Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಅಂಬಾನಿ ಪತ್ನಿಗೂ ಸೀರೆ ಉಡಿಸೋದು ಈಕೆಯೇ.! ಒಂದು ಸೀರೆಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಇಡೀ ದೇಶದಲ್ಲೀಗ ಅಂಬಾನಿ ಕುಟುಂಬದ್ದೇ ಸುದ್ದಿಯಾಗಿದೆ. ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ವಿವಾಹ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಇದು ಭಾರತದ ಅತ್ಯಂತ ದುಬಾರಿ ಮದುವೆ ಕಾರ್ಯಕ್ರಮ ಎಂಬ ಖ್ಯಾತಿಗೆ ಪಾತ್ರವಾಗಿದೆ. ಆದರೆ ಈ ವೇಳೆ ಅಂಬಾನಿ ಕುಟುಂಬ ಧರಿಸುತ್ತಿರುವ ಒಂದೊಂದು ವಸ್ತುಗಳ ಬೆಲೆ ಕೇಳಿ ಜನಸಾಮಾನ್ಯ ದಂಗಾಗಿದ್ದಾನೆ.
ದಿನದ ಹಿಂದೆ ಅಂಬಾನಿ ಪತ್ನಿ ನೀತಾ ಅಂಬಾನಿ ಧರಿಸಿದ್ದ ಆಭರಣದ ಬೆಲೆ ಬರೋಬ್ಬರಿ 400 ಕೋಟಿ ರೂಪಾಯಿ ಎಂದು ತಿಳಿದು ಎಲ್ಲರು ಹುಬ್ಬೇರಿಸಿದ್ದರು. ಇದರ ಜೊತೆಗೆ ಆಕೆ ತೊಟ್ಟಿದ್ದ ಸೀರೆಯ ಬೆಲೆ ಸಹ ಕೋಟಿಗಳಲ್ಲಿದೆ ಎಂದು ತಿಳಿದು ಆಶ್ಚರ್ಯ ಪಟ್ಟಿದ್ದರು. ಇನ್ನು ಮದುವೆ ಹುಡುಗ ಹಾಗೂ ಹುಡುಗಿಯ ಬಟ್ಟೆಯ ಬೆಲೆಯಂತು ಕೇಳಲೆಬೇಡಿ ಅಷ್ಟು ದುಬಾರಿಯಾಗಿದೆ.
ಆದರೆ ನೀವು ಯೋಚಿಸಿದ್ದೀರಾ ಈ ದುಬಾರಿ ಬಟ್ಟೆಗಳನ್ನು ಡಿಸೈನ್ ಮಾಡುತ್ತಿರುವವರು ಯಾರು? ಈ ವಿನ್ಯಾಸಕರು ಈ ರೀತಿಯ ಅದ್ಭುತ ಕೆಲಸಕ್ಕೆ ಎಷ್ಟು ಹಣ ಪಡೆಯುತ್ತಾರೆ? ಎಂಬೆಲ್ಲಾ ಮಾಹಿತಿ ನೀಡು ತಿಳಿದಿರಬಹುದು. ಆದರೆ ಇವರಿಗೆಲ್ಲ ಸೀರೆ ಉಡಿಸೋದು ಯಾರು ಗೊತ್ತಾ? ಆಕೆ ಬರೀ ಸೀರೆ ಉಡಿಸಲು ತೆಗೆದುಕೊಳ್ಳುವ ಹಣ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ.

ಹೌದು ನೀತಾ ಅಂಬಾನಿ, ರಾಧಿಕಾ ಮರ್ಚೆಂಟ್ ಮತ್ತು ದೀಪಿಕಾ ಪಡುಕೋಣೆಯಿಂದ ಹಿಡಿದು ಗಿಗಿ ಹಡಿದ್ ವರೆಗೆ ಅವರು ಟಾಪ್ ಸ್ಟಾರ್ ಹಿರೋಯಿನ್‌ಗಳಿಗೂ ಸೀರೆ ಉಡಿಸುವದರಲ್ಲಿ ಫೇಮಸ್ ಆಗಿದ್ದಾರೆ. ಡಾಲಿ ಜೈನ್ ಎಂಬಾಕೆ ಈಗ ಅಂಬಾನಿ ಪತ್ನಿ, ಮಗಳು ಸೇರಿ ಹಲವರಿಗೆ ಸೀರೆ ಉಡಿಸುವ ಮೂಲಕ ಸುದ್ದಿಯಾಗಿದ್ದಾರೆ. ಈ ಕೆಲಸಕ್ಕೆ ಆಕೆ ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಾಳೆ. ಹಾಗಾದ್ರೆ ಯಾರು ಈ ಡಾಲಿ? ಸೀರೆ ಉಡಿಸುವ ಕಾರ್ಯದಿಂದ ಈಕೆ ಹಣ ಮಾಡುತ್ತಿರುವುದು ಹೇಗೆ ಎಂದು ನೋಡಿ.
ಡಾಲಿ ಜೈನ್ ಬೇರೆಲ್ಲೂ ಅಲ್ಲ ಬೆಂಗಳೂರಿನವರು. ಅವರ ತಾಯಿಯ ಸೀರೆಗಳ ಕಡೆ ಹೆಚ್ಚು ಆಕರ್ಷಿತರಾಗಿದ್ದರು. ಆದರೆ ಆಕೆಗೆ ಸೀರೆ ಉಡಲು ಮಾತ್ರ ಅವಕಾಶವಿದ್ದುದರಿಂದ, ಮದುವೆಯಾಗಿ ಕೋಲ್ಕತ್ತಾಗೆ ತೆರಳುವವರೆಗೂ ಆಕೆಗೆ ಸೀರೆ ಉಡುವುದರಲ್ಲಿ ಆಸಕ್ತಿ ಇರಲಿಲ್ಲ. ಆದರೆ ಆಕೆ ಮನೆಯಲ್ಲಿ ಸೀರೆಯನ್ನು ವಿವಿಧ ರೀತಿಯಲ್ಲಿ ವಿವಿಧ ಶೈಲಿಯಲ್ಲಿ ಉಡಲು ಆರಂಭಿಸಿದಳು. ಇದನ್ನು ಅಲಂಕಾರವಾಗಿ ಉಡುವ ಮಾರ್ಗ ಕಂಡುಕೊಂಡಳು.
2011ರಲ್ಲಿ, ಡಾಲಿ ಜೈನ್ ಅತ್ಯಂತ ವೇಗದ ಸೀರೆ ಡ್ರಾಪರ್ (18.5 ಸೆಕೆಂಡುಗಳು) ಮತ್ತು ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮಾಡಿ ಇಡೀ ದೇಶದ ಗಮನ ಸೆಳೆದರು. ಅಲ್ಲಿಯವರೆಗೆ ಸೀರೆ ಉಡುವುದರಲ್ಲಿಯೂ ಈ ರೀತಿ ದಾಖಲೆ ಬರೆಯಬಹುದು ಎಂಬುದು ಹಲವರಿಗೆ ಯೋಚಿಸಲು ಸಹ ಆಗಿರುವುದಿಲ್ಲ. ಆದರೆ ಆಕೆ ಈ ಸಾಧನೆ ಮಾಡಿ ಸುಮ್ಮನೆ ಕೂರಲಿಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡು ಒಂದು ವೃತ್ತಿಯಾಗಿಸಿದಳು.
ಮದುವೆ ಮನೆಗೆ ಆಕೆಯ ಆರ್ಡರ್ ಸಿಕ್ಕಿತು
ಆರಂಭದಲ್ಲಿ ಸಣ್ಣ ಪುಟ್ಟ ಮದುವೆಗಳಿಗೆ ಆಕೆಗೆ ಆರ್ಡರ್ ಸಿಕ್ಕಿತು ಬರುಬರುತ್ತಾ ದೊಡ್ಡ ದೊಡ್ಡ ಶ್ರೀಮಂತ ಮದುವೆಗಳು, ಸೆಲೆಬ್ರಿಟಿಗಳ ಮದುವೆಗೂ ಆಫರ್ ಬಂದಿತು. ಬಳಿಕ ಬಾಲಿವುಡ್ ಮಂದಿಗೆ ಆಕೆ ಫೇಮಸ್ ಆಗಿಬಿಟ್ಟಳು, ಈಗ ಅಂಬಾನಿ ಮದುವೆಯಲ್ಲೂ ಡಾಲಿ ಕಮಾಲ್ ಮಾಡುತ್ತಿದ್ದಾಳೆ.
ಡಾಲಿ ನೀತಾ ಅಂಬಾನಿ, ಇಶಾ ಅಂಬಾನಿ, ಶ್ಲೋಕಾ ಮೆಹ್ತಾ, ರಾಧಿಕಾ ಮರ್ಚೆಂಟ್, ಸೋನಮ್ ಕಪೂರ್, ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ, ದಿವಂಗತ ಶ್ರೀದೇವಿ ಮತ್ತು ನತಾಶಾ ಪೂನಾವಾಲಾ ಅವರಿಗೂ ಸೀರೆ ಉಡಿಸುವ ಕಾರ್ಯ ಮಾಡಿದ್ದಾಳೆ.
ಆಕೆ ಪಡೆಯುವ ಸಂಭಾವನೆ ಎಷ್ಟು?
ಇನ್ನು ಆಕೆ ಒಂದು ಸೀರೆ ಉಡಿಸುವ ಕಾರ್ಯಕ್ಕೆ ತೆಗೆದುಕೊಳ್ಳುವ ಸಂಭಾವನೆ ಕೇಳಿದ್ರೆ ನಿಮಗೂ ಅಚ್ಚರಿಯಾಗುತ್ತೆ. ಆಕೆ ಒಂದು ಸೀರೆ ಉಡಿಸಲು ಕೆಲವೇ ನಿಮಿಷಗಳ ತೆಗೆದುಕೊಳ್ಳುತ್ತಾಳೆ. ಆದರೆ ವರದಿಗಳ ಪ್ರಕಾರ ಒಂದು ಸೀರೆ ಉಡಿಸಲು ಆಕೆ ಬರೋಬ್ಬರಿ 35 ಸಾವಿರ ರೂಪಾಯಿಂದ 2 ಲಕ್ಷ ರೂಪಾಯಿ ವರೆಗೂ ಸಂಭಾವನೆ ಪಡೆಯುತ್ತಾಳೆ. ಇನ್ನು ಅಂಬಾನಿ ಕುಟುಂಬದ ಕಾರ್ಯಕ್ರಮದ ಅಂದಮೇಲೆ ಅತೀ ಹೆಚ್ಚು ಸಂಭಾವನೆ ಸಿಕ್ಕಿರುತ್ತದೆ.



Click it and Unblock the Notifications
