Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಐಐಜೆಡಬ್ಲ್ಯೂ 2014: ಗೀತಾಂಜಲಿ ಮುತ್ತುಗಳ ಪ್ರದರ್ಶನಕ್ಕಾಗಿ ನೇಹಾ ನಡಿಗೆ
ಗೀತಾಂಜಲಿ ಮುತ್ತುಗಳ ಪ್ರದರ್ಶನ ಭಾರತೀಯ ಅಂತರಾಷ್ಟ್ರೀಯ ಚಿನ್ನಾಭರಣ ಮೇಳ ಇತ್ತೀಚೆಗೆ ನಡೆಯಿತು. ಇದಕ್ಕೆ ಹೆಜ್ಜೆ ಹಾಕಿದ ಬಾಲಿವುಡ್ ನಟಿ ರೂಪದರ್ಶಿ ನೇಹಾ ಧೂಪಿಯಾ ನವ ಮದುಮಗಳಂತೆ ಕಾಣುತ್ತಿದ್ದರು.
ಗುಲಾಬಿ ಬಣ್ಣದ ಹಾಟ್ ಲೆಹೆಂಗಾದಲ್ಲಿ ಕಂಡುಬಂದ ಸುಂದರಿ ನೇಹಾ ಧೂಪಿಯಾ ಗೀತಾಂಜಲಿ ಆಭರಣಗಳ ಮೇಳಕ್ಕೆ ರಾಂಪ್ ಮೇಲೆ ಹೆಜ್ಜೆ ಹಾಕಿದರು. ಗುಲಾಬಿ ಬಣ್ಣದ ಲೆಹೆಂಗಾ ಮತ್ತು ವಜ್ರದ ಆಭರಣಗಳನ್ನು ಧರಿಸಿ ರಾಂಪ್ ಮೇಲೆ ಹೆಜ್ಜೆಯನ್ನಿಟ್ಟುಕೊಂಡು ಬಂದ ಈ ಸುಂದರಿ ಆಕಾಶದಿಂದ ಧರೆಗಿಳಿದ ರಂಭೆಯನ್ನೇ ನಾಚಿಸುವಂತಿದ್ದರು.
ನೇಹಾರ ಇನ್ನಷ್ಟು ಅದ್ಭುತ ನೋಟಕ್ಕಾಗಿ ಇಲ್ಲಿ ನಾವು ನೀಡಿರುವ ಸ್ಲೈಡ್‌ಗಳತ್ತ ಗಮನ ಹರಿಸಿ.

ನೇಹಾ ಧೂಪಿಯಾ ಸ್ಟೈಲ್
ಗೀತಾಂಜಲಿ ಆಭರಣ ಮೇಳಕ್ಕೆ ರೂಪದರ್ಶಿಯಾಗಿ ನೇಹಾ ಧೂಪಿಯಾ ರೂಬಿ ಮತ್ತು ವಜ್ರದ ಆಭರಣಗಳನ್ನು ಧರಿಸಿದ್ದಾರೆ. ತಮ್ಮ ಗುಲಾಬಿ ಬಣ್ಣದ ಲೆಹೆಂಗಾಕ್ಕೆ ಅಂದವನ್ನು ನೀಡುವ ಹರಳುಗಳ ಆಭರಣಗಳನ್ನು ಧರಿಸಿರುವ ನೇಹಾ ಧೂಪಿಯಾ ಮದುಮಗಳಂತೆ ಕಂಗೊಳಿಸುತ್ತಿದ್ದಾರೆ.

ತನ್ನ ವಿನ್ಯಾಸಕಿಯೊಂದಿಗೆ
ಐಐಜೆಡಬ್ಲ್ಯೂ ನಲ್ಲಿ ನೇಹಾ ತನ್ನ ವಿನ್ಯಾಸಕಿಯೊಂದಿಗೆ ಹೆಜ್ಜೆ ಹಾಕಿದ ಸಂದರ್ಭ.

ಹಾಟ್ ಗುಲಾಬಿ ಬಣ್ಣದಲ್ಲಿ ನೇಹಾ
ತಮ್ಮ ರೂಬಿ ಆಭರಣಗಳಿಗೆ ಸರಿ ಹೊಂದುವಂತಹ ಗುಲಾಬಿ ಬಣ್ಣದ ಧಿರಿಸನ್ನು ಧರಿಸಿರುವ ನೇಹಾ ಮುದ್ದಾಗಿ ಕಾಣುತ್ತಿದ್ದಾರೆ.

ಅಂದದ ಸಂಕೇತ
ಚಿತ್ರದಲ್ಲಿ ಕಂಡುಬಂದಿರುವ ರೂಪದರ್ಶಿ ತಮ್ಮ ಕೇಶವನ್ನು ಸುಂದರ ಪುಷ್ಪಗಳೊಂದಿಗೆ ಅಲಂಕರಿಸಿದ್ದಾರೆ. ಅವರು ಮಿರುಗುವ ಆಭರಣಗಳನ್ನು ತೊಟ್ಟಿದ್ದು ತೊಟ್ಟಿರುವ ಉಡುಗೆಯೂ ಕೂಡ ಹೊಳೆಯುತ್ತಿದೆ.

ಶ್ವೇತ ವರ್ಣ
ವಜ್ರದ ಆಭರಣಗಳೆಂದರೆ ಹುಡುಗಿಯರಿಗೆ ಏನೋ ಮೋಹ. ಚಿನ್ನದ ಹಬ್ಬದಲ್ಲಿ ಹೆಚ್ಚಿನ ಆಭರಣಗಳನ್ನು ವಜ್ರದಿಂದಲೇ ತಯಾರಿಸಲಾಗಿತ್ತು.

ಶಿರ ಅಲಂಕಾರ
ಇಲ್ಲಿರುವ ರೂಪದರ್ಶಿಯರು ತಮ್ಮ ಶಿರದಲ್ಲಿ ವಜ್ರದ ಆಭರಣಗಳನ್ನು ಧರಿಸಿ ರಾಜಕುಮಾರಿಯಂತೆ ಕಂಗೊಳಿಸುತ್ತಿದ್ದಾರೆ.

ಮುತ್ತಿನ ದೇಹ
ಈ ಬೆಡಗಿ ಧರಿಸಿರುವ ಲೆಹೆಂಗಾ ಪೂರ್ಣವಾಗಿ ಮುತ್ತಿನಿಂದಲೇ ಕೂಡಿದೆ. ಇದು ಇನ್ನೊಂದು ಸುಂದರವಾದ ಧಿರಿಸಾಗಿದೆ.

ಬಣ್ಣಗಳ ವೈವಿಧ್ಯ
ಐಐಜೆಡಬ್ಲ್ಯೂ 2014 ರ ರಾಂಪ್‌ನಲ್ಲಿ ರೂಪದರ್ಶಿಯರು ಬಣ್ಣ ಬಣ್ಣದ ಧಿರಿಸನ್ನು ತೊಟ್ಟು ರಾಂಪ್ ಮೇಲೆ ಹೆಜ್ಜೆ ಹಾಕಿದರು. ಈ ಸುಂದರಿಯರು ಒಬ್ಬರನ್ನೊಬ್ಬರು ಮೀರಿಸುವಂತಿದ್ದರು.

ಚಿನ್ನದ ಸ್ಪರ್ಶ
ಆರೆಂಜ್ ಬಣ್ಣದ ಉಡುಗೆಯಲ್ಲಿ ಚಿನ್ನದ ಪ್ರದರ್ಶನವನ್ನು ಮಾಡಿರುವ ಈ ಬೆಡಗಿಯರು ಹೊಸದಾದ ಸ್ಟೈಲ್ ಸೆನ್ಸ್ ಅನ್ನು ಇಲ್ಲಿ ಪ್ರದರ್ಶಿಸಿರುವುದು ಮಾತ್ರ ಸುಳ್ಳಲ್ಲ.

ಎಮರಾಲ್ಡ್ ಪ್ರದರ್ಶನ
ಐಐಜೆಡಬ್ಲ್ಯೂ 2014 ರ ಚಿನ್ನದ ಮೇಳದಲ್ಲಿ ನಟಿ ನೇಹಾರೊಂದಿಗೆ ಇತರ ಬೆಡಗಿಯರೂ ರಾಂಪ್ ಮೇಲೆ ಹೆಜ್ಜೆ ಹಾಕಿದರು. ಎಮರಾಲ್ಡ್ ಆಭರಣವನ್ನು ತೊಟ್ಟಿರುವ ಈ ಸುಂದರಿಯ ಕಣ್ಣೋಟ ಆಕೆ ಧರಿಸಿರುವ ಆಭರಣದಂತೆ ಮಿಂಚುತ್ತಿದೆ.



Click it and Unblock the Notifications
