Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಶಿಲ್ಪಾ ಶೆಟ್ಟಿಯ ದೇಸೀ ಲುಕ್ ಕರಾಬ್ ಆಯಿತು ಮೇಕಪ್‌ನಿಂದ!
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮುಂಬೈನಲ್ಲಿ ಇತ್ತೀಚೆಗೆ ತಮ್ಮ ಚಿನ್ನದ ಶಾಪ್ ಆದ ಸತ್ಯುಗ್ ಗೋಲ್ಡ್ ಅನ್ನು ಉದ್ಘಾಟಿಸಿದರು. ನ್ಯೂಡಿಶ್ ಗೋಲ್ಡನ್ ಬಣ್ಣದ ಪ್ಲೇನ್ ಖಾದಿ ಕುರ್ತಾವನ್ನು ಶಿಲ್ಪಾ ಧರಿಸಿದ್ದರು. ಧಿರಿಸಿನಲ್ಲಿ ದೊಡ್ಡ ದೊಡ್ಡ ಬಟನ್‌ಗಳಿದ್ದು ಸೊಂಟದ ಪಟ್ಟಿಯನ್ನು ಹೊಂದಿದೆ. ಸೊಂಟದಲ್ಲಿರುವ ಚರ್ಮದ ಬೆಲ್ಟ್ ನೋಡಲು ಅತ್ಯಾಕರ್ಷಕವಾಗಿತ್ತು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ನೃತ್ಯ ರಿಯಾಲಿಟಿ ಶೋ ಮಿಂಚಿದ ಶಿಲ್ಪಾ

ಈ ದೇಸೀ ಲುಕ್‌ನಲ್ಲಿ ಬೋಲ್ಡ್ ಔಟ್‌ಫಿಟ್‌ನಲ್ಲಿ ಮಿಂಚಿರುವ ಶಿಲ್ಪಾ ಚೂಡಿದಾರ್ ಪ್ಯಾಂಟ್ ಹಾಕಿ ಕುರ್ತಾದ ನೋಟವನ್ನು ಬೀರಿದ್ದಾರೆ. ಹೊಸ ಆಭರಣ ಅಂಗಡಿಯಾದ ಸತ್ಯುಗ್ ಗೋಲ್ಡ್ ಏಳು ದೇಶಗಳಲ್ಲಿ ತನ್ನ ಸಂಸ್ಥೆಗಳನ್ನು ಹೊಂದಿದೆ. ಶಿಲ್ಪಾ ಮುಂಬೈನಲ್ಲಿ ಸತ್ಯುಗ್ ಗೋಲ್ಡ್‌ನ ಶೋರೂಮ್ ಅನ್ನು ಉದ್ಘಾಟಿಸಿದ್ದಾರೆ.
ಕುರ್ತಿಯಲ್ಲಿ ಇನ್ನಷ್ಟು ಸ್ಟೈಲಿಶ್ ಆಗಿ ಕಂಡುಬರುತ್ತಿದ್ದ ಶಿಲ್ಪಾ ಎಲ್ಲರ ನೋಟವನ್ನು ತನ್ನೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ನೀಲಿ ಬಣ್ಣದ ಚೂಡಿದಾರ್ ಪ್ಯಾಂಟ್ ಅನ್ನು ಕುರ್ತಾಗೆ ಜೊತೆಯಾಗಿ ಧರಿಸಿರುವ ಶಿಲ್ಪಾ ಗ್ರೇ ಬಣ್ಣದ ಸ್ಟ್ರಿಪ್ ಪಂಪ್ ಅನ್ನು ಹಾಕಿದ್ದರು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಕಪ್ಪು ಡ್ರೆಸ್‌ನಲ್ಲಿ ಮಿಂಚಿದ ಶಿಲ್ಪಾ ಶೆಟ್ಟಿ
ಕಾಲರ್ ಉಳ್ಳ ಕುರ್ತಾವು ಅವರ ಸಂಪೂರ್ಣ ಕೊರಳನ್ನು ಆವರಿಸಿದ್ದರಿಂದ ಶಿಲ್ಪಾ ಹೆಚ್ಚಿನ ಆಭರಣಗಳನ್ನು ಧರಿಸಿಲ್ಲ. ಬಟರ್‌ಫ್ಲೈ ಪೆಂಡೆಟ್ ಉಳ್ಳ ಗೋಲ್ಡನ್ ಚೈನ್ ಅನ್ನು ಶಿಲ್ಪಾ ಧರಿಸಿದ್ದರು. ಡೈಮೆಂಡ್ ಇಯರ್ ರಿಂಗ್ ಹಾಗೂ ದೊಡ್ಡದಾದ ಉಂಗುರವನ್ನು ಶಿಲ್ಪಾ ಈ ಕಾರ್ಯಕ್ರಮಕ್ಕಾಗಿ ಧರಿಸಿದ್ದರು.
ಕೆನ್ನೆಗೆ ರೋಸ್ ಅನ್ನು ತುಸು ಹೆಚ್ಚಾಗಿ ಅಪ್ಲೈ ಮಾಡಿಕೊಂಡಿರುವ ಶಿಲ್ಪಾ ಭಾರೀ ಮೇಕಪ್ ಅನ್ನೇ ಮಾಡಿಕೊಂಡಿದ್ದರು. ಬ್ಲಾಕ್ ರಿಮ್ ಮಾಡಿದ ಕಣ್ಣಿನ ಮೇಕಪ್, ಹಾಗೂ ಕೋನ್ಸಿಲರ್‌ನ ಹೆಚ್ಚು ಹಚ್ಚುವಿಕೆ ಈ ಸರಳತೆಯನ್ನು ಕೊಂಚ ಹಾಳು ಮಾಡಿತು ಎನ್ನಬಹುದು. ಇಲ್ಲಿ ಶಿಲ್ಪಾರ ನೈಸರ್ಗಿಕ ಸೌಂದರ್ಯ ಮರೆಯಾದಂತೆ ಕಾಣುತ್ತಿದೆ.
ಶಿಲ್ಪಾರ ದೇಸೀ ಲುಕ್ ಚಿಕ್ ಹಾಗೂ ಸ್ಟೈಲಿಶ್ ಆಗಿದೆ ಆದರೆ ಈ ಭಾರೀ ಮೇಕಪ್ ಆಕೆಯ ಸರಳತೆಯನ್ನು ಮರೆಮಾಡಿದ್ದು ಸ್ವಾಭಾವಿಕ ಸೌಂದರ್ಯ ಮರೆಯಾಗಿದೆ. ನಿಮಗೂ ಹೀಗೆಯೇ ಅನ್ನಿಸುತ್ತಿದೆಯೇ?



Click it and Unblock the Notifications
