Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಗಾಢ ಕಪ್ಪು ಬಣ್ಣದ ಉಡುಗೆಯಲ್ಲಿ ಕಣ್ಮನ ಸೆಳೆದ ಕರೀನಾ ಕಪೂರ್
ಇತ್ತೀಚೆಗೆ ಮುಂಬೈನ ಮಿಂಟ್ ಲಕ್ಷುರಿ ಕಾನ್ಫರೆನ್ಸ್ ಕಾರ್ಯಕ್ರಮವೊಂದರಲ್ಲಿ ಸೈಫ್ ಅಲಿಖಾನ್ ಮತ್ತು ಕರೀನಾ ಕಪೂರ್ ದಂಪತಿಗಳು ಅತ್ಯಂತ ಆಕರ್ಷಕವಾಗಿ ಕಂಡುಬಂದರು. ಇಬ್ಬರೂ ತಮ್ಮ ಉಡುಗೆಗಳ ಬಗ್ಗೆ ಪರಸ್ಪರ ಅಭಿನಂದನೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದುದೂ ಕಂಡು ಬಂದಿತು.
ಕರೀನಾ ಕಪೂರ್ ರವರು ಈ ಕಾರ್ಯಕ್ರಮಕ್ಕಾಗಿ ಮೂರು ವರಸೆಯ ಉಡುಗೆಯನ್ನು ತೊಟ್ಟಿದ್ದರು. ಪುರುಷಯ ಮೂರು ವರಸೆಯ ಸೂಟ್ ಉಡುಗೆಯನ್ನು ಹೋಲುವ ಈ ಉಡುಗೆಯಲ್ಲಿ ಒಳಗಣ ಶರಾಯಿ ಕಾಲರ್ ಹೊಂದಿದ್ದು ಒಂದು ಮುಖ್ಯವಾದ ಬಟನ್ ಕಣ್ಣು ಸೆಳೆಯುವಂತೆ ವಿನ್ಯಾಸಗೊಳಿಸಲಾಗಿತ್ತು.

ಗಾಢ ಕಪ್ಪು ಬಣ್ಣದಲ್ಲಿ ನಸುಬೆಳ್ಳಗಿನ ಉದ್ದನೆಯ ಗೆರೆಗಳು ವಿಶಿಷ್ಟ ಛಾಪು ಮೂಡಿಸುತ್ತಿತ್ತು. ಅಲ್ಲದೆ ಈ ಉಡುಗೆಯಲ್ಲಿ ಅವರು ಹೆಚ್ಚಿನ ಆತ್ಮವಿಶ್ವಾಸದಲ್ಲಿ ಕಂಡುಬಂದರು. ಹೊಸ ಲುಕ್‌ನಲ್ಲಿ ಮೋಡಿ ಮಾಡಿದ ಸೋನಾಕ್ಷಿಯ ಸೌಂದರ್ಯ!
ಖ್ಯಾತ ವಸ್ತ್ರ ವಿನ್ಯಾಸಕಾರರಾದ ಆಶೀಶ್ ಮತ್ತು ಸೋನಿಯವರ ಉತ್ಕೃಷ್ಟ ವಿನ್ಯಾಸವಾದ ಕಪ್ಪು ಬಟ್ಟೆಯಲ್ಲಿನ ಬಿಳಿ ಪಟ್ಟಿಗಳ ವಿನ್ಯಾಸ ಈ ಉಡುಗೆ ಹಾಗೂ ಕರೀನಾ ಕಪೂರ್ ರವರ ಶರೀರದ ಅಳತೆಗೆ ಸೂಕ್ತವಾಗಿ ಹೊಲಿದ ನೈಪುಣ್ಯತೆ ಅವರ ಶರೀರವನ್ನು ಇನ್ನಷ್ಟು ತೆಳ್ಳಗಾಗಿ ಪ್ರಸ್ತುತಪಡಿಸುತ್ತಿತ್ತು. ಈ ಉಡುಗೆಯ ವೈಶಿಷ್ಟವೆಂದರೆ ಅಂಚುಗಳಲ್ಲಿ ಉಪಯೋಗಿಸಲಾದ ಬಟ್ಟೆಯ ಪೈಪ್ ಅವರ ಮೈಕಾಂತಿಯನ್ನು ಹೆಚ್ಚಿಸಲು ಸಹಕರಿಸಿತ್ತು.
ಅಲ್ಲದೆ ಈ ಉಡುಗೆಗೆ ತಕ್ಕ ಜೋಡಿಯಾಗಿ ಅವರು ಧರಿಸಿದ್ದ ಸ್ಯೂಡೆ ಜ಼ಾರಾ ಸಂಸ್ಥೆಯ ಪಾದರಕ್ಷೆಗಳು ಅವರ ಉಡುಗೆಗೆ ಸಮನಾದ ಬಣ್ಣವನ್ನೇ ಹೊಂದಿದ್ದು ಅವರ ನಡಿಗೆಯ ಶೈಲಿ ಮತ್ತು ವ್ಯಕ್ತಿತ್ವವನ್ನು ಇನ್ನಷ್ಟು ಹೆಚ್ಚಿಸಿತ್ತು. ಈ ಕಾರ್ಯಕ್ರಮಕ್ಕಾಗಿ ಅವರು ಅತ್ಯಂತ ಸರಳವಾದ ಮೇಕಪ್ ಮಾಡಿಕೊಂಡಿದ್ದು ಒಂಟಿ ಜಡೆಯನ್ನು ಜುಟ್ಟಿನ ರೂಪದಲ್ಲಿ ಕಟ್ಟಿಕೊಂಡಿದ್ದರು.
ವಾಣಿಜ್ಯ ವ್ಯವಹಾರದ ಈ ಕಾರ್ಯಕ್ರಮಕ್ಕೆ ಅವರ ಉಡುಗೆ ಹಾಗೂ ಮೇಕಪ್ ಅತ್ಯಂತ ಸಾಂದರ್ಭಿಕವಾಗಿತ್ತು. ಅವರು ತುಟಿಗಳಿಗೆ ನಸುಗಂದು ಬಣ್ಣದ ಲಿಪ್ ಸ್ಟಿಕ್ ಹಚ್ಚಿಕೊಂಡಿದ್ದರು. ಇಷ್ಟರ ಹೊರತಾಗಿ ಯಾವುದೇ ಭಾರಿ ಆಭರಣ ಅಥವಾ ದುಬಾರಿ ಸಾಧನಗಳನ್ನು ಅವರು ಪ್ರದರ್ಶನಾರೂಪದಲ್ಲಿ ಧರಿಸದಿದ್ದುದು ಈ ಸಂದರ್ಭಕ್ಕೆ ತಕ್ಕುದಾಗಿದೆ. ಸಾಂಪ್ರದಾಯಿಕ ದಿರಿಸಿನಲ್ಲಿ ಕಣ್ಮನ ಸೆಳೆದ ದೀಪಿಕಾ!
ವಾಣಿಜ್ಯ ವ್ಯವಹಾರಗಳ ಇಂತಹ ಕೂಟದಲ್ಲಿ ಅತ್ಯಂತ ಸಾಂದರ್ಭಿಕವಾದ ಸರಳ ಉಡುಗೆ ತೊಟ್ಟು ವ್ಯವಹಾರಗಳಲ್ಲಿ ಮನಸಾರೆ ಭಾಗಿಯಾದ ಕರೀನಾ ಕಪೂರ್ ರವರನ್ನು ಬೋಲ್ಡ್ ಸ್ಕೈ ಹಾರ್ದಿಕವಾಗಿ ಅಭಿನಂದಿಸುತ್ತದೆ.
ಸಾರ್ವಜನಿಕವಾದ ಯಾವುದೇ ಕಾರ್ಯಕ್ರಮದಲ್ಲಿ ಅತ್ಯಂತ ಭಾರಿ ಉಡುಗೆ ತೊಡುಗೆ ಮತ್ತು ದುಬಾರಿ ವಸ್ತುಗಳೊಂದಿಗೆ ತಮ್ಮ ಇರವನ್ನು ಪ್ರಸ್ತುತಪಡಿಸುವ ಪ್ರಚಾರಪ್ರಿಯರ ನಡುವೆ ಕರೀನಾ ಕಪೂರ್ ತನ್ನ ಸರಳತೆಯಿಂದ ತಮ್ಮ ಅಭಿಮಾನಿಗಳ ಮನಸೂರೆಗೊಳ್ಳುತ್ತಾರೆ.



Click it and Unblock the Notifications



