Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಫಿಲ್ಮ್‌ಫೇರ್ 2014 ರಲ್ಲಿ ಇಲಿಯಾನಾ ಡಿಕ್ರೂಸ್
59 ನೇ ಫಿಲ್ಮ್‌ಫೇರ್ ಅವಾರ್ಡ್ಸ್ 2014 ರೆಡ್ ಕಾರ್ಪೆಟ್ ಅತ್ಯದ್ಭುತವಾಗಿದೆ. ಹೆಚ್ಚಿನ ಎಲ್ಲಾ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್‌ನಲ್ಲಿ ತಮ್ಮನ್ನು ತಾವು ಅದ್ಭುತವಾಗಿ ತೆರೆದುಕೊಂಡಿದ್ದಾರೆ. ಸೆಕ್ಸಿ ಪ್ರಿಯಾಂಕ ಚೋಪ್ರಾನಿಂದ ಹಿಡಿದು ಹೊಸ ಮುಖ ವಾಣಿ ಕಪೂರ್‌ವರೆಗೆ ತಮ್ಮ ಸ್ಟೈಲಿಶ್ ಲುಕ್ ಅನ್ನು ಫಿಲ್ಮ್‌ಫೇರ್ ಕಾರ್ಯಕ್ರಮದಲ್ಲಿ ಹಚ್ಚಹಸುರಾಗಿಸಿದ್ದಾರೆ.
ಅತ್ಯದ್ಭುತವಾಗಿ ಕಂಡುಬಂದ ಹಿಟ್ ಚಿತ್ರಗಳನ್ನು ಬಾಲಿವುಡ್‌ಗೆ ನೀಡಿದ ನಟಿ ಇಲಿಯಾನಾ ಡಿಕ್ರೂಸ್ ಸೌಂದರ್ಯದೇವತೆಯಾಗಿ ಫಿಲ್ಮ್‌ಫೇರ್ 2014 ರಲ್ಲಿ ಕಂಡುಬಂದರು. ಜೆಟ್ ಕಪ್ಪು ವರ್ಣದ ಲೇಸ್ ಗೌನ್ ಅನ್ನು ರೆಡ್ ಕಾರ್ಪೆಟ್‌ನಲ್ಲಿ ಇಲಿಯಾನಾ ಧರಿಸಿದ್ದರು.

ಕಪ್ಪು ಗೌನ್ ಎರಡೂ ಬದಿಗಳಲ್ಲಿ ಲೇಸ್ ಮಿನುಗು ಬೊಟ್ಟುಗಳನ್ನು ಹೊಂದಿದ್ದು ರೆಡ್ ಕಾರ್ಪೆಟ್ ಗೋಚರತೆಗೆ ಇನ್ನಷ್ಟು ಹೊಳಪು ನೀಡಿತು. ಮಿನುಗುತ್ತಿರುವ ಬೊಟ್ಟುಗಳು ರೆಡ್ ಕಾರ್ಪೆಟ್ ಅಂಗಳದಲ್ಲಿ ಝಗಮಗಿಸುತ್ತಿತ್ತು.
ಇನ್ನಷ್ಟು ಮಾಹಿತಿಗಾಗಿ ಈ ಲೇಖನಗಳನ್ನು ಓದಿ: ಫಿಲ್ಮ್‌ಫೇರ್ 2014: ಕಣ್ಮನ ಸೆಳೆದ ಪ್ರಿಯಾಂಕ
ಕಪ್ಪು ಬಣ್ಣದ ವರ್ಣರಂಜಿತ ಗೌನ್ ಪೂರ್ಣ ಸ್ಲೀವ್ ಆಗಿದ್ದು ಇಲಿಯಾನಾಗೆ ಚೆನ್ನಾಗಿ ಹೊಂದುತ್ತಿದೆ. ಇಲಿಯಾನಾ ತನ್ನ ನೀಳ ಕೂದಲನ್ನು ಕ್ಲಿಪ್‌ನಲ್ಲಿ ಹಿಡಿದಿಟ್ಟು ಅರ್ಧಇಳಿಬಿಟ್ಟಿರುವ ರೀತಿ ಮೋಹಕವಾಗಿ ಕಂಡುಬಂದಿದೆ. ನಯವಾಗಿ ಮಾಡಿಕೊಂಡ ಹಿತವಾದ ಮೇಕಪ್ ಮತ್ತು ಗಾಢ ಕೆಂಪು ವರ್ಣದ ತುಟಿರಂಗು ಆಕೆಯ ಸೊಬಗನ್ನು ಇನ್ನಷ್ಟು ಹೆಚ್ಚಿಸಿದೆ.
ಇಲಿಯಾನಾ ಕಳೆದ ಬರಿ ಫಿಲ್ಮ್‌ಫೇರ್ ರೆಡ್ ಕಾರ್ಪೆಟ್ ಅಂಗಣದಲ್ಲಿ ಹೊಳೆಯುವ ಗೋಲ್ಡನ್ ರೊಬಾರ್ಟೊ ಕವಾಲ್ಲಿ ಗೌನ್ ಅನ್ನು ಧರಿಸಿದ್ದರು. ಈ ಬಾರಿ ಕಪ್ಪು ವರ್ಣದ ಗೌನ್‌ಗೆ ತನ್ನನ್ನು ಸೀಮಿತಗೊಳಿಸಿರುವ ಇಲಿಯಾನಾ ಡಿಕ್ರೂಸ್ ಮನಮೋಹಕವಾಗಿ ಕಂಡುಬಂದಿದ್ದಾರೆ. ಈ ಬಾರಿ ತಮ್ಮ ಧಿರಿಸಿನಲ್ಲಿ ಇನ್ನೂ ಚೆನ್ನಾಗಿ ಇಲಿಯಾನಾ ಕಂಡುಬರುತ್ತಿದ್ದಾರೆ ಎಂಬುದು ನಮ್ಮ ಅಭಿಪ್ರಾಯವಾಗಿದೆ. ನಿಮ್ಮದೂ ಇದೇ ಅಭಿಪ್ರಾಯವೇ?



Click it and Unblock the Notifications
