Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕೇರಳ ಸೀರೆ ಈ ಕಾರಣಕ್ಕೆ ಸೀರೆ ಉಡುವ ಎಲ್ಲಾ ಹೆಣ್ಮಕ್ಕಳಿಗೆ ಇಷ್ಟವಾಗುವುದು
ನಮ್ಮ ಭಾರತದ ಪ್ರತಿಯೊಂದು ರಾಜ್ಯದಲ್ಲಿಯೂ ಉಡುಗೆ ತೊಡುಗೆಯಲ್ಲಿ ವ್ಯತ್ಯಾಸ ಕಾಣಬಹುದು. ಕರ್ನಾಟಕದಲ್ಲಿ ಮೈಸೂರು ಸಿಲ್ಕ್, ಇಳಿಕಲ್ ಸೀರೆ, ಕರ್ನಾಟಕ ಸಿಲ್ಕ್ ಅಂತ ಸೀರೆಯಲ್ಲಿ ವಿಭಿನ್ನತೆಯಿದೆ, ನಮ್ಮಲ್ಲಿಯ ಮೈಸೂರು ಸಿಲ್ಕ್ ಸೀರೆಯನ್ನು ಇಲ್ಲಿಗೆ ಕರ್ನಾಟಕಕ್ಕೆ ಭೇಟಿ ನೀಡಿದವರು ಖರೀದಿಸುತ್ತಾರೆ.

ಅದರಂತೆ ಕೇರಳಲ್ಲಿ ಕೇರಳ ಸೀರೆ ಅಲ್ಲಿಯ ವಿಶೇಷ ಸಂದರ್ಭಗಳಲ್ಲಿ ಗಮನ ಸೆಳೆಯುವ ಉಡುಗೆಯಾಗಿದೆ. ಇದನ್ನು ಕೇರಳದಲ್ಲಿ ಮಾತ್ರ ಇತರ ಕಡೆಯೂ ಹೆಣ್ಮಕ್ಕಳು ಈ ಸೀರೆ ಧರಿಸಲು ಇಷ್ಟಪಡುತ್ತಾರೆ, ಕಾರಣ ಆ ಸೀರೆಯ ಅಂದ. ಎಲ್ಲರಿಗೂ ಈ ಸೀರೆ ತುಂಬಾ ಚೆನ್ನಾಗಿ ಮ್ಯಾಚ್ ಆಗುತ್ತೆ.
ಒಂದು ಸೀರೆಯಿದ್ದರೆ ಸಾಕು, ಭಿನ್ನ ಬಣ್ಣದ ಬ್ಲೌಸ್‌ನಲ್ಲಿ ಭಿನ್ನ ಲುಕ್ ಸಿಗುವುದು
ಈ ಸೀರೆಯ ವಿಶೇಷತೆಯೆಂದರೆ ಇದಕ್ಕೆ ಮ್ಯಾಚಿಂಗ್ ಬ್ಲೌಸ್ ಬೇಕೆಂತಿಲ್ಲ, ಎಲ್ಲಾ ಬಣ್ಣದ ಬ್ಲೌಸ್‌ಗೆ ಈ ಸೀರೆ ಚೆನ್ನಾಗಿ ಸೂಟ್ ಆಗುತ್ತೆ. ಕಪ್ಪು, ಕೆಂಪು, ಹಸಿರು, ನೇರಳೆ, ಗೋಲ್ಡನ್ ಕಲರ್ ಹೀಗೆ ವಿವಿಧ ಬಣ್ಣದ ಬ್ಲೌಸ್‌ಗೆ ಈ ಸೀರೆ ತುಂಬಾ ಚೆನ್ನಾಗಿ ಮ್ಯಾಚ್ ಆಗುತ್ತೆ.
ಒಂದೇ ಸೀರೆಯನ್ನು ಎಷ್ಟು ಬಾರಿ ಧರಿಸಿದರು ಬೋರ್ ಆಗಲ್ಲ
ಸಾಮಾನ್ಯವಾಗಿ ಎಷ್ಟೇ ಬೆಲೆ ಹಿಡಿದ ಸ್ಯಾರಿಯಾದರು ಒಂದೆರಡು ಬಾರಿ ಉಟ್ಟ ಮೇಲೆ ಆ ಸೀರೆ ಮುಟ್ಟಲ್ಲ, ಈ ಸೀರೆ ಧರಿಸಿದ್ದೇನೆ ಇದನ್ನು ಮತ್ತೆ ಹಾಕಿದರೆ ಒಂದೇ ಸೀರೆ ಉಟ್ಟು ಬಂದಿದ್ದಾಳೆ ಎಂದು ಹೇಳುತ್ತಾರೆ ಎಂದು ಹಿಂದೇಟು ಹಾಕುತ್ತೇವೆ, ಆದರೆ ಇದನ್ನು ಪ್ರತಿಬಾರಿ ಬ್ಲೌಸ್ ಬದಲಾವಣೆ ಮಾಡಿ ಧರಿಸಿದರೆ ಸಾಕು ತುಂಬಾನೇ ಅತ್ಯಾಕರ್ಷಕ ಲುಕ್ ಸಿಗುತ್ತೆ. ಅಲ್ಲದೆ ಒಂದೇ ಸೀರೆಯನ್ನೇ ಪದೇ ಪದೇ ಧರಿಸುತ್ತಿದ್ದಾಳೆ ಎಂದು ಕೂಡ ಅನಿಸುವುದಿಲ್ಲ.
ಬಿಳಿ ಬಣ್ಣದ ಸೀರೆಗೆ ಗೋಲ್ಡನ್ ಬಣ್ಣದ ಅಂಚು
ಸಾಂಪ್ರದಾಯಕ ಕೇರಳ ಸೀರೆಯೆಂದರೆ ಬಿಳಿ ಬಣ್ಣದ ಸೀರೆಗೆ ಗೋಲ್ಡನ್ ಅಂಚು, ಸೆಲೆಬ್ರಿಟಿಗಳಿಂದ ಹಿಡಿದು ಎಲ್ಲರು ಈ ಸೀರೆ ನಮ್ಮ ಬಳಿ ಇರಬೇಕೆಂದು ಬಯಸುವಷ್ಟು ಆಕರ್ಷಕ ಈ ಸೀರೆ.
ವಿವಿಧ ಪ್ರಿಂಟ್‌ಗಳಲ್ಲಿ ದೊರೆಯುತ್ತದೆ
ಈಗ ಈ ಸೀರೆ ವಿವಿಧ ಪ್ರಿಂಟ್‌ಗಳಲ್ಲಿ ದೊರೆಯುವುದು, ಆ ಪ್ರಿಂಟ್ ಡಿಸೈನ್‌ಗಳ ಸೀರೆ ನಮ್ಮ ಅಂದವನ್ನು ಹೆಚ್ಚಿಸುತ್ತದೆ.
ಈ ಸೀರೆ ಧರಿಸಿ ಸಾಂಪ್ರದಾಯಕ ಅಲಂಕಾರ ಮಾಡಿಕೊಂಡರೆ ಆಕರ್ಷಕ ಲುಕ್ ನೀಡುತ್ತೆ
ನಾವು ದಪ್ಪವಿರಲಿ, ತೆಳ್ಳಗಿರಲಿ, ಬಿಳಿಯಿರಲಿ, ಕಪ್ಪು ಬಣ್ನದವರಾಗಿರಲಿ ಎಲ್ಲರಿಗೂ ಈ ಸೀರೆ ಸೂಟ್ ಆಗುತ್ತೆ ಎನ್ನುವುದು ಇದರ ಇನ್ನೊಂದು ವಿಶೇಷತೆ. ಈ ಸೀರೆ ಧರಿಸಿ ಮಲ್ಲಿಗೆ ಹೂವು, ಕಣ್ಣಿಗೆ ಕಾಡಿಗೆ , ಹಣೆಗೆ ಒಂದು ಬಿಂದಿ ಹಾಕಿದರೆ ಸಾಕು ತುಂಬಾನೇ ಆಕರ್ಷಕವಾಗಿ ಕಾಣುವುದು.
ಈ ಸೀರೆ ಬೆಲೆ ದುಬಾರಿಯಲ್ಲ
ರೇಷ್ಮೆ ಸೀರೆಯಂತೆ ಈ ಸೀರೆ ಬೆಲೆಯೇನೂ ದುಬಾರಿಯಲ್ಲ ಕಡಿಮೆ ಸಾವಿರ ರುಪಾಯಿ ಒಳಗಡೆ ಕೂಡ ಅತ್ಯಾಕರ್ಷಕ ಸೀರೆ ದೊರೆಯುವುದು. ಕಾಟನ್ ಸೀರೆಯಾಗಿರುವುದರಿಂದ ಉರಿ ಬೇಸಿಗೆಯಲ್ಲಿ ಧರಿಸಿದರೂ ಕಂಫರ್ಟ್.



Click it and Unblock the Notifications
