Latest Updates
-
ರಾಷ್ಟ್ರೀಯ ಪೋಷಕಾಂಶ ವಾರ: ಕನ್ನಡಿಗರ ಆರೋಗ್ಯಕ್ಕಾಗಿ 7 ದಿನಗಳ ಸಿಂಪಲ್ ಡಯಟ್ ಮತ್ತು ವ್ಯಾಯಾಮ ಪ್ಲಾನ್! -
ಕ್ರಿಕೆಟ್ ಮ್ಯಾಚ್ ನೋಡುವಾಗ ಮನೆಯಲ್ಲಿ ಜಗಳ ಬೇಡ: ದಂಪತಿಗಳು ಇಂದೇ ಮಾಡಿಕೊಳ್ಳಿ ಈ 'ಮ್ಯಾಚ್ ಡೇ ಒಪ್ಪಂದ'! -
ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲವೇ? ಅಪಾರ್ಟ್ಮೆಂಟ್ನಲ್ಲಿ ಬೂಷ್ಟು ತಡೆಯಲು ಇಲ್ಲಿದೆ 15 ನಿಮಿಷದ ಸಿಂಪಲ್ ಟಿಪ್ಸ್! -
ಓಣಂ ಸದ್ಯದ ರುಚಿ ಸವಿಯುತ್ತಲೇ ಆರೋಗ್ಯ ಕಾಪಾಡಿಕೊಳ್ಳಿ: ಮಧುಮೇಹಿಗಳಿಗೆ ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಓಣಂ ಮುಗಿದ್ರೂ ಕಮ್ಮಿ ಆಗಿಲ್ಲ ಸದ್ಯದ ಕ್ರೇಜ್! ಬೆಂಗಳೂರು, ಮುಂಬೈನಲ್ಲಿ ವೀಕೆಂಡ್ನಲ್ಲಿ ಎಲ್ಲಿ ಸಿಗುತ್ತೆ ರುಚಿಕರ ಊಟ? -
ರಾಷ್ಟ್ರೀಯ ಕ್ರೀಡಾದಿನ: ಜಿಮ್ ಇಲ್ಲದೆ ಮನೆಯಲ್ಲೇ ಫಿಟ್ ಆಗಲು ಈ 30 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ವರಮಹಾಲಕ್ಷ್ಮಿ ಹಬ್ಬದ ತಯಾರಿ: ಕುಟುಂಬದೊಂದಿಗೆ ಜಗಳವಿಲ್ಲದೆ, ಶಾಂತಿಯುತವಾಗಿ ಹಬ್ಬ ಆಚರಿಸುವುದು ಹೇಗೆ? -
ನಾಲ್ಕನೇ ಓಣಂ ಸಂಭ್ರಮ: ಪೂಕಳಂ ಸ್ಪರ್ಧೆಗೆ ಕ್ವಿಕ್ ಟಿಪ್ಸ್ ಮತ್ತು ಝೀರೋ-ವೇಸ್ಟ್ ಹ್ಯಾಕ್ಸ್! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ: ಇನ್ಮುಂದೆ ಕ್ಯಾನ್ ಮೇಲೆ ಈ ಹೆಸರು ಇರಲ್ಲ, FSSAI ಹೊಸ ರೂಲ್ಸ್! -
ರಕ್ಷಾಬಂಧನ 2026: ಚಂದ್ರಗ್ರಹಣದ ಭಯ ಬೇಡ, ರಾಖಿ ಕಟ್ಟಲು ಬೆಸ್ಟ್ ಟೈಮ್ ಇಲ್ಲಿದೆ!
ಪ್ರಿಯಾಂಕ ಚೋಪ್ರಾರ ಅದ್ಭುತ ಶೂಸ್ ಕಲೆಕ್ಷನ್
ಹೆಚ್ಚಿನ ಜನರಿಗೆ ಶೂಸ್ ಕಲೆಕ್ಷನ್ ತುಂಬಾ ಪ್ರಿಯವಾದ ವಿಚಾರ. ಅದರಲ್ಲೂ ಹೆಂಗಳೆಯರು ತಮ್ಮ ಧಿರಿಸಿಗೆ ತಕ್ಕಂತಹ ಚಪ್ಪಲಿಗಳನ್ನು ಖರೀದಿಸುವಲ್ಲಿ ನಿಸ್ಸೀಮರು. ತಮ್ಮ ಔಟ್‌ಫಿಟ್‌ಗಳ ಸಂಖ್ಯೆ ಕಡಿಮೆ ಇದ್ದರೂ ಶೂಸ್ ಸಂಗ್ರಹ ಭಾರೀಯಾಗಿರುತ್ತದೆ. ವಿಭಿನ್ನ ಮತ್ತು ಸ್ಟೈಲಿಶ್ ಆಗಿ ಕಾಣಬೇಕೆಂಬ ಅಭಿಪ್ರಾಯದಿಂದಲೇ ಮಹಿಳೆಗೆ ಪಾದುಕೆಗಳ ಮೇಲೆ ಒಲವು ತುಸು ಹೆಚ್ಚು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಫಿಲ್ಮ್‌ಫೇರ್ 2014: ಕಣ್ಮನ ಸೆಳೆದ ಪ್ರಿಯಾಂಕ
ಸಾಮಾನ್ಯರಾದ ನಾವು ಕೂಡ ಚಪ್ಪಲಿಗಳ ವಿಷಯದಲ್ಲಿ ಇಷ್ಟು ಕ್ರೇಜಿಯಾಗಿರುವೆವು. ಹಾಗಿದ್ದರೆ ಸೆಲೆಬ್ರಿಟಿಗಳ ಶೂ ಕಲೆಕ್ಷನ್ ನಿಮ್ಮನ್ನು ದಂಗುಬಡಿಸಬಹುದು. ಜಿಮ್ಮಿ ಚೂನಿಂದ ಹಿಡಿದು ಕ್ರಿಶ್ಚಿಯನ್ ಲೋಬ್ಟಿನ್‌ವರೆಗೆ ವಿವಿಧ ವಿನ್ಯಾಸದ ಲೇಬಲ್ ಉಳ್ಳ ಬ್ರಾಂಡೆಂಡ್ ಶೂಗಳನ್ನು ಧರಿಸಲು ಇಷ್ಟಪಡುತ್ತಾರೆ. ಹಾಗೆಯೇ ಬಾಲಿವುಡ್ ಸೆಲೆಬ್ರಿಟಿಯಾದ ಪ್ರಿಯಾಂಕ ಕೂಡ ತಮ್ಮ ಶೂ ಸಂಗ್ರಹಣೆಯಲ್ಲಿ ಹಿಂದೆ ಬಿದ್ದಿಲ್ಲ.
ಹೆಚ್ಚಿನ ಶೋಗಳಲ್ಲಿ ಪ್ರಿಯಾಂಕ ತಮ್ಮ ವಿವಿಧ ಶೂಗಳಲ್ಲಿ ಆಗಮಿಸಿದ್ದು ಅವರ ಶೂ ಹವ್ಯಾಸವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. 2010 ರ ಫ್ಲಾರೆನ್ಸ್‌ನಲ್ಲಿನ ಸಾಲ್ವಾಟೋರ್ ಫೆರ್ರಾಗಮೋ ಶೂ ಮ್ಯೂಸಿಯಂ ಗೆ ಈ ಅಂತರಾಷ್ಟ್ರೀಯ ದಿವಾನನ್ನು ಆಹ್ವಾನಿಸಿದ್ದು ಅಚ್ಚರಿಯೇನಲ್ಲ. ಅಷ್ಟೊಂದು ಶೂ ಕಲೆಕ್ಷನ್ ಈ ಸುಂದರಿಯ ಹೆಮ್ಮೆಯಾಗಿದೆ.
ಪ್ರಿಯಾಂಕ ತಮ್ಮ ಔಟ್‌ಫಿಟ್‌ಗೆ ಕೊಟ್ಟಷ್ಟೇ ಮಹತ್ವನ್ನು ತನ್ನ ಶೂಗೂ ಕೊಡುತ್ತಾರೆ ಎಂಬುದು ಹಲವಾರು ಷೋಗಳಲ್ಲಿ ಸಾಬೀತಾಗಿದೆ. ತಮ್ಮ ವಿವಿಧ ವಿನ್ಯಾಸದ ಚಪ್ಪಲ್‌ಗಳಿಂದ ಕಣ್ಣರಳಿಸುವಂತೆ ಮಾಡುವ ಪ್ರಿಯಾಂಕ ನೀಟಾಗಿ ಅದನ್ನು ಅಭಿವ್ಯಕ್ತಿಸುವ ಕಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಲ್ಲಿ ನಾವು ಕೆಲವೊಂದು ಪ್ರಿಯಾಂಕರ ಸ್ಟೈಲಿಶ್ ಶೂಗಳ ಪ್ರದರ್ಶನವನ್ನು ನೀಡುತ್ತಿದ್ದೇವೆ. ನೋಡಿ ನೀವು ಇವುಗಳ ಅಭಿಮಾನಿಗಳಾಗಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಹಜ ಲಯ, ತಾಳದಲ್ಲಿ ಪ್ರಿಯಾಂಕ ಫಿಗರ್

ಕಪ್ಪು ಬೂಟ್ಸ್:
ಕಪ್ಪು ಲೆದರ್ ಪ್ಯಾಂಟ್‌ಗೆ ಸರಿಹೊಂದುವ ಕಪ್ಪು ಹೀಲ್ಡ್‌ನಲ್ಲಿ ಪ್ರಿಯಾಂಕ ಇನ್ನಷ್ಟು ಸುಂದರಿಯಾಗಿದ್ದಾರೆ. ಈ ಕಪ್ಪು ಶೂಸ್ ಗೋಲ್ಡನ್ ಹಿಮ್ಮಡಿಗಳನ್ನು ಹೊಂದಿದ್ದು ನಿಯೋನ್ ಹಳದಿ ಸಾಕ್ಸನೊಂದಿಗೆ ಧರಿಸಿದ್ದಾರೆ.

ಕಪ್ಪು ಪಂಪ್ಸ್:
ಪ್ರಿಯಾಂಕಾರ ಕಪ್ಪು ಪಂಪ್ಸ್ ಅವರ ಮೆಚ್ಚಿನದ್ದಾಗಿದೆ. ಈ ಪಂಪ್ಸ್ ಪ್ರತಿಯೊಂದು ಉಡುಗೆಗೂ ಉತ್ತಮ ಮತ್ತು ಆರಾಮದಾಯಕ.

ಡಿಯೋರ್ ಪಂಪ್ಸ್:
ಡಿಯೋರ್ ಏಂಕಲ್ ಸ್ಟ್ರಾಪ್ ಉಳ್ಳ ಪಂಪ್ಸ್ ಪ್ರಿಯಾಂಕರ ಧಿರಿಸಿಗೆ ಹೇಳಿ ಮಾಡಿಸಿದಂತವುಗಳಾಗಿವೆ.

ಜಿಯೋ ಡೀವ್ ಹೀಲ್ಸ್:
ಬಣ್ಣದ ಹೀಲ್ಸ್ ಅನ್ನು ಪ್ರಿಯಾಂಕ ತಮ್ಮ ಶೂ ಕಲೆಕ್ಷನ್‌ನಲ್ಲಿ ಇರಿಸಿಕೊಂಡಿೃದ್ದು ಹಸಿರು ಬಣ್ಣದ ಸ್ಯಾಟೀನ್ ಸ್ಟ್ರಾಪ್ ಶೂಗೆ ಅತ್ಯಂತ ಸುಂದರ ನೋಟವನ್ನು ನೀಡಿದೆ.

ಜಿಮ್ಮಿ ಚೂ:
ಸೆಲೆಬ್ರಿಟಿಗಳ ಮೆಚ್ಚಿನ ಎಲ್ಲಾ ಕಾಲಕ್ಕೂ ಮೀಸಲಾದ ಜಿಮ್ಮಿ ಚೂವನ್ನು ಪ್ರಿಯಾಂಕ ತಮ್ಮ ಶೂಗಳ ರಾಕ್‌ನಲ್ಲಿ ಇರಿಸಿಕೊಂಡಿದ್ದಾರೆ. ಏಂಕಲ್ ಲೆಂತ್ ಲೇಸ್ ಬೂಟ್ಸ್ ಸ್ಮೋಕಿಯಾಗಿದೆ.

ಕ್ರಿಶ್ಚಿಯನ್ ಲೋಬ್ಟಿನ್ ಪಂಪ್ಸ್:
ಪ್ಲೇನ್ ಕಪ್ಪು ಬಣ್ಣದ ಲೋಬ್ಸ್ ವರ್ತುಲದಲ್ಲಿ ಕೆಂಪು ಬಣ್ಣವನ್ನು ಹೊಂದಿದೆ.ಈ ಸೆಕ್ಸಿ ಡ್ರೆಸ್‌ನೊಂದಿಗೆ ಈ ಶೂ ಮೋಡಿ ಮಾಡಿದೆ.

ಪಿಂಕ್ ಡೋರ್ ಪಂಪ್ಸ್:
ಈ ನಿಯೋನ್ ಪಿಂಕ್ ಕಲರ್‌ನ ಪಾಯಿಂಟ್ ಉಳ್ಳ ಹೀಲ್ಡ್ ಪ್ರಿಯಾಂಕನಿಗೆ ಹೇಳಿ ಮಾಡಿಸಿದಂತಿದೆ.

ಗೆಸ್ ಪಂಪ್ಸ್:
ಗೋಲ್ಡ್ ಮಿನುಗು ಬೊಟ್ಟನ್ನು ಹೊಂದಿರುವ ಕಪ್ಪು ಪಂಪ್ಸ್ ನೋಡಲು ತುಂಬಾ ಸುಂದರವಾಗಿದೆ. ಹೀಲ್ಸ್‌ನಲ್ಲಿ ಕೆಂಪು ಬಣ್ಣ ಅತ್ಯಾಕರ್ಷಕವಾಗಿದೆ.

ಬಿಳಿ ಪಂಪ್ಸ್:
ಬಿಳಿ ಬಣ್ಣದ ಪಂಪ್ಸ್‌ಗಳು ಪ್ರಿಯಾಂಕರ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2014 ರ ನೋಟಕ್ಕೆ ಸಂಪೂರ್ಣತೆಯನ್ನು ತಂದಕೊಟ್ಟಿದೆ. ಈ ಸಮಾರಂಭದಲ್ಲಿ ಪ್ರಿಯಾಂಕ ಎರಡು ವಿಭಿನ್ನ ಬಿಳಿ ಬಣ್ಣದ ಹೀಲ್ಸ್ ಅನ್ನು ಧರಿಸಿದ್ದರು.

ಜಾರಾ ಪಂಪ್ಸ್:
ಬಿಳಿ ಡೋಲ್ಸ್ ಮತ್ತು ಗಬ್ಬಾನಾ ಶರ್ಟ್ ಹಾಗೂ ಪಟ್ಟಿಯುಳ್ಳ ಡೆನೀಮ್ಸ್‌ನ್ನು ಪ್ರಿಯಾಂಕ ತೊಟ್ಟಿದ್ದು ಅದಕ್ಕೆ ಮ್ಯಾಚಿಂಗ್ ಆಗುಳ್ಳ ಹಳದಿ ಬಣ್ಣದ ಜಾರಾ ಪಂಪ್ಸ್ ಅನ್ನು ತೊಟ್ಟಿದ್ದಾರೆ.

ಕಪ್ಪು ಪೀಪ್ - ಟೋ ಪಂಪ್ಸ್:
ಲೇಕ್ಮಿ ಫ್ಯಾಶನ್ ವೀಕ್ 2013 ನಲ್ಲಿ ಈ ಮಾದರಿಯ ಹೀಲ್ಸ್ ಅನ್ನು ಪ್ರಿಯಾಂಕ ಧರಿಸಿ ರಾಂಪ್ ಮೇಲೆ ನಡೆದಿದ್ದರು. ಶೂ ವರ್ತುಲದಲ್ಲಿ ಸಿಲ್ವರ್ ಬಣ್ಣವನ್ನು ಹೊಂದಿದ್ದು ಪಂಪ್ಸ್‌ಗೆ ಅದ್ಭುತ ನೋಟವನ್ನು ನೀಡಿದೆ.



Click it and Unblock the Notifications