Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಐಬಿಎಫ್ ಡಬ್ಲ್ಯೂ13ರಲ್ಲಿ ಮಿಂಚಿದ ಇಷಾ ಗುಪ್ತ
ಜೆ ಜೆ ವಾಲಿಯ ಐಬಿಎಫ್ ಡಬ್ಲ್ಯೂನ 5 ನೇ ದಿನ ಬಹಳ ಸ್ಟೈಲಿಶ್ ಆಗಿದ್ದ ವಿನ್ಯಾಸಗಳನ್ನು ಪ್ರದರ್ಶಿಸಿದರು. ಈತ ತನ್ನ ಅನನ್ಯ ವಿನ್ಯಾಸಗಳು ಮತ್ತು ಕಲಾತ್ಮಕ ಕುಶಲತೆಗಳೊಂದಿಗೆ ವಿವಿಧ ರೀತಿಯ ಪ್ರಿಂಟ್ ಗಳನ್ನು ತನ್ನ ಸಂಗ್ರಹದ ಉಡುಪುಗಳಲ್ಲಿ ಪ್ರದರ್ಶಿಸಿದರು.
ಜೆಜೆ ವಾಲಿಯ ಬಹಳ ಸ್ಟೈಲಿಶ್ ಮತ್ತು ಟ್ರೆಂಡಿಯಾಗಿದ್ದ ವಧುವಿನ ಉಡುಗೆಯನ್ನು ಪ್ರದರ್ಶಿಸಿದರು. ಇಲ್ಲಿ ಪೆಪ್ಲುಮ್ ಪ್ಯಾಟ್ರನ್ ರವಿಕೆಗಳಿಂದ ಹಿಡಿದು ನಿರಿಗೆಗಳುಳ್ಳ ಅನಾರ್ಕಲಿಗಳವರೆಗೆ ವೈವಿಧ್ಯತೆಯನ್ನು ಕಾಣಬಹುದಿತ್ತು. ಜೆ ಜೆ ವಾಲಿಯ ಸಂಗ್ರಹವು ಫ್ಯಾಷನೆಬಲ್ ವಧುವಿಗೆ ಒಪ್ಪುವಂತಿತ್ತು. ಇದರಲ್ಲಿ ಗಾಢವಾದ ಸಾಂಪ್ರದಾಯಿಕ ಬಣ್ಣಗಳನ್ನೇ ಬಳಸಲಾಗಿತ್ತು.

ನಿರೀಕ್ಷೆಯಂತೆ ಇಷಾ ಗುಪ್ತ ಜೆ ಜೆ ವಾಲಿಯ ವಿನ್ಯಾಸದ ಉಡುಪುಗಳನ್ನು ಪ್ರದರ್ಶಿಸಿದಳು. ಈಕೆ ದೇಸಿ ವಧುವಿನ ಹಾಗೆ ಕಂಗೊಳಿಸುತ್ತಿದ್ದಳು. ಇಷಾ ಗುಪ್ತ ವೇದಿಕೆಯ ಮೇಲೆ ಕೆಂಪು ಬಣ್ಣದ ಲೆಹಂಗ ತೊಟ್ಟು ಮಿಂಚಿದಳು.
ಇಷಾ ಗುಪ್ತ ಐಬಿಎಫ್ 13ರಲ್ಲಿ ಕೆಂಪು ಬಣ್ಣದ ನಿರಿಗೆಗಳ ಲೆಹಂಗ ತೊಟ್ಟಿದ್ದಳು. ಇದಕ್ಕೆ ಭರ್ಜರಿ ಚಿನ್ನದ ಬಣ್ಣದ ಎಂಬ್ರಾಯ್ಡರಿ ಮಾಡಲಾಗಿತ್ತು. ಸೊಂಟದ ಬಳಿ ಚಿನ್ನದ ಕಸೂತಿಯನ್ನು ನೋಡಬಹುದಿತ್ತು. ಸ್ಕರ್ಟ್ ಮೇಲೆ ಕೂಡ ವೆಲ್ವೆಟ್ ನಲ್ಲಿ ಕೆಂಪು ಬಣ್ಣದ ಚಿತ್ತಾರಗಳನ್ನು ಮಾಡಲಾಗಿತ್ತು.
ಇಷಾ ಕೆಂಪು ಬಣ್ಣದ ಲೆಹಂಗಾವನ್ನು ವಿ ಆಕಾರದ ನೆಕ್ ಲೇನ್ ಹೊಂದಿದ್ದ ಬ್ಲೌಸಿನೊಂದಿಗೆ ತೊಟ್ಟಿದ್ದಳು. ಗಾಢ ಕೆಂಪು ಬಣ್ಣದ ರವಿಕೆಯ ಮೇಲೆ ಯಾವುದೇ ಚಿತ್ತಾರಗಳಿರಲಿಲ್ಲ ಬದಲಿಗೆ ಅಂಚಿಗೆ ಕೆಂಪು ಕಲ್ಲುಗಳನ್ನು ಅಳವಡಿಸಲಾಗಿತ್ತು. ಇದರೊಂದಿಗೆ ಕೆಂಪು ಮಣಿಗಳನ್ನು ಕೊನೆಗಳಲ್ಲಿ ತೂಗಿಬಿಡಲಾಗಿತ್ತು. ಇದಕ್ಕೆ ದುಪಟ್ಟಾವನ್ನು ವಿ ಆಕಾರದಲ್ಲಿ ಇಳಿಬಿಟ್ಟು ಮಧ್ಯದಲ್ಲಿ ಪಿನ್ ಮಾಡಲಾಗಿತ್ತು. ದುಪ್ಪಟ್ಟಾ ಬಾರ್ಡರ್ ಗಳು ಕೂಡ ವೆಲ್ವೆಟ್ಟಿನದೆ.
ಇಷಾ ಇದಕ್ಕೆ ಹಲವು ಹಂತಗಳ ಚಿನ್ನದ ಸರ ಮತ್ತು ರೂಬಿ ನೆಕ್ ಲೇಸ್ ಹಾಕಿಕೊಂಡಿದ್ದಳು. ನೆಕ್ ಲೇಸ್ ಬಹಳ ದೊಡ್ಡದ್ದಾದ್ದರಿಂದ ಇಷಾ ಕಿವಿಯೋಲೆ ಹಾಕಿಕೊಂಡಿರಲಿಲ್ಲ. 3 ದಪ್ಪ ಚಿನ್ನದ ಬಳೆಗಳನ್ನು ಎಡಗೈಗೆ ಹಾಕಿಕೊಂಡಿದ್ದಳು.
ಕಪ್ಪು ಕಣ್ಣುಗಳು, ಗ್ಲಾಸಿ ಪಿಂಕ್ ಲಿಪ್ ಸ್ಟಿಕ್ ಮತ್ತು ನ್ಯೂಡ್ ಮೇಕಪ್ ಅವಳ ಅಂದವನ್ನು ಹೆಚ್ಚಿಸಿತ್ತು. ಕೂದಲನ್ನು ಎಡಬದಿಗೆ ಇಳಿಬಿಟ್ಟಿದ್ದಳು.
ಜೆಜೆ ವಾಲಿಯ ವಿನ್ಯಾಸದ ಈ ಉಡುಗೆ ಇಷಾ ಗುಪ್ತಾಳಿಗೆ ಹೆಚ್ಚು ಒಪ್ಪುತ್ತಿತ್ತು. ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ಐಬಿಎಫ್ ಡಬ್ಲ್ಯೂ ಶೋನಲ್ಲಿ ಇಷಾ ಗುಪ್ತ ಆದರ್ಶ್ ಗಿಲ್ಸ್ ಎವಲ್ಯೂಶನ್ ಕಲೆಕ್ಷನ್ ಪ್ರದರ್ಶಿಸಿದ್ದಳು. ಅಲ್ಲಿ ಇಷಾ ಆರೆಂಜ್ ಬಣ್ಣದ ಲೆಹಂಗ ತೊಟ್ಟಿದ್ದಳು. ಈ ಲೆಹಂಗಾದ ಮೇಲೆ ಭರ್ಜರಿ ಚುಮ್ಕಿ ಕಸೂತಿಯಿತ್ತು.



Click it and Unblock the Notifications
