Latest Updates
-
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ?
ಬಿಳಿ ಧಿರಿಸಿನಲ್ಲಿ ಮನಮೋಹಕವಾಗಿ ಕಂಡು ಬಂದ ಶ್ರದ್ಧಾ ಕಪೂರ್
ತನ್ನ ಚಲನಚಿತ್ರ ಏಕ್ ವಿಲನ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುವ ಶ್ರದ್ಧಾ ತನ್ನ ಹೊಸ ಲುಕ್‌ನಿಂದ ಎಲ್ಲೆಡೆ ಗಮನಸೆಳೆದಿದ್ದಾರೆ. ಕಳೆದ ಕೆಲವು ವಾರಗಳಿಂದ ತನ್ನ ಕೆಲವು ಸ್ಟೈಲಿಶ್ ಲುಕ್‌ನಿಂದ ಪ್ರಸಿದ್ಧಿಯನ್ನು ಪಡೆಯುತ್ತಿರುವ ಈ ನಟಿ ಹೆಸರುವಾಸಿಯಾಗುತ್ತಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಶ್ರದ್ಧಾ ಹೆಚ್ಚು ಗ್ಲ್ಯಾಮರಸ್ ನೋಟವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಜಯಗಳಿಸಿದ್ದಾರೆ. ಬಿಳಿ ಧಿರಿಸಿನಲ್ಲಿ ದೇವತೆಯಂತೆ ಕಂಡುಬರುತ್ತಿರುವ ನಟಿ ಬ್ಯೂಟಿಫುಲ್ ಮತ್ತು ಸುಂದರಿಯಾಗಿ ತನುಮನವನ್ನು ಗೆಲ್ಲುವತ್ತ ಹೊರಟಿದ್ದಾರೆ.

ಒಂದೇ ವಿನ್ಯಾಸಳ ಸ್ಕರ್ಟ್ ಮತ್ತು ಜಾಕೆಟ್ ಟೈಪ್ ಟಾಪ್ ಅನ್ನು ಧರಿಸಿದ್ದ ಶ್ರದ್ಧಾ ಹಳದಿ ಬಣ್ಣದ ಹೊಳೆಯುವ ಚುಕ್ಕಿಗಳಿಂದ ಆವೃತವಾದ ಧಿರಿಸನ್ನು ಧರಿಸಿದ್ದಾರೆ. ರಾಹುಲ್ ಮಿಶ್ರಾ ವಿನ್ಯಾಸದ ವಿನ್ನಿಂಗ್ ಸಂಗ್ರಹಣೆಯ ಔಟ್‌ಫಿಟ್ ಆದ ಇದು ಶ್ರದ್ಧಾರಿಗೆ ಚೆನ್ನಾಗಿ ಒಪ್ಪುತ್ತಿದೆ. ಪೆಪ್ಲಮ್ ಜಾಕೆಟ್ ಮತ್ತು ಪೆನ್ಸಿಲ್ ಸ್ಕರ್ಟ್ ಅನ್ನು ಧರಿಸಿರುವ ಶ್ರದ್ಧಾ ಮುದ್ದಾಗಿ ಕಂಡುಬಂದಿದ್ದು ಸುಂದರ ನಗುವಿನಿಂದ ಮನಸೆಳೆದಿದ್ದಾರೆ.
ರಾಹುಲ್ ಮಿಶ್ರಾರ ಈ ಧಿರಿಸು ಪೋಲ್ಕಾ ಡಾಟೆಡ್ ವಿನ್ಯಾಸದಿಂದ ತುಂಬಾ ಚೆನ್ನಾಗಿ ಕಾಣುತ್ತಿದೆ. ಜಾಕೆಟ್ ಹಳದಿ ಮಿನುಗು ಬೊಟ್ಟುಗಳಿಂದ ಆವೃತವಾಗಿದ್ದು ಸುಂದರವಾಗಿದೆ. ಶ್ರದ್ಧಾ ಬಿಳಿಯ ಜಾಕೆಟ್ ಅನ್ನು ಧರಿಸಿದ್ದು ಅದು ಪೂರ್ಣ ಸ್ಲೀವ್ ಅನ್ನು ಹೊಂದಿದೆ. ಸ್ಲೀವ್ ಕೂಡ ಸುಂದರವಾದ ಲೇಸ್ ವರ್ಕ್ ಅನ್ನು ಹೊಂದಿ ಸುಂದರವಾಗಿದೆ. ಪೆಪ್ಲಮ್ ಜಾಕೆಟ್ ಕೂಡ ಪೆನ್ಸಿಲ್ ಸ್ಕರ್ಟ್‌ನ ಫಿಶ್‌ಟೈಲ್ ವಿನ್ಯಾಸಕ್ಕೆ ಚೆನ್ನಾಗಿ ಹೊಂದಿಕೊಂಡಂತಿದೆ.
ಅರ್ಪಿತಾ ಮೆಹ್ತಾ ವಿನ್ಯಾಸದಲ್ಲಿ ಮುದ್ದಾಗಿ ಕಂಡುಬಂದ ಶ್ರದ್ಧಾ ಕಪೂರ್
ತುಂಬಾ ಸಾಮಾನ್ಯವಾಗಿರುವ ಕ್ರಾಪ್ ಟಾಪ್ ಅನ್ನು ಧರಿಸದೆ ಶ್ರದ್ಧಾ ಕೊಂಚ ಡಿಫರೆಂಟ್ ಆಗಿರುವ ಡ್ರೆಸ್ ಅನ್ನು ಧರಿಸಿ ಸ್ಟೈಲಿಶ್ ಮತ್ತು ಡಿಫರೆಂಟ್ ಆಗಿದ್ದಾರೆ. ಈ ಸ್ಕರ್ಟ್ ಹಾಗೂ ಜಾಕೆಟ್ ಲುಕ್ ತುಂಬಾ ವಿಭಿನ್ನವಾಗಿದ್ದು ನೋಡಲು ಚೆನ್ನಾಗಿದೆ. ರಾಹುಲ್ ಮಿಶ್ರಾರ ಈ ಔಟ್‌ಫಿಟ್ ಶ್ರದ್ಧಾರ ನೀಟಾದ ಪೋನಿಟೈಲ್ ಲುಕ್ ಹಾಗೂ ಸರಳ ಲುಕ್‌ಗೆ ಚೆನ್ನಾಗಿ ಒಪ್ಪುತ್ತಿದೆ. ಯಾವುದೇ ಆಭರಣವಿಲ್ಲದೆ ಕೂಡ ಶ್ರದ್ಧಾ ಮುದ್ದಾಗಿ ಈ ಧಿರಿಸಿನಲ್ಲಿ ಕಂಡುಬಂದಿದ್ದಾರೆ.
ಒಟ್ಟಿನಲ್ಲಿ ಸಿಂಪಲ್ ಹಾಗೂ ಸರಳ ಲುಕ್‌ನಿಂದ ಮನಮೋಹಕಗೊಳಿಸಿರುವ ಶ್ರದ್ಧಾ ಮುದ್ದು ಗೊಂಬೆಯಂತಿರುವುದು ನಿಜವಾಗಿದೆ. ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗುತ್ತಿರುವ ತನ್ನ ಚಿತ್ರ ಏಕ್ ವಿಲನ್‌ಗೆ ಭರ್ಜರಿ ಪ್ರಾರಂಭವನ್ನೇ ನೀಡಿರುವ ಈ ಸುಂದರಿ ಸ್ಟೈಲಿಶ್ ಎಂಬುದನ್ನು ಸಾಬೀತುಪಡಿಸಿದೆ.



Click it and Unblock the Notifications
