Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಅಮೇಜಿಂಗ್ ಲುಕ್‌ನಲ್ಲಿ ಹೃದಯ ಕದ್ದ ದೀಪಿಕಾ!
ಹೌದು. ಯಾರೂ ಕೂಡ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಯಂತೆ ಸುಂದರಿಯಾಗಿ ಕಾಣಲು ಸಾಧ್ಯವಿಲ್ಲ. ಈ ಕಮರ್ಷಿಯಲ್ ಪ್ರಚಾರದಲ್ಲಿ ದೀಪಿಕಾ ಇನ್ನಷ್ಟು ಬೋಲ್ಡ್ ಆಗಿ ಕಾಣುತ್ತಿದ್ದರು.
ಕನ್ನಡಕದ ಪ್ರಚಾರ ಕಾರ್ಯಕ್ರಮದಲ್ಲಿ ದೀಪಿಕಾ ಬೋಲ್ಡ್ ಮತ್ತು ಬ್ಯೂಟಿಫುಲ್ ಆಗಿ ಕಾಣುತ್ತಿದ್ದರು. ಸರಳ ಉಡುಗೆ ಹಾಗೂ ಬೋಲ್ಡ್ ಮೇಕಪ್ ದೀಪಿಕಾರಿಗೆ ಬೇರೆಯೇ ಲುಕ್ ಅನ್ನು ನೀಡಿದೆ.

ಕನ್ನಡಕದ ರಾಯಭಾರಿಯಾಗಿರುವ ದೀಪಿಕಾ ಇನ್ನಷ್ಟು ಸುಂದರಿಯಾಗಿದ್ದರು. ಐ ವೇರ್‌ಗಾಗಿ ದೀಪಿಕಾ ಧರಿಸಿದ ಧಿರಿಸು ಮನಮೋಹಕವಾಗಿತ್ತು ಮತ್ತು ಸುಂದರವಾಗಿತ್ತು. ತಮ್ಮ ಫ್ಯಾನ್‌ಗಳಿಗೆ ಈ ಬಾರಿ ದೀಪಿಕಾ ಹೊಸ ರೂಪದಲ್ಲಿ ಕಂಡುಬಂದಿದ್ದಾರೆ. ಹಿಂದೆಂದೂ ಕಂಡುಬರದ ಅಪರೂಪದ ಡ್ರೆಸ್ ಕಲೆಕ್ಷನ್‌ನಲ್ಲಿ ಡಿಪ್ಸ್ ಚೆನ್ನಾಗಿ ಕಂಡುಬಂದಿದ್ದಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಎಚ್‌ಪಿ ವಾಯ್ಸ್‌ಟ್ಯಾಬ್ ಸಿರೀಸ್‌ನಲ್ಲಿ ದೀಪಿಕಾ ಪಡುಕೋಣೆ
ಪ್ಯಾಚ್ಡ್ ಪೋಲ್ಕಾ ಟಾಪ್ ಮತ್ತು ಮತ್ತು ಬಿಳಿ ಸ್ಕರ್ಟ್‌ನಲ್ಲಿ ದೀಪಿಕಾ ಅದ್ಭುತ ಸುಂದರಿಯಾಗಿದ್ದರು. ಸಣ್ಣ ನಡುವನ್ನು ಸುಂದರವಾಗಿ ಅಪ್ಪಿ ಹಿಡಿದಿದ್ದ ಬಣ್ಣ ಬಣ್ಣದ ಬಬಲ್ ಉಳ್ಳ ಪೋಲ್ಕಾ ಟಾಪ್ ದೀಪಿಕಾರಿಗೆ ವಿಶಿಷ್ಟತೆಯನ್ನು ನೀಡಿದೆ.
ಕಂದು ಕರ್ಲ್ ಮಾಡಿದ ಕೂದಲನ್ನು ಒಂದು ಬದಿಗೆ ಓರಣವಾಗಿ ಇರಿಸಿರುವಂತಹ ದೀಪಿಕಾ ಡ್ರೆಸ್‌ಗೆ ತಕ್ಕಂತೆ ಚೆನ್ನಾಗಿ ಡ್ರೆಸ್ ಮಾಡಿಕೊಂಡಿದ್ದಾರೆ. ತುಟಿಗೆ ಗಾಢ ಕೆಂಪು ಬಣ್ಣದ ಚೆರ್ರಿ ಲಿಪ್‌ಸ್ಟಿಕ್ ಅನ್ನು ಹಚ್ಚಿಕೊಂಡಿರುವ ದೀಪಿಕಾ ತನ್ನ ಹೊಳೆಯುವ ದಂತಪಂಕ್ತಿಗಳಿಂದ ಸುಂದರ ನಗುವನ್ನು ಚೆಲ್ಲಿದ್ದಾರೆ. ಒಟ್ಟಾರೆ ಅಪ್ಸರೆಯೇ ಧರೆಗಿಳಿದಂತಹ ನೋಟವನ್ನು ನೀಡಿದ್ದಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಸ್ಟಾರ್‌ಡಸ್ಟ್ ಮ್ಯಾಗಜೀನ್ 2014: ಕಣ್ಮನ ಸೆಳೆದ ದೀಪಿಕಾ
ಪೋಟೋಶೂಟ್‌ನ ಇನ್ನೊಂದು ಭಾಗವು ದೀಪಿಕಾರ ಬೋಲ್ಡ್ ಲುಕ್ ಅನ್ನು ಪ್ರದರ್ಶಿಸಿದೆ. ಬಿಳಿ ಕೋಟ್ ಮತ್ತು ಆಳವಾದ ನೆಕ್‌ಲೈನ್ ಉಡುಪನ್ನು ಧರಿಸಿದ್ದ ದೀಪಿಕಾ ನೆರೆದವರ ಹೃದಯ ಕದ್ದದ್ದಂತೂ ನಿಜ.
ಆಕೆ ಧರಿಸಿರುವಂತಹ ಐ ವೇರ್‌ಗೆ ಒಪ್ಪುವ ಧಿರಿಸನ್ನು ಡೀಪ್ಸ್ ತೊಟ್ಟುಕೊಂಡಿದ್ದಾರೆ. ಆಕೆಯ ಹೇರ್‌ಸ್ಟೈಲ್ ಅಂತೂ ಮನಸೆಳೆಯುವಂಥಿದ್ದು ನಮ್ಮನ್ನು ಪದೇ ಪದೇ ನೋಡುವಂತೆ ಮಾಡಿದೆ. ಈ ಬೇಸಿಗೆಗೆ ದೀಪಿಕಾರ ಈ ಬೋಲ್ಡ್ ಲುಕ್ ನಿಮಗಿಷ್ಟವಾಗಿದೆಯೇ?



Click it and Unblock the Notifications
