Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ವ್ಯಾಂಪೈರ್ ಫೇಶಿಯಲ್ ಮಾಡಿಸಿದ 3 ಮಹಿಳೆಯರಿಗೆ HIV: ವ್ಯಾಂಫೈರ್ ಫೇಶಿಯಲ್ ಎಂದರೇನು? ಸೌಂದರ್ಯ ವೃದ್ಧಗೆ ಹೇಗೆ ಸಹಕಾರಿ?
ವ್ಯಾಂಪೈರ್ ಫೇಶಿಯಲ್ ಬಗ್ಗೆ ಕೇಳಿರಬಹುದು, ದೊಡ್ಡ ಸೆಲೆಬ್ರಿಟಿಗಳು, ದುಡ್ಡಿರುವವರು ತಮ್ಮ ಯೌವನದ ಸೌಂದರ್ಯ ಉಳಿಸಿಕೊಳ್ಳಲು ಈ ಫೇಶಿಯಲ್ ಮಾಡಿಸುತ್ತಾರೆ. ಕಿಮ್ ಕದರ್ಶಿಯನ್ ಹಿಡಿದು ಅನೇಕ ಸೆಲೆಬ್ರಿಟಿ ಈ ಫೇಶಿಯಲ್ ಮಾಡಿಸಿದ್ದಾರೆ. ಕಿಮ್ ಕದರ್ಶಿಯನ್ ಮಾಡಿಸಿದ ಮೇಲೆ ಈ ಫೇಶಿಯಲ್ ತುಂಬಾನೇ ಗಮನ ಸೆಳೆದಿತ್ತು.

ಆದರೆ ಈ ಫೇಶಿಯಲ್ ಮಾಡಿಸುವಾಗ ಜಾಗ್ರತೆವಹಿಸಬೇಕು, ಏಕೆಂದರೆ ಈ ಮಾಡಿಸಿದ ಮೇಲೆ 3 ಮೆಕ್ಸಿಕೊ ಮಹಿಳೆಯರಿಗೆ ಹೆಚ್ ಐವಿ ಬಂದಿರುವುದಾದರೆ ಸಿಡಿಸಿ ( Centers for Disease Control and Prevention) ತಿಳಿಸಿದೆ. ಫೇಶಿಯಲ್ ಮಾಡಿಸಿದಾಗ ಏಕೆ ಹೆಚ್‌ಐವಿ ಬಂದಿದೆ ಎಂದು ತನಿಖೆ ನಡೆಸಿದಾಗ ಅಲ್ಲಿಯ ಕೆಲ ಕ್ಲಿನಿಕ್‌ಗಳು ಒಂದು ಸಲ ಬಳಸಿ ಬಿಸಾಡಬೇಕಾಗಿದ್ದ ವಸ್ತುಗಳನ್ನು ಮರುಬಳಕೆ ಮಾಡುತ್ತಿರುವುದು ಕಂಡು ಬಂತು.
ಈ ವ್ಯಾಂಫೈರ್ ಫೇಶಿಯಲ್ ಎಂದರೇನು?
ವ್ಯಾಂಪೈರ್ ಫೇಶಿಯಲ್ ಎಂಬುವುದು PRP ತಂತ್ರಜ್ಞಾನ ಬಳಸಿ ಮಾಡುವ ಫೇಶಿಯಲ್ ಆಗಿದೆ. ಈ ಫೇಶಿಯಲ್‌ನಲ್ಲಿ ಕ್ಲೈಂಟ್‌ನ ರಕ್ತವನ್ನು ತೆಗೆದು ಸೆಂಟ್ರಿಫ್ಯೂಜ್ ಎಂಬ ಸಾಧನದಲ್ಲಿ ಹಾಕಿ ಪ್ಲಾಸ್ಮ, ಬಿಳಿ ರಕ್ತಕಣ, ಕೆಂಪು ರಕ್ತಕಣ ಎಂದು ವಿಭಜನೆ ಮಾಡಲಾಗುವುದು. ನಂತರ ವೈದ್ಯರು ಪ್ಲೇಟ್‌ಲೆಟ್ ಅಥವಾ ಪ್ಲಾಸ್ಮಾ ಅಥವಾ ಪ್ಲೇಟ್‌ಲೆಟ್ ರಿಚ್ ಪ್ಲಾಸ್ಮಾ ತೆಗೆದುಕೊಂಡು ಅದೇ ಕ್ಲೈಂಟ್‌ನ ಮುಖಕ್ಕೆ ಮೈಕ್ರೋನೀಡ್ಲಿಂಗ್ ಮೂಲಕ ಸೇರಿಸಲಾಗುವುದು.
ಈ ಫೇಶಿಯಲ್ ಮಾಡಿದರೆ ಮುಖದಲ್ಲಿ ಬೇಗನೆ ನೆರಿಗೆ ಬೀಳುವುದಿಲ್ಲ, ಸನ್ ಡ್ಯಾಮೇಜ್, ಪಿಗ್ಮೆಂಟೇಷನ್ ತಡೆಯುತ್ತದೆ, ಇದು ದುಬಾರಿ ಫೇಶಿಯಲ್ ಆಗಿದೆ. ಇಲ್ಲಿ ಮೈಕ್ರೋಬ್ಲೇಡಿಂಗ್‌ಗೆ ಹಾಗೂ ರಕ್ತ ಹೀರಲು ಬಳಸಿದ ವಸ್ತುಗಳನ್ನು ಮತ್ತೆ ಬಲಸುವಂತಿಲ್ಲ, ಆದರೆ ಕ್ಲಿನಿಕ್‌ನವರು ಮಾಡಿದ ಎಡವಟ್ಟಿನಿಂದಾಗಿ ಮೂರು ಮಹಿಳೆಯರಿಗೆ ಹೆಚ್‌ಐವಿ ಬರುವಂತೆ ಆಗಿದೆ.
ಈ ಕಾರಣ ವ್ಯಾಂಫೈರ್ ಫೇಶಿಯಲ್ ಮಾಡುತ್ತಾರೆ
ಮುಖದಲ್ಲಿ ಕೊಲೆಜಿನ್ ಉತ್ಪತ್ತಿ ಹೆಚ್ಚಿಸುತ್ತದೆ
ಮುಖದಲ್ಲಿ ಕೊಲೆಜಿನ್ ಉತ್ಪತ್ತಿ ಹೆಚ್ಚಿಸುವುದರಿಂದ ಮುಖದಲ್ಲಿ ಯೌವನ ಕಳೆ ಮಾಸುವುದಿಲ್ಲ, ಮುಖದ ಕಾಂತಿ ಹೆಚ್ಚಾಗುವುದು.
ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ
ಈ ವ್ಯಾಂಫೈರ್ ಫೇಶಿಯಲ್ ಮಾಡುವುದರಿಂದ ಮುಖದಲ್ಲಿ ನೆರಿಗೆ ಬೀಳುವುದನ್ನು ತಡೆಗಟ್ಟಬಹುದು. ಹೀಗಾಗಿ 50 ವರ್ಷ ದಾಟಿದರೂ 25ರ ಹರೆಯದಂತೆ ಕಾಣಿಸಲು ಈ ಫೇಶಿಯಲ್ ಮಾಡಿಸುತ್ತಾರೆ.
ಮುಖ ಫಳ ಫಳ ಹೊಳೆಯುತ್ತೆ
ಈ ಫೇಶಿಯಲ್ ಮಾಡಿಸಿದರೆ ಮುಖ ಡ್ರೈಯಾಗುವುದಿಲ್ಲ, ಮುಖ ಫಳ ಫಳ ಹೊಳೆಯುತ್ತೆ. ಅಲ್ಲದೆ ಕಡಿಮೆ ಮೇಕಪ್‌ನಲ್ಲಿಯೂ ಆಕರ್ಷಕವಾಗಿ ಕಾಣಬಹುದು.
ಹೆಚ್ಚು ನೋವಾಗಲ್ಲ
ಈ ಫೇಶಿಯಲ್ ಮಾಡಿಸಲು ಹೆಚ್ಚು ನೋವಾಗಲ್ಲ, ಅಲ್ಲದೆ ಹೆಚ್ಚು ಟೈಮ್ ಕೂಡ ತೆಗೆಯಲ್ಲ.. 2 ನಿಮಿಷಕ್ಕೆ ರಕ್ತ ತೆಗೆಯಲಾಗುವುದು, ನಂತರ ನಂತರ ಪ್ಲಾಸ್ಮಾ, ಪ್ಲೇಟ್‌ಲೆಟ್ ಪ್ರತ್ಯೇಕಿಸಿ 30-60 ನಿಮಿಷದಲ್ಲಿ ಫೇಶಿಯಲ್ ಮುಗಿಯುತ್ತದೆ, ಅಲ್ಲದೆ ಮುಖ ಕೆಂಪಾಗುವುದು ನೋವು ಉಂಟಾಗುವುದಿಲ್ಲ.
ಭಾರತದಲ್ಲಿ ಇದಕ್ಕೆ ಎಷ್ಟು ಖರ್ಚಾಗುವುದು?
ಆಸ್ಪತ್ರೆ ಮೇಲೆ ರೇಟ್ ಭಿನ್ನವಾಗಿರುತ್ತದೆ, ಆದರೆ ಒಂದು ಸೆಷನ್‌ಗೆ 20,000ಕ್ಕಿಂತ ಹೆಚ್ಚೇ ಬೇಕು.
ಯಾರಿಗೆ ಈ ವ್ಯಾಂಫರ್ ಫೇಶಿಯಲ್ ಪ್ರಯೋಜನಕಾರಿ?
ಮೊಡವೆ ಕಲೆ ತುಂಬಾ ಇದ್ದರೆ
ಪಿಗ್ಮೆಂಟೇಷನ್ ಸಮಸ್ಯೆಯಿದ್ದರೆ
ಮುಖದಲ್ಲಿ ನೆರಿಗೆ ಬೀಳುವುದನ್ನು ತಡೆಗಟ್ಟಲು
ಫೇಸ್‌ಲಿಫ್ಟ್ ಮಾಡಿಸಲು ಇಷ್ಟವಿಲ್ಲದಿದ್ದರೆ
ಇದರ ಅಡ್ಡಪರಿಣಾಮಗಳೇನು?
ಸೂಜಿಯನ್ನು ಹೊಸದು ಬಳಸಿದರೆ ಹೆಚ್‌ಐವಿ ಭಯವಿಲ್ಲ, ಆದರೆ ಈ ಕೆಲ ಅಡ್ಡಪರಿಣಾಮಗಳಿರಬಹುದು:
ಊತ
ಕೆಂಪಾಗುವುದು
ಸೋಂಕು ತಗುಲುವುದು( ಶುಚಿತ್ವ ಕಡೆಗೆ ಗಮನ ಕೊಡವ ಕ್ಲಿನಿಕ್‌ಗೆ ಹೋಗಬೇಕು)
ಮೊದಲಿಗೆ ಈ ಸೂಚಿ ಸುಚ್ಚಿ ಮಾಡುವ ಫ್ಯಾಷನ್, ಟ್ರೀಟ್ಮೆಂಟ್ ಅಂದರೆ ಈ ಬಗೆಯ ಫೇಶಿಯಲ್, ಟ್ಯಾಟೂ, ಸಲೂನ್‌ಗಳಲ್ಲಿ ಬಳಸುವ ಬ್ಲೇಡ್ ಇವುಗಳ ಬಗ್ಗೆ ಜಾಗ್ರತೆವಹಿಸಬೇಕು, ಒಬ್ಬರಿಗೆ ಬಳಸಿದ್ದನ್ನೇ ಬಳಸಿದರೆ ಅವರ ಸೇವೆಯನ್ನು ತಿರಸ್ಕರಿಸಿ.



Click it and Unblock the Notifications
