Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ನಿಮ್ಮ ಎಲ್ ಬಿಡಿಯನ್ನು ಸುಂದರಗೊಳಿಸೋದು ಹೇಗೆ?
ನೀವು ಯಾವಾಗಲೂ ಕಡುಬಯಕೆ ಹೊಂದಿರುವ LBD ಧರಿಸಬಹುದು, ಆದರೆ ಇಲ್ಲಿ ನೋಡೋಣ.
ಉಲ್ಲೇಖ:(ಐಎಎನ್ ಎಸ್) ಯಾವುದೇ ಪಾರ್ಟಿ ಕೂಡ ಸಣ್ಣ ಕಪ್ಪು ಬಟ್ಟೆ(ಎಲ್ ಬಿಡಿ) ಇಲ್ಲದೆ ಪೂರ್ಣಗೊಳ್ಳದು. ಆದರೆ ಬಣ್ಣಬಣ್ಣದ ಬಟ್ಟೆಯಿಂದ ಪಾರ್ಟಿಯಲ್ಲಿ ನಮಗೆ ಮೆರಗು ಬರುತ್ತದೆ. ನೀವು ಪ್ರತೀ ಸಲವು ತುಂಬಾ ಭಿನ್ನವಾಗಿ ಕಾಣಬೇಕಾಗುತ್ತದೆ. ಡಿಸೈನರ್ ಹರ್ಷ ಗುಪ್ತಾ, ಹರ್ಷ್ ಹರ್ಷ್ ಎಂದು ಕರೆಯಲ್ಪಡುವ ಅವರು ಬಟ್ಟೆಗಳಲ್ಲಿ ವೈವಿಧ್ಯತೆ ಬಗ್ಗೆ ವಿವರ ನೀಡಿದ್ದಾರೆ.ನಿಯಾನ್ ಬಣ್ಣದ ಆಭರಣಗಳಂತಹ ನೆಕ್ಲೇಸ್ ಗಳು, ಕಿವಿಯೋಲೆಗಳೂ ಮತ್ತು ಬ್ರಾಸ್ ಲೈಟ್ ಗಳು ವಿನೋದ ನೋಟ ಉಂಟು ಮಾಡಬಹುದು. ನೀವು ಸಣ್ಣ ಕಪ್ಪು ಬಟ್ಟೆಯನ್ನು ಬಂಗಾರ ಅಥವಾ ಬೆಳ್ಳಿ ಆಭರಣಗಳೊಂದಿಗೆ ಧರಿಸಬಹುದು. ಆಸಕ್ತಿದಾಯಕ ಆಭರಣ, ಬೆಲ್ಟ್ ಅಥವಾ ಕೈಗಡಿಯಾರವು ಮೆಟಾಲಿಕ್ ಬಣ್ಣದ್ದಾಗಿರಲಿ. ಕಪ್ಪು ಬಣ್ಣದ ಬಟ್ಟೆಯೊಂದಿಗೆ ನೀವು 1940ರ ಫ್ಯಾಶನ್ ನ್ನು ತೋರಿಸಬಹುದು. ಸಣ್ಣ ಸೊಂಟದ ಕಪ್ಪು ಬಟ್ಟೆಯನ್ನು ಹಾಕಿ ಅದನ್ನು ಮುತ್ತಿನ ಹಾರದಿಂದ ಅಲಂಕರಿಸಿ. ನೀವು ಹಾಲಿವುಡ್ ನ ಜನಪ್ರಿಯ ನಟಿ ಆಡ್ರೆ ಹೆಪ್ಬರ್ನ್ ರಿಂದ ಸ್ಪೂರ್ತಿ ಪಡೆದು ಫ್ಯಾಶನ್ ಮಾಡಬಹುದು. ಪರ್ಲ್ ನೆಕ್ಲೇಸ್ ಮತ್ತು ಬ್ಲ್ಯಾಕ್ ಪೀಪ್ ಟೋಸ್ ಮತ್ತು ಸ್ಟಿಲಿಟೋಸ್ ಧರಿಸಿ. ನಿಮ್ಮ ಎಲ್ ಬಿಡಿಯನ್ನು ಲೆದರ್ ಬೂಟ್ಸ್, ಜಾಕೆಟ್ ಮತ್ತು ಇತರ ಯಾವುದಾದರೂ ಡೆನಿಮ್ ನೊಂದಿಗೆ ಪ್ರಯತ್ನಿಸಿ. ಚರ್ಮದಿಂದ ಮಾಡಲ್ಪಟ್ಟ ಶರ್ಗ್ ಅಥವಾ ಡ್ರೆಸ್ ಮೇಲೆ ಡೆನಿಮ್ ಮತ್ತು ಇದಕ್ಕೆ ಕೌ ಬಾಯ್ ಯಂತಹ ಮೊಣಕಾಲಿನ ತನಕದ ಶೂ ಧರಿಸಿ. ನೀವು ಆಗ ಪಾರ್ಟಿಯಲ್ಲಿ ಎಲ್ಲರನ್ನು ಸೆಳೆಯುವುದರಲ್ಲಿ ಅನುಮಾನವೇ ಬೇಡ.

ಈ ಸಣ್ಣ ಕಪ್ಪು ಬಟ್ಟೆಯು ನಿಮ್ಮ ಶೈಲಿಯನ್ನು ವಿವರಿಸಿ ಪತ್ರಿಯೊಬ್ಬರು ತುದಿಗಾಲಲ್ಲಿ ನಿಲ್ಲುವಂತೆ ಮಾಡಬಹುದು. ಇಂತಹ ಅನುಭವಕ್ಕಾಗಿ ನೀವು ಕಾದಿದ್ದರೆ ನೀವು ಎಲ್ ಬಿಡಿ ವಿನ್ಯಾಸಗೊಳಿಸಲು ತಯಾರಾಗಿ ಮತ್ತು ಇದನ್ನು ನಿಮ್ಮ ಫ್ಯಾಶನ್ ಆಗಿ ಮಾಡಿ. ಈ ಕಪ್ಪು ಬಟ್ಟೆಯನ್ನು ಧರಿಸಲು ಹಲವಾರು ಮಾರ್ಗಗಳಿವೆ. ಇದರಲ್ಲಿ ಒಂದು ನಿಮ್ಮ ಕಪ್ಪು ಬಟ್ಟೆಯ ಮೇಲೆ ನೀವು ಧರಿಸಿರುವಂತಹ ಆಭರಣ ತುಂಬಾ ಚೆನ್ನಾಗಿ ಕಾಣುವಂತಾಗಬೇಕು. ದೊಡ್ಡ ಬಳೆಗಳು ಮತ್ತು ಚೊಕರ್ ನೆಕ್ಲೇಸ್ ಗಳನ್ನು ಬಳಸಬಹುದು.
ನೀವು ಪಾರ್ಟಿಯಲ್ಲಿ ತುಂಬಾ ಭಿನ್ನವಾಗಿ ಕಾಣಿಸಿಕೊಳ್ಳಲು ಮತ್ತು ಪ್ರತಿಯೊಬ್ಬರು ನಿಮ್ಮನ್ನು ನೋಡುವಂತಾಗಲು ನೀವು ಕಪ್ಪು ಬಟ್ಟೆ ಧರಿಸುವ ಕೆಲವೊಂದು ವಿಧಾನಗಳನ್ನು ಪಾಲಿಸಬೇಕು. ನೀವು ಈ ಸಣ್ಣ ಕಪ್ಪು ಬಟ್ಟೆಯನ್ನು ಪೊಲ್ಕಾ ಡಾಟ್ ಟೈಟ್ಸ್ ಗಳೊಂದಿಗೆ ಬಳಸಬಹುದು. ಕ್ರಿಯಾತ್ಮವಾಗಿರುವ ಟೈಟ್ಸ್ ನಿಮ್ಮನ್ನು ತುಂಬಾ ಸುಂದರ ಮತ್ತು ಫ್ಯಾಶನ್ ಪ್ರಿಯರಾಗಿ ಕಾಣುವಂತೆ ಮಾಡಬಹುದು. ನೀವು ಫ್ಯಾಶನ್ ನೈಟ್ ಬಗ್ಗೆ ಕನಸು ಕಾಣುತ್ತಿದ್ದರೆ ಈ ರೀತಿಯಲ್ಲಿ ಕಪ್ಪು ಬಟ್ಟೆ ಧರಿಸುವುದು ಒಳ್ಳೆಯ ಮಾರ್ಗ.
ಕೇವಲ ಕಪ್ಪು ಬಟ್ಟೆಯಿಂದ ಎಲ್ಲರನ್ನು ಸೆಳೆಯಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕೆಲವೊಂದು ವಸ್ತುಗಳು ಸೇರಿದರೆ ಮಾತ್ರ ಅದು ನಿಜವಾಗಿಯೂ ಪರಿಣಾಮ ಬೀರಬಹುದು. ಆತ್ಯಾಕರ್ಷಕ ಕೂದಲಿನ ವಿನ್ಯಾಸದೊಂದಿಗೆ ನೀವು ಕಪ್ಪು ಬಟ್ಟೆ ಧರಿಸಿ. ನಿಮ್ಮ ಸಣ್ಣ ಕಪ್ಪು ಬಟ್ಟೆಯೊಂದಿಗೆ ಹೊಳೆಯುವ ಕೂದಲು ತುಂಬಾ ಪರಿಣಾಮ ಬೀರುತ್ತದೆ. ಹೀಗೆ ಮಾಡಲು ಬಯಸುವುದಾದರೆ ವೃತ್ತಿಪರರ ಸಲಹೆ ಪಡೆಯಿರಿ.
ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಿಮ್ಮನ್ನು ನೀವು ತುಂಬಾ ಆಕರ್ಷಕವಾಗಿ ಕಾಣಿಸಿಕೊಳ್ಳಬೇಕೆಂದು ಬಯಸುವುದಾದರೆ ಇದಕ್ಕಾಗಿ ಸ್ವಲ್ಪ ಹೆಚ್ಚು ಶ್ರಮ ಬೇಕು. ನಿಮ್ಮ ಸಣ್ಣ ಕಪ್ಪು ಬಟ್ಟೆಯು ಜಾಕೆಟ್ ನೊಂದಿಗೆ ಚೆನ್ನಾಗಿ ಕಾಣಿಸಬಹುದು. ಟೈಲರ್ಡ್ ಜಾಕೆಟ್ ತುಂಬಾ ಹಿತಕರ ಮತ್ತು ನಿಮ್ಮಲ್ಲಿಗೆ ಬಂದು ಪ್ರತಿಯೊಬ್ಬರು ಬಟ್ಟೆಯ ಬಗ್ಗೆ ಪ್ರಶಂಸೆ ಮಾಡಬಹುದು. ಇದನ್ನು ಪ್ರಯತ್ನಿಸಿ ಮತ್ತು ಬದಲಾವಣೆ ನೋಡಿ.
ನೀವು ಚೋಕರ್ ನ್ನು ತುಂಬಾ ಇಷ್ಟಪಡದಿದ್ದರೆ ಆಗ ಉದ್ದ ನೆಕ್ಲೇಸ್ ನೊಂದಿಗೆ ಸಣ್ಣ ಕಪ್ಪು ಬಟ್ಟೆ ಧರಿಸಿ. ಈ ದೊಡ್ಡ ಹಾರವು ತುಂಬಾ ಆಕರ್ಷಕ ಮತ್ತು ವರ್ಣರಂಜಿತವಾಗಿ ಕಾಣುವಂತೆ ಮಾಡುತ್ತದೆ. ನೀವು ತುಂಬಾ ದಪ್ಪಗೆ ಕಾಣಿಸುತ್ತಿದ್ದೀರಿ ಎಂದು ಚಿಂತಿಸುತ್ತಿದ್ದರೆ, ಅದನ್ನು ಬಿಟ್ಟುಬಿಡಿ. ಉದ್ದಗಿನ ಹಾರವು ನೀವು ಸಪೂರ ಕಾಣುವಂತೆ ಮಾಡುತ್ತದೆ.
ನಿಮ್ಮ ಸಣ್ಣ ಕಪ್ಪು ಬಟ್ಟೆಯನ್ನು ಸ್ನೇಹಶೀಲ ಮತ್ತು ಸೊಗಸಾಗಿ ಕಾಣುವಂತೆ ಮಾಡಲು ಅದಕ್ಕೆ ಕೆಲವು ಆಭರಣ ಅಥವಾ ಪಿನ್ ಗಳನ್ನು ಚುಚ್ಚಿ. ಇದು ನಿಮ್ಮ ಬಟ್ಟೆಯ ರೂಪ ಬದಲಾಯಿಸುತ್ತದೆ ಮತ್ತು ಆಕರ್ಷಕವಾಗಿಸುತ್ತದೆ. ಸುಂದರವಾಗಿ ಕಾಣುವುದು ಪ್ರತಿಯೊಬ್ಬ ಮಹಿಳೆಯ ಕನಸು. ಆದರೆ ಸುಂದರವಾಗಿ ಕಾಣುವುದು ಅಷ್ಟು ಸುಲಭವಲ್ಲ. ಸರಳ ಮತ್ತು ಎಚ್ಚರಿಕೆಯ ವಿಧಾನಗಳನ್ನು ಪಾಲಿಸಿದರೆ ನೀವು ಭೂ ಲೋಕದ ದೇವತೆಯಂತೆ ಕಾಣಿಸಬಲ್ಲಿರಿ.



Click it and Unblock the Notifications