Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಹಳೆಯ ಫ್ಯಾಶನ್ ಉಡುಗೆಯಲ್ಲಿ ರಾಣಿ ಮುಖರ್ಜಿ ದರುಶನ
ಮರ್ದಾನಿ ಚಿತ್ರದ ಪ್ರೊಮೊ ಲಾಂಚಿಂಗ್ ಸಮಯದಲ್ಲಿ ರಾಣಿ ಮೂಖರ್ಜಿ ಸೂಟ್‌ನಲ್ಲಿ ಕಂಡುಬಂದಿದ್ದಾರೆ. ಇದೇ ಸಮಯದಲ್ಲಿ ಚಿತ್ರದ ಹಾಡುಗಳನ್ನು ಕೂಡ ಲಾಂಚ್ ಮಾಡಲಾಗಿದ್ದು ಅಷ್ಟೇನೂ ಸುಂದರವಾಗಿಲ್ಲದ ಉಡುಗೆಯಲ್ಲಿ ರಾಣಿ ಸಪ್ಪೆಯಾಗಿ ಕಾಣುತ್ತಿದ್ದರು. ಎಮ್‌ಎಸ್ ಚೋಪ್ರಾ ಅವರ ಆಯ್ಕೆಗೆ ತಕ್ಕಂತಹ ಉಡುಗೆಗಳನ್ನು ವಿನ್ಯಾಸಗೊಳಿಸುತ್ತಿದ್ದು ರಾಣಿ ತಮ್ಮ ಎಂದಿನ ಸ್ಟೈಲಿಶ್ ಲುಕ್‌ನಿಂದ ಮರೆಯಾಗುತ್ತಿರುವಂತೆ ಕಾಣುತ್ತಿದೆ.
ಮರ್ದಾನಿ ಚಿತ್ರದಲ್ಲಿ ರಾಣಿಯವರು ಬಹುಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತಿದ್ದು ತಮ್ಮ ಪಾತ್ರಕ್ಕೆ ತಕ್ಕಂತೆ ಅವರು ಉಡುಗೆಗಳನ್ನು ಆಯ್ದುಕೊಂಡಿದ್ದಾರೆ ಎಂಬುದು ವದಂತಿಗಳಿಂದ ತಿಳಿದು ಬಂದಿರುವ ಮಾಹಿತಿಯಾಗಿದೆ. ಕಪ್ಪು ಪ್ಯಾಂಟ್ ಮತ್ತು ಗ್ರೇ ಟಾಪ್ ಇದಕ್ಕೆ ಒಪ್ಪುವಂತಹ ಜಾಕೆಟ್‌ನಲ್ಲಿ ರಾಣಿ ಚಿತ್ರದ ಪ್ರೊಮೊ ಲಾಂಚಿಂಗ್‌ನಲ್ಲಿ ಕಂಡುಬಂದಿದ್ದರು. ಟಾಪ್‌ನ ಬಣ್ಣ ಮನಮೋಹಕವಾಗಿದೆ ಆದರೆ ಅದರಲ್ಲಿದ್ದಂತಹ ವಿನ್ಯಾಸ ಮಾತ್ರ ಮಂದವಾಗಿ ಕಾಣುತ್ತಿತ್ತು.
ಈ ಲೂಸ್ ಫಿಟ್ಟಿಂಗ್ ಪ್ಯಾಂಟ್‌ಗಳು ಈಗ ಹಳೆಯ ಫ್ಯಾಶನ್ ಎನಿಸಿದ್ದು ಇದಕ್ಕಿಂತ ಅವರಿಗೆ ಸಿಗರೇಟ್ ಪ್ಯಾಂಟ್ ಆಯ್ದುಕೊಳ್ಳಬಹುದಿತ್ತು ಎಂಬುದು ನಮ್ಮ ಅಭಿಪ್ರಾಯವಾಗಿದೆ. ಕೆಳಗಿನ ಸ್ಲೈಡ್‌ಗಳಲ್ಲಿ ರಾಣಿಯವರ ಇನ್ನಷ್ಟು ನೋಟಗಳನ್ನು ನೋಡಿ

ಗ್ರೇ ಜಾಕೆಟ್ ಟಾಪ್
ಈ ಗ್ರೇ ಬಣ್ಣದ ಟಾಪ್ ರಾಣಿಯವರಿಗೆ ಅಷ್ಟೇನೂ ಚೆನ್ನಾಗಿ ಕಂಡುಬರುತ್ತಿಲ್ಲ ಎಂಬುದು ನಮ್ಮ ಅಭಿಪ್ರಾಯವಾಗಿದೆ. ಅವರು ಸ್ವಲ್ಪ ದಪ್ಪನಾದಂತೆ ಈ ಉಡುಗೆಯಲ್ಲಿ ಕಂಡುಬರುತ್ತಿದ್ದಾರೆ.

ಲೂಸ್ ಪ್ಯಾಂಟ್
ಈ ಲೂಸ್ ಪ್ಯಾಂಟ್ ಈಗ ತುಂಬಾ ಹಳೆಯ ಫ್ಯಾಶನ್ ಎಂದೆನಿಸಿದೆ. ಇದಕ್ಕಿಂತ ಸಿಗರೇಟ್ ಪ್ಯಾಂಟ್ಸ್ ರಾಣಿಯವರಿಗೆ ಚೆನ್ನಾಗಿ ಒಪ್ಪುತ್ತಿತ್ತು.

ಕಪ್ಪು ಹೀಲ್ಸ್
ಇದು ತುಂಬಾ ಬೋರಿಂಗ್ ಲುಕ್ ಅನ್ನು ರಾಣಿಯವರಿಗೆ ನೀಡಿದೆ. ಇದಕ್ಕಿಂತ ಹೀಲ್ಸ್ ಇದ್ದಂತಹ ಚಪ್ಪಲಿ ಇನ್ನಷ್ಟು ಸ್ಟೈಲಿಶ್ ಆಗಿ ರಾಣಿಯವರಿಗೆ ತೋರುತ್ತಿತ್ತು ಎಂಬುದು ನಮ್ಮ ಅಭಿಪ್ರಾಯವಾಗಿದೆ.

ಕೇಶ ವಿನ್ಯಾಸ
ಹೆಚ್ಚು ಎತ್ತರಕ್ಕೆ ಕಟ್ಟಿರುವ ರಾಣಿಯವರ ಕೇಶ ವಿನ್ಯಾಸ ಅವರಿಗೆ ವಿಭಿನ್ನ ಲುಕ್ ಅನ್ನು ನೀಡಿದೆ.

ನಿಯೋನ್ ಬಳೆಗಳು
ಈ ಬಣ್ಣದ ಬಳೆಗಳು ಉಡುಗೆಗೆ ಸೂಕ್ತವಾಗಿ ಹೊಂದಿಕೆಯಾದಂತೆ ಕಂಡುಬರದಿದ್ದರೂ ಒಂದು ರೀತಿಯಲ್ಲಿ ಆಕರ್ಷಣೆಯನ್ನು ನೀಡುತ್ತಿದೆ ಎಂಬುದು ಮಾತ್ರ ಸುಳ್ಳಲ್ಲ.

ಗಾಢ ಮೇಕಪ್
ಆಕೆಯ ಮೇಕಪ್ ತುಂಬಾ ಗಾಢವಾಗಿದ್ದು ಸರಳ ಉಡುಗೆಗೆ ಅಷ್ಟೇನೂ ಮೋಡಿಯನ್ನು ಮಾಡುತ್ತಿಲ್ಲ. ತುಟಿ ಬಣ್ಣ ಕೂಡ ಅಷ್ಟೇನೂ ಹೊಂದಿಕೆಯಾದಂತಿಲ್ಲ ಎಂಬುದು ನಮ್ಮ ಅಭಿಪ್ರಾಯವಾಗಿದೆ.



Click it and Unblock the Notifications
