Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಫಿಲ್ಮ್‌ಫೇರ್ 2014: ಕಣ್ಮನ ಸೆಳೆದ ಪ್ರಿಯಾಂಕ
2014 ರ ಫಿಲ್ಮ್‌ಫೇರ್ ಕೆಂಪು ಹಾಸ್ ಈಗಾಗಲೇ ತೆರೆದುಕೊಂಡಿದೆ. ತಮ್ಮ ಸ್ಟೈಲಿಶ್ ವಿನ್ಯಾಸಕಾರರ ಸುಂದರ ಉಡುಗೆಗಳನ್ನು ಧರಿಸಿ ಈ ರೆಡ್ ಕಾರ್ಪೆಟ್‌ನತ್ತ ಸೆಲೆಬ್ರಿಟಿಗಳು ಮುನ್ನುಗ್ಗುತ್ತಿದ್ದಾರೆ. ಈ ಸೆಲೆಬ್ರಿಟಿಗಳೆಡೆಯಲ್ಲಿ ನಯನ ಮನೋಹರವಾಗಿ ಕಂಡುಬಂದ ಪ್ರಿಯಾಂಕ ಚೋಪ್ರಾ ತುಸು ಭಿನ್ನವಾಗಿ ಕಂಡುಬಂದರು.
59ನೇ ವಾರ್ಷಿಕ ಫಿಲ್ಮ್‌ಫೇರ್ ಅವಾರ್ಡ್ 2014 ರ ಅತಿಥಿಗಳಲ್ಲಿ ಒಬ್ಬರು ಅತಿಥಿಯಾಗಿರುವ ಪ್ರಿಯಾಂಕ ಹಾಟ್ ಆಗಿ ರೆಡ್ ಕಾರ್ಪೆಟ್ ಅನ್ನು ಅಲಂಕರಿಸಿದರು. ಕಪ್ಪು ಬಣ್ಣದ ತೋಳಿಲ್ಲದ ಅಲೆಕ್ಸಾಂಡರ್ ಮೆಕ್ವೀನ್ ಗೌನ್ ಅನ್ನು ಪ್ರಿಯಾಂಕ 2014 ರ ಫಿಲ್ಮ್‌ಫೇರ್‌ನಲ್ಲಿ ಧರಿಸಿದ್ದರು.

ಕಪ್ಪು ಬಣ್ಣದ ತೋಳಿಲ್ಲದ ಪ್ಲೇನ್ ಗೌನ್ ಹಾಗೂ ಸೊಂಟದಲ್ಲಿ ಗೌನ್ ಅನ್ನು ಅಲಂಕರಿಸಿರುವ ಚಿನ್ನದ ಮಿನುಗು ಬೊಟ್ಟಿನ ಕುಸುರಿ ತಾಳಮೇಳದಂತಿದೆ. ನೆಲಕ್ಕೆ ಮುಟ್ಟುವಂತಿರುವ ಗೌನ್‌ನ ವಿನ್ಯಾಸ ಪ್ರಿಯಾಂಕಾರ ಸುಂದರ ದೇಹವನ್ನು ಹಿಡಿದಿಡುವಲ್ಲಿ ಪರಿಪೂರ್ಣಗೊಂಡಿದೆ.
ಕಪ್ಪು ಗೌನ್‌ನೊಂದಿಗೆ ಮಿಳಿತವಾಗಿರುವ ಚಿನ್ನದ ಮಿನುಗು ಬೊಟ್ಟು ಗೌನ್‌ನ ಸೌಂದರ್ಯವನ್ನು ಇಮ್ಮಡಿಸಿದೆ. ಈ ಗೌನ್‌ನ ಸೌಂದರ್ಯ ರೆಡ್ ಕಾರ್ಪೆಟ್‌ಗೆ ಇನ್ನಷ್ಟು ಮೆರುಗನ್ನು ನೀಡಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಫಿಲ್ಮ್‌ಫೇರ್‌ನಲ್ಲಿ ಅದ್ಭುತವಾಗಿ ಕಂಡುಬಂದ ವಾಣಿ ಕಪೂರ್
ಒಂದೇ ಬದಿಗೆ ಓಲಾಡುತ್ತಿರುವ ವೇವಿ ಕೇಶವಿನ್ಯಾಸವನ್ನು ಬಾಲಿವುಡ್‌ನ ಸ್ಟೈಲ್ ಐಕಾನ್ ಫಿಲ್ಮ್‌ಫೇರ್‌ಗಾಗಿ ಮಾಡಿಕೊಂಡಿದ್ದಾರೆ. ಈ ಕೇಶವಿನ್ಯಾಸ ಅತ್ಯದ್ಭುತವಾಗಿ ಪ್ರಿಯಾಂಕಾಗೆ ಹೊಂದಿಕೆಯಾಗಿದೆ.
ಗೌನ್‌ನ ಸುಂದರತೆಯನ್ನು ಪ್ರಿಯಾಂಕ ನಯವಾಗಿ ಪ್ರದರ್ಶಿಸಿದ್ದಾರೆ ಗೌನ್‌ನ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಸರಳ ಮೇಕಪ್ ಮತ್ತು ಸರಳ ಆಭರಣಗಳು ಅವರನ್ನು ಅಲಂಕರಿಸಿದೆ. ಕಿವಿಯಾಭರಣಗಳನ್ನು ಮಾತ್ರ ಪ್ರಿಯಾಂಕ ಗೌನ್‌ನೊಂದಿಗೆ ಧರಿಸಿದ್ದಾರೆ.
ಇನ್ನಷ್ಟು ಸ್ಟೈಲಿಶ್ ಲುಕ್‌ನಲ್ಲಿ ಪ್ರಿಯಾಂಕ ಮಿಂಚಲಿ ಆಕೆಯ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡದಿರಲಿ ಎಂದು ನಾವು ಆಶಿಸುತ್ತೇವೆ. ಅಂತೂ 2014 ರ ಫಿಲ್ಮ್‌ಫೇರ್ ಅವಾರ್ಡ್ ಫಂಕ್ಷನ್ ಪ್ರಿಯಾಂಕಾರಿಂದ ಕಳೆಗಟ್ಟಿದ್ದಂತೂ ನಿಜ.



Click it and Unblock the Notifications
