Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಫಿಲ್ಮ್‌ಫೇರ್ ಅವಾರ್ಡ್ಸ್‌ನಲ್ಲಿ ಕಂಗೊಳಿಸಿದ ಅದಿತಿ ರಾವ್ ಹೈದಾರಿ
ಅದ್ಭುತ ಸುಂದರಿ ಅದಿತಿ ರಾವ್ ಹೈದಾರಿ ಗೌರವ್ ಗುಪ್ತಾ ಕೌಚರ್ ಗೌನ್‌ನಲ್ಲಿ ಸುಂದರಗೊಂಡಿದ್ದಾರೆ. ದೀಪಿಕಾ ಪಡುಕೋಣೆಯಲ್ಲದೆ, ಅದಿತಿ ರಾವ್ ಕೂಡಾ ತಮ್ಮ ಮೆಚ್ಚಿನ ವಿನ್ಯಾಸಕಾರ ಗೌರವ್ ಗುಪ್ತಾ ಕೌಚರ್ ಗೌನ್ ಅನ್ನು ತೊಟ್ಟಿದ್ದಾರೆ.
ಅದಿತಿ ರಾವ್ ರೆಡ್ ಕಾರ್ಪೆಟ್ ಫಿಲ್ಮ್ ಫೇರ್ ಅವಾರ್ಡ್ಸ್ 2014 ರಲ್ಲಿ ಸಖತ್ತಾಗಿ ಮಿಂಚಿದ್ದಾರೆ. ಹೊಳೆಯುವ ಸಿಲ್ವರ್ ಬಣ್ಣದ ಗೌನ್ ಅನ್ನು ಧರಿಸಿರುವ ಅದಿತಿ ಭುವಿಗಿಳಿದ ಅಪ್ಸರೆಯಂತೆ ಕಂಡುಬರುತ್ತಿದ್ದಾರೆ. ಇಂಡಿಯನ್ ಬ್ರೈಡಲ್ ಫ್ಯಾಶನ್ ವೀಕ್ 2013 ರಲ್ಲಿ ಈ ಗೌನ್ ಅನ್ನು ಪ್ರದರ್ಶಿಸಲಾಗಿತ್ತು.

ಹೊಳೆಯುತ್ತಿರುವ ಸಿಲ್ವರ್ ಬಣ್ಣದ ಸೀಕ್ವಿನ್ನ್‌ಡ್ ಗೌನ್, ಗೌರವ್ ಗುಪ್ತಾ ಕೈಚಳಕಕ್ಕೆ ಒಂದು ಉದಾಹರಣೆಯಾಗಿದೆ. ಗೌನ್‌ನ ಕುತ್ತಿಗೆಯ ವಿನ್ಯಾಸದಲ್ಲಿ ಮಿನುಗು ಬೊಟ್ಟುಗಳಿದ್ದು, ಗೌನ್‌ಗೆ ಸುಂದರತೆಯನ್ನು ನೀಡಿದೆ.
ಗೌರವ್ ಗುಪ್ತಾ ವಿನ್ಯಾಸದ ಗೌನ್ ಸೀಕ್ವಿನ್ನ್‌ಡ್ ಹೊಳೆಯುವ ಕೋಲರ್ ನೆಕ್‌ಲೈನ್ ಅನ್ನು ಹೊಂದಿದ್ದು ಕ್ರಿಸ್ಟಲ್ ಅಲಂಕಾರಗಳನ್ನು ಹೊಂದಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲೇಖನಗಳನ್ನು ಓದಿ: ಫಿಲ್ಮ್‌ಫೇರ್ 2014: ಕಣ್ಮನ ಸೆಳೆದ ಪ್ರಿಯಾಂಕ
ಕಾಲಿನ ಬಳಿ ಕೂಡ ಹೊಳೆಯುವ ಮಿನುಗು ಬೊಟ್ಟುಗಳನ್ನು ಹೊಂದಿರುವ ಗೌನ್ ಅದಿತಿಗೆ ಸುಂದರವಾಗಿ ಕಂಡುಬರುತ್ತಿದೆ. ಗೌನ್‌ನ ವಿನ್ಯಾಸದಲ್ಲಿ ಕೂಡ ಬಹಳಷ್ಟು ಬದಲಾವಣೆಯನ್ನು ಮಾಡಲಾಗಿದೆ ಆದರೆ ಸಾಕಷ್ಟು ಸಾಮ್ಯತೆಯನ್ನು ಚಿತ್ರದಲ್ಲಿರುವ ರೂಪದರ್ಶಿ ಧರಿಸಿರುವ ಗೌನ್ ಹೊಂದಿದೆ.
ರೂಪದರ್ಶಿ ಪ್ರದರ್ಶಿಸಿರುವ ಗೌನ್ ಕಾಲಿನ ಬಳಿ ತೆಳುವಾಗಿದ್ದು ಪಾಶ್ಚಾತ್ಯ ಸಂಸ್ಕೃತಿಯ ಪ್ರತಿಬಿಂಬದಂತಿದೆ. ಆದರೆ ಅದಿತಿ ಧರಿಸಿರುವ ಗೌನ್ ಅಷ್ಟು ತೆಳುವಾಗಿಲ್ಲ ಮತ್ತು ಭಾರತೀಯ ಸಂಸ್ಕೃತಿಗೆ ತಕ್ಕಂತಿದೆ. ಅದಿತಿ ಧರಿಸಿದ ಗೌನ್ ಬಲಕಾಲಿನ ಬಳಿ ಸಣ್ಣ ಸ್ಲೈಟ್ ಅನ್ನು ಹೊಂದಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲೇಖನಗಳನ್ನು ಓದಿ: ಫಿಲ್ಮ್‌ಫೇರ್ ಅವಾರ್ಡ್‌ನಲ್ಲಿ ಸುಂದರಿ ದೀಪಿಕಾ
ಅದಿತಿ ರಾವ್ ಹೈದಾರಿ ತನ್ನ ಫಿಲ್ಮ್‌ಫೇರ್ 2014 ರೆಡ್ ಕಾರ್ಪೆಟ್ ನೋಟವನ್ನು ಸಿಲ್ವರ್ ಹೆಡ್‌ಬ್ಯಾಂಡ್‌ನೊಂದಿಗೆ ಪೂರ್ಣಗೊಳಿಸಿದ್ದಾರೆ. ಕಣ್ಣಿನ ಮೇಕಪ್ ಕೂಡ ಸ್ಮೋಕಿ ಆಗಿದ್ದು, ಪಿಂಕ್ ಲಿಪ್‌ಸ್ಟಿಕ್ ಅನ್ನು ಅದಿತಿ ಆಯ್ಕೆಮಾಡಿಕೊಂಡಿದ್ದಾರೆ. ಸಿಲ್ವರ್ ಬಣ್ಣದ ಪಾಯಿಂಟೆಡ್ ಶೂ ಕೂಡ ಗೌನ್‌ಗೆ ಸರಿಹೊಂದಿದೆ.
ಗೌರವ್ ಗುಪ್ತಾ ಕೌಚರ್ ಗೌನ್‌ನಲ್ಲಿ ಅದಿತಿ ರಾವ್ ಹೈದಾರಿ ಸುಂದರವಾಗಿ ಕಂಡು ಬರುತ್ತಿದ್ದಾರೆ. ರೆಡ್ ಕಾರ್ಪೆಟ್ ಹಾಗೂ ಇತರ ಈವೆಂಟ್‌ಗಳಲ್ಲಿ ಅದಿತಿ ನಮಗೆ ನಿರಾಸೆ ಉಂಟುಮಾಡಲಿಲ್ಲ. ನಿಮ್ಮ ಅಭಿಪ್ರಾಯವೇನು?



Click it and Unblock the Notifications
