Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಿಳೆಯರಲ್ಲಿ ಕೂದಲು ಉದುರುವ ಸಮಸ್ಯೆಗೆ ಪ್ರಮುಖ ಕಾರಣಗಳಿವು
ಮಹಿಳೆಯರು ಚಂದನೆಯ ಗೊಂಬೆಯಂತೆ ಕಾಣಲು ಮುಖದ ಸೌಂದರ್ಯ ಎಷ್ಟು ಮುಖ್ಯವೋ ಅದೇ ರೀತಿ ಉತ್ತಮ ಕೇಶರಾಶಿ ಕೂಡ ಮುಖ್ಯವಾಗಿದೆ. ಹೀಗಾಗಿ ಕೇಶರಾಶಿಯ ರಕ್ಷಣೆ ಕೂಡ ಮಹಿಳೆಯರಿಗೆ ಅತ್ಯಂತ ಮುಖ್ಯವಾದದ್ದು. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರಿಗೆ ಕೂದಲು ತೆಳುವಾಗುವ ಸಮಸ್ಯೆ ಇದ್ದರೆ ಇನ್ನೂ ಕೆಲವರಿಗೆ ಕೂದಲು ಉದುರುವ ಸಮಸ್ಯೆಯೇ ಇರುತ್ತದೆ.

ಎಷ್ಟೇ ವೈದ್ಯರನ್ನು ಸಂಪರ್ಕಿಸಿದರೂ, ಯಾವುದೇ ಶಾಂಪೂ ಬದಲಾಯಿಸಿದರೂ ಮಹಿಳೆಯರಿಗೆ ಇದರಿಂದ ಮುಕ್ತಿ ದೊರೆಯುವುದಿಲ್ಲ.ಮುಖದ ಸೌಂದರ್ಯ ಎಷ್ಟೇ ಚೆನ್ನಾಗಿ ಇದ್ದರೂ ಸಹ ಕೇಶರಾಶಿಯ ಸೌಂದರ್ಯ ಮಾಸಿದರೆ ನಾವು ಉತ್ತಮರಾಗಿ ಕಾಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಕೇಶರಾಶಿಯಲ್ಲಿ ಇಂಥಾ ಸಮಸ್ಯೆಗಳು ಹೇಗೆ ಕಾಣಿಸಿಕೊಳ್ಳುತ್ತದೆ..? ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ಮುಖ್ಯ ಕಾರಣಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ :
ಮಾಲಿನ್ಯ : ದಿನ ಕಳೆಯುತ್ತಿದ್ದಂತೆಯೇ ಭೂಮಿಯ ಮೇಲೆ ಮಾಲಿನ್ಯದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದು ನಮಗೆ ತಿಳಿಯದಂತೆ ನಮ್ಮ ಕೂದಲಿನ ಮೇಲೂ ಪರಿಣಾಮ ಬೀರುತ್ತಿದೆ. ಮಾಲಿನ್ಯಕ್ಕೆ ಕೂದಲು ಒಗ್ಗಿಕೊಳ್ಳುವುದರಿಂದ ಹೊಟ್ಟಿನಂತಹ ಸಮಸ್ಯೆಗಳು ಉಂಟಾಗುತ್ತದೆ. ನೆತ್ತಿಯ ಆರೋಗ್ಯ ಕೆಟ್ಟರೆ ಕೂದಲು ಉದುರುವಿಕೆ ತನ್ನಿಂದ ತಾನಾಗಿಯೇ ಆರಂಭಗೊಳ್ಳುತ್ತದೆ. ಕೆಲವರು ಸರಿಯಾದ ಸಮಯಕ್ಕೆ ತಲೆ ಸ್ನಾನ ಮಾಡುವುದಿಲ್ಲ. ಇದರಿಂದ ಮಾಲಿನ್ಯದಿಂದ ಕೂದಲು ಶುಚಿಗೊಳ್ಳುವುದಿಲ್ಲ. ಇದರಿಂದ ಕೂದಲು ಉದುರುವಿಕೆ ಆರಂಭಗೊಳ್ಳುತ್ತದೆ.
ಜೀವನಶೈಲಿ : ಅನೇಕರು ಕೂದಲಿಗೆ ಏನನ್ನಾದರೂ ಲೇಪಿಸಿದರೆ ಸಾಕು. ಕೂದಲಿನ ಆರೋಗ್ಯ ಸುಧಾರಿಸಿಬಿಡುತ್ತದೆ ಎಂಬ ನಂಬಿಕೆಯಲ್ಲಿ ಇರುತ್ತಾರೆ. ಆದರೆ ನಾವು ಏನನ್ನು ಸೇವಿಸುತ್ತೇವೆಯೋ ಆ ರೀತಿಯಲ್ಲಿ ನಮ್ಮ ಕೂದಲಿನ ಆರೋಗ್ಯ ಇರುತ್ತದೆ. ಅತಿಯಾದ ಜಂಕ್ಫುಡ್ಗಳ ಸೇವನೆ, ಮದ್ಯಪಾನ , ಧೂಮಪಾನದಂತಹ ದುಶ್ಚಟಗಳು ನಮ್ಮ ಕೂದಲಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ.
ಹಾರ್ಮೋನ್ಗಳಲ್ಲಿ ಏರುಪೇರು : ಹಾರ್ಮೋನ್ಗಳಲ್ಲಿ ಏರುಪೇರಿನ ಸಮಸ್ಯೆಯು ಕೂದಲಿನ ಆರೋಗ್ಯ ಕೆಡಲು ಪ್ರಮುಖ ಕಾರಣವಾಗಿದೆ. ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವ ಬಹುತೇಕ ಮಹಿಳೆಯರು ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಲೇ ಇರುತ್ತಾರೆ. ಅಲ್ಲದೇ ಮಹಿಳೆಯರಲ್ಲಿ ಆಂಡ್ರೋಜನ್ ಮಟ್ಟ ಹೆಚ್ಚುವುದರಿಂದ ಕೂದಲು ಉದುರುವಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಒತ್ತಡದ ಜೀವನ : ಈಗಿನ ಆಧುನಿಕ ಯುಗದಲ್ಲಿ, ಬಿಡುವಿರದ ಜೀವನಶೈಲಿಯು ಅನೇಕರನ್ನು ಒತ್ತಡದ ಜೀವನಶೈಲಿಗೆ ದೂಡಿಬಿಡುತ್ತದೆ. ಮನೆಯ ಜವಾಬ್ದಾರಿಗಳು, ಕಚೇರಿ ಕೆಲಸದ ಒತ್ತಡ ಇವೆಲ್ಲವೂ ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ದಾರಿ ಮಾಡಿಕೊಡಬಹದು.
ಕೂದಲಿನ ಮೇಲೆ ರಾಸಾಯನಿಕಗಳ ಬಳಕೆ : ಇತ್ತೀಚಿನ ದಿನಗಳಲ್ಲಿ ಹೇರ್ ಸ್ಟ್ರೈಟ್ನಿಂಗ್, ಹೇರ್ ಸ್ಮೂಧನಿಂಗ್ ಎಂಬ ಗೀಳು ಬಹುತೇಕ ಯುವತಿಯರನ್ನು ಕಾಡುತ್ತಿದೆ. ಈ ಪ್ರಕ್ರಿಯೆಯಲ್ಲಿ ಅತಿಯಾದ ರಾಸಾಯನಿಕದ ಬಳಕೆಯಾಗುವುದರಿಂದ ಕ್ರಮೇಣವಾಗಿ ಮಹಿಳೆಯರು ತಮ್ಮ ಕೂದಲಿನ ಸಾಮರ್ಥ್ಯ ಹಾಗೂ ಕೂದಲು ಎರಡನ್ನೂ ಕಳೆದುಕೊಳ್ಳುತ್ತಾರೆ. ಕೂದಲಿನ ಸಾಂದ್ರತೆ ಕೂಡ ಇದರಿಂದ ಕಡಿಮೆಯಾಗುತ್ತದೆ. ನಾವು ಬಳಸುವ ಶಾಂಪೂವಿನಲ್ಲಿರುವ ಅತಿಯಾದ ರಾಸಾಯನಿಕ ಕೂಡ ಕೂದಲು ಉದುರುವಿಕೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ.
ಔಷಧಿಗಳು : ಖಿನ್ನತೆಯಂತಹ ಸಮಸ್ಯೆಯಿಂದ ಬಳಲುತ್ತಿರುವ ಬಹುತೇಕರು ತೆಗೆದುಕೊಳ್ಳುವ ಔಷಧಿಯಿಂದ ಅನೇಕರು ಕೂದಲು ಉದುರುವಿಕೆ ಸಮಸ್ಯೆ ಎದುರಿಸುತ್ತಾರೆ. ಕೀಮೋ ಥೆರಪಿ ಮಾಡಿಸಿಕೊಳ್ಳುವ ಕ್ಯಾನ್ಸರ್ ರೋಗಿಗಳು ಕೂಡ ಕೂದಲು ಉದುರುವಿಕೆಯಿಂದ ಬಳಲುತ್ತಾರೆ. ಮಾತ್ರವಲ್ಲದೇ ಗರ್ಭನಿರೋಧಕ ಮಾತ್ರೆಯನ್ನು ಸೇವಿಸುವ ಮಹಿಳೆಯರಲ್ಲೂ ಕೂದಲು ಉದುರುವಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎನ್ನಲಾಗಿದೆ.
ಪರಿಹಾರ : ನಮ್ಮ ಜೀವನಶೈಲಿಯಲ್ಲಿ ಮಾಡಿಕೊಳ್ಳುವ ಸುಧಾರಣೆಗಳು ಮಾತ್ರ ನಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಬಲ್ಲವು. ಆರೋಗ್ಯಕರ ಆಹಾರ, ಯೋಗಾಸನ ಹಾಗೂ ಪ್ರಾಣಾಯಾಮಗಳು ದೇಹಕ್ಕೆ ಪೌಷ್ಠಿಕಾಂಶವನ್ನು ಒದಗಿಸುವುದು ಹಾಗೂ ಒತ್ತಡದ ಜೀವನ ಶೈಲಿಯಿಂದ ನಿರಾಳತೆಯನ್ನು ಅನುಭವಿಸುವಂತೆ ಮಾಡುತ್ತದೆ. ನೀವು ಸೇವಿಸುವ ಔಷಧಿಗಳಿಂದ ಕೂದಲು ಉದುರುವಿಕೆ ಕಾಣಿಸುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಕೂದಲಿನ ಮೇಲೆ ಅತಿಯಾದ ರಾಸಾಯನಿಕಗಳ ಬಳಕೆ ತಪ್ಪಿಸಿ. ನೈಸರ್ಗಿಕವಾಗಿ ಇರುವ ನಿಮ್ಮ ಕೂದಲಿನ ಶೈಲಿಯನ್ನೇ ಇಷ್ಟಪಡಲು ಆರಂಭಿಸಿ. ನೆತ್ತಿಯ ಆರೋಗ್ಯ ಉತ್ತಮವಾಗಿರಲು ತಲೆ ಸ್ನಾನ ಮಾಡುತ್ತಿರಿ. ನಿಮ್ಮ ನೆತ್ತಿ ಹಾಗೂ ಕೂದಲಿನ ಆರೋಗ್ಯಕ್ಕೆ ಹೊಂದುವಂತಹ ಶಾಂಪೂಗಳ ಬಳಕೆಯನ್ನೇ ಮಾಡಿ



Click it and Unblock the Notifications


