Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಫೆಮಿನಾದಲ್ಲಿ ಮಿಂಚಿದ ಇಬ್ಬರು ತಾರೆಯರು
ಏಮ್‌ವೇ ಫೆಮಿನಾ ಸ್ಟೈಲ್ ದಿವಾ ನಾರ್ತ್ 2014 ಫ್ಯಾಶನ್‌ನಲ್ಲಿ ಆಗಮಿಸಿದ್ದ ಜಡ್ಜ್‌ಗಳಿಬ್ಬರು ನಮ್ಮನ್ನು ದಂಗುಬಡಿಸಿದ್ದಂತೂ ನಿಜ. ಅದರಲ್ಲೂ ಮಲೈಕಾ ಅರೋರಾ ಖಾನ್ ಡೇರಿಂಗ್ ಆಗಿ ಕಂಡುಬಂದಿದ್ದರು. ದಕ್ಷಿಣದ ಚೆಲುವೆ ತಮ್ಮನಾ ಭಾಟಿಯಾ ಪಿಂಕ್ ಡ್ರೆಸ್‌ನಲ್ಲಿ ಮುದ್ದಾಗಿದ್ದರು.
ಮಲೈಕಾ ಮೆಟಾಲಿಕ್ ಗೌನ್ ನಲ್ಲಿ ನಿಜಕ್ಕೂ ಅದ್ಭುತ ಸುಂದರಿಯಾಗಿದ್ದರು. ಆಕೆಯ ಸ್ಟೈಲ್ ಸೆನ್ಸ್, ನಿಜಕ್ಕೂ ಅಭೂತಪೂರ್ಣವಾಗಿತ್ತು. ಜಡ್ಜ್ ಆಗಿ ಆಗಮಿಸಿ ವಿಜಯಿಗಳನ್ನು ಗುರುತಿಸುವುದು ಸುಲಭದ ಕೆಲಸವೇನಲ್ಲ. ಆದರೆ ಮಲೈಕಾ ಈ ಕಾರ್ಯದಲ್ಲಿ ಒಬ್ಬ ಗೃಹಿಣಿಯಾಗಿ ಯಶಸ್ಸು ಸಾಧಿಸಿದ್ದಾರೆ.
ಈ ಇಬ್ಬರೂ ಚೆಲುವೆಯರ ಸುಂದರವಾದ ನೋಟಗಳು ನಿಮಗಾಗಿ:
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಾದಕ ಮೈಮಾಟದ ಬಾಲಿವುಡ್ ಅಮ್ಮಂದಿರು

ಮಲೈಕಾ ಅರೋರಾ ಖಾನ್:
ಫೆಮಿನಾ ಸ್ಟೈಲ್ ದಿವಾ ನಾರ್ತ್ 2014 ರಲ್ಲಿ ಮಲೈಕಾ ನಮ್ಮನ್ನು ದಂಗುಬಡಿಸಿದಂತೆ ಕಂಡುಬಂದಿದ್ದರು. ಮೆಟಾಲಿಕ್ ಗೌನ್ ಆಕೆಯ ರೂಪರಾಶಿಯನ್ನು ಎದ್ದು ತೋರಿಸುತ್ತಿದ್ದು ಗೌನ್‌ನ ವಿ ನೆಕ್‌ಲೈನ್ ಸುಂದರವಾಗಿದೆ.

ಆಕೆಯ ಮೇಕಪ್:
ಮೆಟಾಲಿಕ್ ಧಿರಿಸಿಗೆ ಸರಿಹೊಂದುವ ಬ್ರೌಂಜ್ ಮೇಕಪ್ ಅನ್ನು ಮಲೈಕಾ ಆಯ್ದುಕೊಂಡಿದ್ದಾರೆ. ಆಕೆಯ ಚೆರ್ರಿ ತುಟಿಗಳು ಸುಂದರವಾದ ಆಕೆಯ ನಗುವನ್ನು ಹೊತ್ತು ತಂದಿದ್ದು ಸುಂದರವಾಗಿದೆ.

ಮೃದು ಕರ್ಲ್‌ಗಳು:
ನಮ್ಮ ಹೃದಯಬಡಿತವನ್ನು ಹೆಚ್ಚುವಂತೆ ಮಾಡಿದ್ದು ಮಲೈಕಾನ ಮೃದುವಾದ ಕೋಮಲ ಕರ್ಲ್‌ಗಳು.

ತಮನ್ನಾ ಭಾಟಿಯಾ:
ತಮನ್ನಾ ಧರಿಸಿದ ಉಡುಗೆ ತುಂಬಾ ಚಿಕ್ ಆಗಿದ್ದು ಆಕೆಗೆ ಹೇಳಿಮಾಡಿಸಿದಂತಿದೆ. ಆಕೆಯ ಧಿರಿಸು ಆಕರ್ಷಕವಾಗಿದ್ದು ಧಿರಿಸಿನಲ್ಲಿರುವ ಹೂವಿನ ಚಿತ್ತಾರ ಸುಂದರವಾಗಿದೆ.

ತಮನ್ನಾ ಮೇಕಪ್:
ಕನಿಷ್ಟ ಮೇಕಪ್ ಅನ್ನು ಮಾಡಿಕೊಂಡಿರುವ ತಮನ್ನಾ ಹೆಚ್ಚು ಮೇಕಪ್ ಅನ್ನು ಎಂದಿಗೂ ಆಯ್ಕೆಮಾಡಿಕೊಂಡವರಲ್ಲ. ಆಕೆಯ ನೈಜ ಸೌಂದರ್ಯ ಇಲ್ಲಿ ಪ್ರದರ್ಶನಗೊಂಡಿದೆ.

ಟ್ರೆಂಡಿ ಹೇರ್‌ಸ್ಟೈಲ್:
ತಮನ್ನಾ ಟ್ರೆಂಡಿಯಾಗಿರುವ ಹೇರ್ ಸ್ಟೈಲ್ ಮಾಡಿಕೊಂಡದ್ದು ಸುಂದರವಾಗಿದೆ. ಎತ್ತರದಲ್ಲಿನ ಮುಡಿಯ ತುರುಬು ಆಕೆಗೆ ಹೊಸ ಲುಕ್ ಅನ್ನು ನೀಡಿದೆ. ಆಕೆಯ ಕೇಶ ಶೃಂಗಾರ ನಿಮಗಿಷ್ಟವಾಯಿತೇ?



Click it and Unblock the Notifications
