Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಐಆರ್ ಎಫ್ ಡಬ್ಲ್ಯೂ ನಲ್ಲಿ ಪ್ರಿಯ ಕತಾರಿಯ
ನಿಮಗೆ ಹೊಸ ಹೊಸ ವಿನ್ಯಾಸದ ಬಟ್ಟೆಗಳಲ್ಲಿ ಆಸಕ್ತಿಯಿದ್ದಲ್ಲಿ ಖಂಡಿತವಾಗಿಯೂ ಐಆರ್ ಎಫ್ ಡಬ್ಲ್ಯೂನಲ್ಲಿ ಪ್ರಿಯ ಕತಾರಿಯ ವಿನ್ಯಾಸಗೊಳಿಸಿ ಪ್ರದರ್ಶಿಸಿದ ಬಟ್ಟೆಗಳನ್ನು ಇಷ್ಟಪಡುವಿರಿ. ಈಕೆ ಇಂಡಿಯಾ ರೆಸ್ಟ್ರೊವೇರ್ ಫ್ಯಾಷನ್ ವೀಕಿನ ಮೊದಲ ದಿನ ತನ್ನ ವಿನ್ಯಾಸದ ವಸ್ತ್ರ ಸಂಗ್ರಹವನ್ನು ಪ್ರದರ್ಶಿಸಿದಳು.
ಮುಂಬೈನಲ್ಲಿ ನಡೆದ ಈ ಪ್ರದರ್ಶನದ ವಿವರಗಳನ್ನು ಬೋಲ್ಡ್ ಸ್ಕೈ ನಿಮ್ಮ ಮುಂದಿಡುತ್ತಿದೆ. ಈ ಉಡುಪುಗಳನ್ನು ನೀವು ಗಮನಿಸಿದರೆ ನಿಮಗೆ ಇದರ ಸೌಂದರ್ಯ ಅರಿವಾಗುತ್ತದೆ. ಈಕೆ ಬಳಸಿದ್ದ ಬಣ್ಣಗಳ ವೈವಿಧ್ಯ ಎಲ್ಲರನ್ನೂ ಸೆಳೆಯಿತು.
ಪ್ರಿಯ ಕತಾರಿಯ ಪುರಿ ವಿನ್ಯಾಸ ಸಂಗ್ರಹ

ಲೆಮೆನ್ ಗ್ರೀನ್
ಇದು ಪ್ರಿಯ ಕತಾರಿಯ ಪುರಿ ವಿನ್ಯಾಸಗೊಳಿಸಿದ ವಸ್ತ್ರಗಳಲ್ಲೆ ಅತ್ಯುತ್ತಮವಾದುದು. ಇದಕ್ಕೆ ವರ್ಟಿಕಲ್ ಸ್ಟ್ರಿಪ್ ಇದ್ದು ಸಿಲ್ವರ್ ಬಣ್ಣದ ಕಸೂತಿಯನ್ನು ಹೊಂದಿದೆ.

ರೆಟ್ರೊ ಬಣ್ಣಗಳು
ಈ ಉಡುಪಿನ ರೆಟ್ರೊ ಲುಕ್ ಸ್ಟೈಲಿಶ್ ಆಗಿತ್ತು. ಬ್ರೈಟ್ ಯೆಲ್ಲೊ, ನೈಟ್ ಬ್ಲೂ ಮತ್ತು ಕೆಂಪು ಬಣ್ಣಗಳು ಇದಕ್ಕೆ ಮೆರುಗನ್ನು ತಂದಿತ್ತು.

ಪಿಂಕ್ ರೆಟ್ರೊ
ಗುಲಾಬಿ ಮತ್ತು ನೀಲಿ ಬಣ್ಣದ ಕಾಂಬಿನೇಷನ್ನಿನ ಈ ವಿಶಿಷ್ಟ ವಿನ್ಯಾಸ ಪ್ರಿಯ ಕತಾರಿಯ ಪುರಿಯ ಈ ಪ್ರದರ್ಶನದಲ್ಲಿನ ವಿಶೇಷ.

ಸೀ ಬ್ಲ್ಯೂ
ಈ ಬಣ್ಣವೇ ಈ ಉಡುಪಿನ ವಿಶೇಷ. ಗಾಢ ಕೆಂಪು ಮತ್ತು ಕಪ್ಪು ಹೂವಿನ ಚಿತ್ತಾರಗಳು ಇಡೀ ಉಡುಪಿನಲ್ಲಿದೆ. ನೀಲಿ ಬಿಕನಿ ಇದರ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ.

ನೀಲಿ ಗೌನು
ಈ ನೀಲಿ ಮತ್ತು ಸಿಲ್ವರ್ ಒನ್ ಶೌಲ್ಡರ್ ಗೌನು ವೇದಿಕೆಯಲ್ಲಿ ಪ್ರದರ್ಶಿಸಲಾಯಿತು. ಇದರ ಮೇಲಿನ ಸಿಲ್ವರ್ ಎಂಬ್ರಾಯಡರಿ ಇದಕ್ಕೆ ಹೆಚ್ಚಿನ ಕಳೆ ತಂದಿತು.

ಬರ್ನ್ಟ್ ಆರೆಂಜ್
ಬರ್ನ್ಟ್ ಆರೆಂಜ್ ಬಣ್ಣದ ಈ ಮಿನಿ ಉಡುಪು ಕೀ ಹೋಲ್ ಉಳ್ಳ ನೆಕ್ ಲೈನ್ ಹೊಂದಿತ್ತು. ಈ ಉಡುಪಿನ ಆಕರ್ಷಣೆ ಇದು. ಇದಕ್ಕೆ ಹೊಂದುವಂತಹ ಹೆಡ್ ಬ್ಯಾಂಡ್ ಇದಕ್ಕೆ ಒಂದು ಆದಿವಾಸಿ ಉಡುಗೆಯ ಲುಕ್ ತಂದುಕೊಟ್ಟಿತ್ತು.

ನಿಯಾನ್ ಗ್ರೀನ್ ಕಫ್ತಾನ್
ವೇದಿಕೆಯ ಮೇಲೆ ಪ್ರದರ್ಶಿಸಲಾದ ಈ ಉಡುಪು ಕಲಾತ್ಮಕ ವಿನ್ಯಾಸವನ್ನು ಹೊಂದಿತ್ತು.

ಆಫ್ ಬಿಕನಿ
ಬೀಚ್ ನಲ್ಲಿ ಹೊಸದಾಗಿ ಹಾಕಿಕೊಳ್ಳಬಹುದಾದ ಉಡುಗೆಯಿದು. ಗೋಲ್ಡ್ ರಿಮ್ಸ್ ಗಳಿದ್ದ ಪ್ಯಾಂಟಿಯ ಲೈನ್ ಆಕರ್ಷಣೀಯವಾಗಿತ್ತು.

ಹಾಟ್ ರೆಡ್
ಬಿಳಿ ಮತ್ತು ಕೆಂಪು ಬಣ್ಣಗಳ ಕಾಂಬಿನೇಷನ್ ಅನ್ನು ಚಳಿಗಾಲದ ಬಣ್ಣಗಳು ಎಂದು ಹೇಳಲಾಗುತ್ತದೆ. ಕೆಲವರಿಗೆ ಇದು ಇಷ್ಟವಾಗುತ್ತದೆ ಕೆಲವರಿಗೆ ಇಲ್ಲ. ಈ ಉಡುಪಿಗೆ ಧರಿಸಲಾಗಿದ್ದ ಥಾಂಗ್ ಶೂಗಳು ಇದಕ್ಕೆ ಒಪ್ಪುವಂತಿತ್ತು.

ವೆಡ್ಡಿಂಗ್ ಗೌನ್
ಇದು ನೋಡಲು ವಿಶಿಷ್ಟವಾಗಿತ್ತು. ಪ್ರೇಕ್ಷಕರನ್ನು ಸೆಳೆದ ಉಡುಪುಗಳಲ್ಲಿ ಇದು ಕೂಡ ಒಂದು.



Click it and Unblock the Notifications
