Latest Updates
-
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ!
ಏಶಿಯಾವಿಷನ್ 2014: ಕಣ್ಮನ ಸೆಳೆದ ಐಶ್ವರ್ಯಾ, ಕರೀನಾ ಕಪೂರ್
ಇತ್ತೀಚೆಗೆ ದುಬೈಯಲ್ಲಿ ಜರುಗಿದ ಏಶಿಯಾವಿಷನ್ 2014 ಪ್ರಶಸ್ತಿ ಪ್ರದಾನ ಸಮಾರಂಭ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಇದಕ್ಕೆ ನೇರವಾಗಿ ಕಾರಣರಾದವರೆಂದರೆ ಪ್ರಶಸ್ತಿ ಪಡೆದವರಲ್ಲ, ಬದಲಿಗೆ ಅಲ್ಲಿನ ಕೆಂಪು ರತ್ನಗಂಬಳಿಯ ಮೇಲೆ ವೈಯಾರದಿಂದ ನಡೆದ ಭಾರತದ ಇಬ್ಬರು ಸುರಸುಂದರಿಯರಾದ ಐಶ್ವರ್ಯಾ ರೈ ಮತ್ತು ಕರೀನಾ ಕಪೂರ್. ಇವರಿಬ್ಬರ ಉಪಸ್ಥಿತಿ ಆಗಮಿಸಿದ್ದ ಜನತೆಯನ್ನು ಹುಚ್ಚೆಬ್ಬಿಸಿತ್ತು. ಇಬ್ಬರೂ ತೊಟ್ಟಿದ್ದ ಉಡುಗೆಗಳಂತೂ ಆ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರವಾಗಿತ್ತು.
ಪರಿಣಾಮವಾಗಿ ಐಶ್ವರ್ಯಾ ರೈ ಯವರಿಗೆ ಕಾರ್ಯಕ್ರಮದಲ್ಲಿ ಅತ್ಯುತ್ತಮವಾದ ಉಡುಗೆ ತೊಟ್ಟುಕೊಂಡ ವ್ಯಕ್ತಿ ಎಂಬ ಪ್ರಶಸ್ತಿ ದೊರಕಿತು. ಜೊತೆಯಲ್ಲಿದ್ದ ಕರೀನಾ ಕಪೂರ್ ರವರೂ ಈ ಪ್ರಶಸ್ತಿಗಾಗಿ ತಮ್ಮ ಅತ್ಯುತ್ತಮ ದಿರಿಸಿನಲ್ಲಿ ಕಾಣಿಸಿಕೊಂಡಿದ್ದರು. ಐರ್ಶ್ವರ್ಯಾರವರು ಅಬುಜಾನಿ ಮತ್ತು ಸಂದೀಪ್ ಖೋಸ್ಲಾರವರ ಕೆಂಪು ಅನಾರ್ಕಲಿ ಉಡುಗೆಯನ್ನು ಆಯ್ದುಕೊಂಡಿದ್ದರೆ ಕರೀನಾ ಕಪೂರ್ ರವರು ವಿಕ್ರಂ ಫಡ್ನಿಸ್ ರವರ ಸೀರೆಯನ್ನು ಆಯ್ದುಕೊಂಡಿದ್ದರು.
ದಿನದ ಕೊನೆಯಲ್ಲಿ ಇಬ್ಬರಲ್ಲಿ ಅತ್ಯುತ್ತಮ ಯಾರು ಎಂಬುದನ್ನು ಹೇಗೆ ಅಳೆಯುತ್ತಾರೆ ಎಂಬ ಕುತೂಹಲವನ್ನು ಜನತೆ ಕಾಯ್ದುಕೊಂಡಿದ್ದರು. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಇಬ್ಬರು ಹೇಗೆ ಜನಮನವನ್ನು ತಮ್ಮೆಡೆಗೆ ಸೆಳೆದುಕೊಂಡರೆಂಬುದನ್ನು ಅವಲೋಕಿಸೋಣ. ಗಾಢ ಕಪ್ಪು ಬಣ್ಣದ ಉಡುಗೆಯಲ್ಲಿ ಕಣ್ಮನ ಸೆಳೆದ ಕರೀನಾ ಕಪೂರ್

ಅಬುಜಾನಿ ಮತ್ತು ಸಂದೀಪ್ ಖೋಸ್ಲಾರ ಉಡುಗೆಯಲ್ಲಿ ಐಶ್ವರ್ಯಾ ರೈ
ಈ ಜೋಡಿ ವಿನ್ಯಾಸಗೊಳಿಸಿದ ಕೆಂಪು ಅನಾರ್ಕಲಿ ಉಡುಗೆ ಅತ್ಯಂತ ಪ್ರಖರವಾಗಿದ್ದು ನೋಡುವವರ ಕಣ್ಣು ಕುಕ್ಕುವಂತಿತ್ತು. ಈ ಕಾರ್ಯಕ್ರಮಕ್ಕೆ ಅವರ ದಿರಿಸು ಹೇಳಿ ಮಾಡಿಸಿದಂತಿತ್ತು.

ಕೆಂಪು ದಿರಿಸಿನಲ್ಲಿ ವೃದ್ದಿಸಿದ ಅವರ ಸೌಂದರ್ಯ
ಐಶ್ವರ್ಯಾರ ಮೈಕಟ್ಟಿಗೆ ಕೆಂಪು ಉಡುಗೆಗಳು ಹೆಚ್ಚು ಒಪ್ಪುತ್ತವೆ. ಈ ವಿಷಯವನ್ನು ವಾಸ್ತವಕ್ಕಿಳಿಸಿದ ಅಬುಜಾನಿ ಮತ್ತು ಸಂದೀಪ್ ಖೋಸ್ಲಾ ಜೋಡಿ ಕೆಂಪು ಬಟ್ಟೆಯಲ್ಲಿ ಅತ್ಯಂತ ನವಿರಾದ ಕುಸುರಿ ಕೆಲಸ ಮಾಡಿದ ಅನಾರ್ಕಲಿ ಉಡುಗೆಯನ್ನು ವಿನ್ಯಾಸಗೊಳಿಸಿದರು. ಈ ಉಡುಗೆಯ ಅತ್ಯಂತ ಗಮನಸೆಳೆಯುವ ಅಂಶವೆಂದರೆ ಕುತ್ತಿಗೆಯ ಭಾಗದ ನಾಜೂಕಿನ ಕೆಲಸ.

ಕೆಂಪು ದಿರಿಸಿನಲ್ಲಿ ಸಂಗೀತಕ್ಕೆ ಹೆಜ್ಜೆ ಹಾಕಿದ ಐಶ್ವರ್ಯಾ
ಪ್ರಶಸ್ತಿ ಸಮಾರಂಭದ ನಡುವೆ ಸಂಗೀತದ ತಾಳಕ್ಕೆ ಅವರು ಸಂತೋಷದಿಂದ ಹೆಜ್ಜೆ ಹಾಕುತ್ತಿದ್ದರೆ ಅವರ ದಿರಿಸು ಅದಕ್ಕೆ ತಕ್ಕನಾಗಿ ಬಳುಕುತ್ತಿದ್ದು ಅವರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿತ್ತು. ಈ ದಿರಿಸಿಗೆ ಪೂರಕವಾಗಿ ಅವರು ತುಟಿಗಳಿಗೆ ಗಾಢ ಕೆಂಪು ಬಣ್ಣದ ಲಿಪ್ ಸ್ಟಿಕ್ ಹಾಗೂ ಮುಖಕ್ಕೆ ಪ್ರಖರ ಮೇಕಪ್ ಮಾಡಿಕೊಂಡಿದ್ದರು. ವಿದ್ಯುತ್ ದೀಪಗಳ ಪ್ರಖರ ಬೆಳಕಿನಲ್ಲಿ ಈ ಮೇಕಪ್ ಸುಂದರವಾಗಿ ಕಾಣುತ್ತಿತ್ತು. ಕಣ್ಣುಗಳ ಸುತ್ತ ಹೊಗೆಯಂತೆ ಮಾಡಿಕೊಂಡಿದ್ದ ಮೇಕಪ್ ವಿಶೇಷವಾಗಿತ್ತು.

ಐಶ್ವರ್ಯಾರೊಂದಿಗೆ ಜೊತೆಯಾದ ಅವರ ಪುತ್ರಿ ಆರಾಧ್ಯ
ಈ ಪ್ರಶಸ್ತಿ ಸಮಾರಂಭದಲ್ಲಿ ಐಶ್ವರ್ಯಾರೊಂದಿಗೆ ಅವರ ಪುತ್ರಿ ಆರಾಧ್ಯ ಬಚ್ಚನ್ ಸಹಾ ಭಾಗಿಯಾಗಿ ಕಾರ್ಯಕ್ರಮದ ಕಳೆ ಹೆಚ್ಚಿಸಿದರು. ತಾಯಿ ಕೆಂಪು ದಿರಿಸಿನಲ್ಲಿ ಶೋಭಿಸಿದರೆ ಅವರ ತೆಕ್ಕೆಯಲ್ಲಿದ್ದ ಆರಾಧ್ಯ ಅತಿ ಮುದ್ದಾಗಿ ಕಂಡುಬಂದರು.

ವಿಕ್ರಂ ಫಡ್ನಿಸ್ ರವರು ವಿನ್ಯಾಸಗೊಳಿಸಿದ ಸೀರೆ ಉಟ್ಟಿದ್ದ ಕರೀನಾ ಕಪೂರ್
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕರೀನಾ ಕಪೂರ್ ವಿಕ್ರಂ ಫಡ್ನಿಸ್ ರವರು ವಿನ್ಯಾಸಗೊಳಿಸಿದ ಸೀರೆ ಉಟ್ಟಿದ್ದರು. ಬಿಳಿಯ ಮೈಗೆ ಕಪ್ಪು ರವಿಕೆ ಹಾಗೂ ಸಾಕಷ್ಟು ಫಳಫಳನೆ ಹೊಳೆಯುವ ಚಿನ್ನದ ಹೂವುಗಳು ಅವರ ಸೌಂದರ್ಯವನ್ನು ಹೆಚ್ಚಿಸಿತ್ತು.

ಕರೀನಾ ಕಪೂರ್ ಅವರ ನೆಟ್ ಸೀರೆ
ಈ ಸೀರೆ ಸರಿಸುಮಾರು ಪಾರದರ್ಶಕವಾದ ಅತ್ಯಂತ ತೆಳುವಾದ ಬಲೆಯಂತಿತ್ತು. ಅಂಚುಗಳಿಗೆ ಚಿನ್ನದ ಬಣ್ಣದ ಸೂಕ್ಷ್ಮ ಕುಸುರಿಯನ್ನು ಮಾಡಲಾಗಿತ್ತು. ಸೆರಗು ಹಾಗೂ ನೆರಿಗೆಗಳಲ್ಲಿ ಚಿನ್ನದ ಬಣ್ಣದ ಚಿಕ್ಕ ಚಿಕ್ಕ ಹೂವುಗಳನ್ನು ಕುಸುರಿ ಮಾಡಲಾಗಿದ್ದು ಅಂಚಿನ ಪ್ರಖರ ಕುಸುರಿ ಕೆಲಸಕ್ಕೆ ಪೂರಕವಾಗಿತ್ತು.

ಕಾರ್ಯಕ್ರಮವೊಂದನ್ನು ಪ್ರಸ್ತುತಪಡಿಸಿದ ಕರೀನಾ ಕಪೂರ್
ಕಾರ್ಯಕ್ರಮದಲ್ಲಿ ಮನಃಪೂರ್ತಿಯಾಗಿ ಭಾಗವಹಿಸಿದ ಕರೀನಾ ಕಪೂರ್ ಸಂಗೀತದ ಕೆಲವು ತುಣುಕುಗಳಿಗೆ ಹೆಜ್ಜೆ ಹಾಕಿ ನೆರೆದವರ ಮನ ಗೆದ್ದರು.

ತಮ್ಮ ಎಂದಿನ ಉಡುಗೆಗಳಿಗಿಂತ ಭಿನ್ನವಾಗಿ ಮಿಂಚಿದ ಕರೀನಾ ಕಪೂರ್
ಅವರ ಬಿಳಿಯ ಬಣ್ಣದ ಸೀರೆಗೆ ಪೂರಕವಾಗಿ ಅವರ ಕಿವಿಯಲ್ಲಿದ್ದ ಭಾರೀ ಬೆಳ್ಳಿಯ ಆಭರಣಗಳು ಉತ್ತಮ ಜೋಡಿಯಾಗಿತ್ತು. ಅವರ ಮುಖದ ಮೇಕಪ್ ಸಹಾ ಈ ಉಡುಗೆಗೆ ಪೂರಕವಾಗಿತ್ತು. ಕೊಂಚ ಮಂದವಾದ ಬಣ್ಣದ ತುಟಿಗಳ ರಂಗು, ಈ ಸೀರೆಗನುಗುಣವಾಗಿ ಹಣೆಯಲ್ಲಿ ಬೊಟ್ಟು ಮತ್ತು ಕೆನ್ನೆಯಲ್ಲಿ ಅತ್ಯಂತ ಪ್ರಖರವಲ್ಲದ ಮೇಕಪ್ ಅವರ ಸೌಂದರ್ಯವನ್ನು ಇನ್ನಿಲ್ಲದಂತೆ ವೃದ್ದಿಸಿತ್ತು.



Click it and Unblock the Notifications