Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕಪ್ಪು ಬಣ್ಣದ ದಿರಿಸಿನಲ್ಲಿ ಕಣ್ಮನ ಸೆಳೆದ ಐಶ್ವರ್ಯ ರೈ
ಇತ್ತೀಚೆಗೆ ಐಶ್ವರ್ಯ ರೈ ಬಚ್ಚನ್ ಸ್ಲೈಲ್ ಟ್ರೈನ್ ಫೌಂಡೇಶನ್ ಈವೆಂಟಿನಲ್ಲಿ ಕಾಣಸಿಕ್ಕರು. ಈ ಸಮಾರಂಭದಲ್ಲಿ ಈ ಮಾಜಿ ಭುವನ ಸುಂದರಿಯು ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣ ಸಿಕ್ಕರು. ಇದನ್ನು ಯಾವುದೇ ವಿನ್ಯಾಸಕಾರರು ವಿನ್ಯಾಸ ಮಾಡಲಿಲ್ಲವಾದರು, ಅದು ತನ್ನದೇ ಆದ ಮೆರಗನ್ನು ಹೊಂದಿತ್ತು ಹಾಗು ಆಕೆಗೆ ಇದು ವಿಶೇಷ ಸೊಬಗನ್ನು ಸಹ ಒದಗಿಸಿತ್ತು. ಇದನ್ನು ನೋಡಿದವರಿಗೆ ಅನಿಸುತ್ತಿದ್ದುದು ಏನೆಂದರೆ ಐಶ್ವರ್ಯ ರೈ ಬಚ್ಚನ್ ಕಪ್ಪು ಬಣ್ಣದ ಉಡುಗೆಗೆ ಮತ್ತೆ ಮನಸೋತಿದ್ದಾರೆ ಎಂದು ಅನಿಸುತ್ತಿತ್ತು.
ಏಕೆಂದರೆ ನಾವು ಆಕೆಯನ್ನು ಬಹಳ ಸಲ ಕಪ್ಪು ಬಣ್ಣದ ದಿರಿಸಿನಲ್ಲಿ ನೋಡಿದ್ದೇವೆ. ಆಕೆ ಯಾವಾಗಲು ಆ ಬಣ್ಣದ ಉಡುಗೆಗಳಿಗೆ ಒಪ್ಪುವ ಆಭರಣಗಳನ್ನು ಸಹ ಧರಿಸಿರುತ್ತಾಳೆ. ಆದ್ದರಿಂದ ಸ್ಲೈಲ್ ಟ್ರೈನ್ ಫೌಂಡೇಶನ್ ಸಮಾರಂಭದಲ್ಲಿ ಈಕೆ ಮತ್ತೊಮ್ಮೆ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು ನಮಗೇನು ಅಚ್ಚರಿ ಎನಿಸಲಿಲ್ಲ.
ಐಶ್ವರ್ಯ ರೈ ತೊಟ್ಟಿದ್ದ ಉಡುಗೆಯು ಹೊಳಪಿನಿಂದ ಕೂಡಿತ್ತು. ಇದು ಉದ್ದಕ್ಕೆ ಇದ್ದು, ಮುಕ್ತವಾಗಿ ಇಳಿ ಬಿಡಲಾಗಿತ್ತು. ಇದಕ್ಕೆ ಒಪ್ಪುವಂತಹ ಫ್ಯಾಷನೇಬರ್ ಆಕ್ಸೆಸರಿಗಳನ್ನು ಆಕೆ ತೊಟ್ಟುಕೊಂಡಿದ್ದಳು, ಜೊತೆಗೆ ಆಕೆಯ ಮಾಧಕ ತುಟಿಗಳಿಗೆ ಮತ್ತಷ್ಟು ರಂಗು ತುಂಬಿದ ಕೆಂಪು ಲಿಪ್‍ಸ್ಟಿಕ್. ಬನ್ನಿ ಈ ಭುವನ ಸುಂದರಿಯ ಕುರಿತು ಒಂದು ನೋಟ ಹರಿಸೋಣ: ಏಶಿಯಾವಿಷನ್ 2014: ಕಣ್ಮನ ಸೆಳೆದ ಐಶ್ವರ್ಯಾ, ಕರೀನಾ ಕಪೂರ್
ಫ್ರೀ ಫ್ಲೋಯಿಂಗ್ ಗೌನ್

ಐಶ್ವರ್ಯ ರೈ ಕಪ್ಪು ಬಣ್ಣದ ಗೌನಿನಲ್ಲಿ ಮನಮೋಹಕವಾಗಿ ಕಾಣಿಸುತ್ತಿದ್ದಳು. ಆಕೆಯು ಈ ಉಡುಗೆಯನ್ನು ತುಂಬಾ ಸಮತೋಲನದಿಂದ ಕಾಪಾಡಿಕೊಂಡಿದ್ದಳು.
ಸ್ಮೈಲ್ ಟ್ರೈನ್ ಫೌಂಡೇಶನ್ ಸಮಾರಂಭದಲ್ಲಿ ಐಶ್ವರ್ಯ ರೈ
ಸ್ಮೈಲ್ ಟ್ರೈನ್ ಫೌಂಡೇಶನ್ ಸಮಾರಂಭದಲ್ಲಿ ಐಶ್ವರ್ಯ ರೈ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಳು. ಆಕೆಯ ನಗು, ಸೌಂದರ್ಯವು ಎಲ್ಲರನ್ನು ಸೆಳೆಯುವ ಸೂಜಿಗಲ್ಲಾಗಿತ್ತು.
ಐಶ್ವರ್ಯ ರೈಯ ಕೆಂಪು ತುಟಿಗಳು
ಸ್ಮೈಲ್ ಟ್ರೈನ್ ಫೌಂಡೇಶನ್ ಸಮಾರಂಭದಲ್ಲಿ ಐಶ್ವರ್ಯ ರೈಯ ಕೆಂಪು ಲಿಪ್‍ಸ್ಟಿಕ್ ಹಚ್ಚಿದ ತುಟಿಗಳು ಎದ್ದು ಕಾಣುವ ಅಂಶವಾಗಿತ್ತು. ಆಕೆಯು ಹೊಳೆಯುವ ಕೆಂಪು ಬಣ್ಣವನ್ನು ಆಯ್ಕೆ ಮಾಡಿಕೊಂಡಿದ್ದಳು. ಇದು ಆಕೆಯನ್ನು ಸ್ಟೈಲಿಷ್ ಆಗಿ ತೋರುತ್ತಿತ್ತು.
ಎಲ್ಲಾ ಕೋನಗಳಿಂದ
ಐಶ್ವರ್ಯ ಎಲ್ಲಾ ಕೋನಗಳಿಂದ ಮನಮೋಹಕವಾಗಿ ಕಾಣುತ್ತಿದ್ದಳು. ಕಪ್ಪು ಉಡುಗೆಯು ಆಕೆಯ ಅಂದವನ್ನು ದ್ವಿಗುಣಗೊಳಿಸಿತ್ತು.
ಐಶ್‍ನ ಹೇರ್ ಸ್ಟೈಲ್
ಈ ಸಮಾರಂಭದಲ್ಲಿ ಆಕೆಯು ತನ್ನ ಟ್ರೇಡ್‍ಮಾರ್ಕ್ ಎನಿಸಿಕೊಂಡಿದ್ದ ಹೇರ್‌ಸ್ಟೈಲ್‍ನಲ್ಲಿ ಕಾಣಿಸಿಕೊಂಡಿದ್ದಳು. ಆಕೆಯು ತನ್ನ ಕೂದಲುಗಳನ್ನು ಭುಜದ ಮೇಲೆ ಇಳಿಬಿಟ್ಟಿದ್ದಳು. ಇದು ಆಕೆಗೆ ಒಪ್ಪುವಂತೆ ಇತ್ತು.
ವಜ್ರಗಳು ಆಕೆಗೆ ಅಚ್ಚು ಮೆಚ್ಚು
ವಜ್ರಗಳು ಹೆಣ್ಣಿನ ಅಚ್ಚು ಮೆಚ್ಚಿನ ಗೆಳತಿ. ಐಶ್ವರ್ಯ ಈ ಕಪ್ಪು ಬಟ್ಟೆಗೆ ಒಪ್ಪುವಂತಹ ವಜ್ರಗಳನ್ನು ಧರಿಸಿದ್ದಳು. ಆಕೆಯ ಮುಂಗೈಗೆ ಒಪ್ಪುವಂತಹ ಡೈಮಂಡ್ ಬ್ರೇಸ್‍ಲೇಟ್ ಹೊಳಪಿನಿಂದ ಎಲ್ಲರನ್ನು ಆಕರ್ಷಿಸುತ್ತಿತ್ತು.
ಸರಳವಾದ ಉಡುಗೆ
ಭುವನ ಸುಂದರಿ ಸರಳವಾದ ಉಡುಗೆಯನ್ನು ತೊಟ್ಟರು, ಭುವನ ಸುಂದರಿಯೇ. ಇದು ಆಕೆಯ ಮುಖಕ್ಕೆ ಒಪ್ಪುವಂತೆ, ಉದ್ದೇಶ ಪೂರ್ವಕವಾಗಿ ಹೇಳಿ ಮಾಡಿಸಿದಂತಿತ್ತು.



Click it and Unblock the Notifications






