Latest Updates
-
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ?
ಸಾಂಪ್ರದಾಯಿಕ ದಿರಿಸಿನಲ್ಲಿ ಕಣ್ಮನ ಸೆಳೆದ ದೀಪಿಕಾ!
ಕಪ್ಪು ಬಣ್ಣವನ್ನು ತನ್ನ ಅಚ್ಚುಮೆಚ್ಚಿನ ಬಣ್ಣವಾಗಿ ಬಯಸುವವರಲ್ಲಿ ನಟಿ ದೀಪಿಕಾ ಪಡುಕೋಣೆಯು ಸಹ ಒಬ್ಬಳು. ಈಕೆಯು ಇತ್ತೀಚೆಗೆ ತನ್ನ ಅಚ್ಚು ಮೆಚ್ಚಿನ ಬಣ್ಣದಲ್ಲಿ ಮುಂಬೈನ ಸಿದ್ಧಿ ವಿನಾಯಕ ದೇವಾಲಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಳು. ಸಲ್ವಾರ್ ಕಮೀಜ್ ಉಡುಗೆಯಲ್ಲಿ ಕಾಣಿಸಿಕೊಂಡ ಆಕೆ ಮತ್ತಷ್ಟು ಮುದ್ದು ಮುದ್ದಾಗಿ ಕಾಣುತ್ತಿದ್ದಳು. ದೇವಾಲಯಕ್ಕೆ ಭೇಟಿ ನೀಡಿದ ಆಕೆಯು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡು ಜನರ ಆಕರ್ಷಣೆಗೆ ಕಾರಣವಾದಳು.
ಮಿರಿ ಮಿರಿ ಹೊಳೆಯುತ್ತಿದ್ದ ಕಪ್ಪು ಕಾರಿನಿಂದ ಇಳಿದ ದೀಪಿಕಾ ಪಡುಕೋಣೆಯನ್ನು ಕಂಡ ಜನ ಆಕೆಯನ್ನು ನೋಡಲು ದೇವಾಲಯದಲ್ಲಿ ಜಮಾಯಿಸಿದರು. ಗೋಲ್ಡ್ ಅಂಡ್ ಬ್ಲಾಕ್ ಸಲ್ವಾರ್ ಕಮೀಜಿನಲ್ಲಿ ಗಂಧರ್ವ ಕನ್ಯೆಯಂತೆ ಕಾಣುತ್ತಿದ್ದ ಆಕೆ, ಜನರ ಗಮನವನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದಳು.

ದೀಪಿಕಾ ದೇವಾಲಯಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಇಂತಹ ಕುರ್ತಾ ದಿರಿಸು ಧರಿಸಲು ಮನಸ್ಸು ಮಾಡುತ್ತಾಳೆ. ಕಡೆಯ ಬಾರಿ ಆಕೆ ಸ್ವರ್ಣ ದೇಗುಲಕ್ಕೆ ಭೇಟಿ ನೀಡಿದಾಗ ಇದೇ ಮಾದರಿಯ ಉಡುಗೆಯನ್ನು ಧರಿಸಿದ್ದಳಾದರು ಅದು ವೈಟ್ ಅಂಡ್ ಗೋಲ್ಡ್ ಸಲ್ವಾರ್ ಕಮೀಜ್ ಆಗಿತ್ತು. ಫಿಲ್ಮ್‌ಫೇರ್ ಅವಾರ್ಡ್‌ನಲ್ಲಿ ಸುಂದರಿ ದೀಪಿಕಾ
ಆಕೆ ತೊಟ್ಟಿದ್ದ ಸಲ್ವಾರ್ ಕಮೀಜಿನ್ ಪ್ಯಾಂಟ್‍ಗಳು ಹಾಸ್ಯಾಸ್ಪದವಾಗಿದ್ದವು. ಅಲ್ಲದೆ ಆಕೆಯು ಗೋಲ್ಡ್ ಅಂಡ್ ಬ್ಲಾಕ್ ಕುರ್ತಾಗೆ ಒಪ್ಪುವ ಪ್ಯಾರಲೆಲ್ ಪ್ಯಾಂಟ್‍ಗಳನ್ನು ತೊಟ್ಟಿದ್ದಳು. ಆದರೆ ಆಕೆಯು ಇದರ ಬದಲಿಗೆ ದೇವಾಲಯಗಳಿಗೆ ಒಪ್ಪುವಂತಹ ಚೂರಿದಾರ್ ತೊಟ್ಟಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂಬುದು ನಮ್ಮ ಅನಿಸಿಕೆ.
ದೇವಾಲಯದಲ್ಲಿ ದೀಪಿಕಾ ಪಡುಕೊಣೆಯು ತಾನು ತೊಟ್ಟಿದ್ದ ಮೇಕಪ್‍ನಿಂದ ಸಹ ಗಮನ ಸೆಳೆದಳು. ಆಕೆಯು ಫೌಂಡೇಶನ್ ಜೊತೆಗೆ ಪೌಡರ್ ಸಹ ಹಾಕಿದ್ದಳು. ಅಲ್ಲದೆ ಕೆಂಪು ಬಣ್ಣದ ಲಿಪ್‍ಸ್ಟಿಕ್‌ನಲ್ಲಿ ಇನ್ನಷ್ಟು ಕಣ್ಮನ ಸೆಳೆಯುತ್ತಿದ್ದಳು.
ಆಕೆಯ ಉಗುರುಗಳು ರಾಯಲ್ ಪರ್ಪಲ್ ಶೇಡ್ ಲೇಪನದಿಂದ ಫಳ ಫಳ ಹೊಳೆಯುತ್ತಿದ್ದವು. ಆಕೆ ತನ್ನ ಕೂದಲುಗಳನ್ನು ಲೂಸ್ ಆಗಿ ವೇವಿ ಶೈಲಿಯಲ್ಲಿ ಬಿಟ್ಟಿದ್ದರಿಂದ ಆಕೆಯ ಸೌಂದರ್ಯವು ಒಂದು ಬಗೆಯ ದಿವ್ಯತೆಯನ್ನು ಪಡೆದಿತ್ತು. ಬಹುಶಃ ಈ ಲುಕ್ ಕಪ್ಪು ಬಣ್ಣವನ್ನು ಧರಿಸುವವರಲ್ಲಿಯೇ ಶ್ರೇಷ್ಠವಾದ ಲುಕ್ ಆಗಿತ್ತು ಎಂದು ಹೇಳಬಹುದು. ಜೀನ್ಸ್ ಡ್ರೆಸ್ಸಿಂಗ್ ನಲ್ಲಿ ಲೇಟಸ್ಟ್ ಫ್ಯಾಷನ್ ಯಾವುವು?
ಒಟ್ಟಾರೆಯಾಗಿ ನಾವು ದೀಪಿಕಾ ಪಡುಕೊಣೆ ದೇವಾಲಯಕ್ಕೆ ಬಂದಿದ್ದ ಸ್ಟೈಲಿಗೆ ಮಾರು ಹೋಗಿದ್ದೇವೆ, ಆಕೆಯನ್ನು ಇದಕ್ಕಿಂತ ಹೆಚ್ಚಿಗೆ ನಾವು ಊಹಿಸಿರಲಿಲ್ಲ ಮತ್ತು ನಮ್ಮ ಊಹೆಗು ಮೀರಿ ಆಕೆ ಅಂದವಾಗಿ ಕಾಣಿಸಿಕೊಂಡಳು ಎಂದು ಹೇಳಬಹುದು. For more pic



Click it and Unblock the Notifications




