Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಗುಲಾಬಿ ಬಣ್ಣದ ಕಾಂಜೀವರಂ ಸೀರೆಯಲ್ಲಿ ಹೇಮಮಾಲಿನಿ
ಅಟಲ್ ಬಿಹಾರಿ ವಾಜಪೇಯಿಯವರ ಹುಟ್ಟುಹಬ್ಬದ ಸಂಭ್ರಮಾಚರಣೆಯಂದು ಹೇಮಮಾಲಿನಿ ಅತ್ಯಧ್ಬುತವಾಗಿ ಕಂಡುಬಂದರು. ಸಾಂಪ್ರದಾಯಿಕವಾಗಿ ಸೀರೆಯಲ್ಲಿ ಮಿಂಚಿದ ಹೇಮ ತಮ್ಮ ಸೌಂದರ್ಯವನ್ನು ನೂರ್ಮಡಿಗೊಳಿಸುವಂತೆ ಸಹಜ ಸುಂದರಿಯಾಗಿದ್ದರು.
ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ಆಚರಣೆಯ ಕಾರ್ಯಕ್ರಮದಲ್ಲಿ ಹೇಮಮಾಲಿನಿ ಗುಲಾಬಿ ಬಣ್ಣದ ಕಾಂಜೀವರಂ ಸೀರೆಯಲ್ಲಿ ನೋಡುಗರ ಕಣ್ಮನ ಸೆಳೆದರು. ದಕ್ಷಿಣ ಭಾರತೀಯರಾದ ಹೇಮಮಾಲಿನಿ ಹೆಚ್ಚಾಗಿ ಸಮಾರಂಭಗಳಲ್ಲಿ ಮಿಂಚಿರುವುದು ಕಾಂಜೀವರಂ ಸೀರೆಗಳಲ್ಲೇ.

ಚಿನ್ನದ ಅಂಚಿರುವ ಗುಲಾಬಿ ಬಣ್ಣದ ಸೀರೆಯನ್ನು ಹೇಮ ತೊಟ್ಟಿದ್ದರು. ಒಡಲೆಲ್ಲಾ ಪೂರ್ತಿಯಾಗಿ ಗುಲಾಬಿ ಬಣ್ಣವನ್ನು ಈ ಸೀರೆ ಹೊಂದಿತ್ತು. ಚಿನ್ನದ ಅಂಚುಳ್ಳ ಸೀರೆಗೆ ಚೆನ್ನಾಗಿ ಹೊಂದಿಕೆಯಾಗುವ ರವಿಕೆಯನ್ನು ಹೇಮ ತೊಟ್ಟುಕೊಂಡಿದ್ದರು.
ಹೇಮಮಾಲಿನಿ ಈ ಕಾಂಜಿವರಂ ಸೀರೆಯ ಸೆರಗನ್ನು ಅರ್ಧ ಮಡಚಿದಂತೆ ಹಿಡಿದುಕೊಂಡಿದ್ದರು. ಈ ಧಿರಿಸಿಗೆ ಕಪ್ಪು ಬಣ್ಣದ ಚಪ್ಪಲ್‌ಗಳನ್ನು ಆಕೆ ಧರಿಸಿದ್ದು ಪುರುಷರ ಚಪ್ಪಲ್‌ನಂತೆ ಕಂಡುಬಂದಿತು. ಈ ಕಪ್ಪು ಚಪ್ಪಲಿಯನ್ನು ಹೊರತುಪಡಿಸಿದರೆ ಅವರ ನೋಟವು ಪರಿಪೂರ್ಣ ಮತ್ತು ಸರಳವಾಗಿತ್ತು. ಚಿನ್ನ ಮತ್ತು ವಜ್ರದ ಆಭರಣಗಳು ಅವರ ದೇಹವನ್ನು ಅಲಂಕರಿಸಿತ್ತು. ವಜ್ರದ ನೆಕ್ಲೇಸ್ ವಜ್ರದ ಕಿವಿಯಾಭರಣಗಳು ಮತ್ತು ಬ್ರೇಸ್‌ಲೆಟ್ ಅನ್ನು ಹೇಮ ಧರಿಸಿದ್ದರು. ಗುಲಾಬಿ ಬಣ್ಣದ ಹ್ಯಾಂಡ್‌ಬ್ಯಾಗನ್ನು ಅವರು ಹಿಡಿದುಕೊಂಡಿದ್ದರು.
ಚಿನ್ನ ಮತ್ತು ವಜ್ರ ಮಿಶ್ರಿತ ಆಭರಣಗಳು ಹೇಮಮಾಲಿನಿಗೆ ಸುಂದರವಾಗಿ ಒಪ್ಪುತ್ತಿದ್ದವು. ಸರಳವಾಗಿ ಕಂಡುಬಂದ ಹೇಮಮಾಲಿನಿ ಮಾಡಿದ ಮೇಕಪ್ ಅವರ ವಯಸ್ಸಿಗೆ ತಕ್ಕಂತೆ ಹಿತಮಿತವಾಗಿತ್ತು. ಐಲೈನರ್ ಮತ್ತು ಕೋಹ್ಲ್ ಮೇಕಪ್ ಅವರ ಅಂದವನ್ನು ಇನ್ನಷ್ಟು ಹೆಚ್ಚಿಸಿತು. ಹೊಳೆಯುವ ತುಟಿಗಳು ಮತ್ತು ಗುಲಾಬಿ ಬಣ್ಣದ ತಿಳಿಯಾದ ಐಶ್ಯಾಡೋ ಅವರ ಸೌಂದರ್ಯವನ್ನು ವರ್ಧಿಸಿತು. ಅರ್ಧಕ್ಕೆ ಪಿನ್ ಹಾಕಿ ಕೂದಲನ್ನು ಇಳಿಬಿಟ್ಟ ರೀತಿ ಹೇಮಮಾಲಿನಿಗೆ ಸ್ಟೈಲಿಶ್ ನೋಟವನ್ನೇ ನೀಡಿತು.
ದಕ್ಷಿಣ ಭಾರತೀಯ ನಟಿ ಹೇಮಮಾಲಿನಿ ರೇಷ್ಮೆ ಸೀರೆಗಳ ಉತ್ತಮ ಆಯ್ಕೆಯನ್ನು ಹೊಂದಿದ್ದಾರೆ. ತಮಗೆ ಸುಂದರವಾಗಿ ಒಪ್ಪುವಂತಹ ಬಣ್ಣದ ಸೀರೆಯನ್ನೇ ಕನಸಿನ ಕನ್ಯೆ ಯಾವಾಗಲೂ ಆರಿಸುತ್ತಾರೆ!



Click it and Unblock the Notifications
