Latest Updates
-
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ!
ಹಾರ್ಪರ್ ಬಾಝಾರ್ ಬ್ರೈಡ್ ಡ್ರೆಸ್‌ನಲ್ಲಿ ಶ್ರುತಿ ಹಾಸನ್
ಇನ್ನೂ ಮದುವೆಯಾಗದೇ ಅವಿವಾಹಿತೆಯಾಗಿರುವ ಶ್ರುತಿ ಹಾರ್ಪರ್ ಬಾಝಾರ್ ಕವರ್ ಫೋಟೋದಲ್ಲಿ ಮದುವಣಗಿತ್ತಿಯಂತೆ ಕಾಣುತ್ತಿದ್ದಾರೆ. ರಾಹುಲ್ ಮಿಶ್ರಾ ವಿನ್ಯಾಸದ ಈ ಬ್ರೈಡಲ್ ಡ್ರೆಸ್‌ಗಳು ಕಣ್ಮನಸೆಳೆಯುವಂತಿವೆ.
For More Cover Page Magazines click here
ಶ್ರುತಿ ಕೂಡ ಇಂತಹ ಡ್ರೆಸ್‌ನಲ್ಲಿ ಮೋಡಿ ಮಾಡುವಂತೆ ಕಂಡುಬಂದಿದ್ದು ಕಣ್ಣು ತಣಿಸುವ ನೋಟದಲ್ಲಿ ಗ್ಲಾಮರಸ್ ಆಗಿದ್ದಾರೆ. ದಕ್ಷಿಣ ಭಾರತೀಯ ಮದುವೆ ಸೀರೆಯ ಧಿರಿಸುಗಳಲ್ಲಿ ಈ ಸುಂದರಿ ಬಿಟ್ಟ ಕಣ್ಣು ಬಿಡುವಂತೆ ಮಾಡಿದ್ದಾರೆ.
ಸಾಂಪ್ರದಾಯಿಕ ಸೀರೆಯಲ್ಲಿ ಆಧುನಿಕ ಮೇಕಪ್ ಯುವತಿಯನ್ನು ನಾವು ಮ್ಯಾಗಝೀನ್ ಕವರ್‌ನಲ್ಲಿ ನೋಡುವಂತಾಗಿದ್ದು ಪವಾಡವೇ ಸರಿ..! ಬನ್ನಿ ಹಾಗಿದ್ದರೆ ಶ್ರುತಿಯ ಇನ್ನಷ್ಟು ಸುಂದರ ನೋಟಗಳು ನಿಮಗಾಗಿ..
ರೇಸ್ ಗುರಮ್ ಯಶಸ್ಸಿಗೆ ಸಾಕ್ಷಿಯಾದ ಶ್ರುತಿ ಹಾಸನ್

ಮುಖಪುಟ ಬೆಡಗಿ:
ಹಾರ್ಪರ್ ಬಾಝಾರ್‌ನ ಮುಖಪುಟದಲ್ಲಿ ವಧುವಾಗಿ ಮಿಂಚಿರುವ ಶ್ರುತಿ ನಿಜಕ್ಕೂ ಸುಂದರಿಯಾಗಿದ್ದಾರೆ.

ಬೆಲ್ಟ್ ತೊಟ್ಟ ವಧು:
ಆರೇಂಜ್ ಹಾಗೂ ಗೋಲ್ಡ್ ಚೆಕ್ಸ್ ಉಳ್ಳ ಸೀರೆಯಲ್ಲಿ ಮಿಂಚಿರುವ ಶ್ರುತಿ ಬೆಲ್ಟ್ ಅನ್ನು ಕೂಡ ಧರಿಸಿದ್ದು ತುಸು ವಿಭಿನ್ನವಾಗಿ ಕಂಡುಬಂದಿದ್ದಾರೆ.

ದಕ್ಷಿಣದ ಮಾಡರ್ನ್ ಮುಖ:
ದಕ್ಷಿಣ ಭಾರತೀಯ ವಧುವಿನ ಸೀರೆ ಸಾಂಪ್ರದಾಯಿಕವಾಗಿರುತ್ತದೆ ಆದರೆ ಇಲ್ಲಿ ಶ್ರುತಿ ಉಟ್ಟಿರುವ ಸಿಲ್ಕ್ ಸೀರೆ ಮಾಡರ್ನ್ ಔಟ್‌ಫಿಟ್‌ಗೆ ಸರಿ ಹೊಂದುವಂತಿದೆ.

ಚಿನ್ನದ ಆಭರಣ:
ಸಾಂಪ್ರಾಯಿಕ ಚಿನ್ನದ ಆಭರಣಗಳಲ್ಲಿ ಮುದ್ದಾಗಿ ಕಾಣುತ್ತಿರುವ ಶ್ರುತಿ ನವ ವಧುವಿನಂತೆ ಕಂಗೊಳಿಸುತ್ತಿದ್ದಾರೆ.

ರಾಕ್‌ಸ್ಟಾರ್:
ಸಿನಿಮಾ ಕ್ಷೇತ್ರಕ್ಕೆ ಬರುವ ಮುಂಚೆ ಮಾಡೆಲಿಂಗ್‌ನಲ್ಲಿ ಚೆನ್ನಾಗಿ ಪಳಗಿ ರಾಕ್‌ಸ್ಟಾರ್ ಆಗಿದ್ದ ಶ್ರುತಿ ತಮ್ಮ ಮೊದಲಿನ ಇಮೇಜ್ ಅನ್ನು ಹಾಗೆಯೇ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬ್ರೈಡಲ್ ಲುಕ್‌ನಲ್ಲಿ ಆಲಿಯಾ:
ಹಾರ್ಪರ್ ಬಾಝಾರ್‌ನ ಮುಂಚಿನ ಕವರ್ ಗರ್ಲ್ ಆಲಿಯಾ ಭಟ್ ಆಗಿದ್ದು ಆಕೆಯೂ ಸಖತ್ ಮಾಡರ್ನ್ ಆಗಿ ಮಿಂಚಿದ್ದಾರೆ.

ಆಲಿಯಾ ಮಾಡರ್ನ್ ಬ್ರೈಡ್ ಲುಕ್:
ಇಲ್ಲಿಯವರೆಗೆ ಮ್ಯಾಗಝೀನ್ ಕವರ್ ಗರ್ಲ್‌ನಂತೆ ಕಂಗೊಳಿಸುವ ವಧುವಿನ ಮಾಡರ್ನ್ ಲುಕ್ ಅನ್ನು ನೋಡಿ ನಾವು ಮನಸೋತಿದ್ದೇವೆ. ಈಗ ಅರ್ಜುನ್ ಮತ್ತು ಆಲಿಯಾ ಜೋಡಿಯ ವಿಂಟೇಜ್ ಲುಕ್ ಅನ್ನು ಕೂಡ ಆಸ್ವಾದಿಸಿ.



Click it and Unblock the Notifications
