Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕೋರಲ್ ಮ್ಯಾಕ್ಸಿ ಧಿರಿಸಿನಲ್ಲಿ ಸುಂದರಿ ಆಲಿಯಾ ಭಟ್
''ಹಮ್ಟಿ ಶರ್ಮಾ ಕಿ ದುಲ್ಹನಿಯಾ'' ಚಿತ್ರದ ಪ್ರಮೋಶನ್‌ನಲ್ಲಿ ಆಲಿಯಾ ಭಟ್ ಸ್ಟೈಲ್ ಐಕಾನ್ ಆಗಿ ಮಿಂಚಿದ್ದಾರೆ. ಸಣ್ಣ ಡ್ರೆಸ್, ಸಣ್ಣ ಸ್ಕರ್ಟ್ ಮತ್ತು ಜೀನ್ಸ್ ಅನ್ನು ನಾವು ತುಂಬಾ ಇಷ್ಟಪಟ್ಟಿದ್ದು ಆಲಿಯಾ ಈ ಧಿರಿಸುಗಳಲ್ಲಿ ಸೊಗಸಾಗಿ ಕಾಣುತ್ತಿದ್ದಾರೆ. ಆಕೆ ಕಾಲಿನ ನೋವನ್ನು ಅನುಭವಿಸುತ್ತಿರುವುದರಿಂದ ಎಲ್ಲಾ ಪ್ರಕಾರದ ಚಪ್ಪಲಿಗಳನ್ನು ಆಲಿಯಾಗೆ ಧರಿಸಲಾಗುತ್ತಿಲ್ಲ ಆದರೂ ಸ್ಪೋರ್ಟಿ ಪಾದರಕ್ಷೆಗಳಲ್ಲಿ ಅವರು ತಮ್ಮ ಲುಕ್ ಅನ್ನು ಚೆನ್ನಾಗಿಯೇ ಕೊಂಡೊಯ್ದಿದ್ದಾರೆ.
ನೂಡಲ್ ಸ್ಟ್ರಾಪ್ ಅನ್ನು ಹೊಂದಿರುವ ಕೋರಲ್ ಬಣ್ಣದ ಮ್ಯಾಕ್ಸಿಯನ್ನು ಧರಿಸಿರುವ ಆಲಿಯಾ ತಮ್ಮ ಸ್ಟೈಲ್ ಅನ್ನು ಚೆನ್ನಾಗಿಯೇ ಪ್ರದರ್ಶಿಸಿದ್ದಾರೆ. ಮುಂಬೈನಲ್ಲಿ ನಡೆದ ತಮ್ಮ ಚಿತ್ರ ಪ್ರಚಾರ ಕಾರ್ಯಕ್ರಮದಲ್ಲಿ ಈ ಲಾಂಗ್ ಧಿರಿಸಿನಲ್ಲಿ ಆಲಿಯಾ ಮಂತ್ರಮುಗ್ಧಗೊಳಿಸುವಂತೆ ಕಾಣಿಸುತ್ತಿದ್ದರು. ಮೆಟಾಲಿಕ್ ಸ್ಯಾಂಡಲ್ ಅನ್ನು ಧರಿಸಿ ನಿರಾಭರಣ ಸುಂದರಿಯಾಗಿ ಸರಳ ಮೇಕಪ್‌ನಲ್ಲಿ ಕಣ್ಸೆಳೆದ ಷೋಡಶಿ ಆಲಿಯಾ ಸರಳವಾಗಿ ಸುಂದರಿಯಾಗಿದ್ದರು.
ಆಲಿಯಾರ ಇನ್ನಷ್ಟು ಸ್ಟೈಲಿಶ್ ಲುಕ್‌ಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನಾವು ನಿಮಗಾಗಿ ನೀಡುತ್ತಿದ್ದು ಸ್ಲೈಡ್‌ಗಳತ್ತ ನೋಟ ಹರಿಸಿ ನಿಮ್ಮ ಕಣ್ಣುಗಳನ್ನು ತುಂಬಿಕೊಳ್ಳಿ.
ಏಕ್ ವಿಲನ್ ಸಮಾರಂಭದಲ್ಲಿ ಗರ್ಭಿಣಿ ಜೆನಿಲಿಯಾ ಡಿಸೋಜಾ

ಕೋರಲ್ ಗೌನ್‌ನಲ್ಲಿ
ಈ ಪೂರ್ಣ ಉದ್ದದ ಗೌನ್‌ನಲ್ಲಿ ಬ್ರೈಟ್ ಬಣ್ಣದಲ್ಲಿ ಆಲಿಯಾರ ನೋಟ ತುಂಬಾ ಚೆನ್ನಾಗಿದೆ.

ಮೆಟಾಲಿಕ್ ಫ್ಲಾಟ್ಸ್
ತಮ್ಮ ಮ್ಯಾಕ್ಸಿ ಡ್ರೆಸ್‌ಗೆ ಸರಿಹೊಂದುವಂತಹ ಮೆಟಾಲಿಕ್ ಸ್ಯಾಂಡಲ್‌ಗಳನ್ನು ಧರಸಿರುವ ಆಲಿಯಾರ ನೋಟ ಮನಮೋಹಕವಾಗಿದೆ.

ಗೋಲ್ಡ್ ಮತ್ತು ಆರೇಂಜ್ ಹರಳು
ತಮ್ಮ ಆಭರಣಗಳನ್ನು ಸರಳವಾಗಿ ಇರಿಸಿಕೊಂಡಿರುವ ಆಲಿಯಾ ಮೆಟಾಲಿಕ್ ಮತ್ತು ಆರೇಂಜ್ ಹರಳಿನ ಬಳೆಗಳನ್ನು ಧರಿಸಿ ಇಲ್ಲಿ ಮಿಂಚಿದ್ದಾರೆ.

ಕೇಶಶೃಂಗಾರ
ತಮ್ಮ ಕೂದಲನ್ನು ಎರಡು ಭಾಗಗಳನ್ನಾಗಿ ಮಾಡಿಕೊಂಡು ಅರ್ಧಕ್ಕೆ ಕ್ಲಿಪ್‌ನಲ್ಲಿ ತಮ್ಮ ಕೇಶವನ್ನು ಬಂಧಿಸಿರುವ ಆಲಿಯಾ ನೀಟ್ ಲುಕ್ ಅನ್ನು ಬೀರಿದ್ದಾರೆ.

ಕೋರಲ್ ಲಿಪ್ಸ್
ತಮ್ಮ ಡ್ರೆಸ್‌ನೊಂದಿಗೆ ಮ್ಯಾಚ್ ಆಗಿರುವ ತುಟಿ ಬಣ್ಣವನ್ನು ಹಚ್ಚಿಕೊಂಡಿರುವ ಆಲಿಯಾ ಆಕರ್ಷಕ ತುಟಿ ಬಣ್ಣದಿಂದ ಎಲ್ಲರನ್ನೂ ಸೆಳೆದಿದ್ದಾರೆ.

ವರುಣ್ ಧವನ್‌ನೊಂದಿಗೆ
ಹಮ್ಟಿ ಶರ್ಮಾ ಕಿ ದುಲ್ಹಾನಿಯಾ ಚಿತ್ರದಲ್ಲಿ ತನ್ನ ಸಹನಟ ವರುಣ್ ಧವನ್‌ನೊಂದಿಗೆ ಆಲಿಯಾ ಭಟ್.



Click it and Unblock the Notifications
