Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಕೇನ್ಸ್ 2014 ನಲ್ಲಿ ಬಿಳಿ ಮರ್ಚೆಸಾದಲ್ಲಿ ಮನಸೆಳೆದ ಉಮಾ ತುರ್ಮಾನ್
ಕೇನ್ಸ್ ಚಿತ್ರೋತ್ಸವ ಕೊನೆಗೂ ಅಂತಿಮ ಘಟ್ಟಕ್ಕೆ ತಲುಪಿದೆ. ಈ ಬಾರಿ ಚಿತ್ರೋತ್ಸವವನ್ನು ಕೊನೆಗೊಳಿಸಲು ಉಮಾ ತುರ್ಮಾನ್ ಬಂದಿದ್ದರು. ಕೇನ್ಸ್‌ನ ವಿದಾಯ ಕೂಟ ಇನ್ನೇನು ಆರಂಭವಾಗಿದ್ದು ಉಮಾ ತುರ್ಮಾನ್ ತಮ್ಮ ಆಗಮನದಿಂದ ಕೇನ್ಸ್ ಕ್ಲೋಸಿಂಗ್ ಸೆರೆಮನಿಗೆ ಅದ್ಭುತ ಆರಂಭವನ್ನು ನೀಡಿದ್ದಾರೆ.
ಎಮ್‌ಎಫ್ ಆರ್ ಗಾಲಾ ಕೇನ್ಸ್‌ನಲ್ಲಿ ಐಶ್ ಅಭಿ ಮೋಡಿ
ಬಿಳಿ ಬಣ್ಣ ಗೌನ್‌ನಲ್ಲಿ ದೇವತೆಯಂತೆ ಕಂಡುಬರುತ್ತಿದ್ದ ಉಮಾ ನೆರೆದವರ ಹೃದಯ ಕದ್ದದ್ದಂತೂ ನಿಜ. ಸಿಲ್ಕ್ ಗೌನ್ ಅನ್ನು ಧರಿಸಿದ್ದ ಉಮಾ ತುಂಬಾ ಆಕರ್ಷಕವಾದ ನೆಕ್‌ಲೈನ್ ಅನ್ನು ಹೊಂದಿದ್ದರು.

ಹಕ್ಕಿಗಳ ರೆಕ್ಕೆಂಯಂತೆ ವಿನ್ಯಾಸಗೊಳಿಸಲಾಗಿದ್ದ ಗೌನ್‌ನ ಕುತ್ತಿಗೆ ಭಾಗ ನಿಜಕ್ಕೂ ಅದ್ಭುತವಾಗಿತ್ತು. ಉತ್ತಮ ಗೌನ್ ಎಂಬ ಪಟ್ಟಿಯಲ್ಲಿ ತನ್ನ ಹೆಸರನ್ನು ಉಳಿಸಲು ಸಜ್ಜಾದಂತೆ ಗೌನ್ ಕಂಡುಬಂದಿತ್ತು. ಹಕ್ಕಿ ರೆಕ್ಕೆಯ ವಿನ್ಯಾಸ ಗೌನ್‌ನ ಮುಂಭಾಗದಲ್ಲಿ ಮಾತ್ರವಲ್ಲದೆ ಹಿಂಭಾಗದಲ್ಲಿ ಕೂಡ ಆಕರ್ಷಕವಾಗಿತ್ತು. ಹಾರುತ್ತಿರುವ ಹಕ್ಕಿಯಂತೆ ಅವರ ಗೌನ್‌ನ ಕುತ್ತಿಗೆ ವಿನ್ಯಾಸ ಎದ್ದು ಕಾಣುತ್ತಿತ್ತು.
ಉಮಾ ಈ ಬಾರಿ ವಜ್ರದ ದೊಡ್ಡ ಕಿವಿಯೋಲೆಯನ್ನು ಧರಿಸಿದ್ದರು. ಗೌನ್ ತುಂಬಾ ಆಕರ್ಷಕ ಮತ್ತು ಕಣ್ಣು ಕೋರೈಸುವಂತೆ ಇದ್ದುದರಿಂದ ಇದಕ್ಕೆ ಬೇರೆ ಚಿನ್ನಾಭರಣಗಳು ಅನಗತ್ಯ ಎಂದು ತೋರುತ್ತಿತ್ತು. ಒಟ್ಟಾರೆ ಕೇನ್ಸ್ ಕೆಂಪು ಹಾಸು ಆಗಸದಿಂದ ಅಪ್ಸರೆ ಕೆಳಗಿಳಿದು ಬಂದಂತೆ ಪುಳಕಿತಗೊಂಡಿತ್ತು.
ಹಕ್ಕಿಯ ರೆಕ್ಕೆಯ ವಿನ್ಯಾಸದಲ್ಲಿದ್ದ ಗೌನ್ ಧರಿಸಿದ್ದ ಉಮಾ ಸರಳ ಮೇಕಪ್‌ನಿಂದ ಕಂಗೊಳಿಸುತ್ತಿದ್ದರು. ಆಕೆಯ ಈ ಸರಳತೆಯೇ ಗೌನ್ ಸೌಂದರ್ಯವನ್ನು ಇಮ್ಮಡಿಗೊಳಿಸಲು ಕಾರಣವಾಯಿತು. ಉಮಾ ತುರ್ಮಾನ್‌ರ ಹಿಂದಿನ ದಿನದ ಗೌನ್ ಕೂಡ ಮನಸೆಳೆಯುವಂತಿತ್ತು.
ಎಮ್‌ಎಫ್ ಆರ್ ಗಾಲಾ ಕೇನ್ಸ್‌ನಲ್ಲಿ ಬೆಸ್ಟ್ ಡ್ರೆಸ್ಸ್‌ಡ್ ಸೆಲೆಬ್ರಿಟಿಗಳು
ಬಿಳಿ ಬಣ್ಣದ ಗೌನ್‌ನಲ್ಲಿ ಆಕೆಯ ಲುಕ್ ಬೆಸ್ಟ್ ಲುಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕೇನ್ಸ್‌ನ ವಿದಾಯ ಕೂಟ ಸಮಾರಂಭದಲ್ಲಿ ಕೂಡ ಉಮಾರ ಲುಕ್ ಇನ್ನಷ್ಟು ಆಕರ್ಷಕವಾಗಿತ್ತು. ಕೇನ್ಸ್ ಆರಂಭ ನಿಕೋಲ್ ಕಿಡ್‌ಮ್ಯಾನ್‌ನಿಂದ ಕಳೆಗಟ್ಟಿತ್ತು. ಹಾಗೂ ಕೇನ್ಸ್ ವಿದಾಯ ಸಮಾರಂಭ ಉಮಾ ತುರ್ಮಾನ್‌ರ ಆಗಮನದಿಂದ ಇನ್ನಷ್ಟು ಕಾಂತಿಮಯವಾಯಿತು.



Click it and Unblock the Notifications
