Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಹಾಲ್ಟರ್ ಗೌನ್‌ನಲ್ಲಿ ಕಣ್ಮನ ಸೆಳೆದ ಮಾಧುರಿ ದೀಕ್ಷಿತ್
ಮಾಧುರಿ ದೀಕ್ಷಿತ್ ಇತ್ತೀಚೆಗೆ ತಮ್ಮ ಸ್ಟೈಲ್‌ನಲ್ಲಿ ಹೆಚ್ಚು ಆಧುನಿಕತೆಯನ್ನು ಅನುಸರಿಸುವಂತೆ ಕಂಡುಬರುತ್ತಿದೆ. ಕಳೆದ ವಾರ ಝಲಕ್ ದಿಕ್‌ಲಾಜಾ ಸೀಸನ್ 7 ರಲ್ಲಿ ಸೀರೆಯ ಫ್ಯಾಶನ್ ಅನ್ನು ವಿಭಿನ್ನವಾಗಿ ಮಾಡಿಕೊಂಡ ಈ ಸುಂದರಿ, ತಮ್ಮ ಹಿಂದಿನ ಪಾಶ್ಚಾತ್ಯ ಸ್ಟೈಲ್‌ಗೆ ಮರಳಿದ್ದಾರೆ.
ಆಕೆ ಕಳೆದ ವಾರ ಉಟ್ಟಿದ್ದ ಕೆಂಪು ಸೀರೆಯನ್ನು ನಾವು ತುಂಬಾ ಇಷ್ಟಪಟ್ಟಿದ್ದು ಇದರ ವಿನ್ಯಾಸಕ ತರುಣ್ ತಹಿಲಾನಿಯಾಗಿದ್ದಾರೆ. ಆದರೆ ಈ ಬಾರಿ ಮಾಧುರಿ ಹಾಲ್ಟರ್ ಗೌನ್ ಅನ್ನು ಧರಿಸಿದ್ದು ಇದು ಕೊಂಚ ಅವರಿಗೆ ಭಾರೀಯಾಗಿ ಕಾಣುವಂತೆ ಮಾಡಿದೆ.

ಮಾಧುರಿ ದೀಕ್ಷಿತ್ ಝಲಕ್ ಶೋನಲ್ಲಿ ಹಾಲ್ಟರ್ ಗೌನ್‌ನಲ್ಲಿ ಕಂಡುಬಂದಿದ್ದು ಸ್ವಲ್ಪ ಸ್ಟೈಲೀಶ್ ಆಗಿ ಕಂಡುಬಂದಿದ್ದರು. ಆಕೆಗೆ ಈ ಗೌನ್ ಅಷ್ಟೊಂದು ಚೆನ್ನಾಗಿ ಕಂಡುಬರುತ್ತಿಲ್ಲ ಮತ್ತು ಮಾಧುರಿಯಂತಹ ಮಹಿಳೆ ಇಂತಹ ಗೌನ್ ಅನ್ನು ಧರಿಸುವುದು ಅಷ್ಟೊಂದು ಸಮಂಜಸವಾಗಿರುವುದಿಲ್ಲ. ಮೆರೂನ್ ಬಣ್ಣದ ಗೌನ್ ನೋಡಲು ಆಕರ್ಷಕವಾಗಿದ್ದು ಆದರೆ ಮಾಧುರಿಯ ಲುಕ್‌ಗೆ ಅಷ್ಟೊಂದು ಸರಿಹೊಂದುತ್ತಿರಲಿಲ್ಲ.
ಪಂಕಜ್ ಮತ್ತು ನಿಧಿ ವಿನ್ಯಾಸದ ಧಿರಿಸಿನಲ್ಲಿ ಮಾಧುರಿ
ಅದಾಗ್ಯೂ ಈ ಮೆರೂನ್ ಬಣ್ಣದ ಗೌನ್ 100 ವ್ಯಾಟ್ ಶಕ್ತಿಯುಳ್ಳ ನಗುವಿನ ಒಡತಿಯಾಗಿರುವ ಮಾಧುರಿಯ ಮೇಲೆ ಅಷ್ಟೊಂದು ಪರಿಣಾಮ ಬೀರಲಿಲ್ಲ ಎಂದೇ ಹೇಳಬಹುದು. ಬೇರೆಲ್ಲಾ ಧಿರಿಸಿಗಿಂತ ಈ ಗೌನ್ ಅವರಿಗೆ ಸ್ವಲ್ಪ ಭಾರವಾಗಿರುವಂತೆ ಕಂಡುಬರುತ್ತಿತ್ತು. ಮಾಧುರಿಯ ಸೊಂಟದ ಮೇಲೆ ಬೆಲ್ಟ್ ಬಂದಿರುವುದರಿಂದ ಗೌನ್ ಮಾಧುರಿಗೆ ಚೆನ್ನಾಗಿ ತೋರುತ್ತಿಲ್ಲ.
ಮನೀಶ್ ಅರೋರಾ ಟೈಗರ್ ಟೀಲ್ ರಿಂಗ್ ಮತ್ತು ಶೋರೂಕ್ ಕಿವಿಯಾಭರಣಗಳು ಗೌನ್‌ಗೆ ಮ್ಯಾಚಿಂಗ್ ಲುಕ್ ಅನ್ನು ನೀಡಿದೆ ಎಂದು ಹೇಳಬಹುದು. ಈ ಗೌನ್ ಮಾಧುರಿಯನ್ನು ಕೊಂಚ ದಪ್ಪಗಾಗಿರುವಂತೆ ಮಾಡಿದೆ ಮತ್ತು ಗೌನ್‌ಗೆ ಅವರು ಸೈಡ್ ಬ್ರೈಡ್ ಮಾಡಿಕೊಂಡಿದ್ದಾರೆ.
ಮಿರ್ಚಿ ಮ್ಯೂಸಿಕ್ ಅವಾರ್ಡ್: ಸೀರೆಯಲ್ಲಿ ಮಿಂಚಿದ ಮಾಧುರಿ
ಈ ಹೇರ್‌ಸ್ಟೈಲ್ ಕೂಡ ಗೌನ್‌ಗೆ ಅಷ್ಟೊಂದು ಸರಿಹೊಂದುತ್ತಿಲ್ಲ. ತಿಳಿ ಬಣ್ಣದ ಕಾಫಿ ಲಿಪ್‌ಸ್ಟಿಕ್ ಅನ್ನು ಅವರು ಹಚ್ಚಿಕೊಂಡಿದ್ದು ಸ್ಮೋಕ್ ಕಣ್ಣಿನ ಮೇಕಪ್ ಮಾಡಿಕೊಂಡಿದ್ದಾರೆ. ಮಾಧುರಿಯ ಗೌನ್‌ನಲ್ಲಿರುವ ಈ ನೋಟ ಒಂದು ಕೆಟ್ಟ ಫ್ಯಾಶನ್ ದಿನವಾಗಿದ್ದು ನಮಗೆ ಅಷ್ಟೊಂದು ಇಷ್ಟವಾಗಿಲ್ಲ ಎಂದೇ ಹೇಳಬಹುದಾಗಿದೆ. ಮುಂದಿನ ವಾರ ಮಾಧುರಿ ಇನ್ನಷ್ಟು ಆಕರ್ಷಕವಾಗಿ ಕಂಡುಬರುತ್ತಾರೆ ಎಂಬ ನಿರೀಕ್ಷೆ ನಮ್ಮದಾಗಿದೆ.



Click it and Unblock the Notifications
