Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಲ್ಹೋತ್ರಾ ವಿನ್ಯಾಸದ ಸೀರೆಯಲ್ಲಿ ಶ್ರಿಯಾ ಝಲಕ್
ದಕ್ಷಿಣ ಭಾರತೀಯ ನಟಿ ಶ್ರಿಯಾ ಶರಣ್ ಇತ್ತೀಚೆಗೆ ನಡೆದ ಪೋಲೀಸ್ ಮಕ್ಕಳ ಕಾರ್ಯಕ್ರಮದಲ್ಲಿ ಸಖತ್ತಾಗಿ ಕಂಡುಬಂದರು. ಸಾಂಪ್ರದಾಯಿಕವಾಗಿ ಸೀರೆಯಲ್ಲಿ ಕಂಡು ಬಂದ ಶ್ರಿಯಾ ನೆರೆದವರನ್ನು ಮಂತ್ರಮುಗ್ಧಗೊಳಿಸಿದರು. ಪೋಲೀಸ್ ಮಕ್ಕಳ ಕಾರ್ಯಕ್ರಮದಲ್ಲಿ ಮನೀಷ್ ಮಲ್ಹೋತ್ರಾ ವಿನ್ಯಾಸ ಮಾಡಿದ ಎರಡು ಬಣ್ಣ ಮಿಶ್ರಿತ ಸೀರೆಯಲ್ಲಿ ಶ್ರಿಯಾ ಮಿಂಚಿನಂತೆ ಸೆಳೆದರು.
ಎರಡು ಬಣ್ಣದಿಂದ ಕೂಡಿದ ಅಂದರೆ ಚಿನ್ನದ ಬಣ್ಣ ಮತ್ತು ಕೆಂಪು ಬಣ್ಣ ಮಿಶ್ರಿತ ಸೀರೆಯನ್ನು ಶ್ರಿಯಾ ತೊಟ್ಟಿದ್ದರು. ಭಾರತೀಯ ನಾರಿಯ ಮೇಲೆ ಈ ನೆಟ್ ಸೀರೆ ಚಮತ್ಕಾರವನ್ನೇ ಮಾಡಿತು. ಕೆಳಭಾಗ ಮತ್ತು ಒಡಲಲ್ಲಿ ಚಿನ್ನದ ಬಣ್ಣದಿಂದ ಕಂಗೊಳಿಸುವ ಸೀರೆಗೆ ಸೆರಗಿನ ಕೆಂಪು ಬಣ್ಣವು ವೈವಿಧ್ಯ ನೋಟವನ್ನು ನೀಡಿದೆ.
ಮನೀಷ್ ಮಲ್ಹೋತ್ರಾ ವಿನ್ಯಾಸದ ಸೀರೆಗೆ ಶ್ರಿಯಾ ಗೋಲ್ಡನ್ ಸಿಲ್ಕ್ ರವಿಕೆಯನ್ನು ತೊಟ್ಟಿದ್ದರು. ಈ ಸೀರೆಗೆ ಸಾಟಿಯಾಗುವಂತಿದ್ದ ಈ ತೋಳಿಲ್ಲದ ಸಿಲ್ಕ್ ರವಿಕೆ ಶ್ರಿಯಾರ ಬೆಡಗನ್ನು ಇನ್ನಷ್ಟು ಹೆಚ್ಚಿಸಿತು. ಸೀರೆಯು ಚಿನ್ನದ ಬಣ್ಣದ ಮತ್ತು ಬೆಳ್ಳಿಯ ಬಣ್ಣದ ಹೊಳೆಯುವ ಅಂಚನ್ನು ಹೊಂದಿದ್ದು ಬೆಳಕಿನಲ್ಲಿ ಹೊಳೆಯುತ್ತಿತ್ತು.

ಮನೀಷ್ ಮಲ್ಹೋತ್ರಾರ ನೆಟ್ ಸೀರೆಯೊಂದಿಗೆ ಹೊಂದಿಕೆಯಾಗುವ ತೋಳಿಲ್ಲದ ಸಿಲ್ಕ್ ರವಿಕೆಯನ್ನು ಶ್ರಿಯಾ ತೊಟ್ಟಿದ್ದರು. ಶ್ರಿಯಾ ಸೆರಗನ್ನು ಇಳಿಬಿಟ್ಟು ಒಂದು ಕೈಯಲ್ಲಿ ಅದನ್ನು ಎತ್ತಿಹಿಡಿದುಕೊಂಡಿದ್ದರು ಇದರಿಂದ ಸೀರೆಯ ಸೆರಗು ಅವರ ಪೂರ್ಣ ದೇಹವನ್ನು ಮುಚ್ಚಿಕೊಂಡಿತ್ತು. ಸೀರೆಯ ಸೆರಗಿನಂಚನ್ನು ಮುತ್ತು ಹಾಗೂ ಕಲ್ಲುಗಳಿಂದ ಶೃಂಗರಿಸಲಾಗಿತ್ತು.
ಶ್ರಿಯಾ ತಮ್ಮ ಸಾಂಪ್ರದಾಯಿಕ ಉಡುಗೆಯನ್ನು ವಜ್ರದ ಹರಳಿರುವ ಚಿನ್ನ ಮತ್ತು ಮುತ್ತಿನ ಜುಮುಕಿಯನ್ನು ಧರಿಸುವುದರ ಮೂಲಕ ಪೂರ್ಣಗೊಳಿಸಿದರು. ಕಣ್ರೆಪ್ಪೆಗಳು ನೀಳವಾಗಿ ಕಾಣುವಂತಹ ಬ್ಲಾಕ್ ಸ್ಮೋಕಿ ಅಲಂಕಾರವನ್ನು ಶ್ರಿಯಾ ತಮ್ಮ ಕಣ್ಣಿಗೆ ಮಾಡಿಕೊಂಡಿದ್ದರು. ದೊಡ್ಡದಾದ ಕೆಂಪು ಬಿಂದಿ ಮತ್ತು ಆರೆಂಜ್ ಬಣ್ಣದ ಲಿಪ್‌ಸ್ಟಿಕ್ ದೇಸೀ ನೋಟವನ್ನು ಶ್ರಿಯಾಗೆ ನೀಡಿದೆ.
ಕೂದಲನ್ನು ಅರ್ಧದವರೆಗೆ ಮೇಲೆತ್ತಿ ಕಟ್ಟಿಕೊಂಡ ಶೈಲಿಯು ಶ್ರಿಯಾರ ಸಾಂಪ್ರದಾಯಿಕ ನೋಟವನ್ನು ಇನ್ನಷ್ಟು ರಂಗೇರಿಸಿದೆ. ಮನೀಷ್ ಮಲ್ಹೋತ್ರಾ ವಿನ್ಯಾಸ ಮಾಡಿದ ಹಲವಾರು ಸೀರೆಗಳಲ್ಲಿ ನಾವು ಈ ಹಿಂದೆಯೂ ಶ್ರಿಯಾರನ್ನು ನೋಡಿದ್ದೇವೆ. ಆದರೂ ಈ ಸಮಾರಂಭದಲ್ಲಿ ಶ್ರಿಯಾ ಸೆಕ್ಸಿ ಮತ್ತು ಸ್ಟೈಲಿಶ್ ಆಗಿ ಕಂಡುಬರುತ್ತಿದ್ದಾರೆ. ಇದರ ಪೂರ್ಣ ಕ್ರೆಡಿಟ್ ಹೋಗಬೇಕಾದ್ದು ನೆಟ್ ಸೀರೆ ಹಾಗೂ ಕಲರ್ ಕಾಂಬಿನೇಷನ್‌ಗೆ. ಆಕೆಯ ಪೂರ್ಣ ಸೌಂದರ್ಯವನ್ನು ಇನ್ನಷ್ಟು ಹೊಳೆಯುವಂತೆ ಅಂದಗಾಣುವಂತೆ ನಮ್ಮ ಭಾರತೀಯ ಸಂಪ್ರದಾಯದ ಸೀರೆ ಮಾಡಿದೆ.
ಕಳೆದ ಬಾರಿ ಐಫಾ 2013 ಕ್ಕಾಗಿ ಮನೀಷ್ ಮಲ್ಹೋತ್ರಾ ವಿನ್ಯಾಸ ಮಾಡಿದ ಸೀರೆಯನ್ನು ಶ್ರಿಯಾ ತೊಟ್ಟುಕೊಂಡಿದ್ದರು. ತಿಳಿ ಹಸಿರು ಬಣ್ಣದ ನೆಟ್ ಸೀರೆ ಅದಾಗಿದ್ದು ಅಂಚುಗಳಲ್ಲಿ ಗುಲಾಬಿ ಬಣ್ಣವನ್ನು ಹೊಂದಿತ್ತು. ಪೀಚ್ ಕಲರ್‌ನ ಸಿಲ್ವರ್ ಕುಸುರಿಯ ಸೀರೆ ಶ್ರಿಯಾರ ಅಚ್ಚುಮೆಚ್ಚಿನ ಸೀರೆಯಾಗಿದೆ, ಏಕೆಂದರೆ ಇದೇ ಸೀರೆಯನ್ನು ಶ್ರಿಯಾ ಮೂರು ಬಾರಿ ತೊಟ್ಟುಕೊಂಡಿದ್ದರು!
ಅದಾಗ್ಯೂ, ಮನೀಷ್ ಮಲ್ಹೋತ್ರಾ ಕೈ ಚಳಕದ ಈ ಗೋಲ್ಡನ್ ನೆಟ್ ಸೀರೆಯು ದಕ್ಷಿಣ ಭಾರತೀಯ ನಟಿಯ ಸೌಂದರ್ಯವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ.



Click it and Unblock the Notifications
