Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಫಿಲ್ಮ್‌ಫೇರ್ 2014 ರೆಡ್ ಕಾರ್ಪೆಟ್‌ನಲ್ಲಿ ಶ್ರುತಿ ಹಾಸನ್
ಫಿಲ್ಮ್‌ಫೇರ್ 2014 ರಲ್ಲಿ, ನಮ್ಮನ್ನು ಬೆರಗುಗೊಳಿಸಿದ್ದು ಸುಂದರಿ ಚೆಲುವೆ ಶ್ರುತಿಹಾಸನ್. ತನ್ನ ಸುಂದರ ಧಿರಿಸಿನೊಂದಿಗೆ ರೆಡ್ ಕಾರ್ಪೆಟ್ ಅನ್ನು ಅಲಂಕರಿಸಿದ ಶ್ರುತಿ ಮೈಂಡ್ - ಬ್ಲೋವಿಂಗ್ ಆಗಿ ಕಾಣುತ್ತಿದ್ದರು. ಏಕೆಂದು ಮುಂದೆ ಓದಿ
ಹೆಚ್ಚಿನ ಫ್ಯಾಷನೇಬಲ್ ಗೌನ್‌ಗಳಲ್ಲಿ ಕಂಡುಬರುವ ಶ್ರುತಿ ರೆಡ್ ಕಾರ್ಪೆಟ್‌ನಂತಹ ಸುಂದರ ಸ್ಥಳವನ್ನು ಚಂದಗೊಳಿಸಿದವರು. ಈ ಬಾರಿಯೂ ಅವರು ನಮ್ಮನ್ನು ಮೋಸಗೊಳಿಸಿಲ್ಲ. 2014 ರ ಫಿಲ್ಮ್‌ಫೇರ್ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆಯಿರಿಸಿದ ಶ್ರುತಿ ತಾವು ಆರಿಸಿಕೊಂಡ ಉಡುಪಿನಲ್ಲಿ ರತಿಯಂತೆ ಕಾಣುತ್ತಿದ್ದರು.

ಶ್ರುತಿ ತಮ್ಮ ಫ್ಯಾಶನ್ ಅನ್ನು ಸುಂದರವಾಗಿ ನಿರ್ವಹಿಸಬಲ್ಲರು. ಅವರು ಫೋಟೋಗೆ ಫೋಸ್ ಕೊಟ್ಟ ರೀತಿಯಿಂದಲೇ ಅವರ ಫ್ಯಾಶನ್ ಪ್ರಿಯತೆ ನಮಗೆ ಮನದಟ್ಟಾಗುತ್ತದೆ. ತಮ್ಮ ಅದ್ಭುತ ಸ್ಟೈಲ್ ಹಾಗೂ ಪೋಸ್‌ನೊಂದಿಗೆ, ಫಿಲ್ಮ್‌ಫೇರ್ ಅವಾರ್ಡ್ಸ್‌ನ 2014 ರ ರೆಡ್ ಕಾರ್ಪೆಟ್‌ನಲ್ಲಿ ಬಂದಿಳಿದರು. ಆಕೆಯ ಮನಮೋಹಕಗೊಳಿಸುವ ಕಪ್ಪು ಬಣ್ಣದ ಗೌನ್ ಆಕೆಯ ಬಳ್ಳಿಯಂತಿರುವ ದೇಹವನ್ನು ಸುಂದರವಾಗಿ ಪ್ರದರ್ಶಿಸಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಫಿಲ್ಮ್‌ಫೇರ್ ಅವಾರ್ಡ್‌ನಲ್ಲಿ ಸುಂದರಿ ದೀಪಿಕಾ
ಗೌನ್‌ನ ನೆಕ್ ವಿನ್ಯಾಸ ಮನಮೋಹಕವಾಗಿದ್ದು, ರೆಡ್ ಕಾರ್ಪೆಟ್‌ನ ಝಲಕ್ ಅನ್ನು ಇನ್ನಷ್ಟು ಹೆಚ್ಚಿಸಿತು. ಸಮಾರಂಭದಲ್ಲಿ ಭಾಗವಹಿಸಿದ್ದ ಇತರ ಸೆಲೆಬ್ರಿಟಿಗಳು ಧರಿಸಿದ ಗೌನ್ ಒಂದೇ ಬದಿ ತೋಳಿರುವಂಥದ್ದು ಇಲ್ಲವೇ ತೋಳಿಲ್ಲದೇ ಇರುವಂಥದ್ದು ಹೀಗೆ ಕಂಡುಬಂದಿತ್ತು. ಆದರೆ ಶ್ರುತಿ ಧರಿಸಿದ ಗೌನ್ ಇವೆಲ್ಲವುಗಳಿಗಿಂತ ಭಿನ್ನವಾಗಿತ್ತು.
ಧಿರಿಸಿನ ಬಣ್ಣವನ್ನು ಆಯ್ಕೆಮಾಡುವಲ್ಲಿ ಆಕೆ ತೋರಿದ ಬೋಲ್ಡ್‌ನೆಸ್ ಸ್ಟೈಲ್ ಸೆನ್ಸ್‌ಗೆ ಉತ್ತಮ ಉದಾಹರಣೆಯಾಗಿತ್ತು. ಕಪ್ಪು ಬಣ್ಣದ ಬೋಲ್ಡ್ ಮರ್‌ಮೈಡ್ ಗೌನ್‌ನಲ್ಲಿ ಕಂಡುಬಂದ ಶ್ರುತಿಯ ಸೌಂದರ್ಯವನ್ನು ನೋಡಿ ರೆಡ್ ಕಾರ್ಪೆಟ್‌ನಲ್ಲಿ ನೆರೆದಿದ್ದವರು ದಂಗುಬಡಿದರು.
ತನ್ನ ಉದ್ದನೆಯ ಕೂದಲನ್ನು ಬನ್ ರೀತಿಯಲ್ಲಿ ಶ್ರುತಿ ಅಲಂಕರಿಸಿದ್ದು, ಗೌನ್‌ನ ಅಂದವನ್ನು ಹೆಚ್ಚಿಸುವಲ್ಲಿ ಕಾರಣವಾಗಿದೆ. ಉದ್ದನೆಯ ದೊಡ್ಡ ಕಿವಿಯಾಭರಣಗಳು ಹಾಗೂ ಸರಳ ಮೇಕಪ್ ಶ್ರುತಿಯನ್ನು ಇನ್ನಷ್ಟು ಚೆಂದಗಾಣಿಸಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಫಿಲ್ಮ್‌ಫೇರ್ 2014: ಕಣ್ಮನ ಸೆಳೆದ ಪ್ರಿಯಾಂಕ
ಒಟ್ಟಾರೆ 2014 ರ ಫಿಲ್ಮ್‌ಫೇರ್ ರೆಡ್ ಕಾರ್ಪೆಟ್‌ನಲ್ಲಿ ಶ್ರುತಿ ಸರಳ ಸುಂದರವಾಗಿ ಕಂಡುಬಂದಿದ್ದು, ತನ್ನ ಫ್ಯಾಶನ್ ಪ್ರಿಯತೆಯನ್ನು ಇನ್ನಷ್ಟು ಗಟ್ಟಿಮಾಡಿಕೊಂಡಿದ್ದಾರೆ. ಶ್ರುತಿಯ ಅಂದಚೆಂದ, ಆಕೆಯ ಸ್ಟೈಲ್ ಸರಳವಾಗಿ ಹೊರಹೊಮ್ಮಿದೆ.



Click it and Unblock the Notifications
