Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ!
ಸತ್ಯ ಪಾಲ್ ಸೀರೆಯಲ್ಲಿ ಮಿಂಚಿದ ಕರೀನಾ ಕಪೂರ್
ಕರೀನಾ ಕಪೂರ್ ಬಾಲಿವುಡ್‌ನ ಫಿಟ್ ಹಾಗೂ ಹೆಚ್ಚು ಸ್ಟೈಲಿಶ್ ಆಗಿರುವ ನಟಿ. ಪಾಶ್ಚಾತ್ಯ ಧಿರಿಸುಗಳಲ್ಲೂ ತನ್ನ ಅಂದವಾದ ಮೈಕಟ್ಟನ್ನು ಉತ್ತಮವಾಗಿ ಪ್ರದರ್ಶಿಸುವ ಈ ನಟಿ ದೇಸೀಯ ಸೀರೆಯಲ್ಲೂ ತುಂಬಾ ಚೆನ್ನಾಗಿ ಮಿಂಚುತ್ತಾರೆ. ನಮ್ಮಲ್ಲಿನ ನಟಿಯರು ಫ್ಯಾಶನೇಬಲ್ ಧಿರಿಸುಗಳನ್ನು ಎಷ್ಟು ಧರಿಸಿದರೂ ಕೊನೆಗೆ ಸೀರೆಯನ್ನು ತಮ್ಮದಾಗಿಸಿಕೊಳ್ಳುವುದು ಭಾರತೀಯತೆಯ ಮಹತ್ವವನ್ನು ಸಾರುತ್ತದೆ.
ಕರೀನಾ ಕಪೂರ್ ಸತ್ಯ ಪಾಲ್ ಸೀರೆಯಲ್ಲಿ ಇತ್ತೀಚೆಗೆ ಕಂಡುಬಂದಿದ್ದು ಇದಕ್ಕೆ ಬಿಕಿನಿ ರವಿಕೆಯನ್ನು ಧರಿಸಿದ್ದರು. ಸೀರೆಯಲ್ಲಿ ಕಂಡುಬಂದ ಕರೀನಾ ವಾವ್ ಎಂದು ಉದ್ಗರಿಸುವಷ್ಟು ಬ್ಯೂಟಿಫುಲ್ ಆಗಿದ್ದರು. ತುರುಬು ಕಟ್ಟಿಕೊಂಡ ಕೇಶವಿನ್ಯಾಸದಲ್ಲಿ ಇನ್ನಷ್ಟು ಸಾಂಪ್ರದಾಯಿಕವಾಗಿದ್ದ ಸುಂದರೀ ಕರೀನಾರ ಇನ್ನಷ್ಟು ಸ್ಟೈಲಿಶ್ ಲುಕ್‌ಗಳು ಕೆಳಗಿನ ಸ್ಲೈಡ್‌ಗಳಲ್ಲಿ ನೋಡಿ
ಪೀಟರ್ ಪೈಲಾಟ್ಟೊ ಡ್ರೆಸ್‌ನಲ್ಲಿ ಬೇಬೋ ಕರೀನಾ

ಸತ್ಯ ಪಾಲ್ ಸೀರೆಯಲ್ಲಿ ಕರೀನಾ ಕಪೂರ್
ಕಪೂರ್ ಕುಟುಂಬದ ಇನ್ನೊಬ್ಬ ನಟ ಅರ್ಮಾನ್ ಜೈನ್ ಬಾಲಿವುಡ್ ಪ್ರವೇಶಿಸುತ್ತಿದ್ದು ಅವರ ಚಿತ್ರದ ಲಾಂಚಿಂಗ್ ಈವೆಂಟ್‌ನಲ್ಲಿ ಕಾಣಿಸಿಕೊಂಡ ಕರೀನಾ ಸತ್ಯ ಪಾಲ್ ಸೀರೆಯಲ್ಲಿ ಮಿಂಚಿದ್ದಾರೆ. ಪ್ರಿಂಟೆಡ್ ಷಿಫಾನ್ ಸಾರಿ ನವಾಬನ ರಾಣಿಯಾದ ಕರೀನಾರಿಗೆ ಚೆನ್ನಾಗಿ ಒಪ್ಪುತ್ತಿದೆ.

ಬಿಕಿನಿ ಬ್ಲೌಸ್‌ನಲ್ಲಿ ಕರೀನಾ
ಸೀರೆಯ ಹಾಟ್‌ನೆಸ್ ಅನ್ನು ಚೆನ್ನಾಗಿ ಪ್ರದರ್ಶಿಸಿರುವ ಬಿಕಿನಿ ಬ್ಲೌಸ್‌ನಲ್ಲಿ ಕರೀನಾ ಇನ್ನಷ್ಟು ಹಾಟ್ ಆಗಿ ಕಂಡುಬಂದಿದ್ದಾರೆ.

ಕಪ್ಪು ಸ್ಟೋನ್ ಬ್ರಾಸ್ಲೆಟ್
ಈ ಸೀರೆಗೆ ಮತ್ತು ಬಿಕಿನಿಗೆ ಚೆನ್ನಾಗಿ ಹೊಂದಿಕೊಳ್ಳುವಂತಹ ಕಪ್ಪು ಸ್ಟೋನ್ ಬ್ರಾಸ್ಲೆಟ್ ಅನ್ನು ಕರೀನಾ ಚೂಸ್ ಮಾಡಿದ್ದಾರೆ.

ನೀಟ್ ಬನ್
ಆಕೆಯ ಕೂದಲಿಗೆ ಜೆಲ್ ಹಚ್ಚಿ ಹಿಂದಕ್ಕೆ ಬಿಗಿದು ನೀಟಾದ ತುರುಬನ್ನು ಹಾಕಲಾಗಿತ್ತು. ಬೇರೆ ಯಾವುದೇ ಒಡವೆಗಳನ್ನು ಧರಿಸದೇ ಬ್ರಾಸ್ಲೆಟ್‌ನಲ್ಲಿ ಈ ಚೆಲುವೆ ತಮ್ಮ ಸೀರೆಯ ಅಂದವನ್ನು ಪ್ರದರ್ಶಿಸಿದ್ದಾರೆ.

ಸರಳ ಬ್ರೈಟ್ ಮೇಕಪ್
ಫ್ರೆಶ್ ಆಗಿರುವ ಲಿಪ್ ಗ್ಲೋಸ್‌ನಿಂದ ತಮ್ಮ ತುಟಿಯನ್ನು ಅಲಂಕರಿಸಿಕೊಂಡಿರುವ ಈ ಚೆಲುವೆ, ಕಪ್ಪು ಕಾಡಿಗೆಯನ್ನು ತಮ್ಮ ಕಣ್ಣಿಗೆ ಹಚ್ಚಿಕೊಂಡು ಕಣ್ಮನ ಸೆಳೆಯುವಂತೆ ಕಂಡುಬಂದಿದ್ದಾರೆ.

ಬೇಬಿ ಪಿಂಕ್ ನೇಲ್ ಪೋಲಿಶ್
ಬೇಬಿ ಪಿಂಕ್ ನೇಲ್ ಪೋಲಿಶ್ ಅನ್ನು ಹಚ್ಚಿಕೊಂಡಿರುವ ಕರೀನಾ ಚೆನ್ನಾಗಿ ಕಂಡುಬಂದಿದ್ದಾರೆ.

ಕರೀಶ್ಮಾ ಕಪೂರ್ ಜೊತೆ
ಕರೀಶ್ಮಾ ಕೂಡ ಕಪ್ಪು ಬಣ್ಣದ ಕೋಲರ್ ಡ್ರೆಸ್‌ನಲ್ಲಿ ಸ್ಟೈಲಿಶ್ ಹಾಗೂ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಕೋಜಿ ಕಸಿನ್ಸ್
ಕಪೂರ್ ಸಹೋದರಿಯರು ತಮ್ಮ ಕಸಿನ್ ಅರ್ಮಾನ್ ಜೈನ್‌ಗೆ ಪ್ರೋತ್ಸಾಹ ನೀಡಿದ್ದು, ಬಾಲಿವುಡ್‌ನ ಪ್ರಥಮ ಹೆಜ್ಜೆಯಿಡುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸಿದ್ದಾರೆ.



Click it and Unblock the Notifications
