Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಐಬಿಎಫ್ ಡಬ್ಲ್ಯೂ13 ರಲ್ಲಿ ಅಭಿಷೇಕ್ ಬಚ್ಚನ್
ಐಬಿಎಫ್ ಡಬ್ಲ್ಯೂನ ಕೊನೆಯ ದಿನ ರೋಹಿತ್ ಬಾಲ್ ತಮ್ಮ ವಧು ಸಂಗ್ರಹದ ಬಟ್ಟೆಗಳನ್ನು ಪ್ರದರ್ಶಿಸಿದರು. ಇವರ ಉಡುಗೆಗಳನ್ನು ಸಮಾರಂಭದಲ್ಲಿ ಪ್ರದರ್ಶಿಸಿದ್ದು ಬಾಲಿವುಡ್ ನಟ ಅಭಿಷೇಕ್ ಬಚ್ಚನ್.
ಕೊನೆಯ ದಿನದ ಸಮಾರಂಭದಲ್ಲಿ ಅಭಿಷೇಕ್ ಬಚ್ಚನ್ ಕಪ್ಪು ಬಂದಗಾಲ ತೊಟ್ಟು ವೇದಿಕೆಯ ಮೇಲೆ ಕಾಣಿಸಿಕೊಂಡಾಗ ಪ್ರೇಕ್ಷಕರು ಹುಚ್ಚೆದ್ದು ಕೂಗಿದರು. ಅಭಿಷೇಕ್ ಈ ಉಡುಪಿನಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದರು. ಈ ದಿರಿಸಿನ ಮುಖ್ಯ ಆಕರ್ಷಣೆ ಇದರ ಗುಲಾಬಿ ಬಣ್ಣದ ಗುಂಡಿಗಳು. ಇದರ ನೆಕ್ ಲೈನ್ ಗುಲಾಬಿ ಬಣ್ಣದ ಶಿಮ್ಮರಿಂಗ್ ಬಾರ್ಡರ್ ಹೊಂದಿತ್ತು. ಇದರ ವಿನ್ಯಾಸ ಆಕರ್ಷಣೀಯವಾಗಿತ್ತು. ಈ ದಿರಿಸಿಗೆ ಅಭಿಷೇಕ್ ಕಪ್ಪು ಫಾರ್ಮಲ್ ಶೂಗಳನ್ನು ಧರಿಸಿದ್ದರು.
ರೋಹಿತ್ ಬಾಲ್ ರ ಸಂಗ್ರಹ ಅನನ್ಯ ಮತ್ತು ಸಮಕಾಲೀನವಾಗಿತ್ತು. ಇವರು ಬಳಸಿದ್ದ ಬಣ್ಣಗಳು ಹೆಚ್ಚು ಆಕರ್ಷಣೀಯವಾಗಿತ್ತು. ಕಪ್ಪು/ಬಿಳಿ, ಗೋಲ್ಡ್ ಮತ್ತು ಕೆಂಪು ಬಣ್ಣಗಳ ಸಂಯೋಜನೆ ಅತ್ಯಾಕರ್ಷಕವಾಗಿತ್ತು.
ರೋಹಿತ್ ಬಾಲ್ ರ ವಿನ್ಯಾಸ ಸಂಗ್ರಹ ಮತ್ತು ಅಭಿಷೇಕ್ ಬಚ್ಚನ್ ಚಿತ್ರಗಳು ಇಲ್ಲಿವೆ:

ಅಭಿಷೇಕ್ ಬಚ್ಚನ್
ಹ್ಯಾಂಡ್ ಸಂ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ವೇದಿಕೆಯ ಮೇಲೆ ಆಕರ್ಷಕವಾಗಿ ಕಾಣಿಸಿಕೊಂಡರು. ರೋಹಿತ್ ಬಾಲರ ವಿನ್ಯಾಸವನ್ನು ಪ್ರದರ್ಶಿಸಿದ್ದು ಅಭಿಷೇಕ್ ಬಚ್ಚನ್.

ರೂಬಿ ರೆಡ್
ರೂಬಿ ರೆಡ್ ಮತ್ತು ಗೋಲ್ಡ್ ಬಣ್ಣಗಳನ್ನು ರೋಹಿತ್ ಬಾಲ್ ತಮ್ಮ ವಿನ್ಯಾಸ ಉಡುಗೆಗಳಿಗೆ ಬಹಳ ಚೆನ್ನಾಗಿ ಬಳಸಿದ್ದರು.

ಗಾಢ ನೇರಳೆ ಬಣ್ಣ
ಗಾಢ ನೇರಳೆ ಬಣ್ಣದ ಲೆಹಂಗ ಗೋಲ್ಡ್ ಮತ್ತು ಕಪ್ಪು ಬಣ್ಣಗಳ ಕಾಂಬಿನೇಶನ್ ಹೊಂದಿತ್ತು. ಸ್ವಲ್ಪ ಮಟ್ಟಿಗೆ ಗುಲಾಬಿ ಬಣ್ಣವನ್ನು ಕೂಡ ಬಳಸಲಾಗಿತ್ತು.

ಹೂವಿನ ಚಿತ್ತಾರ
ಈ ಲೆಹಂಗಾದ ಮೇಲಿನ ಹೂವಿನ ಚಿತ್ತಾರಗಳು ಈ ಉಡುಪಿಗೆ ವಿಶೇಷ ಕಳೆಯನ್ನು ತಂದಿತು. ಇದಕ್ಕೆ ಬಿಳಿ ಬಣ್ಣದ ಉದ್ದ ತೋಳುಗಳಿದ್ದವು. ಇವಕ್ಕೆ ಸ್ಟ್ರಿಪ್ ಗಳನ್ನು ಅಳವಡಿಸಿದ್ದು ವಿಶೇಷವಾಗಿತ್ತು.

ರಾಜ ಗಾಂಭೀರ್ಯ
ಇದು ನಿಜಕ್ಕೂ ಮಹಾರಾಜನ ಲುಕ್! ಗೋಲ್ಡ್ ಮತ್ತು ಕಪ್ಪು ಬಣ್ಣದ ಕುರ್ತಾದ ಮೇಲೆ ಭರ್ಜರಿಯಾದ ಚಿನ್ನದ ಬಣ್ಣದ ಕಸೂತಿಯನ್ನು ಕಾಣಬಹುದಿತ್ತು. ಇದರ ಆಕರ್ಷಣೆಯೆಂದರೆ ಕ್ರೀಂ ಪೈಜಾಮ.

ಕ್ರೀಂ ಮತ್ತು ಗೋಲ್ಡ್
ಈ ಎರಡು ಸುಂದರ ಬಣ್ಣಗಳನ್ನು ವೇದಿಕೆಯ ಮೇಲೆ ನೋಡಬಹುದಿತ್ತು. ಈ ಸುಂದರ ವಧುವಿನ ಸಂಗ್ರಹವು ಹೊಳೆಯುತ್ತಿತ್ತು. ಇದರ ಹೊಳಪು ಇದನ್ನು ಮತ್ತಷ್ಟು ಅಂದಗೊಳಿಸಿತ್ತು.

ಕಾಫಿ ಬಣ್ಣದ ಅಂದ
ಎಲ್ಲ ವಿನ್ಯಾಸಕರ ಬಣ್ಣಗಳ ಪೈಕಿ ಈ ಬಣ್ಣವನ್ನು ಅತ್ಯುತ್ತಮವಾಗಿ ಬಳಸಿದ್ದು ರೋಹಿತ್ ಬಾಲ್. ಹೂವಿನ ಚಿತ್ತಾರಗಳಿದ್ದ ಕಾಫಿ ಬಣ್ಣದ ಲೆಹಂಗ ಚಿನ್ನದ ಅಂಚು ಮತ್ತು ಕ್ರೀಂ ಟಾಪ್ ನೊಂದಿಗೆ ಅತ್ಯಾಕರ್ಷಕವಾಗಿತ್ತು.

ಕ್ರೀಂ ವರ್ಸಸ್ ರೆಡ್
ಈ ಬಣ್ಣ ಸಂಯೋಜನೆ ಅದ್ಭುತವಾಗಿತ್ತು. ರೋಹಿತ್ ಬಾಲರ ವಿನ್ಯಾಸದ ಬಟ್ಟೆಗಳ ಸಂಗ್ರಹದಲ್ಲಿನ ಅತ್ಯುತ್ತಮ ಉಡುಪು ಇದಾಗಿತ್ತು.

ಬ್ಲಾಕ್ ನೆಟ್ ಸೀರೆ
ವೇದಿಕೆಯಲ್ಲಿ ಕಾಣಿಸಿಕೊಂಡ ಸುಂದರವಾದ ಸೀರೆಗಳಲ್ಲಿ ಇದು ಕೂಡ ಒಂದು. ಈ ನೆಟ್ ಸೀರೆಗೆ ಶೀರ್ ಚೋಲಿ ಬ್ಲೌಸ್ ಹಾಕಲಾಗಿತ್ತು. ಇದರ ಮೇಲೆ ಬೆಳ್ಳಿಯ ಕಸೂತಿಯನ್ನು ಮಾಡಲಾಗಿತ್ತು.

ಗ್ರೇ ಕುರ್ತಾ
ಯಾವುದೇ ವರನಾದರೂ ಹಾಕಬಯಸುವಂತಹ ಸುಂದರ ಗ್ರೇ, ಕಪ್ಪು ಮತ್ತು ಸಿಲ್ವರ್ ಬಣ್ಣದ ಕುರ್ತಾ ಇದಾಗಿತ್ತು. ಇದರೊಂದಿಗೆ ರೋಹಿತ್ ಬಾಲ್ ತಮ್ಮ ವಿನ್ಯಾಸದ ಉಡುಗೆಗಳ ಪ್ರದರ್ಶವನ್ನು ಮುಕ್ತಾಯಗೊಳಿಸಿದರು.

ಕಪ್ಪು ಬಿಳಿ ಗೌನು
ಯಾರಾದರೂ ಈ ರೀತಿಯ ಉಡುಪನ್ನು ಮದುವೆಗೆ ಹಾಕಿಕೊಳ್ಳುವುದನ್ನು ಕಲ್ಪಿಸಿಕೊಳ್ಳಿ. ರೋಹಿತ್ ಬಾಲ್ ವಿಕ್ಟೊರಿಯನ್ ಕಾಲದ ವಿನ್ಯಾಸವನ್ನು ಇಲ್ಲಿ ಬಳಸಿಕೊಂಡಿದ್ದರು.

ಗಾಥಿಕ್
ಇದು ಹಳೆಯ ವಿನ್ಯಾಸವೆನಿಸಬಹುದು. ಆದರಿದು ಹಲವರ ಗಮನ ಸೆಳೆಯಿತು. ಈ ಉಡುಪಿನ ಅಂಚುಗಳಿಗೆ ಮಾಡಿದ್ದ ಹೂವಿನ ಡಿಸೈನ್ ಗಳು ಹಲವರ ಗಮನವನ್ನು ಸೆಳೆಯಿತು.

ಪ್ಲಂಗಿಂಗ್ ನೆಕ್ ಲೈನ್
ಈ ದಿರಿಸಿನ ಮುಖ್ಯ ಆಕರ್ಷಣೆಯೇ ಇದರ ನೆಕ್ ಲೈನ್. ಇದು ಎಲ್ಲರ ಗಮನ ಸೆಳೆಯಿತು.



Click it and Unblock the Notifications