Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಐಬಿಎಫ್ ಡಬ್ಲ್ಯೂ 13: ಆಶಿಮ ಮತ್ತು ಲೀನ
ಆಶಿಮ ಮತ್ತು ಲೀನ ತಮ್ಮ 'ಆಲಾಪ್' ಸಂಗ್ರಹವನ್ನು ಐಬಿಎಫ್ ಡಬ್ಲ್ಯೂ 13ರ ನಾಲ್ಕನೇ ದಿನ ಪ್ರದರ್ಶಿಸಿದರು. ಇವರ ಸಂಗ್ರಹದಲ್ಲಿ ಹಲವು ಬಣ್ಣಗಳನ್ನು ನೋಡಬಹುದಿತ್ತು. ಈ ಸಂಗ್ರಹದಲ್ಲಿ ಅತಿ ಹೆಚ್ಚು ಸಾಂಪ್ರದಾಯಿಕ ಉಡುಗೆಗಳನ್ನು ಕಾಣಬಹುದಿತ್ತು. ಆಶಿಮ ಮತ್ತು ಲೀನ ಪ್ರೇಕ್ಷಕರು ಯಾವ ರೀತಿಯ ಉಡುಪುಗಳ ನಿರೀಕ್ಷೆಯಲ್ಲಿದ್ದರೋ ಅಂತಹ ಉಡುಪುಗಳನ್ನೇ ಪ್ರದರ್ಶಿಸಿದರು. ಬಹಳ ಸುಂದರವಾಗಿ ವಧುವಿನ ವಸ್ತ್ರಗಳನ್ನು ವಿನ್ಯಾಸಗೊಳಿಸಿದ್ದರು.
ಅಶಿಮ ಮತ್ತು ಲೀನ ಮಲ್ಟಿ ಕಲರ್ ನ ಲೆಹಂಗಾಗಳು, ರವಿಕೆಗಳು ಮತ್ತು ಕಸೂತಿ ಮಾಡಿದ ಜಾಕೆಟ್ ಗಳನ್ನು ವಿನ್ಯಾಸಗೊಳಿಸಿ ಪ್ರದರ್ಶಿಸಿದರು. ಇಲ್ಲಿ ಹೂವಿನ ಚಿತ್ತಾರ ಮತ್ತು ಬಣ್ಣದ ಮಣಿಗಳಿದ್ದ ಕೆಲವು ಚೂಡಿದಾರ್ ಪ್ಯಾಂಟ್ ಗಳನ್ನು ಕೂಡ ನೋಡಬಹುದಿತ್ತು. ಹೂವಿನ ಚಿತ್ತಾರ ಮತ್ತು ಬಣ್ಣಗಳು ಈ ಸಂಗ್ರಹವನ್ನು ಗ್ಲಾಮರಸ್ ಆಗಿಸಿತ್ತು. ಕೆಲವು ಲೆಹಂಗಾಗಳನ್ನು ಸಾಂಪ್ರದಾಯಿಕ ದಕ್ಷಿಣ ಭಾರತೀಯ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿತ್ತು.
ಮನಮೋಹಕ ಸುಂದರಿ ಹುಮಾ ಕುರೇಶಿ ಈ ಉಡುಪುಗಳನ್ನು ಪ್ರದರ್ಶಿಸಿದಳು. ಈ ವಿವಿಧ ಬಣ್ಣಗಳ ಲೆಹಂಗಾದಲ್ಲಿ ಆಕೆ ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದಳು. ದೇಶಿ ವಧು ಗಾಢ ಬಣ್ಣದ ಲೆಹಂಗಾ ಪಿಂಕ್ ಮತ್ತು ಹಸಿರು ಬಣ್ಣಗಳನ್ನು ಹೊಂದಿತ್ತು. ಇದು ರೇಷ್ಮೆ ಬಟ್ಟೆಯಲ್ಲಿದ್ದು ಅಂಚಿಗೆ ಎಂಬ್ರಾಯಡರಿ ಮಾಡಲಾಗಿತ್ತು. ಹುಮಾ ಕುರೆಶಿ ಮಲ್ಟಿ ಕಲರ್ ನ ಥ್ರೀ ಕ್ವಾರ್ಟರ್ ತೋಳಿನ ಬ್ಲೌಸಿನಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದಳು.
ಹುಮಾ ಕುರೇಶಿ ಅಶಿಮ ಮತ್ತು ಲೀನ ವಿನ್ಯಾಸಗಳ ಉಡುಗೆಯಲ್ಲಿ:

ಹುಮಾ ಕುರೇಶಿ
ಹುಮಾ ಕುರೇಶಿ ಮಲ್ಟಿ ಕಲರ್ ನ ಲೆಹಂಗಾದಲ್ಲಿ ಸಾಂಪ್ರದಾಯಿಕ ವಧುವಿನಂತೆ ಕಂಗೊಳಿಸುತ್ತಿದ್ದಳು. ಈಕೆ ಅಶಿಮ ಮತ್ತು ಲೀನ ವಿನ್ಯಾಸದ ಉಡುಪುಗಳನ್ನು ಪ್ರದರ್ಶಿಸಿದಳು.

ನಿರಿಗೆಗಳ ಲೆಹಂಗ
ಹುಮಾ ನಿರಿಗೆಗಳ ಲೆಹಂಗ ತೊಟ್ಟಿದ್ದಳು. ಈ ನಿರಿಗೆಗಳು ಈ ಲಂಗದಲ್ಲಿ ಬಳಸಿದ್ದ ವಿವಿಧ ಬಣ್ಣಗಳನ್ನು ಸುಂದರವಾಗಿ ಪ್ರದರ್ಶಿಸಿತು.

ರವಿಕೆ
ಹುಮಾ ಗುಲಾಬಿ ಬಣ್ಣದ ರೇಷ್ಮೆ ರವಿಕೆಯನ್ನು ತೊಟ್ಟಿದ್ದಳು. ಇದಕ್ಕೆ ಚಿನ್ನದ ಕಸೂತಿ ಮತ್ತು ಗುಲಾಬಿ ಬಣ್ಣದ ದಾರದ ಕಸೂತಿಯನ್ನು ಮಾಡಲಾಗಿತ್ತು. ಇದರ ಅಂಚುಗಳಲ್ಲಿ ಕೂಡ ಎಂಬ್ರಾಯಡರಿಯನ್ನು ನೋಡಬಹುದಿತ್ತು.

ಗುಲಾಬಿ ದುಪ್ಪಟ್ಟಾ
ಹುಮಾ ಕುರೇಶಿ ಈ ಮಲ್ಟಿ ಕಲರ್ ಲೆಹಂಗಾಕ್ಕೆ ಗುಲಾಬಿ ದುಪ್ಪಟ್ಟಾ ಧರಿಸಿದ್ದಳು. ಈ ದುಪ್ಪಟ್ಟಾದ ಅಂಚಿಗೆ ಚಿನ್ನದ ಮಣಿಗಳನ್ನು ತಗುಲಿಸಲಾಗಿತ್ತು.

ಮೇಕಪ್
ಹುಮಾಳ ಗುಲಾಬಿ ಬಣ್ಣದ ಮೇಕಪ್ ಆಕೆಯ ವಧುವಿನ ಉಡುಪಿನೊಂದಿಗೆ ಹೊಂದುವಂತಿತ್ತು. ಐಲೈನರ್, ಐಶ್ಯಾಡೊ ಮತ್ತು ಗ್ಲಾಸಿ ಪಿಂಕ್ ಲಿಪ್ ಸ್ಟಿಕ್ ಆಕೆಯ ಅಂದವನ್ನು ಪರಿಪೂರ್ಣಗೊಳಿಸಿತ್ತು.

ಆಭರಣ
ಹಲವು ಲೇಯರ್ ಗಳ ಜಾದೂರಾಣಿ ಹಾರ ಅದಕ್ಕೊಪ್ಪುವ ಕಿವಿಯೋಲೆ, ಬೈತಲೆ ಮತ್ತು ಚಿನ್ನದ ಕಡಗವನ್ನು ಧರಿಸಿದ್ದಳು.

ವಿನ್ಯಾಸಕರೊಂದಿಗೆ
ಹುಮಾ ಅಂತಿಮವಾಗಿ ವಿನ್ಯಾಸಕರೊಂದಿಗೆ ಫೋಟೊಗೆ ಕಾಣಿಸಿಕೊಂಡಿದ್ದು ಹೀಗೆ.

ಹೂವಿನ ಚಿತ್ತಾರ
ಹಲವು ವಧುವಿನ ಉಡುಪುಗಳು ಹೂವಿನ ಎಂಬ್ರಾಯಡರಿ ಹೊಂದಿದ್ದವು. ಗುಲಾಬಿ ಬಣ್ಣದ ದಳಗಳು ಮತ್ತು ಹಸಿರು ಎಲೆಗಳು ಕಲಾತ್ಮಕವಾಗಿದ್ದವು.

ಚೂಡಿದಾರ್
ಕಲ್ಲಿನ ಕಸೂತಿ ಹೊಂದಿದ್ದ ಚೂಡಿದಾರ್ ಪ್ಯಾಂಟುಗಳು ಸ್ಟೈಲಿಶ್ ಆಗಿದ್ದವು. ಇವುಗಳ ಮೇಲೆ ಎಂಬ್ರಾಯಡರಿ ಮಾಡಿದ ಶಾರ್ಟ್ ಅನಾರ್ಕಲಿ ಸೂಟ್ ತೊಟ್ಟುಕೊಂಡಿದ್ದರು.

ಲೆಹಂಗ ಸೀರೆ
ಬಣ್ಣದ ಲೆಹಂಗವನ್ನು ಸೀರೆಯ ಹಾಗೆ ತೊಡಲಾಗಿತ್ತು. ಇದು ಅಶಿಮ ಮತ್ತು ಲೀನ ವಿನ್ಯಾಸದ ಅತ್ಯುತ್ತಮ ಉಡುಪಾಗಿತ್ತು.

ಮಲ್ಟಿ ಕಲರ್ ಬ್ಲೌಸ್
ತ್ರೀ ಕ್ವಾರ್ಟರ್ ಸ್ಲೀವ್ ನ ದಾರದ ಎಂಬ್ರಾಯಡರಿಯ ಮಲ್ಟಿ ಕಲರ್ ಬ್ಲೌಸ್ ಕೂಡ ಈ ಪ್ರದರ್ಶನದ ಆಕರ್ಷಣೆಯಾಗಿತ್ತು.

ಸೀರೆಗೆ ಜಾಕೆಟ್
ಉದ್ದ ತೋಳಿನ ಎಂಬ್ರಾಯಡರಿ ಮಾಡಿದ ಶೀರ್ ಜಾಕೆಟ್ ಗಳನ್ನು ಸೀರೆಗಳ ಮೇಲೆ ಹಾಕಿಕೊಂಡಿದ್ದು ವಿಶೇಷವಾಗಿತ್ತು.



Click it and Unblock the Notifications
