Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ನಿಮ್ಮ ತ್ವಚೆಗೆ ಯಾವ ಬಗೆಯ ಸನ್‌ಸ್ಕ್ರೀನ್ ಬೆಸ್ಟ್ ಎಂದು ಗೊತ್ತೆ?
ಸನ್‌ಸ್ಕ್ರೀನ್ ಎಂಬುವುದು ಬಿಸಿಲಿರಲಿ, ಮಳೆಯಿರಲಿ ನಿಮ್ಮ ಬಳಿ ಇರಲೇಬೇಕಾದ ಬ್ಯೂಟಿ ಪ್ರಾಡೆಕ್ಟ್ ಆಗಿದೆ. ಇದನ್ನು ಸೌಂದರ್ಯ ವರ್ಧಕ ಎಂದು ಹೆಳಲು ಸಾಧ್ಯವಿಲ್ಲ, ಬದಲಿಗೆ ತ್ವಚೆ ಆರೈಕೆಯ ವಸ್ತು ಎಂದು ಹೇಳಬಹುದು. ಬಿಸಿಲಿನಿಂದ ತ್ವಚೆ ರಕ್ಷಣೆ ಮಾಡುವಲ್ಲಿ ಈ ಸನ್‌ಸ್ಕ್ರೀನ್ ತುಂಬಾನೇ ಅವಶ್ಯಕ. ಇದರ ಪ್ರಯೋಜನ ಹಾಗೂ ನಿಮ್ಮ ತ್ವಚೆಗೆ ಬೆಸ್ಟ್ ಆದ ಸನ್‌ಸ್ಕ್ರೀನ್ ಯಾವುದು ಎಂದು ನೋಡೋಣ ಬನ್ನಿ:

ಸನ್‌ಸ್ಕ್ರೀನ್ ಪ್ರತಿಯೊಬ್ಬರು ಬಳಸಬೇಕು, ಏಕೆ?
ಸನ್‌ಸ್ಕ್ರೀನ್ ಲೋಷನ್ ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ ನಿಡುತ್ತದೆ. ಸೂ್ರ್ಯನ ತೀಕ್ಷ್ಣ ಕಿರಣಗಳು ಚರ್ಮದ ಮೇಲೆ ಬಿದ್ದರೆ ಇದರಿಂದ ಸನ್‌ಬರ್ನ್, ಕ್ಯಾನ್ಸರ್ ಮುಂತಾದ ಅಪಾಯ ಉಂಟಾಗುವುದು. ಇದನ್ನು ತಡೆಗಟ್ಟಲು ಸಹಕಾರಿಯಾಗಿದೆ. ಸನ್‌ಸ್ಕ್ರೀನ್ ಬಳಸುವುದರಿಂದ ತ್ವಚೆಯಲ್ಲಿ ನೆರಿಗೆ ಬೀಳುವುದು ತಡೆಗಟ್ಟಬಹುದು. ತ್ವಚೆಯಲ್ಲಿ ಕೊಲೆಜಿನ್ ಉತ್ಪತ್ತಿಗೆ ಸಹಕಾರಿಯಾಗುವುದರಿಂದ ತ್ವಚೆ ಕಾಂತಿಯುತವಾಗಿರುತ್ತದೆ, ತ್ವಚೆ ಕಪ್ಪಾಗುವುದಿಲ್ಲ.
ನಿಮ್ಮ ತ್ವಚೆಗೆ ಬೆಸ್ಟ್ ಸನ್‌ಸ್ಕ್ರೀನ್ ಯಾವುದು?
ನೀವು ಸನ್‌ಸ್ಕ್ರೀನ್ ಅನ್ನು ಪ್ರತಿದಿನ ಬಲಸಬೇಕು, ಅದರಲ್ಲೂ ನಿಮ್ಮ ಚರ್ಮಕ್ಕೆ ಸರಿಹೊಂದುವ ಲೋಷನ್ ಆಯ್ಕೆ ಮಾಡಬೇಕು.ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ನೀವು ಯಾವ ರೀತಿಯ ಸನ್‌ಸ್ಕ್ರೀನ್ ಅನ್ನು ಬಳಸಬೇಕು ಎಂದು ನೋಡೋಣ ಬನ್ನಿ:
ತ್ವಚೆಯಲ್ಲಿ ಮೊಡವೆ ಇದ್ದರೆ
ನೀವು ಮೊಡವೆ ಅಥವಾ ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದ ಸನ್ ಸ್ಕ್ರೀನ್ ಕೂಡ ಸರಿಯಾಗಿ ಆಯ್ಕೆ ಮಾಡಬೇಕು. ಮೊಡವೆ ತ್ವಚೆಗೆ ಸಿಲಿಕಾನ್ ಆಧಾರಿತ ಸನ್‌ಸ್ಕ್ರೀನ್ ಬಳಸಬೇಕು.
ಮುಖದಲ್ಲಿ ಕಲೆ ಅಧಿಕವಿದ್ದರೆ
ಮುಖದಲ್ಲಿ ಕಲೆ ಅಧಿಕವಿದ್ದರೆ ಅದನ್ನು ಮೆರ ಮಾಚಲು ಹಾಗೂ ತ್ವಚೆ ರಕ್ಷಣೆಗೆ ಟಿಂಟ್ ಇರುವ ಬಣ್ಣದ ಸನ್‌ಸ್ಕ್ರೀನ್ ಅನ್ನು ಬಳಸಬಹುದು. ವಾಸ್ತವವಾಗಿ, ಮೇಕ್ಅಪ್ ಧರಿಸಲು ಇಷ್ಟಪಡದ ಮಹಿಳೆಯರಿಗೆ ಈ ಸನ್‌ಸ್ಕ್ರೀನ್ ಅತ್ಯುತ್ತಮವಾದ ಆಯ್ಕೆಯಾಗಿದೆ.
ಆಯ್ಲಿ ಸ್ಕಿನ್
ನಿಮ್ಮ ಎಣ್ನೆ ತ್ವಚೆಯಾಗಿದ್ದರೆ ಬಿಸಿಲಿಲ್ಲಿ ಓಡಾಡಿದಾಗ ಮತ್ತಷ್ಟು ಜಿಡ್ಡು-ಜಿಡ್ಡಾಗುವುದು. ನೀವು ಸನ್‌ಸ್ಕ್ರೀನ್ ಕ್ರೀಮ್ ಬದಲಿಗೆ ಪೌಡರ್ ಬಳಸುವುದು ಒಳ್ಳೆಯದು.
ಡ್ರೈ ಸ್ಕಿನ್
ಡ್ರೈ ಸ್ಕಿನ್‌ನವರು, ಸಿರಾಮೈಡ್ಗಳು ಅಥವಾ ಹೈಲುರಾನಿಕ್ ಆಮ್ಲವಿರುವ ಸನ್‌ಸ್ಕ್ರೀನ್ ಲೋಷನ್ ಆಯ್ಕೆ ಮಾಡಿ. ನೀವು ಮೊದಲು ಮಾಯಿಶ್ಚರೈಸರ್ ಹಚ್ಚಿ ನಂತರ ಸನ್‌ಸ್ಕ್ರೀನ್ ಬಳಸಿ.
6. ಗೋಧಿ ಬಣ್ಣದವರಾಗಿದ್ದರೆ
ಕಪ್ಪು ಅಥವಾ ಗೋಧಿ ಬಣ್ಣದ ಚರ್ಮದವರಾಗಿದ್ದರೆ, ಮಿನರಲ್ಸ್ ಹೊಂದಿರುವ ಸನ್‌ಸ್ಕ್ರೀನ್‌ನಿಂದ ದೂರವಿರಿ. ನಿಮ್ಮ ಚರ್ಮಕ್ಕೆ ಒಪ್ಪದಿದ್ದಾಗ ಟಿಂಟೆಡ್ ಮಿನರಲ್‌ಯುಕ್ತ ಸನ್‌ಸ್ಕ್ರೀನ್ ಸೂಕ್ತ.



Click it and Unblock the Notifications
