Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಸಿಂಗಮ್ ಟ್ರೇಲರ್ ಪ್ರಥಮ ಲಾಂಚಿಂಗ್‌ನಲ್ಲಿ ಸುಂದರಿ ಕರೀನಾ
ಕರೀನಾ ಕಪೂರ್ ಎಂಬ ಸ್ಟೈಲ್ ಬ್ಯೂಟಿ ತಮ್ಮನ್ನು ಚೆಂದಗಾಣಿಸಿಕೊಳ್ಳುವ ಯಾವುದೇ ಅವಕಾಶವನ್ನು ಎಲ್ಲಿಯೂ ಕಳೆದುಕೊಂಡಿಲ್ಲ ಎಂದೇ ಹೇಳಬಹುದು. ಸೈಫ್ ಆಲಿಖಾನ್ ಎಂಬ ನವಾಬನ ಮಡದಿಯಾಗಿರುವ ಈ ಹಾಟ್ ಚೆಲುವೆ, ಸಿಂಗಮ್ ರಿಟರ್ನ್ಸ್ ಟ್ರೈಲರ್‌ನ ಪ್ರಥಮ ಲಾಂಚಿಂಗ್‌ನಲ್ಲಿ ತನ್ನ ಸಹನಟ ಅಜಯ್ ದೇವಗನ್ ಜೊತೆ ಕಾಣಿಸಿಕೊಂಡರು.
ತಂಡದ ಪ್ರತಿಯೊಬ್ಬರೂ ಸಮವಸ್ತ್ರ ಮಾದರಿಯಲ್ಲಿ ನಿಲುವಂಗಿಯನ್ನು ಧರಿಸಿಕೊಂಡಿದ್ದರು ಈ ನೋಟ ಅತ್ಯದ್ಭುತವಾಗಿತ್ತು. ಕಪ್ಪು ಟೀ ಶರ್ಟ್ ಮತ್ತು ನೇವಿ ಬ್ಲ್ಯೂ ಜೀನ್ಸ್‌ನಲ್ಲಿ ಅಂದವಾಗಿ ಕಾಣುತ್ತಿದ್ದ ಕರೀನಾ ಎಂಬ ರೂಪಸಿ ಗಾಢ ಮೇಕಪ್ ಮತ್ತು ಸರಳವಾದ ಕೇಶವಿನ್ಯಾಸದಿಂದ ಇನ್ನಷ್ಟು ಸುಂದರಿಯಾಗಿದ್ದರು.
ಸಿಂಗಮ್ ರಿಟರ್ನ್ಸ್ ಟ್ರೇಲರ್‌ನ ಪ್ರಥಮ ಲಾಂಚಿಂಗ್‌ನಲ್ಲಿ, ಕರೀನಾ ಕಪೂರ್ ತಮ್ಮ ಸುಂದರ ನಗುವನ್ನು ಪ್ರದರ್ಶಿಸಲು ಮರೆಯಲಿಲ್ಲ. ಈ ಸಮವಸ್ತ್ರ ಧಿರಿಸಿನಲ್ಲೂ ಕೂಡ ಅವರು ಹೆಚ್ಚು ಆರಾಮದಾಯಕವಾಗಿ ಕಂಡುಬಂದಿದ್ದಾರೆ. ಕಣ್ಮನ ಸೆಳೆಯುವ ನೋಟದೊಂದಿಗೆ ಸರಳ ಅಲಂಕಾರದಿಂದ ಬಂದಿರುವ ಸುಂದರಿಯಾಗಿ ಕರೀನಾ ಮಿಂಚಿದ್ದಾರೆ. ಸಿಲ್ವರ್ ವಾಚ್ ಅನ್ನು ಧರಿಸಿದ್ದ ಬೇಬೋ ಆಕೆಯ ಮದುವೆಯ ಉಂಗುರವನ್ನು ವೇದಿಕೆಯಲ್ಲಿ ಝಳಪಿಸಿದ್ದಾರೆ.

ಸತ್ಯ ಪಾಲ್ ಸೀರೆಯಲ್ಲಿ ಮಿಂಚಿದ ಕರೀನಾ ಕಪೂರ್
ತಮ್ಮ ಹಿಂದಿನ ಚೆಲುವನ್ನು ಮರಳಿ ತರುವುದಕ್ಕಾಗಿ ಅವರು ಗಾಢವಾದ ಮೇಕಪ್ ಅನ್ನು ಮಾಡಿಕೊಂಡಿದ್ದು ಸುಂದರವಾಗಿ ಕಾಣುತ್ತಿದ್ದರು ಆದರೆ ಈ ಸಮವಸ್ತ್ರ ನಿಲುವಂಗಿಗೆ ಅವರು ಆಯ್ದುಕೊಂಡ ಪಾದರಕ್ಷೆಗಳು ಮಾತ್ರ ನಮಗೆ ಅಷ್ಟೊಂದು ಚೆನ್ನಾಗಿ ಕಂಡುಬರಲಿಲ್ಲ.
ಕ್ರೀಮ್ ಮತ್ತು ಬಿಳಿ ಬಣ್ಣದ ಪಾದರಕ್ಷೆಗಳು ನೀಲಿ ಬಿಗಿಯಾದ ಜೀನ್ಸ್ ಮತ್ತು ಕಪ್ಪು ಟೀ ಶರ್ಟ್ ಅನ್ನು ಅವರು ಧಿರಿಸಿದ್ದರು. ಇದಕ್ಕಿಂತ ಅವರು ಸ್ಪೋರ್ಟ್ ಶೂ ಮತ್ತು ಬ್ಯೆಲರೀನ್ಸ್ ಅನ್ನು ಧರಿಸಿದ್ದರೆ ಇನ್ನೂ ಚೆನ್ನಾಗಿ ಕಾಣುತ್ತಿತ್ತು ಎಂಬುದು ನಮ್ಮ ಅಭಿಪ್ರಾಯವಾಗಿದೆ.
ಸಿಂಗಮ್ ರಿಟರ್ನ್ಸ್ ಟ್ರೇಲರ್‌ನ ಪ್ರಥಮ ಲಾಂಚಿಂಗ್‌ನಲ್ಲಿ ಕರೀನಾರ ಸಮವಸ್ತ್ರ ರೀತಿಯ ನಿಲುವಂಗಿ ನಿಮಗೂ ಇಷ್ಟವಾಯಿತು ಎಂಬುದು ನಮ್ಮ ಅಭಿಪ್ರಾಯವಾಗಿದೆ. ಚಲನಚಿತ್ರದ ಪ್ರಚಾರಕ್ಕೆ ಈ ರೀತಿಯ ಸಮವಸ್ತ್ರ ಉಡುಪು ಹೆಚ್ಚಿನ ಕಳೆಯನ್ನು ತಂದುಕೊಟ್ಟಿದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ. ನಿಮಗೂ ಹೀಗೆ ಅನ್ನಿಸಿದೆಯೇ?



Click it and Unblock the Notifications
