Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಾಧುರಿ ಮತ್ತು ಹುಮಾ ಕುರೇಶಿ ಚಿತ್ರ ಪ್ರಚಾರದಲ್ಲಿ
ದೆಡ್ ಇಷ್ಕಿಯಾ ಚಿತ್ರ ಪ್ರಚಾರದಲ್ಲಿ ಮಾಧುರಿ ದೀಕ್ಷಿತ್ ಮತ್ತು ಹುಮಾ ಕುರೇಶಿ ಎಲ್ಲರ ಗಮನಸೆಳೆದರು. ಇವರಿಬ್ಬರ ಉಡುಗೆ ತೊಡುಗೆಗಳು ಎಲ್ಲರ ಕಣ್ಣು ಇವರತ್ತ ಹೊರಳುವಂತೆ ಮಾಡಿತು. ಮಾಧುರಿ ದೀಕ್ಷಿತ್ ಶೆಲ್ಲಿ ಸೆಗಲ್ವಾ ವಿನ್ಯಾಸದ ವೆಸ್ಟರ್ನ್ ಮಾದರಿಯ ಉಡುಪಿನಲ್ಲಿದ್ದರು. ಕೆಂಪು ಲೇಸ್ ನ ಮಂಡಿಯವರೆಗಿದ್ದ ಈ ದಿರಿಸಿಗೆ ಕಪ್ಪು ಬಣ್ಣದ ಪಾಂಟೆಡ್ ಶೂ ಧರಿಸಿ ಮಿಂಚಿದರು.
ದೆಡ್ ಇಷ್ಕಿಯಾ ಪ್ರಚಾರದಲ್ಲಿ ಹುಮಾ ಕುರೇಶಿ ಸಹ ವಿಭಿನ್ನ ಉಡುಗೆಯಿಂದ ಗಮನಸೆಳೆದರು. ಈಕೆ ಚೆಸ್ ಸಿಮೆಟ್ರಿಕಲ್ ಡಿಸೈನ್ ಹೊಂದಿದ್ದ ಟಾಪ್ ಮತ್ತು ಹಳದಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಇದಕ್ಕೆ ಆಕೆ ಕಪ್ಪು ಬಣ್ಣದ ಬೆಲ್ಲಿ ಶೂ ಮತ್ತು ಕಪ್ಪು ಬಣ್ಣದ ಕಲ್ಲಿನ ಸರ ಮತ್ತು ಚಿನ್ನದೋಲೆಗಳು ಆಕೆಯ ಅಲಂಕಾರಕ್ಕೆ ಮೆರುಗು ತಂದಿತು. ಆಕೆಯ ಉಡುಪು, ಬಣ್ಣ ಮತ್ತು ಅಲಂಕಾರ ನಿಜಕ್ಕೂ ನೋಡಲು ಸುಂದರವಾಗಿತ್ತು.
ದೆಡ್ ಇಷ್ಕಿಯಾ ಚಿತ್ರ ಪ್ರಚಾರದ ಸಂಜೆಯಲ್ಲಿ ಈ ಇಬ್ಬರೂ ತಾರೆಯರು ಜನರು ಹುಚ್ಚೆದ್ದು ಕುಣಿಯುವಂತೆ ಮಾಡಿದರು.
ಹುಮಾ ಕುರೇಶಿ ಮತ್ತು ಮಾಧುರಿ ದೇಡ್ ಇಷ್ಕಿಯಾ ಪ್ರಚಾರದಲ್ಲಿ

ಹುಮಾ ಕುರೇಶಿ
ಹುಮಾ ಕುರೇಶಿ ದೇಡ್ ಇಷ್ಕಿಯಾ ಚಿತ್ರ ಪ್ರಚಾರದಲ್ಲಿ ಅಸ್ಸಿಮಿಟ್ರಿಕಲ್ ಚೆಸ್ ಟಾಪ್ ಮತ್ತು ಹಳದಿ ಬಣ್ಣದ ಪ್ಯಾಂಟಿನಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದಳು.

ಮೇಕಪ್
ಆಕೆಯ ಮೇಕಪ್ ಕೂಡ ಸರಳವಾಗಿತ್ತು. ರೋಸ್ ಹಚ್ಚಿದ ಕೆನ್ನೆಗಳು ಆಕೆಯ ಅಂದವನ್ನು ಹೆಚ್ಚಿಸಿತ್ತು.

ಆಕೆಯ ಕಣ್ಣುಗಳು
ಅವಳ ಸುಂದರವಾದ ಕಣ್ಣುಗಳಿಗೆ ಕೋಲ್ ಐ ಮೇಕಪ್ ಮಾಡಲಾಗಿತ್ತು. ಇದು ಅವಳ ಕಣ್ಣಿನ ಅಂದವನ್ನು ಮತ್ತಷ್ಟು ಹೆಚ್ಚಿಸಿತ್ತು.

ಕೇಶವಿನ್ಯಾಸ
ಹುಮಾ ಕುರೇಶಿ ತನ್ನ ಸಡಿಲವಾದ ಕೂದಲನ್ನು ಒಂದೆಡೆಗೆ ಇಳಿಬಿಟ್ಟಿದ್ದಳು. ಆಕೆಯ ಕಂದು ಬಣ್ಣದ ಗುಂಗುರು ಕೂದಲು ನೋಡಲು ಸುಂದರವಾಗಿತ್ತು.

ನಿಯಾನ್ ಲಿಪ್ಸ್
ತುಟಿಗಳ ನಿಯಾನ್ ಆರೆಂಜ್ ಲಿಪ್ ಸ್ಟಿಕ್ ನೋಡಲು ಆಕರ್ಷಕವಾಗಿತ್ತು. ಈ ಬಣ್ಣ ಆಕೆಯ ಅಲಂಕಾರಕ್ಕೆ ಹೊಂದುವಂತಿತ್ತು.

ಆಭರಣಗಳು
ಕಪ್ಪು ಬಣ್ಣದ ಕಲ್ಲುಗಳ ಸರ ಆಕೆಯ ಅಲಂಕಾರದ ಆಕರ್ಷಣೆಯನ್ನು ಹೆಚ್ಚಿಸಿತ್ತು.

ಚಿಕ್ ಶೂಗಳು
ಮೃದುವಾದ ಬೆಲ್ಲಿ ಶೂಗಳು ಅವಳ ಉಡುಪಿಗೆ ಹೊಂದುತಿತ್ತು.

ಮಾಧುರಿ ದೀಕ್ಷಿತ್
ಮಂಡಿವರೆಗಿನ ಈ ದಿರಿಸಿನ್ನು ವಿನ್ಯಾಸಗೊಳಿಸಿದ್ದು ಶೆಲ್ಲಿ ಸೆಗ್ಲವ. ಈಕೆ ಈ ಕೆಂಪು ಬಣ್ಣದ ಉಡುಪಿನಲ್ಲಿ ಆಕರ್ಷಕವಾಗಿ ಕಣ್ಸೆಳೆದಳು.

ಮೇಕಪ್
ಆಕೆಯ ಮೇಕಪ್ ಆಕೆಯ ಸೌಂದರ್ಯವನ್ನು ಹೆಚ್ಚಿಸಿತ್ತು. ಅಂದಿನ ಸಂಜೆ ಆಕೆಯ ಮೇಕಪ್ ಹೆಚ್ಚು ಜನರ ಚರ್ಚೆಗೆ ಕಾರಣವಾಗಿತ್ತು.

ಟ್ರೆಂಡಿ ಹೇರ್ ಸ್ಟೈಲ್
ಬೋಟ್ ನೆಕ್ ಲೈನ್ ಗೆ ಹೊಂದುವಂತೆ ಮಾಧುರಿ ಒಂದೆಡೆ ಇಳಿಬಿಟ್ಟ ಕೇಶವಿನ್ಯಾಸವನ್ನು ಮಾಡಿಕೊಂಡಿದ್ದರು. ಕೂದಲನ್ನು ಆಕೆಯ ಭುಜದ ಮೇಲೆ ಇಳಿಬಿಟ್ಟಿದ್ದಳು.

ಆ ಕಣ್ಣುಗಳು
ಮಾದಕ ಕಂಗಳ ಸೌಂದರ್ಯ ಎಂದಿನಂತೆ ಎಲ್ಲರನ್ನು ಮರಳುಮಾಡಿತು.

ತುಟಿಗಳು
ಗಾಢ ಚೆರ್ರಿ ಬಣ್ಣದ ಲಿಪ್ ಸ್ಟಿಕ್ ಹಚ್ಚಿದ್ದಳು. ಆಕೆಯ ಉಡುಪಿಗೆ ಇದು ಹೊಂದುವಂತಿತ್ತು.

ಸರಳ ಆಭರಣ
ಕೆಂಪು ಕಲ್ಲಿನ ಕಿವಿಯೋಲೆ ಮತ್ತು ದೊಡ್ಡ ವಜ್ರದುಂಗರವನ್ನು ಧರಿಸಿದ್ದಳು. ಸರಳ ಅಲಂಕಾರದ ಅನುಮಪ ಸುಂದರಿಯಂತೆ ಕಂಗೊಳಿಸಿದಳು.

ಕಪ್ಪು ಶೂಗಳು
ಪಾಯಿಂಟೆಡ್ ಕಪ್ಪು ಶೂಗಳು ಕಣ್ಣು ಸೆಳೆಯುವಂತಿತ್ತು.



Click it and Unblock the Notifications
