Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಏಕ್ ವಿಲನ್ ಯಶಸ್ಸಿನಲ್ಲಿ ಭಾಗಿಯಾದ ಸೋನಾಕ್ಷಿಯ ಮನಸೆಳೆಯುವ ನೋಟ
ಬಿ ಟೌನ್‌ನ ಸುಂದರ ಮಹಿಳೆಯರಾದ ತಬು ಮತ್ತು ಸೋನಾಕ್ಷಿ ಸಿನ್ಹಾ ಏಕ್ ವಿಲನ್ ಯಶಸ್ವಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ತಾವು ಧರಿಸಿದ ಉಡುಗೆಯಲ್ಲಿ ಅಪ್ಸರೆಗಳಂತೆ ಕಂಡುಬರುತ್ತಿದ್ದ ಈ ಚೆಲುವೆಯರು ತಮ್ಮ ಸುಂದರವಾದ ನಗುವಿನಿಂದ ನೆರೆದವರ ಮನದಲ್ಲಿ ಪುಳಕದ ಅಲೆಯನ್ನು ಎಬ್ಬಿಸುತ್ತದೆ.
ಕ್ರಿಸ್ ಕ್ರಾಸ್ ಮಾದರಿಯ ಪೆನ್ಸಿಲ್ ಸ್ಕರ್ಟ್ ಮತ್ತು ಕಪ್ಪು ಕ್ರಾಪ್ ಟಾಪ್ ಅನ್ನು ಸೋನಾಕ್ಷಿ ಧರಿಸಿ ಯಶಸ್ವಿ ಪಾರ್ಟಿಗೆ ರಂಗನ್ನು ತಂದಿದ್ದಾರೆ. ತಮ್ಮ ಸುಂದರವಾದ ದೇಹ ಸೌಂದರ್ಯವನ್ನು ತೋರಿಸುವಲ್ಲಿ ಯಶಸ್ವಿಯಾಗಿರುವ ಸೋನಾಕ್ಷಿ ತಮ್ಮ ಹೆಚ್ಚುವರಿ ತೂಕವನ್ನು ಇಳಿಸಿ ಅತಿ ಸುಂದರ ಉಡುಗೆಯಲ್ಲಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಮ್ಮ ಹೆಚ್ಚುವರಿ ತೂಕವನ್ನು ಇಳಿಸಿಕೊಂಡಿರುವ ಈ ಬಾಲಿವುಡ್ ಚೆಲುವೆ ಈಗ ಸುಂದರ ಧಿರಿಸುಗಳಲ್ಲಿ ಮುದ್ದಾಗಿ ಕಾಣುತ್ತಿದ್ದಾರೆ. ಇತ್ತೀಚೆಗೆ ಸೋನಾಕ್ಷಿ ಅಪ್ರತ್ಯಕ್ಷರಾದವರಂತೆ ಕಂಡುಬರುತ್ತಿದ್ದರು ಆದರೆ ಇಂದಿನ ಕಾರ್ಯಕ್ರಮದಲ್ಲಿ ನಮ್ಮನ್ನು ಬೆರಗುಗೊಳಿಸುವಂತೆ ಕಂಡುಬಂದಿರುವ ಈ ಸುಂದರಿ ಮತ್ತಷ್ಟು ಆಕರ್ಷಕವಾಗಿದ್ದಾರೆ.
ಮೋಹಿತ್ ಸೂರಿಯ ಏಕ್ ವಿಲನ್ ಚಿತ್ರ ಯಶಸ್ಸನ್ನು ಪಡೆದುಕೊಂಡಿದೆ. ಸೋನಾಕ್ಷಿ ಕ್ರಿಸಿಸ್ ಕ್ರಾಸ್ ಕಪ್ಪು ಮತ್ತು ಬಾಟಲ್ ಗ್ರೀನ್ ಪೆನ್ಸಿಲ್ ಸ್ಕರ್ಟ್‌ನಲ್ಲಿ ಮೋಹಕಿಯಾಗಿ ಕಂಡುಬಂದಿದ್ದಾರೆ.
ಆಕೆಯ ಟೈಟ್ ಸ್ಕರ್ಟ್ ಆಕೆಯ ಸಪೂರ ಸೊಂಟವನ್ನು ಮತ್ತು ನೀಳ ಕಾಲುಗಳನ್ನು ತೋರಿಸಿದೆ. ಆಕೆಯ ಕಪ್ಪು ಟಾಪ್‌ಗೆ ನಾವು ಮನಸೋಲುವುದು ಖಂಡಿತ. ಅಷ್ಟು ಮುದ್ದಾಗಿತ್ತು ಆಕೆಯ ಟಾಪ್. ಕುತ್ತಿಗೆಯ ಮೇಲೆ ಹಾಕಿಸಿಕೊಂಡಿರುವ ಟ್ಯಾಟೂವನ್ನು ಪ್ರದರ್ಶಿಸಲು ಸೋನಾಕ್ಷಿ ತಮ್ಮ ಕೂದಲನ್ನು ಒಂದೇ ಬದಿಗೆ ಇರಿಸಿಕೊಂಡಿದ್ದಾರೆ.
ಐಐಜೆಡಬ್ಲ್ಯೂ 2014: ಹೊಳೆಯುವ ಮಿಂಚಾದ ಸನ್ನಿ ಲಿಯೋನ್!
ಏಕ್ ವಿಲನ್ ಸಕ್ಸಸ್ ಪಾರ್ಟಿಯಲ್ಲಿ ಆಕೆಯ ಕೂದಲು ಮತ್ತು ಕೋರಲ್ ತುಟಿಗಳು ಆಕರ್ಷಣೆಯ ಕೇಂದ್ರಬಿಂದುಗಳಾಗಿದ್ದವು. ಕಪ್ಪು ಸ್ಟ್ರಾಪ್ ಉಳ್ಳ ಸ್ಯಾಂಡಲ್‌ಗಳನ್ನು ಧರಿಸಿರುವ ಸೋನಾಕ್ಷಿ ತಮ್ಮ ಧಿರಿಸಿಗೆ ತಕ್ಕಂತಹ ಅಲಂಕಾರಗಳನ್ನು ಮಾಡಿಕೊಂಡಿದ್ದಾರೆ.
ಏಕ್ ವಿಲನ್ ಚಿತ್ರದ ಯಶಸ್ಸಿನೊಂದಿಗೆ ಸೋನಾಕ್ಷಿಯ ಹೊಸ ಲುಕ್ ಮೋಡಿ ಮಾಡುವಂತಿದೆ. ಸೋನಾಕ್ಷಿ ಧರಿಸಿರುವ ಪೆನ್ಸಿಲ್ ಸ್ಕರ್ಟ್ ಕೂಡ ಅವರಿಗಿರುವ ಸ್ಟೈಲ್ ಸೆನ್ಸ್ ಅನ್ನು ಇಲ್ಲಿ ಪ್ರದರ್ಶಿಸಿದ್ದು ಅತಿಯಾದ ಅಲಂಕಾರವಿಲ್ಲದೆ ಸರಳವಾಗಿ ಆಕರ್ಷಕವಾಗಿ ಈ ಮೋಹಕ ತಾರೆ ಕಂಡುಬಂದಿದ್ದಾರೆ.



Click it and Unblock the Notifications
