Latest Updates
-
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ?
ಅನಾರ್ಕಲಿ ಧಿರಿಸಿನಲ್ಲಿ ಕಣ್ಮನ ಸೆಳೆದ ಐಶ್ವರ್ಯ ರೈ
ಬಾಲಿವುಡ್ ತಾರೆ ಐಶ್ವರ್ಯ ರೈ ಬಚ್ಚನ್ ಭುವನ ಸುಂದರಿಯಾಗಿ ನೋಡುಗರ ಕಣ್ಮನ ಸೆಳೆದರು. ಅವರು ಧರಿಸಿದ ಅನಾರ್ಕಲಿ ಧಿರಿಸಿನಲ್ಲಿ ಕಂಡುಬಂದ ಸುಂದರ ಗೋಲ್ಡನ್ ಕುಸುರಿ ನೋಡುಗರನ್ನು ಸ್ತಂಭೀಭೂತಗೊಳಿಸಿತು. ಸವ್ಯಸಾಚಿ ಅನಾರ್ಕಲಿ ಉಡುಗೆಯಲ್ಲಿ ಸಖತ್ ಆಗಿ ಮಿಂಚುತ್ತಿದ್ದರು
ಐಶ್ವರ್ಯಾ ರೈಗೂ ಅನಾರ್ಕಲಿ ಗೌನ್‌ಗೂ ಹತ್ತಿರದ ನಂಟು ಎಂದೇ ಹೇಳಬಹುದು. ಆರಾಧ್ಯನ ತಾಯಿಯಾದ ನಂತರ ಐಶ್ವರ್ಯಾ ದಪ್ಪಗಾದರು. ಈಗ ಮತ್ತೊಮ್ಮೆ ಐಶ್ವರ್ಯಾರನ್ನು ಅನಾರ್ಕಲಿ ಗೌನ್‌ನಲ್ಲಿ ನೋಡುವ ಭಾಗ್ಯ ನಮ್ಮದು. ಸವ್ಯಸಾಚಿ ವಿನ್ಯಾಸದ ಗೌನ್‌ನಲ್ಲಿ ಐಶ್ವರ್ಯಾ ದಂಗುಬಡಿಸುವಂತೆ ಕಂಡುಬಂದಿದ್ದರು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಸವ್ಯಸಾಚಿ ಅನಾರ್ಕಲಿ ಗೌನ್‌ನಲ್ಲಿ ಐಶ್ವರ್ಯಾ ಮೋಡಿ!

ಪ್ರತಿಯೊಂದು ಕಾರ್ಯಕ್ರಮದಲ್ಲೂ ಐಶ್ ಅನಾರ್ಕಲಿಯನ್ನು ಆಯ್ಕೆ ಮಾಡುತ್ತಿದ್ದು ಮಗಳು ಆರಾಧ್ಯರನ್ನು ಪ್ರಸವಿಸಿದ ನಂತರ ಅನಾರ್ಕಲಿ ಔಟ್‌ಫಿಟ್‌ಗೆ ಐಶ್ ತುಸು ಜಾಸ್ತಿ ಗಮನ ನೀಡುತ್ತಿದ್ದಾರೆ.
ತನ್ನ ಸೌಂದರ್ಯವನ್ನು ಇನ್ನಷ್ಟು ಕಾಂತಿಯುಕ್ತಗೊಳಿಸುವ ಕಲೆ ಐಶ್‌ಗೆ ಕರಗತವಾಗಿರುವುದು ಒಂದು ವಿಶೇಷವೇ ಸರಿ..! ಪ್ರತಿಯೊಂದು ಉಡುಗೆಯು ಅವರ ಧರಿಸುವ ಶೈಲಿಯಿಂದ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.
ಮುಕ್ತವಾಗಿ ಇಳಿಬಿಟ್ಟಂತೆ ಕಾಣುವ ಅನಾರ್ಕಲಿ ಗೌನ್ ವಿನ್ಯಾಸಕ ಸವ್ಯಸಾಚಿಯ ಪ್ರತಿಭೆಗೆ ಹಿಡಿದ ಕೈಗನ್ನಡಿ. ಪೂರ್ತಿ ಅನಾರ್ಕಲಿ ಧಿರಿಸು ಚಿನ್ನದ ಎಳೆಯಿಂದ ಮಾಡಲಾಗಿದ್ದು ಭಾರಿ ಎಂಬ್ರಾಯಿಡರಿ ಕೆಲಸ ಧಿರಿಸಿಗೆ ಹೊಸ ರೂಪವನ್ನು ನೀಡಿದೆ.
ಉಡುಗೆಯ ಮುಂಭಾಗದಲ್ಲಿ ಫಿಶ್ ಸ್ಕೇಲ್ ವಿನ್ಯಾಸವನ್ನು ಮಾಡಲಾಗಿದ್ದು ಚಮತ್ಕಾರಿ ನೋಟವನ್ನು ಪ್ರದರ್ಶಿಸಿದೆ. ಈ ಗೋಲ್ಡನ್ ಅನಾರ್ಕಲಿಯ ಅಂಚನ್ನು ಸ್ಟೋನ್‌ಗಳಿಂದ ಅಲಂಕೃತಗೊಳಿಸಲಾಗಿದ್ದು ಹೆಚ್ಚಿನ ಗೋಲ್ಡನ್ ಎಂಬ್ರಾಯಿಡರಿ ಉಡುಗೆಯನ್ನು ಭಾರವಾಗಿಸಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಕಪ್ಪು ಧಿರಿಸಿನಲ್ಲಿ ಕಣ್ಮನ ಸೆಳೆದ ಸುಂದರಿ ಐಶ್ವರ್ಯ
ಈ ನೋಟದೊಂದಿಗೆ ಸ್ಟನ್ನಿಂಗ್ ಐಶ್ವರ್ಯ ಬೋಲ್ಡ್ ಆಗಿ ಕಂಡುಬರುತ್ತಿದ್ದಾರೆ. ಎಲ್ಲರ ನೋಟ ಆಕೆಯ ಮೇಲಿರುವಂತಹ ಮೇಕಪ್ ಕಡೆ ನೆಟ್ಟಿದ್ದು, ಅವಳ ಮೇಕಪ್ನ ಕೈಚಳಕ್ಕೆ ಸಾಕ್ಷಿ ಆಯಿತು .
ಸವ್ಯಸಾಚಿ ವಿನ್ಯಾಸದ ಗೋಲ್ಡನ್ ಅನಾರ್ಕಲಿ ಉಡುಗೆಯಲ್ಲಿ ಸುಂದರವಾಗಿ ಕಂಡುಬರುತ್ತಿರುವ ಐಶ್ವರ್ಯ ರೈ ಬಚ್ಚನ್ ಬಗ್ಗೆ ನೀವೇನು ಆಲೋಚಿಸುತ್ತಿರುವಿರಿ? ಅವರ ಉಡುಗೆಯನ್ನು ನೀವು ಮೆಚ್ಚಿಕೊಂಡಿರುವಿರಾ?



Click it and Unblock the Notifications
