Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಐಎಫ್ ಬಿಡಬ್ಲ್ಯೂನಲ್ಲಿ ತರುಣ್ ತಹಿಲಿಯಾನಿ ಕಲೆಕ್ಷನ್
ಆ್ಯಂಬೆ ವ್ಯಾಲಿ ಇಂಡಿಯ ಬ್ರೈಡಲ್ ಫ್ಯಾಷನ್ ವೀಕ್ 2013ರಲ್ಲಿ ಫ್ಯಾಷನ್ ಡಿಸೈನರ್ ತರುಣ್ ತಹಿಲಿಯಾನಿ ತಾನು ವಿನ್ಯಾಸಗೊಳಿಸಿದ ವಸ್ತ್ರಗಳನ್ನು ಪ್ರದರ್ಶಿಸಿದರು. ಬಹು ನಿರೀಕ್ಷಿತ ಈ ಫ್ಯಾಷನ್ ಶೋನ ಮೊದಲನೇ ದಿನ ಜ್ಯೋತ್ಸ್ನಾ ತಿವಾರಿ ಮತ್ತು ತರುಣ್ ತಹಿಲಿಯಾನಿ ತಮ್ಮ ವಸ್ತ್ರಸಂಗ್ರಹವನ್ನು ಪ್ರದರ್ಶಿಸಿದರು.
ತರುಣ್ ತಹಿಲಿಯಾನಿ ವಧುವಿನ ಸಂಗ್ರಹ ಹೆಚ್ಚು ವೈವಿಧ್ಯಮಯವಾಗಿ, ಅನನ್ಯತೆಯಿಂದ ಕೂಡಿತ್ತು. ನಿರೀಕ್ಷೆಯಂತೆ ತರುಣ್ ತಹಿಲಿಯಾನಿ ತಮ್ಮ ಸಂಗ್ರಹದಲ್ಲಿ ಅವರ ಮೆಚ್ಚಿನ ಬಣ್ಣಗಳಾದ ಸ್ಯಾಫ್ರನ್ ಮತ್ತು ಪಿಂಕ್ ಬಳಸಿದ್ದರು. ಇದರೊಂದಿಗೆ ಲೈಟ್ ಪರ್ಪಲ್, ಆಕಾಶ ನೀಲಿ, ಕೆಂಪು, ಬೀಜ್, ಗೋಲ್ಡ್ ಮತ್ತು ನ್ಯೂಡ್ ಬಣ್ಣಗಳನ್ನು ಕೂಡ ಬಳಸಿದ್ದರು.
ತರುಣ್ ತಹಿಲಿಯಾನಿ ವಧುವಿನ ಸಂಗ್ರಹದಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ಎರಡೂ ಬಗೆಯ ವಸ್ತ್ರಗಳನ್ನು ಕಾಣಬಹುದಿತ್ತು. ಸಾಂಪ್ರದಾಯಿಕ ಲೆಹಂಗಾಗಳಿಂದ ಹಿಡಿದು ಸ್ಲಟ್ ಇದ್ದ ಉಡುಗೆಗಳವರೆಗಿನ ಈ ಸಂಗ್ರಹದಲ್ಲಿ ವೈವಿಧ್ಯವಿತ್ತು.
ತರುಣ್ ಎಲ್ಲ ಮಹಿಳೆಯರಿಗೂ ಹೊಂದುವಂತಹ ವಸ್ತ್ರಗಳನ್ನು ವಿನ್ಯಾಸಗೊಳಿಸಿದ್ದರು. ಭರ್ಜರಿ ಲೆಹಂಗಾಗಳ ಜೊತೆಯಲ್ಲೇ ಫ್ರಂಟ್ ಸ್ಲಿಟ್ ಇದ್ದ ಬೀಜ್ ಮತ್ತು ಗೋಲ್ಡನ್ ಕಲರ್ ಸಿಲ್ಹೊಟೆಗಳನ್ನು ಇಲ್ಲಿ ಕಾಣಬಹುದಿತ್ತು.ಇದರ ಮೇಲೆ ಕೆಲವರು ಕಸೂತಿ ಮಾಡಿದ ಜಾಕೆಟ್ ಗಳನ್ನು ತೊಟ್ಟಿದ್ದು ಸುಂದರವಾಗಿ ಕಾಣುತ್ತಿತ್ತು.
ತರಣ್ ಶೋನ ಮತ್ತೊಂದು ಆಕರ್ಷಣೆಯೆಂದರೆ ನೃತ್ಯ ಮತ್ತು ಹಾಡು. ಇದು ಶೋಗೆ ಕಳೆ ತಂದುಕೊಟ್ಟಿತು. ತರುಣ್ ಯಾವುದೇ ತಾರೆಯನ್ನು ತನ್ನ ವಸ್ತ್ರಗಳ ಪ್ರದರ್ಶನಕ್ಕೆ ಬಳಸಿಕೊಳ್ಳಲಿಲ್ಲ. ಆ ಶೋನ ಇಣುಕು ನೋಟ ನಿಮಗಾಗಿ.



Click it and Unblock the Notifications
