Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಬಿಳಿ ಬ್ಲೇಜರ್‌ನಲ್ಲಿ ಮಾಧುರಿ ದೀಕ್ಷಿತ್ ಸುಂದರ ನೋಟ
ಜಲಕ್ ದಿಕ್‌ಲಾಜಾ ಸೀಸನ್ 7 ನ ಮಾಧುರಿ ದೀಕ್ಷಿತ್ ಉಡುಗೆಯು ಅತ್ಯದ್ಭುತವಾಗಿ ಕಂಡುಬಂದಿತ್ತು. ಸಾವಿರ ಪಟ್ಟು ಪ್ರಖರವಾಗಿರುವ ನಗುವಿನ ಒಡತಿ ಎಂದೇ ಖ್ಯಾತರಾದ ಮಾಧುರಿ ಜಲಕ್‌ನ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಪಾಶ್ಚಿಮಾತ್ಯ ಉಡುಪುಗಳು ದೇಸೀಯ ಸೀರೆ ಜಲಕ್‌ನ ಪ್ರತೀ ವಾರದ ಸೀಸನ್‌ನಲ್ಲೂ ಅವರು ಮಿಂಚುತ್ತಿದ್ದರು. ಆದರೆ ಈ ವಾರ ಮಾಧುರಿ ಶ್ವೇತ ವಸ್ತ್ರಧಾರಿಯಾಗಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಬ್ಲೇಜರ್ ಪ್ಯಾಂಟ್‌ಗಳಲ್ಲಿ ಗಮನ ಸೆಳೆವ ಸುಂದರಿ ಮಾಧುರಿಯನ್ನು ನಾವು ಯಾವಾಗಲೂ ಇಷ್ಟಪಡುತ್ತೇವೆ. ಇನ್ನು ಜಲಕ್‌ನ ಈ ವಾರದ ಸೀಸನ್‌ನಲ್ಲಿ ಸ್ಟ್ರಿಪ್ ಪ್ಯಾಂಟ್ ಮತ್ತು ಬಿಳಿ ಟಾಪ್ ಹಾಗೂ ಬ್ಲೇಜರ್ ಅನ್ನು ಧರಿಸಿದ್ದರು. ಈ ಪ್ಯಾಂಟ್ ಬಿಳಿಯೊಂದಿಗೆ ನೀಲಿ ಗೆರೆಯನ್ನು ಹೊಂದಿದ್ದು ಪ್ಯಾಂಟ್‌ನ ಫಿಟ್ಟಿಂಗ್ ಟೈಟ್ ಮಾದರಿಯಲ್ಲಿತ್ತು. ಈ ಪ್ಯಾಂಟ್ ಅನ್ನು ಕ್ರಾಪ್ ಪ್ಯಾಂಟ್ ಎಂದೂ ಕರೆಯುತ್ತಾರೆ. For More Pics

ಮಿರ್ಚಿ ಮ್ಯೂಸಿಕ್ ಅವಾರ್ಡ್: ಸೀರೆಯಲ್ಲಿ ಮಿಂಚಿದ ಮಾಧುರಿ
ಬಿಳಿ ಬಣ್ಣದ ಟಾಪ್ ಅನ್ನು ಧರಿಸಿದ್ದ ಅವರು ಪ್ಲೇನ್ ಬ್ಲೇಜರ್ ಅನ್ನು ತೊಟ್ಟಿದ್ದರು. ಜಾಕೆಟ್ ನಿಜಕ್ಕೂ ಸುಂದರವಾಗಿದ್ದು ಮಾಧುರಿಯ ಸ್ವಲ್ಪ ಮಟ್ಟಿಗಿನ ತೂಕವನ್ನು ಮರೆಮಾಚುವಲ್ಲಿ ಇದು ನೆರವಾಗಿದೆ. ಮಾಧುರಿ ಯಾವಾಗಲೂ ಬ್ಲೇಜರ್‌ಗೆ ಡೆನೀಮ್ಸ್ ಅನ್ನು ಧರಿಸುವುದು ವಾಡಿಕೆ. ಆದರೆ ಈ ಬಾರಿ ಜಾಕೆಟ್ ಅನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ. ಸಿಲ್ವರ್ ಬಣ್ಣದ ಹೀಲ್ಸ್ ಅನ್ನು ಧರಿಸಿ ತಮ್ಮ ಲುಕ್ ಅನ್ನು ಪರಿಪೂರ್ಣಗೊಳಿಸಿದ್ದಾರೆ ಈ ಬಾಲಿವುಡ್ ಬೆಡಗಿ.
ಮಾಧುರಿ ತನ್ನ ಉಡುಗೆಗೆ ಧರಿಸಿರುವ ನೆಕ್ಲೇಸ್ ಕೂಡ ಸುಂದರವಾಗಿದ್ದು ನೆಕ್ಲೇಸ್‌ನಲ್ಲಿರುವ ಹರಳು ಮತ್ತು ಚಿನ್ನದ ಕುಸುರಿ ಕೆಲಸ ನೋಡಲು ಅದ್ಭುತವಾಗಿತ್ತು. ಕೈಗೂ ಕೆಲವೊಂದು ಚೈನ್ ಮಾದರಿಯಲ್ಲಿರುವ ಬ್ರೇಸ್‌ಲೆಟ್ ಅನ್ನು ಧರಿಸಿರುವ ಈ ಸುಂದರಿ ತಮ್ಮ ಜಲಕ್ ಲುಕ್ ಅನ್ನು ಸಂಪೂರ್ಣಗೊಳಿಸಿದ್ದಾರೆ.
ಹಾಲ್ಟರ್ ಗೌನ್‌ನಲ್ಲಿ ಕಣ್ಮನ ಸೆಳೆದ ಮಾಧುರಿ ದೀಕ್ಷಿತ್
ಸಾಮಾನ್ಯ ಪೋನಿಟೇಲ್ ಅನ್ನು ಕೇಶವಿನ್ಯಾಸವಾಗಿ ಮಾಡಿಕೊಂಡಿರುವ ಈ ಸುಂದರಿ ತಮ್ಮ ಬೆರಳುಗಳನ್ನು ಮುಖದ ತುಂಬೆಲ್ಲಾ ಓಡಾಡುವಂತೆ ಮಾಡಿಕೊಂಡಿದ್ದಾರೆ. ಸರಳ ಮೇಕಪ್ ಮತ್ತು ಸುಂದರ ನಗುವಿನಿಂದ ಜಲಕ್ ದಿಕ್‌ಲಾಜಾದ ಈ ವಾರದ ಸೀಸನ್ ಅನ್ನು ಮಾಧುರಿ ಪರಿಪೂರ್ಣಗೊಳಿಸಿದ್ದಾರೆ.



Click it and Unblock the Notifications
