Latest Updates
-
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್!
ಹೆಂಗಳೆಯರನ್ನು ಸ್ಟೈಲಿಶ್ ಮಾಡುವ ಸೀರೆಗಳ ಮೋಡಿ!
ಕಲರ್ ಬ್ಲಾಕಿಂಗ್ ಉಡುಗೆಗಳು ಇಂದು ಹೊಸದಾಗಿ ಗಮನ ಸೆಳೆಯುತ್ತಿರುವ ಫ್ಯಾಶನ್ ಜಾದೂವಾಗಿದೆ. ಬಣ್ಣಗಳ ಮಿಶ್ರಣದಿಂದ ಚಮತ್ಕಾರೀ ವಿನ್ಯಾಸವನ್ನು ವಿನ್ಯಾಸಕಾರ ರಚಿಸುತ್ತಾ ಉಡುಗೆಗೆ ಜೀವ ತುಂಬುತ್ತಾನೆ. 2013 ರ ನಡುವಿನಲ್ಲೇ ಈ ಟ್ರೆಂಡ್ ತನ್ನ ಕಾರ್ಯಭಾರ ನಡೆಸಿತ್ತು. ಅಂತೂ ಈ ದಿನಗಳಲ್ಲಿ ಕಲರ್ ಬ್ಲಾಕಿಂಗ್ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಬೋಲ್ಡ್ ಸ್ಟ್ರೋಕ್ಸ್, ವಿವಿಧ ಶೇಡ್ಸ್ ನಿಯೋನ್, ಪೇಸ್ಟಲ್ಸ್, ಹ್ಯೂಸ್ ಉಡುಗೆಗಳನ್ನು ನೀವು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೀರಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಫಿಲ್ಮ್‌ಫೇರ್ ಅವಾರ್ಡ್ಸ್‌ನಲ್ಲಿ ಕಂಗೊಳಿಸಿದ ಅದಿತಿ ರಾವ್ ಹೈದಾರಿ
ಕಲರ್ ಬ್ಲಾಕಿಂಗ್ ಚಮತ್ಕಾರ ಪುರುಷ ಮತ್ತು ಮಹಿಳಾ ಧಿರಿಸುಗಳಲ್ಲಿ ಢಾಳಾಗಿ ಕಾಣಸಿಗುತ್ತದೆ. ಅದರಲ್ಲೂ ಹೆಂಗಳೆಯರು ಕಲರ್ ಬ್ಲಾಕಿಂಗ್ ಧಿರಿಸುಗಳ ಪ್ರೇಮಿಯಾಗಿದ್ದಾರೆ. ವಿವಿಧ ವಿನ್ಯಾಸದ ಅದ್ಭುತ ಸೀರೆಗಳನ್ನು ಉಟ್ಟು ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿರುವ ಸೆಲೆಬ್ರಿಟಿಗಳು ಇನ್ನಷ್ಟು ಅಂದಗಾತಿಯರಾಗಿದ್ದಾರೆ. ಕರೀನಾ ಕಪೂರ್‌ನಿಂದ ಹಿಡಿದು ಸೋನಾಂ ವರೆಗೂ ಈ ಟ್ರೆಂಡ್ ಪ್ರಖ್ಯಾತವಾಗಿದೆ.ಇದು ಧರಿಸಲು ಸುಲಭ ಮತ್ತು ಹಿತಕರ.
ಪ್ಲೇನ್‌ನಿಂದ ಹಿಡಿದು ವಿವಿಧ ಬಣ್ಣಗಳಲ್ಲಿ ಕಲರ್ ಬ್ಲಾಕ್ ಸೀರೆ ಲಭ್ಯ. ಸಾಂಪ್ರದಾಯಿಕ ಧಿರಿಸಾಗಿರುವ ಸೀರೆಗೆ ನವೀನತೆಯನ್ನು ಈ ಕಲರ್ ಬ್ಲಾಕ್ ತಂದುಕೊಟ್ಟಿದೆ ಎಂಬ ಮಾತು ಸುಳ್ಳಲ್ಲ. ನಿಮಗಾಗಿ ಇದೋ ವಿವಿಧ ಮಾದರಿಯ ಕಲರ್ ಬ್ಲಾಕ್ ಸೀರೆಗೆಳ ಮೇಳ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪಂಕಜ್ ಮತ್ತು ನಿಧಿ ವಿನ್ಯಾಸದ ಧಿರಿಸಿನಲ್ಲಿ ಮಾಧುರಿ ದೀಕ್ಷಿತ್

ಕಪ್ಪು
ಇದೊಂದು ಸುಂದರ ಕಲರ್ ಬ್ಲಾಕ್ ಸೀರೆಯಾಗಿದ್ದು ಕಪ್ಪು, ಹಳದಿ, ಪಿಂಕ್ ಮತ್ತು ಗೋಲ್ಡನ್ ಬಣ್ಣಗಳ ತಾಳಮೇಳ ಇಲ್ಲಿ ಜೋಡಿಯಾಗಿದೆ. ಸೀರೆಯ ಅಂಚು ಕಣ್ಸೆಳೆಯುವಂತಿದ್ದು ಸುಂದರವಾಗಿದೆ.

ಕಿತ್ತಳೆ ಮತ್ತು ಹಳದಿ
ಪ್ರತಿಯೊಬ್ಬರಿಗೂ ಸೂಕ್ತವಾಗಿ ಹೊಂದುವ ಎರಡು ಬಣ್ಣಗಳ ಸಮನಾದ ಪಾಕ ಈ ಸೀರೆಯಲ್ಲಿದೆ. ಮನೀಷ್ ಮಲ್ಹೋತ್ರಾ ಈ ಸೀರೆಯಲ್ಲಿ ಎರಡು ಬಣ್ಣಗಳನ್ನು ಬಳಸಿದ್ದು ಅದ್ಭುತವಾದ ಕಲರ್ ಬ್ಲಾಕ್ ಸೀರೆ ಸಿದ್ಧಗೊಂಡಿದೆ.

ಪಿಂಕ್ ಮತ್ತು ಕಪ್ಪು
ವಿದೇಶಿ ಧಿರಿಸುಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ನವೀನ ಕಲರ್ ಬ್ಲಾಕಿಂಗ್ ಸೀರೆ ಇದಾಗಿದೆ. ಬಬ್ಬಲ್‌ಗಮ್ ಪಿಂಕ್ ಮತ್ತು ಕಪ್ಪು ಕ್ರೇಪ್ ಸೀರೆ ನಿಮಗೆ ಸುಂದರವಾಗಿ ಕಾಣುವುದರಲ್ಲಿ ಎರಡು ಮಾತಿಲ್ಲ.

ಕಿತ್ತಳೆ, ಪಿಂಕ್, ಬೂದು
ಇದೊಂದು ಅದ್ಭುತ ಕಲರ್ ಕಾಂಬಿನೇಷನ್‌ನ ಕಲರ್ ಬ್ಲಾಕ್ ಸೀರೆಯಾಗಿದೆ. ಕಿತ್ತಳೆ, ಬೇಬಿ ಪಿಂಕ್ ಮತ್ತು ಬೂದು ಬಣ್ಣ ಸಮನಾಗಿ ಮಿಶ್ರವಾಗಿರುವ ಈ ಸೀರೆಯಲ್ಲಿ ಗೋಲ್ಡನ್ ಅಂಚುಗಳನ್ನು ಸುಂದರವಾಗಿ ಮೇಳೈಸಲಾಗಿದೆ.

ಬೋಲ್ಡ್ ಕಲರ್ ಬ್ಲಾಕ್
ಇದೊಂದು ಬ್ರೈಟ್ ಮತ್ತು ಬೋಲ್ಡ್ ಕಲರ್ ಬ್ಲಾಕ್ ಸೀರೆಯಾಗಿದೆ. ಚಿರತೆಯ ಮೈ ಬಣ್ಣದ ರವಿಕೆ ಈ ಕಪ್ಪು, ಮೆಂತೆ ಹಳದಿ ಮತ್ತು ನೇರಳೆ ಬಣ್ಣದ ಸೀರೆಗೆ ಚೆನ್ನಾಗಿ ಹೊಂದಿಕೆಯಾಗುತ್ತಿದೆ.

ದೇಸೀ ಸ್ಟೈಲ್
ಈ ವಿನ್ಯಾಸದ ರವಿಕೆ ಸರಳ ಬಣ್ಣದ ಬ್ಲಾಕ್ ಸೀರೆಗೆ ಚೆನ್ನಾಗಿ ಹೊಂದಿಕೆಯಾಗುತ್ತಿದೆ. ಸೀರೆಯ ವೈಭವವನ್ನು ಹೆಚ್ಚಿಸಿದೆ. ಹಸಿರು ಮತ್ತು ಕಿತ್ತಳೆ ಬಣ್ಣದ ನೆಟ್ ಸೀರೆ ಪಿಂಕ್ ಸೆರಗನ್ನು ಹೊಂದಿದೆ.

ಚೆಕ್ಕರ್ಡ್ಡ್ ಪ್ಯಾಟ್ರನ್
ಈ ವಿನ್ಯಾಸ ಈಗ ಫ್ಯಾಶನ್ ಆಗಿಬಿಟ್ಟಿದೆ. ಪ್ಲೇನ್ ಬಣ್ಣವಾದ ಪಿಂಕ್ ಅಥವಾ ಬಿಳಿ ಬಣ್ಣವನ್ನು ಈ ತರಹದ ಸೀರೆಗೆ ಬಣ್ಣವಾಗಿ ಬಳಸಿ.

ಸೀರೆಯಿಂದ ಪ್ರಭಾವಿತ ಟ್ರೌಸರ್ಸ್
ಸೋನಂ ಕಪೂರ್ ತಮ್ಮ ಉಡುಗೆಯಲ್ಲಿ ಯಾವಾಗಲೂ ಪ್ರಯೋಗವನ್ನು ಮಾಡುತ್ತಿರುತ್ತಾರೆ. ಈ ಸುಂದರ ಕಲರ್ ಬ್ಲಾಕ್ ಸೀರೆ ಎರಡೂ ಬದಿಗಳಲ್ಲಿ ಕಿಸೆಗಳನ್ನು ಹೊಂದಿದೆ.

ಪ್ರಿಂಟೆಡ್ ಸೀರೆ
ಬಿಳಿ ವರ್ತುಲದಲ್ಲಿ ವಿವಿಧ ಪ್ರಿಂಟ್‌ಗಳನ್ನು ಈ ಕಲರ್ ಬ್ಲಾಕ್ ಸೀರೆ ಹೊಂದಿದೆ. ನಿಯೋನ್ ಪ್ರಿಂಟ್ಸ್ ಮತ್ತು ಹಳದಿ ಪ್ರಿಂಟ್ ಅಂಚುಗಳು ಸ್ಟೈಲಿಶ್ ಆಗಿ ಕಂಡುಬಂದಿದೆ.

ಹೊಳೆಯುವ ಬೊಟ್ಟುಗಳು
ಪ್ರಿಂಟ್‌ನೊಂದಿಗೆ ಮಿಶ್ರ ಮಾಡಿಕೊಳ್ಳುವ ಹೊರತಾಗಿ ಕೆಲವು ಮಿನುಗು ಬೊಟ್ಟುಗಳನ್ನು ಸೀರೆಯಲ್ಲಿ ಅಂಟಿಸಬಹುದು. ನಿಯೋನ್ ಕಿತ್ತಳೆ ಮತ್ತು ಬೂದು ಬಣ್ಣದ ಸೀರೆ ಹೃದಯಾಕಾರದ ಮಿರರ್ ವರ್ಕ್ ಅನ್ನು ಹೊಂದಿದೆ.

ಕಪ್ಪು ಮತ್ತು ಬಿಳಿ
ಕಪ್ಪು ಮತ್ತು ಬಿಳಿ ಬಣ್ಣವನ್ನು ಮಿಶ್ರ ಮಾಡಿಕೊಂಡು ಈ ಸುಂದರ ಬಣ್ಣದ ಕಲರ್ ಬ್ಲಾಕ್ ಸೀರೆಯನ್ನು ನಿಮ್ಮದಾಗಿಸಿಕೊಳ್ಳಬಹುದು. ಪ್ಲೇನ್ ಬಿಳಿ ಸೀರೆ ಸೊಂಟ ಮತ್ತು ತೋಳುಗಳಲ್ಲಿ ಕಪ್ಪು ಬಣ್ಣವನ್ನು ಹೊಂದಿದ್ದು ಹೂಗಳಿಂದ ಅಲಂಕೃತವಾಗಿದೆ.

ನಿಯೋನ್ಸ್
ಚಿಕ್ ಪಿಂಕ್ ಮತ್ತು ಕಿತ್ತಳೆ ಬಣ್ಣದ ಸೀರೆ ಸ್ಟೈಲಿಶ್ ಮತ್ತು ಸರಳವಾಗಿದೆ. ಸುಂದರಿಯರನ್ನು ಇನ್ನಷ್ಟು ಸುಂದರಗೊಳಿಸುವ ಸೀರೆ ಮೈಕಟ್ಟನ್ನು ಅಂದವಾಗಿ ತೋರಿಸುತ್ತದೆ.



Click it and Unblock the Notifications