Latest Updates
-
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ?
ಅಣ್ಣನ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಅಮೂಲ್ಯ ಮಿಂಚು
ಕನ್ನಡ ಚಿತ್ರರಂಗದಲ್ಲಿ ತನ್ನ ಹೆಸರನ್ನು ಭದ್ರವಾಗಿ ನೆಲೆಯೂರಿಸುವ ನಿಟ್ಟಿನಲ್ಲಿರುವ ಅಮೂಲ್ ಬೇಬಿ ಅಮೂಲ್ಯ ಸ್ಯಾಂಡಲ್‌ವುಡ್‌ನಲ್ಲಿ ತಮ್ಮನ್ನು ಅತಿ ಕಡಿಮೆ ಸಮಯದಲ್ಲಿ ಗುರುತಿಕೊಂಡಿದ್ದಾರೆ. ಬಾಲ ನಟಿಯಾಗಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿಕೊಂಡಿರುವ ಅಮೂಲ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚೆಲುವಿನ ಚಿತ್ತಾರ ಚಿತ್ರದಲ್ಲಿ. ಹಿಟ್ ಚಿತ್ರವಾಗಿ ಹೊಹೊಮ್ಮಿದ ಚೆಲುವಿನ ಚಿತ್ತಾರ ಅಮೂಲ್ಯಾಗೆ ಸಾಕಷ್ಟು ಅವಕಾಶಗಳನ್ನು ಒದಗಿಸಿತ್ತು.
ನಂತರ ಚೈತ್ರದ ಚಂದ್ರಮ, ಪ್ರೇಮಿಸಮ್, ನಾನು ನನ್ನ ಕನಸು, ಮನಸಾಲಜಿ, ಶ್ರಾವಣಿ ಸುಬ್ರಹ್ಮಣ್ಯಮ್, ಗಜಕೇಸರಿ ಮೊದಲಾದ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಅಂತೂ ಬಾಲ ಪ್ರತಿಭೆಯಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡು ಯಶಸ್ಸಿನ ಹೆಜ್ಜೆಯನ್ನಿಟ್ಟಿರುವ ಅಮೂಲ್ಯ ಇನ್ನಷ್ಟು ಹಿಟ್ ಚಿತ್ರಗಳನ್ನು ನೀಡುವಲ್ಲಿ ಸಮರ್ಥರೆನಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ತಮ್ಮ ಅಣ್ಣನ ವಿವಾಹ ಆರತಕ್ಷತೆ ಅದ್ಧೂರಿಯಾಗಿ ಕಾಣಿಸಿಕೊಂಡ ಅಮೂಲ್ಯಾ ನಿಜಕ್ಕೂ ಮನವನ್ನು ಆಕರ್ಷಿಸುವ ಸುಂದರಿಯಾಗಿದ್ದರು. ಸರಳವಾದ ಅಲಂಕಾರ ಭರ್ಜರಿ ಸೀರೆ, ಮಿರ ಮಿರನೇ ಮಿಂಚುವ ಆಭರಣಗಳು ಹೀಗೆ ಅಮೂಲ್ಯರ ಸೌಂದರ್ಯವನ್ನು ವರ್ಣಿಸಲು ಪದಗಳೇ ಮುಷ್ಕರ ಹೂಡುವಷ್ಟು ಸೌಂದರ್ಯವತಿಯಾಗಿ ಅವರು ಕಾಣಿಸಿಕೊಂಡಿದ್ದರು. ತಮ್ಮ ಅಣ್ಣ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಮಿಂಚಿರುವ ತಾರೆ ಅಮೂಲ್ಯ ಮತ್ತು ವಿವಾಹಕ್ಕೆ ಅತಿಥಿಗಳಾಗಿ ಆಗಮಿಸಿರುವ ಇತರ ನಟರ ಝಲಕ್ ಅನ್ನು ಇಲ್ಲಿ ನೋಡೋಣ.
ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಅಮೂಲ್ಯ
ತಮ್ಮ ಅಣ್ಣನ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಅಮೂಲ್ಯ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸರಳ ಅಲಂಕಾರ ಮತ್ತು ಆಕರ್ಷಕ ವಿನ್ಯಾಸದಿಂದ ಕೂಡಿರುವ ಸೀರೆಯನ್ನು ಅವರು ಈ ಸಮಾರಂಭದಲ್ಲಿ ಉಟ್ಟಿದ್ದು ನಿಜಕ್ಕೂ ಮನವನ್ನು ಕದಿಯುವ ನೋಟದೊಂದಿಗೆ ಮಿಂಚಿದ್ದಾರೆ. ಕೆಂಪು ಬಣ್ಣದ ಸೀರೆಗೆ ಚಿನ್ನದ ಅಂಚುಳ್ಳ ಈ ಸೀರೆಯಲ್ಲಿ ಐಸೂ ಬೆರಗುಗೊಳಿಸುವಂತಿದ್ದಾರೆ.
ಚಿತ್ರನಟ ಯಶ್ ಜೊತೆ
ಗಜಕೇಸರಿ ಚಿತ್ರದಲ್ಲಿ ನಾಯಕ ನಟನಾಗಿ ಅಮೂಲ್ಯಾ ಜೊತೆ ಕಾಣಿಸಿಕೊಂಡ ಯಶ್ ಅಮೂಲ್ಯ ಅಣ್ಣದ ವಿವಾಹ ಆರತಕ್ಷತೆಯಲ್ಲಿ ಉಪಸ್ಥಿತರಿದ್ದರು.
ಶಿವರಾಜ್‌ಕುಮಾರ್ ಜೊತೆ
ಅಣ್ಣನ ವಿವಾಹ ಆರತಕ್ಷತೆಯಲ್ಲಿ ಶಿವರಾಜ್‌ಕುಮಾರ್ ಜೊತೆಯಲ್ಲಿ ಅಮೂಲ್ಯ ತನ್ನ ಮೈಕಟ್ಟಿಗೆ ಕೆಂಪು ಸೀರೆ ಹೆಚ್ಚು ಒಪ್ಪುತ್ತಿತ್ತು. ಈ ದಿರಿಸಿಗೆ ಪೂರಕವಾಗಿ ಅವರು ತುಟಿಗಳಿಗೆ ಗಾಢ ಕೆಂಪು ಬಣ್ಣದ ಲಿಪ್ ಸ್ಟಿಕ್ ಹಾಗೂ ಮುಖಕ್ಕೆ ಪ್ರಖರ ಮೇಕಪ್ ಮಾಡಿಕೊಂಡಿದ್ದರು. ವಿದ್ಯುತ್ ದೀಪಗಳ ಪ್ರಖರ ಬೆಳಕಿನಲ್ಲಿ ಈ ಮೇಕಪ್ ಸುಂದರವಾಗಿ ಕಾಣುತ್ತಿತ್ತು. ಕಣ್ಣುಗಳ ಸುತ್ತ ಹೊಗೆಯಂತೆ ಮಾಡಿಕೊಂಡಿದ್ದ ಮೇಕಪ್ ವಿಶೇಷವಾಗಿತ್ತು.



Click it and Unblock the Notifications


