು ಸೋನಾಕ್ಷಿ ಇನ್ನಷ್ಟು ಮುದ್ದಾಗಿ ಕಾಣುವಂತೆ ಮಾಡಿದೆ.
ಜಹಾಂಗೀರಿ ಆರ್ಟ್ ಗ್ಯಾಲರಿಯಲ್ಲಿನ ಕಲಾವಿದ ಪ್ರಫುಲ್ಲಾ ಧನ್ಕುರಾಸ್ ಚಿತ್ರಕಲೆಯನ್ನು ವೀಕ್ಷಿಸಲು ಸೋನಾಕ್ಷಿ ಈ ಕಪ್ಪು ಉಡುಗೆಯಲ್ಲಿ ಮಿಡಿ ಟೈಪ್ ಧಿರಿಸಿನಲ್ಲಿ ಬಂದಿದ್ದರು. ಎಂಪೋರಿಯೋ ಅರ್ಮಾನಿ ಏಂಕಲ್ ಸ್ಟ್ರಾಪ್ ಹೀಲ್ಡ್ಸ್ ಅನ್ನು ಧರಿಸಿದ್ದ ಸೋನಾಕ್ಷಿ ಕಪ್ಪು ಧಿರಿಸಿಗೆ ಸರಿಯಾದ ಹೊಂದಿಕೆಯುಳ್ಳ ಪಾದರಕ್ಷೆಯನ್ನು ಧರಿಸಿದ್ದಾರೆ. ಈ ಗುಲಾಬಿ ಚಿನ್ನದ ಬಣ್ಣದ ಕಪ್ಪು ಉಡುಗೆಗೆ ತಕ್ಕುದಾಗಿದೆ ಎಂದೇ ಹೇಳಬಹುದು.
ಸೋನಾಕ್ಷಿ ಸಿನ್ಹಾ ಹೂವಿನ ಚಿತ್ತಾರದುಡುಗೆಯಲ್ಲಿ
ತಮ್ಮ ಕೂದಲನ್ನು ಒಪ್ಪವಾಗಿ ಒಂದೇ ಬದಿಗೆ ಇರಿಸಿಕೊಂಡಿರುವ ಸೋನಾಕ್ಷಿ ಮತ್ತೆ ಗುಲಾಬಿ ಬಣ್ಣದ ಲಿಪ್‌ಸ್ಟಿಕ್ ಅನ್ನು ತುಟಿಗೆ ಹಚ್ಚಿಕೊಂಡಿದ್ದಾರೆ. ಈ ಧಿರಿಸು ಅವರ ಈ ಎಲ್ಲಾ ಮೇಕಪ್‌ಗಳಿಗೆ ಸರಿಹೊಂದುವಂತಿದ್ದು ಸೊಗಸಾಗಿದೆ. ವಿ ನೆಕ್ ಅನ್ನು ಹೊಂದಿರುವ ಈ ಉಡುಗೆಯು ಅಷ್ಟೊಂದು ಡೀಪ್ ಆಗಿಲ್ಲ. ಸರಳವಾಗಿ ಸೋನಾಕ್ಷಿಗೆ ಹೇಳಿ ಮಾಡಿಸಿದಂತಿದೆ. ನಿಕಿಲ್ ಥಾಂಪಿ ಔಟ್‌ಫಿಟ್ ಬಗ್ಗೆ ಹೇಳಬೇಕಾದರೆ ಅದಕ್ಕೆ ಪದಗಳೇ ಸಾಲದು. ಬಾಲಿವುಡ್‌ನ ಹೆಚ್ಚಿನ ಸೆಲೆಬ್ರಿಟಿಗಳ ಮೆಚ್ಚಿನ ಡಿಸೈನರ್ ಆಗಿರುವ ಇವರು ಒಬ್ಬ ಉತ್ತಮ ವಿನ್ಯಾಸಕ ಎಂದು ಹೇಳಲಡ್ಡಿಯಿಲ್ಲ.
ಸೋನಾಕ್ಷಿ ಸಿನ್ಹಾ ಹೂವಿನ ಚಿತ್ತಾರದುಡುಗೆಯಲ್ಲಿ
ಪಾರ್ಟಿ ವೇರ್‌ಗೆ ಹೊಂದಿಕೊಳ್ಳುವಂತಹ ಇಂತಹ ಉಡುಗೆಯು ತುಂಬಾ ಚೆನ್ನಾಗಿದೆ ಎಂದೇ ಹೇಳಬಹುದು. ಸೋನಾಕ್ಷಿ ಈ ಬಾರಿ ತಮ್ಮ ಕೈಗಳಿಗೆ ಏನನ್ನೂ ಹಾಕಿಕೊಳ್ಳದೇ ಇರುವುದು ಸ್ವಲ್ಪ ಸಪ್ಪೆಯೆನಿಸಿದೆ. ವಾಚ್ ಅಥವಾ ಬ್ರಾಸೆಲೆಟ್ ಅನ್ನು ಧರಿಸುವುದು ಈ ಧಿರಿಸಿಗೆ ಇನ್ನೂ ಚೆನ್ನಾಗಿ ಕಾಣುತ್ತಿತ್ತೇನೋ ಎಂಬುದು ನಮ್ಮ ಅಭಿಪ್ರಾಯವಾಗಿದೆ.



Click it and Unblock the Notifications
