Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಗೋಲ್ಡನ್ ಗೋಬ್ಸ್‌ನಲ್ಲಿ ಮಿಂಚಿದ ಪ್ರಿಯಾಂಕ ಚೋಪ್ರಾ
2014 ರ ಗೋಲ್ಡನ್ ಗ್ಲೋಬ್ಸ್ ಅವಾರ್ಡ್‌ನಲ್ಲಿ ಕೇವಲ ಹಾಲಿವುಡ್ ಸೆಲೆಬ್ರಿಟಿಗಳು ಮಾತ್ರ ಕಂಡುಬರಲಿಲ್ಲ, ನಮ್ಮ ಹುಡುಗಿ ಪ್ರಿಯಾಂಕ ಚೋಪ್ರಾರ ಹಾಜರಾತಿ ಕೂಡ 71ನೇ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ 2014 ರ ಕಳೆಯನ್ನು ಹೆಚ್ಚಿಸಿತು. ಮಾಜಿ ಮಿಸ್ ವರ್ಲ್ಡ್ 2000, ಪ್ರಿಯಾಂಕ ಕೂಡ ಗೋಲ್ಡನ್ ಗ್ಲೋಬ್ 2014 ಕಾರ್ಯಕ್ರಮದ ರಾತ್ರಿ ಕಂಡುಬಂದರು.
ಗೋಲ್ಡನ್ ಗ್ಲೋಬ್ಸ್ ಪಾರ್ಟಿಯಲ್ಲೂ ಪ್ರಿಯಾಂಕ ಮಿಂಚಿದರು. ಇಂಗ್ಲೀಷ್ ನಟ ಚಾರ್ಲಿ ಹುನ್ನಾಮ್ ಮತ್ತು ಅವರ ಪತ್ನಿಯೊಂದಿಗೆ ಅಂತರಾಷ್ಟ್ರೀಯ ಬಹುಮುಖ ಪ್ರತಿಭೆ ಪ್ರಿಯಾಂಕ ತೆಗೆಸಿಕೊಂಡ ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ಹರಿದಾಡಿದೆ.

ಬಿಬು ಮೋಹತ್ರೆ ವಿನ್ಯಾಸದ ಮೊಣಕಾಲು ಉದ್ದದ ಸಂಜೆಯುಡುಗೆಯಲ್ಲಿ ಪ್ರಿಯಾಂಕ ಚೋಪ್ರಾ ಕಂಡುಬಂದರು. ಬಲೆಗಳಲ್ಲಿ ಮಿನುಗು ಬೊಟ್ಟನ್ನು ಹೊಂದಿರುವ ಹೊಳೆಯುವ ಬೂದು ಮತ್ತು ಕಪ್ಪು ಬಣ್ಣದ ದಿರಿಸಿನಲ್ಲಿ ಆಕೆ ಝಗಮಗಿಸಿದರು.
ಕೆಳಭಾಗದಲ್ಲಿ ಫ್ರಿಲ್ ವಿನ್ಯಾಸವಿರುವ ಕಪ್ಪು ಮಿನುಗು ಬೊಟ್ಟುಗಳನ್ನು ಹೊಂದಿರುವ ಬೂದು ಮತ್ತು ಕಪ್ಪು ಬಣ್ಣದ ಬಿಬು ಮೋಹಪತ್ರೆ ವಿನ್ಯಾಸದ ಉಡುಗೆಯನ್ನು ಪ್ರಿಯಾಂಕ ಗೋಲ್ಡನ್ ಗ್ಲೋಬ್ಸ್ 2014 ನಲ್ಲಿ ಧರಿಸಿದ್ದಾರೆ.
ಬಿಬು ಮೋಹಪತ್ರೆ ವಿನ್ಯಾಸದ ಧಿರಿಸಿನ ಕಟ್ - ಔಟ್ ರವಿಕೆಯು ಪ್ರಿಯಾಂಕರಿಗೆ ಸುಂದರವಾಗಿ ಕಂಡುಬಂದಿದೆ. ಬಿಬು ಮೋಹಪತ್ರೆ ಧಿರಿಸು ಮತ್ತು ಅದಕ್ಕೆ ಜೋಡಿಯಾಗಿ ಬಿಳಿ ಬಣ್ಣದ ಪಾಯಿಂಟ್ ಹೈಹೀಲ್ಡ್‌ನಲ್ಲಿ ಬಾಲಿವುಡ್ ಬಾಂಬ್ ಪ್ರಿಯಾಂಕ ಗೋಲ್ಡನ್ ಗ್ಲೋಬ್ಸ್ 2014 ರಲ್ಲಿ ಕಣ್ಮನ ಸೆಳೆದರು.
ಜೆನಿವೀವ್ ಜೋನ್ಸ್ ಜ್ಯುವೆಲ್ಲರಿಯ ಆಭರಣಗಳು ಪ್ರಿಯಾಂಕರನ್ನು ಅಲಂಕರಿಸಿದ್ದು ಇವರನ್ನು ಸ್ಟೈಲಿಶ್ ಆಗಿಸಿದ್ದು ಸ್ಟೆಫಾನಿ ಸಿಂಗರ್. ಎಡ ಭಾಗದಲ್ಲಿ ಸಡಿಲವಾಗಿ ಹರಡಿದ ಗುಂಗುರು ಕೂದಲನ್ನು ಒಪ್ಪವಾಗಿ ಇಳಿಬಿಟ್ಟಿರುವ ಪ್ರಿಯಾಂಕ ತಿಳಿ ಮೇಕಪ್ ಹಾಗೂ ಗಾಢ ವರ್ಣದ ತುಟಿಬಣ್ಣದಿಂದ ಗೋಲ್ಡನ್ ಗ್ಲೋಬ್ಸ್‌ನಲ್ಲಿನ ತಮ್ಮ ಅಲಂಕಾರವನ್ನು ಪೂರ್ಣಗೊಳಿಸಿದ್ದಾರೆ. ಮೇಕಪ್ ಕಲಾವಿದ ಮಿಕೆ ಕಾಂಟ್ರಾಕ್ಟರ್ ಕೈ ಚಳಕ ಪ್ರಿಯಾಂಕರನ್ನು ಇನ್ನಷ್ಟು ಸುಂದರಿಯಾಗಿಸಿದ್ದು.
ಗೋಲ್ಡನ್ ಗ್ಲೋಬ್ಸ್ 2014 ರಲ್ಲಿ ಪ್ರಿಯಾಂಕರನ್ನು ಕಣ್ಣೆವೆಯಿಕ್ಕದೆ ನಮ್ಮನ್ನು ನಮ್ಮನ್ನು ನೋಡುವಂತೆ ಮಾಡಿದ್ದು ಅವರ ಇನ್ನೊಂದು ಭಂಗಿ. ಜಿಜಿಎ ಪಾರ್ಟಿಯಲ್ಲಿ ಪ್ರಿಯಾಂಕ ಉಸಿರು ಮರೆತು ನೋಡುವಂಥ ಚೆಲುವೆಯಾಗಿದ್ದಾರೆ. ಪಟ್ಟಿಯಿಲ್ಲದ ಬರ್ಬೆರಿ ತಿಳಿಗೆಂಪು ಬಣ್ಣದ ಮೊಳಕಾಲು ಉದ್ದದ ಮೈಗಂಟಿದ ದಿರಿಸಿನೊಂದಿಗೆ ಜೆನಿವೀವ್ ಜೋನ್ಸ್ ಆಭರಣವನ್ನು ಪ್ರಿಯಾಂಕ ಧರಿಸಿದ್ದು, ಪಟ್ಟಿಯಿಲ್ಲದ ಬರ್ಬೆರಿ ತಿಳಿಗೆಂಪು ಬಣ್ಣದ ಧಿರಿಸಿನೊಂದಿಗೆ ವಜ್ರ ಮತ್ತು ಹರಳು ಜೋಡಿಸಿದ ನೆಕ್ಲೇಸ್ ಹಾಗೂ ದೊಡ್ಡ ಗಾತ್ರದ ಉಂಗುರವನ್ನು ಪ್ರಿಯಾಂಕ ತೊಟ್ಟಿದ್ದಾರೆ.
ಬಿಳಿ ಪಟ್ಟಿಯುಳ್ಳ ಪಾಯಿಂಟೆಡ್ ಹೈ ಹೀಲ್ಡ್ ಅವರ ಕಾಲನ್ನು ಅಲಂಕರಿಸಿತ್ತು. ಇದರೊಂದಿಗೆ ಅವರು ಮಾಡಿಕೊಂಡ ಕೇಶಶೃಂಗಾರ ಅವರ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಗೋಲ್ಡನ್ ಗ್ಲೋಬ್ಸ್ 2014 ರೆಡ್ ಕಾರ್ಪೆಟ್‌ನಲ್ಲಿ ಪ್ರಿಯಾಂಕ ಹೆಜ್ಜೆಇರಿಸದಿದ್ದರೂ ಪಾರ್ಟಿಯಲ್ಲಿ ಅವರ ಮನಮೋಹಕತೆ ಅವರ ಇರುವಿಕೆಯನ್ನು ಸಾರಿ ಹೇಳಿತು. ಅದೆಲ್ಲಾ ಓಕೆ, ನಿಮಗೆ ಪ್ರಿಯಾಂಕಾರ ಯಾವ ಲುಕ್ ಇಷ್ಟವಾಯಿತು?



Click it and Unblock the Notifications