Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
Winter Skincare Tips: ಚಳಿಗಾಲದಲ್ಲಿ ತ್ವಚೆ ಒಣಗದಂತೆ ತಡೆಯುವುದು ಹೇಗೆ? ಏನು ಮಾಡಬೇಕು?
Winter Skincare Tips: ಮಳೆಗಾಲ ಅಂತ್ಯಗೊಂಡು ನಿಧಾನವಾಗಿ ಚಳಿಗಾಲ ಆರಂಭವಾಗುತ್ತಿದೆ. ನವೆಂಬರ್ ಮಧ್ಯದಿಂದಲೇ ಬಹುತೇಕ ಭಾರತದ ಎಲ್ಲಾ ಕಡೆಗಳಲ್ಲಿ ಚಳಿಗಾಲ ಆರಂಭವಾಗಿರಲಿದೆ. ಅದ್ರಲ್ಲೂ ಉತ್ತರ ಭಾರತದಲ್ಲಿ ಈ ಬಾರಿ ನಿಗದಿಗಿಂತ ಹೆಚ್ಚು ಚಳಿ ನೋಡಬಹುದಂತೆ. ಹಾಗೆ ಈ ಬಾರಿಯ ಚಳಿಗಾಲ ಅಂದಾಜಿಸಿರುವುದಕ್ಕಿಂತ ಹೆಚ್ಚು ಶೀತಗಾಳಿಯಿಂದ ಕೂಡಿರಲಿದೆ ಎಂದು ತಿಳಿದುಬಂದಿದೆ.
ಚಳಿಗಾಲ ಬಂದ ಮೇಲೆ ನಿಮ್ಮ ಚರ್ಮ ಒಣಗಿ, ಸಿಪ್ಪೆ ಸುಲಿಯುವುದು, ಒಣಗಿ ಗಡಸಾಗುವುದು, ಬಿಳಿಯಾಗುವುದು ನೋಡಬಹುದು. ಒಣ ಹವೆಯ ಪರಿಣಾಮವಾಗಿ ಚರ್ಮದ ಮೇಲಿನ ತೇವಾಂಶ ಒಣಗುತ್ತದೆ. ಇದು ನಿಮ್ಮ ಸೌಮ್ಯವಾದ ತ್ವಚೆಗೆ ಹಾನಿ ಮಾಡುತ್ತದೆ. ಇದು ನಿಮ್ಮ ತ್ವಚೆಯನ್ನು ಕಪ್ಪುಗೊಳಿಸುವುದು, ಒಡೆದ ಚರ್ಮ, ಕಲೆಗಳು, ಒರಟಾಗುವಿಕೆಗೆ ಕಾರಣವಾಗಲಿದೆ.

ಹೀಗಾಗಿ ಚಳಿಗಾಲದಲ್ಲಿ ನೀವು ಹೆಚ್ಚು ಚರ್ಮದ ಆರೈಕೆ ಕಡೆಗೆ ಗಮನವಿಡುವುದು ಮುಖ್ಯವಾಗುತ್ತದೆ. ಅದ್ರಲ್ಲೂ ಚಿಕ್ಕ ಮಕ್ಕಳ ತ್ವಚೆ ಬಹಳ ಸೂಕ್ಷ್ಮವಾಗಿರುವ ಕಾರಣ ವಿಶೇಷ ಕಾಳಜಿ ಅಗತ್ಯವಿರಲಿದೆ. ಹಾಗಾದ್ರೆ ಚಳಿಗಾಲದಲ್ಲಿ ಚರ್ಮದ ಆರೈಕೆ ಹೇಗಿರಬೇಕು? ಚರ್ಮ ಒಣಗದಂತೆ ನೋಡಿಕೊಳ್ಳಲು ಏನು ಮಾಡಬೇಕು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ತೆಂಗಿನ ಎಣ್ಣೆ
ತೆಂಗಿನ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ವಿಶೇಷ ಗುಣಗಳಿಂದಾಗಿ ಅದನ್ನು ಚಳಿಗಾಲದ ತ್ವಚೆಯ ಆರೈಕೆಯ ವಸ್ತುವಾಗಿ ಬಳಸಬಹುದು. ಇದು ಚರ್ಮದಲ್ಲಿ ತೇವಾಂಶ ಕಾಪಾಡಿಕೊಳ್ಳಲು ಸಹಾಯ ಮಾಡುವಂತಹ ಕೊಬ್ಬಿನಾಮ್ಲವನ್ನು ಹೊಂದಿದೆ. ಇದರಿಂದ ನಿಮ್ಮ ತ್ವೆಯ ಮೇಲೆ ಯಾವಾಗಲು ತೇವಾಂಶ ಉಳಿಯುವಂತೆ ನೋಡಿಕೊಳ್ಳಲಿದೆ. ಹೀಗಾಗಿ ಸ್ನಾದ ಬಳಿಕ ತೆಳುವಾಗಿ ಈ ಕೊಬ್ಬರಿ ಎಣ್ಣೆ ಹಚ್ಚುವುದು ಉತ್ತಮ.
ಅಲೋವೆರಾ
ಚಳಿಗಾಲದಲ್ಲಿ ಒಣ ಮತ್ತು ಕಿರಿಕಿರಿಯುಂಟುಮಾಡುವ ಚರ್ಮವನ್ನು ಹೊಂದಿದ್ದರೆ, ನಿಮ್ಮ ಚಳಿಗಾಲದ ಚರ್ಮದ ಆರೈಕೆ ದಿನಚರಿಯ ಭಾಗವಾಗಿ ಅಲೋವೆರಾ ಜೆಲ್ ಅನ್ನು ಬಳಸಲು ಪ್ರಯತ್ನಿಸಿ. ಅಲೋವೆರಾದಲ್ಲಿನ ಅಂಶಗಳು ನಿಮ್ಮ ತ್ವಚೆಯನ್ನು ಮೃದುವಾಗಿಸುವುದು ಸೇರಿದಂತೆ ತ್ವಚೆಯ ಆರೋಗ್ಯ ಕಾಪಾಡಲಿದೆ.
ಜೇನುತುಪ್ಪ
ಜೇನುತುಪ್ಪವು ಚಳಿಗಾಲದ ಚರ್ಮದ ಆರೈಕೆಗೆ ಅತ್ಯುತ್ತಮ ಆಯ್ಕೆಯಾಗಿದೆ. ನಿಮ್ಮ ಚರ್ಮವು ಒಣಗದಂತೆ ನೋಡಿಕೊಳ್ಳಲು ಇದು ಸಹಾಯ ಮಾಡಲಿದೆ. ಜೇನು ತುಪ್ಪವು ಚರ್ಮದ ಕಲೆಗಳನ್ನು ಕೂಡ ನಿವಾರಣೆ ಮಾಡುತ್ತದೆ. ಹೀಗಾಗಿ ಚರ್ಮದ ಮೇಲೆ ಹಚ್ಚಿದ ಬಳಿಕ 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು.
ಆಲಿವ್ ಎಣ್ಣೆ
ಆಲಿವ್ ಎಣ್ಣೆ ಅಡುಗೆಗೆ ಮಾತ್ರವಲ್ಲ ಇದು ನಿಮ್ಮ ಚಳಿಗಾಲದ ಚರ್ಮದ ಆರೈಕೆಗೂ ಉತ್ತಮವಾಗಿದೆ. ಇದರಲ್ಲಿನ ಅತ್ಯದಿಕ ವಿಟಮಿನ್ ಇ ಚರ್ಮದ ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮ ಅಂಶವಾಗಿದೆ. ಇದು ನಿಮ್ಮ ಒಣ ಚರ್ಮ ಸಮಸ್ಯೆಯನ್ನು ನಿವಾರಣೆ ಮಾಡಲಿದೆ. ಆಲಿವ್ ಎಣ್ಣೆಯನ್ನು ಉಗುರು ಬೆಚ್ಚಗೆ ಮಾಡಿ ಹಚ್ಚಿಕೊಂಡ ಬಳಿಕ 15 ನಿಮಿಷ ಬಿಟ್ಟು ಸ್ನಾನ ಮಾಡಬೇಕು. ಇದರಿಂದ ನಿಮ್ಮ ತ್ವಚೆ ಒಣಗುವುದು ಕಡಿಮೆಯಾಗಲಿದೆ. ಹಾಗೆ ಇದು ನಿಮ್ಮ ಚರ್ಮದ ಸತ್ತ ಕೋಶಗಳನ್ನು ಕೂಡ ತೆಗೆದು ಹಾಕಲಿದೆ.
ನೀರು ಕುಡಿಯುವುದು
ಚಳಿಗಾಲದ ಸಮಯದಲ್ಲಿ ಬಾಯಾರಿಕೆ ಕಡಿಮೆಯಾಗಬಹುದು. ಆದ್ರೆ ಹೆಚ್ಚು ನೀರುಕುಡಿಯುವುದು ಕೂಡ ನಿಮ್ಮ ಚರ್ಮದ ಆರೈಕೆಗೆ ಬಹಳ ಸಹ ಚರ್ಮದಲ್ಲಿನ ತೇವಾಂಶ ಹಾಗೆ ಉಳಿಯಲು ಸಹಾಯ ಮಾಡಲಿದೆ. ಹಾಗೆ ಮೈ ಸಂಪೂರ್ಣ ಮುಚ್ಚಿಕೊಳ್ಳುವಂತಹ ಬಟ್ಟೆಯನ್ನು ಧರಿಸುವುದು ಸಹ ನಿಮಗೆ ತ್ವಚೆಯ ಆರೋಗ್ಯ ಕಾಪಾಡಲು ಸಹಕಾರಿಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
