Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಐಸಿಡಬ್ಲ್ಯೂ 2014: ಮನೀಶ್ ಮಲ್ಹೋತ್ರಾ ಗೋಲ್ಡನ್ ಔಟ್‌ಫಿಟ್ಸ್
'ಫೋಟ್ರೇಟ್ಸ್' ಎಂದು ಕರೆಯಲಾದ ಸಂಗ್ರಹವು ಆಭರಣದ ವಿನ್ಯಾಸಗಳನ್ನು ಹೊಂದಿ ಮನಮೋಹಕವಾಗಿದೆ. ಮನೀಶ್ ಮಲ್ಹೋತ್ರಾ ವಿನ್ಯಾಸಗಳೂ ಕೂಡ ಆಧುನಿಕವಾಗಿದ್ದು ಮನಸ್ಸಿಗೆ ನಾಟುವಂತಿದೆ. ಐಸಿಡಬ್ಲ್ಯೂನ ಐದನೇ ದಿನದಂದು, ಮನೀಶ್ ಮಲ್ಹೊತ್ರಾ ಸಂಗ್ರಹವನ್ನು ವ್ಯಾಖ್ಯಾನಿಸಲು ಪದಗಳೇ ಸಾಲದು ಎಂದು ಕೂಡ ಹೇಳಬಹುದು. ತುಂಬಾ ಅದ್ಭುತವಾದ ಸಂಗ್ರಹವನ್ನು ಹೊಂದಿದ್ದ ಮನೀಶ್ ಮಲ್ಹೋತ್ರಾ ವಿನ್ಯಾಸ ಅಪರೂಪದಲ್ಲಿ ಅಪರೂಪವಾಗಿದೆ.
ಚಿನ್ನ ಮತ್ತು ಇತರ ಬೆಲೆ ಬಾಳುವ ಕಲ್ಲುಗಳ ವಿನ್ಯಾಸಗಳಿಂದ ಶ್ರೀಮಂತವಾಗಿದ್ದ ವಿನ್ಯಾಸಗಳನ್ನು ಮನೀಶ್ ಮಲ್ಹೋತ್ರಾ ಧಿರಿಸು ಒಳಗೊಂಡಿತ್ತು. ಇವರ ಶೋಸ್ಟಾಪರ್‌ಗಳಾದ ಆಲಿಯಾ ಭಟ್ ಮತ್ತು ಆದಿತ್ಯ ರಾಯ್ ಕಪೂರ್ ಆಕರ್ಷಕ ವಿನ್ಯಾಸದ ಧಿರಿಸುಗಳಿಂದ ಮನಮೋಹಗೊಳಿಸುವಂತಿದ್ದರು. ಇದರೊಂದಿಗೆ ಆಕರ್ಷಕ ಉಡುಪುಗಳನ್ನು ಧರಿಸಿದ ರೂಪದರ್ಶಿಯರು ಹೆಜ್ಜೆ ಮೇಲೆ ಹೆಜ್ಜೆಯನ್ನಿಟ್ಟು ರಾಂಪ್‌ನಲ್ಲಿ ತಮ್ಮ ವೈಭವವನ್ನು ಪ್ರದರ್ಶಿಸಿದರು.

ಏಕ್ ವಿಲನ್ ಯಶಸ್ಸಿನಲ್ಲಿ ಭಾಗಿಯಾದ ಸೋನಾಕ್ಷಿಯ ಮನಸೆಳೆಯುವ ನೋಟ
ಈ ರಚನೆಗಳಲ್ಲಿ ಬಳಸಿದ ವಿಂಟೇಜ್ ಬಣ್ಣ ಅಸಾಮಾನ್ಯವಾಗಿತ್ತು. ಚಿನ್ನದ ಬೇರೆ ಬೇರೆ ಎಳೆಗಳನ್ನು ಬಳಸಿ ಮಾಡಲಾದ ಉಡುಗೆಗಳು ಮನಕದಿಯುವಂತಿದ್ದವು. ಜರಿ ಕೆಲಸಗಳು ಧಿರಿಸಿನಲ್ಲಿ ಅಂದವಾಗಿ ಕಾಣುತ್ತಿದ್ದು ಐವರಿ ಎಳೆಗಳನ್ನು ಹೊಂದಿತ್ತು.
ಎಮರಾಲ್ಡ್, ರೂಬಿ, ಬೇರೆ ಬೇರೆ ಕಲ್ಲುಗಳನ್ನು, ಮುತ್ತುಗಳನ್ನು ಬಳಸಿ ಪ್ರಥಮ ಬಾರಿಗೆ ಮನೀಶ್ ಮಲ್ಹೋತ್ರಾ ತಮ್ಮ ವಸ್ತ್ರ ವಿನ್ಯಾಸವನ್ನು ಪ್ರದರ್ಶಿಸಿದ್ದಾರೆ. ಅವರ 'ಫೋಟ್ರೇಟ್ಸ್' ಸಂಗ್ರಹ ಮನಮೋಹಕವಾಗಿದ್ದು ಆಲಿಯಾ ಮತ್ತು ಆದಿತ್ಯ ರಾಯ್ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದರು, ಅಲ್ಲದೆ ಈ ಇಬ್ಬರೂ ಜೋಡಿಗಳು ರಾಂಪ್‌ನಲ್ಲಿ ಮೋಡಿಯನ್ನೇ ಮಾಡಿದ್ದರು ಮತ್ತು ಹೆಚ್ಚು ಮನಸೆಳೆಯುವಂತೆ ಕಾಣುತ್ತಿದ್ದರು.



Click it and Unblock the Notifications
