Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ನಾಚ್ ಬಲಿಯೆದಲ್ಲಿ ಶಿಲ್ಪ ಶೆಟ್ಟಿ
ಶಿಲ್ಪ ಶೆಟ್ಟಿಗೆ ಜನರನ್ನು ತನ್ನತ್ತ ತಿರುಗುವಂತೆ ಮಾಡುವ ಕಲೆಗಾರಿಕೆಯಿದೆ. ನಾಚ್ ಬಲಿಯೆ ಸೀಸನ್ 6ರಲ್ಲಿ ಈಕೆ ತನ್ನ ಅಲಂಕಾರದಿಂದ ಆ ಶೋನಲ್ಲಿದ್ದವರ ಗಮನ ತನ್ನತ್ತ ಸೆಳೆದಳು. ಶಿವಾನ್ ಮತ್ತು ನರೇಶ್ ವಿನ್ಯಾಸಗೊಳಿಸಿದ ಸೀರೆ ಮತ್ತು ಅದಕ್ಕೊಪ್ಪುವಂತಿದ್ದ ಆಕೆಯ ಅಲಂಕಾರ ನೋಡಲು ಚಿತ್ತಾಕರ್ಷಕವಾಗಿತ್ತು.
ಶಿಲ್ಪ ಉಟ್ಟಿದ್ದ ಸೀರೆಯ ಬಣ್ಣ ಗಾಢವಾಗಿತ್ತು. ಸೀರೆಯಲ್ಲಿನ ಬಣ್ಣಗಳ ಕಾಂಬಿನೇಷನ್ ವಿಶಿಷ್ಟವಾಗಿತ್ತು. ಪಿಂಕ್ ಮತ್ತು ಬ್ಲಾಕ್ ಬಣ್ಣ ಮತ್ತು ಚಿಕ್ಕ ಅಂಚಿದ್ದ ಈ ಸೀರೆಯ ಮೇಲೆ ಹೂವಿನ ಪ್ರಿಂಟ್ ಗಳಿದ್ದವು.
ಈ ಸೀರೆಯ ಶಿಲ್ಪಳ ಬಾಗು ಬಳುಕಿನ ಸೌಂದರ್ಯವನ್ನು ಎತ್ತಿತೋರುತ್ತಿತ್ತು. ಈ ಬಾಲಿವುಡ್ ಸುಂದರಿ ಎಲ್ಲ ಸಮಾರಂಭಗಳಿಗೂ ಈ ರೀತಿಯ ಗಾಢ ಬಣ್ಣದ ಉಡುಗೆಗಳನ್ನು ತೊಡುವುದಲ್ಲದೆ ಅವುಗಳನ್ನು ಬಹಳ ಸ್ಟೈಲಿಶ್ ಆಗಿ ಕಾಣಿಸುವಲ್ಲಿ ಸದಾ ಗೆಲ್ಲುತ್ತಾಳೆ.
ನಾಚ್ ಬಲಿಯೆ ಸೀಸನ್ 6ರಲ್ಲಿ ಎಲ್ಲರ ಕಣ್ಣು ಶಿಲ್ಪಳತ್ತಲೇ ನೆಟ್ಟಿದ್ದವು. ಚೆರ್ರಿ ಲಿಪ್ ಸ್ಟಿಕ್ ಹಚ್ಚಿದ್ದ ತುಟಿಗಳ ನಗು ಮನಮೋಹಕವಾಗಿತ್ತು.
ನಾಚ್ ಬಲಿಯೆ ಸೀಸನ್ 6ರಲ್ಲಿ ಶಿಲ್ಪ ಕಂಡದ್ದು ಹೀಗೆ:

ಶಿವಾನ್ ಮತ್ತು ನರೇಶ್ ಸೀರೆ
ಶಿವಾನ್ ಮತ್ತು ನರೇಶ್ ವಿನ್ಯಾಸಗೊಳಿಸಿದ್ದ ಸೀರೆಯಲ್ಲಿ ಶಿಲ್ಪ ಶೆಟ್ಟಿ ಪ್ರೇಕ್ಷಕರ ಮನಸೂರೆಗೊಂಡರು.

ಆಕೆ ತುಟಿಯರಂಗು
ಆಕೆಯ ತುಟಿಗಳ ಸೌಂದರ್ಯ ಎಲ್ಲರ ಗಮನಸೆಳೆಯಿತು. ಚೆರ್ರಿ ಮ್ಯಾಟೆ ಲಿಪ್ ಸ್ಟಿಕ್ ಆಕೆಯ ಅಲಂಕಾರಕ್ಕೆ ಒಪ್ಪುವಂತಿತ್ತು.

ಸುಂದರ ಕಣ್ಣುಗಳು
ಮಾದಕ ಕಂಗಳ ಚೆಲುವೆ ಎಂದೂ ಕೂಡ ಅಭಿಮಾನಗಳನ್ನು ಕಣ್ಣಿನಿಂದ ಸೆಳೆಯದೆ ಬಿಟ್ಟಿಲ್ಲ. ಸಾಂಪ್ರದಾಯಿಕ ರೀತಿಯಲ್ಲಿ ಕಣ್ಣಿಗೆ ಅಲಂಕಾರ ಮಾಡಿಕೊಂಡಿದ್ದಳು.

ನೈಲ್ ಆರ್ಟ್
ಶಿಲ್ಪ ಶೆಟ್ಟಿ ತನ್ನ ಸೀರೆಗೆ ಒಪ್ಪುವಂತೆ ನಿಯಾನ್ ನೈಲ್ ಪಾಲಿಷ್ ಹಚ್ಚಿದ್ದಳು. ನೋಡಲು ಇದು ಆಕರ್ಷಕವಾಗಿತ್ತು.

ಚೋಕರ್ ಚೈನ್
ಅಲಂಕಾರ ಪರಿಪೂರ್ಣವಾಗುವುದೆ ಅದಕ್ಕೊಪ್ಪುವಂತಹ ಆಭರಣಗಳನ್ನು ತೊಟ್ಟಾಗ. ಶಿಲ್ಪ ಕಪ್ಪು ಮತ್ತು ಸಿಲ್ವರ್ ಬಣ್ಣದ ಚೋಕರ್ ಚೈನ್ ಧರಿಸಿದ್ದಳು.

ಶೂಸ್
ಹೊಳೆಯುತ್ತಿದ್ದ ಕಪ್ಪು ಚಪ್ಪಲಿಗಳನ್ನು ಧರಿಸಿದ್ದಳು. ಬೋಲ್ಡ್ ಸ್ಕೈಗೆ ಅನ್ನಿಸಿದ್ದು ಶಿಲ್ಪ ಇದರ ಬದಲು ಬೇರೆ ರೀತಿಯ ಪಾದರಕ್ಷೆಗಳನ್ನು ತೊಡಬಹುದಿತ್ತು ಎಂದು.

ಸರಳ ಮೇಕಪ್
ಸರಳವಾಗಿ ಮೇಕಪ್ ಮಾಡಿಕೊಳ್ಳುವುದು ಯಾವಾಗಲೂ ನಿಮ್ಮ ಅಂದವನ್ನು ಹೆಚ್ಚಿಸುತ್ತದೆ. ಶಿಲ್ಪ ಕೂಡ ತನ್ನ ಸ್ನಿಗ್ಧ ಸೌಂದರ್ಯವನ್ನು ಹೀಗೆ ಅಲಂಕರಿಸಿದ್ದು ಎಲ್ಲರನ್ನೂ ಸೆಳೆಯಿತು.

ಕೇಶ ವಿನ್ಯಾಸ
ಬನ್ ಹೇರ್ ಸ್ಟೈಲ್ ಶಿಲ್ಫ ಶೆಟ್ಟಿಗೆ ದಕ್ಷಿಣ ಭಾರತೀಯ ಸಾಂಪ್ರದಾಯಿಕ ಲುಕ್ ತಂದುಕೊಟ್ಟಿತ್ತು. ನಾಚ್ ಬಲಿಯೆದ ವೇದಿಕೆಯಲ್ಲಿ ಆಕೆ ಮಿಂಚನ್ನು ಹರಿಸಿದಳು.



Click it and Unblock the Notifications
