Latest Updates
-
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ?
ರೇಸ್ ಗುರಮ್ ಯಶಸ್ಸಿಗೆ ಸಾಕ್ಷಿಯಾದ ಶ್ರುತಿ ಹಾಸನ್
ಅಲ್ಲು ಅರ್ಜುನ್ ಹಾಗೂ ಶ್ರುತಿ ಹಾಸನ್ ಅಭಿನಯದ ಚಿತ್ರ ರೇಸ್ ಗುರಮ್ ಬಿಗ್ ಹಿಟ್ ಆಗಿದೆ. ಚಿತ್ರ ಯಶಸ್ಸನ್ನು ಕೊಂಡಾಡಲು ದೊಡ್ಡ ಪಾರ್ಟಿಯನ್ನೇ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಚಿತ್ರದ ನಾಯಕಿ ಶ್ರುತಿ ಹಾಜರಿದ್ದು ವಿಶೇಷ ಮ್ಯಾಕ್ಸಿ ಗೌನ್‌ನಲ್ಲಿ ಆಭರಣಗಳಿಂದ ಮನಸೆಳೆದರು. ಸಿಕ್ಕಾಪಟ್ಟೆ ಎಂದೇ ಹೇಳುವಷ್ಟು ಆಭರಣಗಳನ್ನು ತೊಟ್ಟುಕೊಂಡಿದ್ದ ಶ್ರುತಿ ತುಸು ಅದ್ದೂರಿಯಾಗಿ ಅಲಂಕರಿಸಿಕೊಂಡಿದ್ದರು.
ಕಪ್ಪು ಮ್ಯಾಕ್ಸಿ ಡ್ರೆಸ್ ಮತ್ತು ಆಭರಣಗಳು ಶ್ರುತಿಯನ್ನು ಈ ಕಾರ್ಯಕ್ರಮದಲ್ಲಿ ತುಸು ಭಿನ್ನವಾಗಿ ಕಂಡುಬರುವಂತೆ ಮಾಡಿದ್ದವು. ಅವರು ಧರಿಸಿದ್ದ ನೆಕ್ಲೇಸ್ ಲೇಯರ್ ಅನ್ನು ಒಳಗೊಂಡಿದ್ದು ನೋಡಲು ಅತ್ಯಾಕರ್ಷಕವಾಗಿತ್ತು. ಅವರ ಧಿರಿಸು ಸ್ಲೀವ್ ಮತ್ತು ಡೀಟೇಲ್ಸ್ ಅನ್ನು ಒಳಗೊಂಡಿದ್ದು ಸರಳ ಹಾಗೂ ಸುಂದರವಾಗಿತ್ತು. ಶ್ರುತಿಯವರ ಇನ್ನಷ್ಟು ಮೋಡಿ ಮಾಡುವ ನೋಟಕ್ಕಾಗಿ ಮುಂದಕ್ಕೆ ಓದಿ.
2 ಸ್ಟೇಟ್ಸ್ ಪ್ರಮೋಶನ್‌ನಲ್ಲಿ ಮನಸೆಳೆದ ಆಲಿಯಾ ಭಟ್

1. ಮನಸೆಳೆದ ಕಪ್ಪು ಮ್ಯಾಕ್ಸಿ ಡ್ರೆಸ್
ರೇಸ್ ಗುರಮ್ ಯಶ್ಸಸ್ಸಿನ ಸಲುವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರುತಿ ಕಪ್ಪು ಬಣ್ಣದ ಮ್ಯಾಕ್ಸಿ ಡ್ರೆಸ್ ಅನ್ನು ತೊಟ್ಟಿದ್ದರು.

2.ವಿ ನೆಕ್
ಮ್ಯಾಕ್ಸಿಯ ವಿ ನೆಕ್ ತುಂಬಾ ಚೆನ್ನಾಗಿದ್ದು ಧಿರಿಸಿನ ಆಕಾರಕ್ಕೆ ಸೂಕ್ತವಾದಂತಿದೆ. ಇದರಿಂದ ಶ್ರುತಿಯವರ ಆಭರಣಕ್ಕೂ ಸುಂದರ ನೋಟ ಬಂದಂತಾಗಿದೆ.

3.ಲೇಸ್ ಸ್ಲೀವ್
ಕಪ್ಪು ಮ್ಯಾಕ್ಸಿ ಧಿರಿಸು ಲೇಸ್ ಸ್ಲೀವ್‌ನಿಂದ ಅಲಂಕೃತಗೊಂಡಿದೆ.

4. 3-ಟಯರ್ ನೆಕ್ಲೇಸ್
ಶ್ರುತಿಯವರು ಧರಿಸಿರುವ ನೆಕ್ಲೇಸ್ ಮೂರು ಪದರಗಳನ್ನು ಹೊಂದಿದ್ದು ನೋಡಲು ಸುಂದರವಾಗಿದೆ. ಚೋಕರ್ ಚೈನ್ ಮತ್ತು ದೊಡ್ಡ ಹಾರ ಕೂಡ ಅವರನ್ನು ಅಲಂಕರಿಸಿದೆ.

5.ಆಮ್ರಪಾಲಿ ಚೋಕರ್
ಆಮ್ರಪಾಲಿ ಆಭರಣಗಳನ್ನು ತೊಟ್ಟುಕೊಂಡಿರುವ ಶ್ರುತಿ ಸಾಂಪ್ರದಾಯಿಕ ವಿನ್ಯಾಸಕ್ಕೆ ಹೆಚ್ಚು ಮಹತ್ವ ನೀಡಿದಂತೆ ಕಂಡುಬಂದಿದ್ದಾರೆ.

6.ಪೆಂಡೆಂಟ್
ಬ್ರೌನ್ ಬಣ್ಣದ ಪೆಂಡೆಂಟ್ ಅನ್ನು ಸರಕ್ಕೆ ಧರಿಸಿರುವ ಶ್ರುತಿ ಧಿರಿಸಿಗೆ ತಕ್ಕುದಾದ ಶೋಭೆಯನ್ನು ನೀಡಿದ್ದಾರೆ.

7.ಲಾಂಗ್ ನೆಕ್ಲೇಸ್
ಅವರು ಧರಿಸಿರುವ ಲಾಂಗ್ ನೆಕ್ಲೇಸ್ ಕೂಡ ಕಣ್ಣೀಗೆ ಹಬ್ಬವನ್ನುಂಟು ಮಾಡಿದೆ.

8.ಸಣ್ಣ ಕಿವಿಯಾಭರಣಗಳು
ಸಣ್ಣ ಕಿವಿಯಾಭರಣಗಳನ್ನು ಧರಿಸಿರುವ ಶ್ರುತಿ ಕೊರಳಿಗೆ ಮಾತ್ರ ಭಾರೀ ಆಭರಣಗಳನ್ನು ಧರಿಸಿ ಚಕಿತಗೊಳಿಸಿದ್ದಾರೆ.

9.ಟಾಪ್ ನೋಟ್
ಕೂದಲನ್ನು ಎತ್ತರಕ್ಕೆ ಗಂಟು ಹಾಕಿದ ವಿನ್ಯಾಸದಲ್ಲಿ ಕೇಶ ಶೃಂಗಾರವನ್ನು ಮಾಡಿಕೊಂಡಿರುವ ಶ್ರುತಿ ಮ್ಯಾಕ್ಸಿಗೆ ಸೂಕ್ತವಾದ ತುರುಬನ್ನು ಕಟ್ಟಿದ್ದಾರೆ.

10.ಕೋರಲ್ ಲಿಪ್ಸ್
ವೋರ್ನ್ ಬಣ್ಣದ ಲಿಪ್‌ಸ್ಟಿಕ್ ಅನ್ನು ಹಚ್ಚಿರುವ ಶ್ರುತಿ ಧಿರಿಸಿಗೆ ಸೂಕ್ತವಾಗಿ ಅಲಂಕರಿಸಿಕೊಂಡಿದ್ದಾರೆ.



Click it and Unblock the Notifications
