Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಐಸಿಡಬ್ಲ್ಯೂ 2014 ಅಂಜು ಮೋದಿಯ ಕಣ್ಸೆಳೆಯುವ ವಿನ್ಯಾಸ
ಐಸಿಡಬ್ಲ್ಯೂ 2014 ರ ಎರಡನೇ ದಿನದಂದು ಎರಡು ಪ್ರಮುಖ ಸಂಗ್ರಹಗಳನ್ನು ನಾವು ನೋಡಿದ್ದೇವೆ. ಭಾರತೀಯ ವಸ್ತ್ರ ವಿನ್ಯಾಸ ಕಾರ್ಯಕ್ರಮದಲ್ಲಿ ರೀನಾ ಕೌಚರ್ ಪ್ರದರ್ಶಿಸಿದ ಉಡುಗೆಗಳ ಮೇಳ ನಮ್ಮ ಕಣ್ಣು ತುಂಬಿದರೆ ಅಂಜು ಮೋದಿ ತಮ್ಮ ವಧುವಿನ ಸಂಗ್ರಹವಾದ 'ಮಣಿಕರ್ಣಿಕಾ' ಸಂಗ್ರಹವನ್ನು ಪ್ರದರ್ಶಿಸಿದ್ದಾರೆ. ಅಂಜು ಮಹೇಂದ್ರ ವಿನ್ಯಾಸದ ಉಡುಗೆಗಳು ಮದುವಣಗಿತ್ತಿಯರ ವಸ್ತ್ರಗಳಾಗಿದ್ದವು ಎಂಬುದು ಇಲ್ಲಿ ಗಮನಿಸಬೇಕಾದ್ದಾಗಿದೆ.
ಕಣ್ಸೆಳೆಯುವ ಬಣ್ಣಗಳು ಮತ್ತು ಬಂಗಾರದ ಎಳೆಗಳಿಂದ ಮಾಡಲ್ಪಟ್ಟ ಅಂಜು ಮೋದಿ ಉಡುಗೆಗಳು ಐಸಿಡಬ್ಲ್ಯೂನ ಪ್ರಧಾನ ಆಕರ್ಷಣೆಯಾಗಿದೆ. ಇಲ್ಲಿ ಪುರುಷಾ ಮತ್ತು ಮಹಿಳಾ ರೂಪದರ್ಶಿಗಳು ಕೂಡ ಅಂಜು ಮೋದಿಯವರ ಉಡುಗೆಗಳನ್ನು ಪ್ರದರ್ಶಿಸಿದ್ದಾರೆ. ಕಪ್ಪು ಸ್ಲೀವ್ ಇರುವ ಕ್ರಾಪ್ ಟಾಪ್ ಧರಿಸಿ ಕಂಗನಾ ರಾಣಾವತ್ ರಾಂಪ್ ಮೇಲೆ ಹೆಜ್ಜೆ ಹಾಕಿರುವುದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದೆ.
ಅಂಜು ಮೋದಿಯವರ ಇನ್ನಷ್ಟು ಸಂಗ್ರಹಗಳ ಝಲಕ್ ಕೆಳಗಿನ ಸ್ಲೈಡ್‌ಗಳಲ್ಲಿ
ಐಸಿಡಬ್ಲ್ಯೂ 2014: ಸಬ್ಯಸಾಚಿಯವರ ಆಕರ್ಷಕ ವಿನ್ಯಾಸಗಳ ಝಲಕ್

ಶೀರ್ ನೇರಳೆ ಸೀರೆ
ಗುಜರಾತಿ ಶೈಲಿಯನ್ನು ಉಟ್ಟಿರುವ ಈ ಸೀರೆ ಅತ್ಯಾಕರ್ಷಕವಾಗಿದ್ದು ಸೀರೆಯ ಮುಂಭಾಗ ಸೆರಗು ಮುಂದಕ್ಕೆ ಬಂದಿದೆ. ಸೀರೆಯ ಅಂಚಿಗೆ ಚಿನ್ನದ ಲೇಸ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಬೀಜ್ ಬಂದಾಗಲಾ ಮತ್ತು ಧೋತಿ
ಅಂಜು ಮೋದಿ ಸಂಗ್ರಹದಲ್ಲಿ ಧೋತಿ ಪ್ರಧಾನ ಆಕರ್ಷಣೆಯಾಗಿದೆ. ಈ ಪುರುಷ ರೂಪದರ್ಶಿ ಕ್ರೀಮ್ ಬಣ್ಣದ ಧೋತಿಯನ್ನು ಉಟ್ಟಿದ್ದು ಇದರ ಅಂಚಿಗೆ ಗೋಲ್ಡನ್ ಬಣ್ಣದ ಬೋರ್ಡರ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಕೋರಲ್ ಸೀರೆ ಮತ್ತು ಮೆಶ್ ಬ್ಲೌಸ್
ಕೋರಲ್ ಬಣ್ಣದ ಸೀರೆಯು ಫ್ಲೋರಲ್ ಡೀಟೈಲ್ಸ್ ಅನ್ನು ಹೊಂದಿದೆ. ಸೀರೆಯ ಕೆಳಭಾಗದಲ್ಲಿ ಫ್ಲೋರಲ್ ಮುದ್ರಣಗಳನ್ನು ನಮಗೆ ಕಾಣಬಹುದಾಗಿದೆ. ಸೀರೆಯ ರವಿಕೆ ಕೂಡ ಹಿಂಭಾಗದಲ್ಲಿ ಆಳವಾದ ಕಟ್‌ಔಟ್ ಅನ್ನು ಹೊಂದಿದೆ.

ಗೋಲ್ಡನ್ ಸಿಲ್‌ಹೌಟ್
ಈ ಚಿನ್ನದ ಸಿಲ್ಕ್ ಸಿಲ್‌ಹೌಟ್ ಸುಂದರವಾದ ಪೋಣಿಸುವಿಕೆಯಿಂದ ಕೂಡಿದೆ.

ಬಿಳಿ ಸಿಲ್‌ಹೌಟ್ ಧೋತಿಯೊಂದಿಗೆ
ಮುಂಭಾಗದಲ್ಲಿ ತೆರೆದಿರುವ ಭಾರತೀಯ ಬಿಳಿ ಬಣ್ಣದ ಸಿಲ್‌ಹೌಟ್ ಅನ್ನು ಅಂಜು ಈ ರೂಪದರ್ಶಿಯ ಮೂಲಕ ಪ್ರದರ್ಶಿಸಿದ್ದಾರೆ.

ಬಿಳಿ ಸೀರೆ
ಈ ಪೌಡರ್ ನೀಲಿ ಬಂದಾಗಲಾ ರವಿಕೆ ಬಿಳಿ ಮತ್ತು ಗೋಲ್ಡನ್ ಬಣ್ಣದ ಸೀರೆಗಳಿಗೆ ಅದ್ಭುತ ಕಾಂಬಿನೇಶನ್ ಆಗಿದೆ.

ನೀಲಿ ಧೋತಿ 3 ಪೀಸ್ ಸೂಟ್
ನೀಲಿ ಬಣ್ಣದ ಧೋತಿಯ ಮೇಲೆ 3 ಪೀಸ್ ಸೂಟ್ ಅನ್ನು ಧರಿಸಿರುವ ಈ ರೂಪದರ್ಶಿ ಅಂಜು ಮೋದಿ ಸಂಗ್ರಹವನ್ನು ಪ್ರದರ್ಶಿಸಿದ್ದಾರೆ.

ಗೋಲ್ಡನ್ ಧೋತಿ ಜೊತೆಗೆ ಬಂದಗಲಾ ರವಿಕೆ
ಈ ಮಹಿಳಾ ರೂಪದರ್ಶಿ ಗೋಲ್ಡನ್ ಬಣ್ಣದ ರವಿಕೆಯೊಂದಿಗೆ ಪೌಡರ್ ನೀಲಿ ಬಣ್ಣದ ಬಂದಾಗಲಾ ರವಿಕೆಯನ್ನು ಪ್ರದರ್ಶಿಸಿದ್ದಾರೆ.

ಪಾಲೆ ನೀಲಿ ಸಿಲ್‌ಹೌಸ್
ಈ ಮಾಡೆಲ್ ಗೋಲ್ಡ್ ಧೋತಿ ಮತ್ತು ಪಾಲೆ ನೀಲಿ ಬಣ್ಣದ ಸಿಲ್‌ಹೌಸ್‌ನಲ್ಲಿ ಕಂಡುಬಂದಿದ್ದು ಆಕರ್ಷಕ ನೋಟವನ್ನು ಬೀರಿದ್ದಾರೆ.

ಗೋಲ್ಡ್ ಮುಗಲ್ ಕುರ್ತಾ ವೆಲ್ವೇಟ್ ಶಾಲ್
ಗೋಲ್ಡ್ ಮುಗಲ್ ಕುರ್ತಾ ಸೌಂದರ್ಯಕ್ಕೆ ಇನ್ನೊಂದು ಹೆಸರಾಗಿದ್ದು ಈ ವೆಲ್ವೇಟ್ ಶಾಲ್ ಮೋದಿ ಮಾಡುವಂತಿದೆ. ಅಂಜು ಅವರ ಪ್ರತಿಭೆಗೆ ಈ ವಸ್ತ್ರ ಒಂದು ಉದಾಹರಣೆಯಾಗಿದೆ.

ಶೋಸ್ಟಾಪರ್
ಕಂಗನಾ ರಾಣಾವತ್ ಅಂಜು ಮೋದಿ ಸಂಗ್ರಹದ ಧಿರಿಸು ಪ್ರದರ್ಶನಲ್ಲಿ ರಾಣಿಯಾಗಿ ಕಂಗೊಳಿಸುತ್ತಿದ್ದಾರೆ. ಅವರ ಮದುಮಗಳ ವಿನ್ಯಾಸದ ಧಿರಿಸು ಅತ್ಯದ್ಭುತ ಆಕರ್ಷಣೆಯಿಂದ ಕೂಡಿದೆ.

ನೀಲಿ ಕಪ್ಪು ಔಟ್‌ಫಿಟ್
ಈ ಲೆಹೆಂಗಾ ಮತ್ತು ಕ್ರಾಪ್ ಟಾಪ್ ಸಂಗ್ರಹದಲ್ಲೇ ಅತ್ಯಂತ ಕಣ್ಸೆಳೆಯುವಂತದ್ದಾಗಿದೆ. ಇದು ಕಾಶ್ಮೀರಿ ಎಂಬ್ರಾಯಿಡರಿಯನ್ನು ಹೊಂದಿದ್ದು ನೋಡಲು ಆಕರ್ಷಕವಾಗಿದೆ. ಕಂಗನಾ ನಿಜಕ್ಕೂ ಈ ಧಿರಿಸಿನಲ್ಲಿ ಇನ್ನಷ್ಟು ಸುಂದರಿ ಮತ್ತು ಕಣ್ಸೆಳೆಯುವಂತಿದ್ದಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.



Click it and Unblock the Notifications
